Homeಕರೋನಾ ತಲ್ಲಣ6 ಅಡಿ ಅಥವಾ 10 ಮೀಟರ್?: ಕೋವಿಡ್ ತಡೆಗೆ ಸುರಕ್ಷಿತ ಅಂತರದ ಬಗ್ಗೆ ತಜ್ಞರು ಏನು...

6 ಅಡಿ ಅಥವಾ 10 ಮೀಟರ್?: ಕೋವಿಡ್ ತಡೆಗೆ ಸುರಕ್ಷಿತ ಅಂತರದ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಸೋಂಕಿತ ವ್ಯಕ್ತಿಯು ಕೆಮ್ಮಿದರೆ, ನಕ್ಕರೆ, ಜೋರಾಗಿ ಮಾತನಾಡುತ್ತಿದ್ದರೆ, ಸೋಂಕನ್ನು ಹೊತ್ತ ಏರೋಸಾಲ್‌ಗಳು ಗಾಳಿಯ ದಿಕ್ಕಿನಲ್ಲಿ ಚಲಿಸಬಹುದು ಮತ್ತು 10 ಮೀಟರ್‌ವರೆಗೆ ಚಲಿಸಬಹುರು ಎಂದು ಡಾ. ವೇದ್ ಚತುರ್ವೇದಿ ಹೇಳುತ್ತಾರೆ.

- Advertisement -
- Advertisement -

ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ -19 ಮಾರ್ಗಸೂಚಿ ಪ್ರಕಾರ, ಕೋವಿಡ್ ಸೋಂಕಿತ ವ್ಯಕ್ತಿಯಿಂದ ಏರೋಸಾಲ್‌ಗಳು (ಉಸಿರಾಟದ ಹನಿಗಳು) 10 ಮೀಟರ್‌ವರೆಗೆ ಗಾಳಿಯಲ್ಲಿ ಜೀವಂತವಾಗಿ ಸಂಚರಿಸಬಹುದು. 10 ಮೀಟರ್ ಅಂದರೆ ಸುಮಾರು 32 ಅಡಿಗಳು. ಆದರೆ ಇಲ್ಲಿವರೆಗೆ ಕೇಂದ್ರ ಆರೋಗ್ಯ ಇಲಾಖೆಯು ತನ್ನ ಮಾರ್ಗಸೂಚಿಗಳಲ್ಲಿ ‘ಎರಡು ಗಜ ದೂರ’ ಅಂದರೆ ಆರು ಅಡಿ ದೂರದ ಸುರಕ್ಷಿತ ಅಂತರವಿರಲಿ ಎಂದು ಹೇಳುತ್ತ ಬಂದಿದೆ.

ಈಗ ಜನರು ಆರು ಅಡಿ ಅಂತರ ಕಾಪಾಡಿಕೊಳ್ಳಬೇಕೆ ಅಥವಾ 10 ಮೀಟರ್ (32 ಅಡಿ) ಅಂತರ ಕಾಪಾಡಿಕೊಳ್ಳಬೇಕೆ ಎಂಬ ಗೊಂದಲ ಎದ್ದಿದೆ.

ದೆಹಲಿಯ ಗಂಗಾರಾಂ ಆಸ್ಪತ್ರೆಯ ಡಾ.ವೇದ್ ಚತುರ್ವೇದಿ (ಲೆಫ್ಟಿನೆಂಟ್ ಜನರಲ್) ಅಭಿಪ್ರಾಯವೆಂದರೆ, 10 ಮೀಟರ್ ದೂರವು ಸೂಕ್ತವಾಗಿದೆ. ಆದರೆ ಹೆಚ್ಚಿನ ಕೋವಿಡ್ ಸೋಂಕುಗಳು ವಾತಾವರಣದಲ್ಲಿರುವ ಹನಿಗಳ ಮೂಲಕ ಹರಡುತ್ತವೆ. ಆದರೆ 10 ಮೀಟರ್‌ವರೆಗೆ ಚಲಿಸುವ ವ್ಯಕ್ತಿಗತ ಏರೋಸಾಲ್‌ಗಳ ಮೂಲಕ ಸೋಂಕು ಹರಡುವುದು ಕಡಿಮೆ ಸಂಭವ ಎನ್ನುತ್ತಾರೆ.

ವೈರಸ್ 10 ಮೀಟರ್‌ವರೆಗೆ ಚಲಿಸಬಲ್ಲದು ಎಂದು ವೈದ್ಯಕೀಯ ಮ್ಯಾಗಝೀನ್ ದಿ ಲ್ಯಾನ್ಸೆಟ್ ಕೂಡ ಹೇಳಿದೆ. ಆದರೆ 6 ಅಡಿ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಹೆಚ್ಚಿನ ಪ್ರಕರಣಗಳು ಸೋಂಕಿತ ವ್ಯಕ್ತಿಯ ಸಮೀಪದಲ್ಲಿ ಹನಿಗಳ ಮೂಲಕ ಕಂಡುಬರುತ್ತವೆ. ಅದು ಆ ವ್ಯಕ್ತಿಯು ಮಾತನಾಡುವಾಗ ಹರಡುತ್ತದೆ.

“ಆದರೆ ಅನೇಕ ಜನರು ತಾವು ಹೊರಗೆ ಹೋಗಿಲ್ಲ ಮತ್ತು ಯಾರೊಂದಿಗೂ ನಿಕಟ ಸಂಪರ್ಕಕ್ಕೆ ಬಂದಿಲ್ಲವಾದರೂ ಸೋಂಕು ಬಂದಿದೆ ಎಂದು ತಿಳಿಸಿದ ಪ್ರಕರಣಗಳೂ ಇವೆ. ಆದ್ದರಿಂದ, ವೈರಸ್ ಗಾಳಿಯಲ್ಲಿ ಉಳಿದುಕೊಂಡು ಇನ್ನೊಬ್ಬರಿಗೆ ಸೋಂಕು ತಗುಲಿಸಬಹುದು. ಸೋಂಕಿತ ವ್ಯಕ್ತಿಯು ಕೆಮ್ಮಿದರೆ, ಹಾಡುತ್ತಿದ್ದರೆ, ನಗುತ್ತಿದ್ದರೆ, ಜೋರಾಗಿ ಮಾತನಾಡುತ್ತಿದ್ದರೆ, ಸೋಂಕಿತ ಏರೋಸಾಲ್‌ಗಳು ಗಾಳಿಯ ದಿಕ್ಕಿನಲ್ಲಿ ಚಲಿಸಬಹುದು” ಎಂದು ಡಾ.ಚತುರ್ವೇದಿ ಆಲ್ ಇಂಡಿಯಾ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ 10 ಮೀಟರ್ ದೂರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ, ಉತ್ತಮ ಗಾಳಿ (ವೆಂಟಿಲೇಷನ್) ಸಹಾಯ ಮಾಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ. “ಮೊದಲಿಗೆ, ವೈರಸ್ ಹನಿಗಳ ಮೂಲಕ ಹರಡುತ್ತದೆ ಎಂದು ತಿಳಿದುಬಂದಿದೆ. ಮೈಕ್ರೊ ಡ್ರಾಪ್ಲೆಟ್‌ಗಳು (ಉಸಿರಿನ ಸೂಕ್ಷ್ಮ ಹನಿಗಳು) ಗಾಳಿಯಲ್ಲಿ ಕನಿಷ್ಠ 2-3 ಗಂಟೆಗಳ ಕಾಲ ಸಜೀವವಾಗಿರಬಹುದು ಎಂದು ಈಗ ಕಂಡುಬಂದಿದೆ. ಕೆಲವು ಅಧ್ಯಯನಗಳು ಮೈಕ್ರೊ ಡ್ರಾಪ್ಲೆಟ್‌ಗಳು ಗಾಳಿಯಲ್ಲಿ 3 ಗಂಟೆ ಉಳಿಯಬಹುದು ಎಂದು ಸೂಚಿಸಿವೆ. ನಾವು ಆರು ಅಡಿಗಳಷ್ಟು ದೂರವನ್ನು ಶಿಫಾರಸು ಮಾಡುತ್ತೇವೆ. ಉತ್ತಮ ಗಾಳಿ ಬೀಸುವ ವ್ಯವಸ್ಥೆ ಇದ್ದರೆ ಸೂಕ್ಷ್ಮ ಹನಿಗಳನ್ನು ಚದುರಿಸಬಹುದು” ಎಂದು ಡಾ ಭಾರ್ಗವ ಇತ್ತೀಚೆಗೆ ಹೇಳಿದ್ದಾರೆ.


ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...