Homeಕರ್ನಾಟಕ7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಪತ್ರಿಕೆಯೊಂದು ಕಳೆದ ಶನಿವಾರ ಗೌರಿ ಲಂಕೇಶರ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಟ್ರಸ್ಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಸಂಗ್ರಹ ಮಾಡಲಾಗಿದೆ ಎಂಬ ವರದಿಯೊಂದನ್ನು ಪ್ರಕಟಿಸಿತು. ಇಂತಹ ಪತ್ರಿಕೆಗಳಲ್ಲಿ ಗೌರಿ ಲಂಕೇಶರ ಕುರಿತಂತೆ ಅಥವಾ ಅವರ ಬಳಗದ ಕುರಿತಂತೆ ನಕಾರಾತ್ಮಕ ಸುದ್ದಿ ಬರುವುದೇ ಆಶ್ಚರ್ಯವಲ್ಲ. ಆದರೆ, ಗೌರಿ ಹತ್ಯೆಗೆ ಪ್ರತೀಕಾರ ಎಂಬ ತಲೆಬರಹ ಬಳಸಿ ಅದರಲ್ಲಿ ಹೊಸದೊಂದು ಕಥೆ ತೇಲಿಬಿಡಲಾಗಿತ್ತು.

ಅಚ್ಚರಿ ಮಾತ್ರವಲ್ಲದೇ ಅಪಾಯಕಾರಿಯಾದ ಅಂಶ ಅದರಲ್ಲಿತ್ತು. ‘ಪತ್ರಿಕೆ’ಯು ಇದರ ಮೂಲವನ್ನು ಕೆದಕಲು ಹಲವರನ್ನು ಮಾತಾಡಿಸಿಲು ಆರಂಭಿಸಿತು. ಗೌರಿಯವರ ಹತ್ಯೆ ಆದ ಮರುದಿನದಿಂದಲೇ ಅದೊಂದು ಸೈದ್ಧಾಂತಿಕ ಹತ್ಯೆಯಾಗಿರುವ ಸಾಧ್ಯತೆಯನ್ನು ಇಡೀ ದೇಶ ಗುರುತಿಸಿತು. ದೇಶ ವಿದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಎಸ್‍ಐಟಿ ನಡೆಸಿದ ವಿಚಾರಣೆಯಲ್ಲೂ ಅದು ಸಾಬೀತಾಗಿದೆ. ಆದರೆ, ಹತ್ಯೆಯಾದ ಕೆಲವೇ ಗಂಟೆಗಳಿಂದ ಒಂದು ಗುಂಪು ಇದನ್ನ ‘ನಕ್ಸಲೀಯರು’ ಮಾಡಿರಬಹುದು ಎಂಬ ಸುದ್ದಿ ತೇಲಿಬಿಟ್ಟಿತು. ವಿಪರ್ಯಾಸವೆಂದರೆ ಅದಕ್ಕೆ ದನಿಗೂಡಿಸಿದ್ದ ವ್ಯಕ್ತಿಯು ಇಂದು ಗೌರಿಯವರ ಫೋಟೋವನ್ನು ಜೊತೆಯಲ್ಲಿಟ್ಟುಕೊಂಡು ತನ್ನ ಅಕ್ಕನ ಹೆಸರು ದುರ್ಬಳಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಇವೆಲ್ಲವೂ ಬೇರಾವುದೋ ಹುನ್ನಾರದ ಸುಳಿವನ್ನು ನೀಡುತ್ತಿದೆ.

 

ಗೌರಿಯವರ ಹಂತಕರು ಯಾರು ಎಂಬ ಕುರಿತ ಸಂದೇಹ ಯಾರಿಗೂ ಉಳಿದಿಲ್ಲ. ಇನ್ನು ಉಳಿದಿರುವುದು ಕಾನೂನು ಪ್ರಕ್ರಿಯೆ ಮಾತ್ರ. ಕಾನೂನಿನ ಕೆಲವು ಅನಿವಾರ್ಯ ಸಮಸ್ಯೆಗಳಿಂದ ಮುಂದಿನ ದಿನಗಳಲ್ಲಿ ಈಗ ಜೈಲಿನಲ್ಲಿರುವ ಆರೋಪಿಗಳು ಬಿಡುಗಡೆಯಾದರೂ ಸತ್ಯವನ್ನಂತೂ ಮರೆಮಾಚಲಾಗದು. ಆದರೆ, ಹತ್ಯೆ ನಡೆದ ಕೆಲವೇ ಗಂಟೆಗಳಿಂದ ಕಾರ್ಯಪ್ರವೃತ್ತವಾದ ಒಂದು ಗುಂಪು ಹಂತಕರಿಂದ ಇದನ್ನು ಮರೆಮಾಚುವ ಪ್ರಯತ್ನಕ್ಕೆ ಕೈ ಹಾಕಿತ್ತು. ಎಸ್‍ಐಟಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಾ, ಅಸಲೀ ಹಂತಕರನ್ನು ಪತ್ತೆ ಹಚ್ಚಿದ ಮೇಲೆ ಈ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು.

ಆದರೆ, ಹಂತಕರ ಸಿದ್ಧಾಂತಕ್ಕೆ ಪೂರಕವಾದ ಸರ್ಕಾರವು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಅಂತಹ ಗುಂಪುಗಳು ಕಾರ್ಯಪ್ರವೃತ್ತವಾಗಿರುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಸದರಿ ವರದಿ ಹಾಗೂ ನಂತರದ ಬೆಳವಣಿಗೆಗಗಳೂ ಆ ಅನುಮಾನವನ್ನು ಪುಷ್ಟೀಕರಿಸುತ್ತವೆ.

ಹಾಗಾಗಿಯೇ ಗೌರಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ಎಂತಲೂ, ಎರಡು ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದೂ ಬಿಂಬಿಸುವ ಪ್ರಯತ್ನ ನಡೆದಿರುವ ಸಾಧ್ಯತೆಗಳಿವೆ. ಗೌರಿ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡ ಬಲಪಂಥೀಯ ಗುಂಪೂ ಸಹಾ ಏಕರೂಪಿಯಾಗಿಲ್ಲ. ಒಂದು ಕಡೆ ಸಂಪೂರ್ಣ ವಿಷವೇರಿಸಿಕೊಂಡ ತಣ್ಣನೆಯ ಕ್ರೌರ್ಯಕ್ಕೆ ಹೇಸದ ಮನಸ್ಥಿತಿಯ ಹಾರ್ಡ್‍ಕೋರ್ ಗುಂಪಿದ್ದರೆ, ಇನ್ನೊಂದು ಕಡೆ ಇದನ್ನೇ ದೇಶಪ್ರೇಮ ಎಂದುಕೊಂಡು ಅವರ ಜಾಲಕ್ಕೆ ಬಿದ್ದ ‘ಹೊಸಬರೂ’ ಇದ್ದಾರೆ. ಅಂತಹವರು ಈಗ ಪಶ್ಚಾತ್ತಾಪವನ್ನು ಪಡುತ್ತಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವುದಿಲ್ಲ. ‘ಪತ್ರಿಕೆ’ಗೆ ಸಿಕ್ಕ ವಿಶ್ವಾಸನೀಯ ಮಾಹಿತಿಯು ಅದನ್ನು ಸ್ಪಷ್ಟಪಡಿಸುತ್ತದೆ. ಇದು ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ ಮತ್ತು ಕೇವಲ ಪತ್ರಿಕಾ ಸುದ್ದಿಯನ್ನಾಗಿ ಮಾತ್ರ ನೋಡದೇ, ಕರ್ನಾಟಕದ ಧೀಮಂತ ಪತ್ರಕರ್ತೆಯೊಬ್ಬರ ಹತ್ಯೆಯ ವಿಚಾರ ಆಗಿರುವುದರಿಂದ ಅದನ್ನು ಸುದ್ದಿ ಮಾಡದೇ ಪೊಲೀಸರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ.

ಹಂತಕ ಪಡೆಯ ದುರ್ಬಲ ಸದಸ್ಯರ ಮೇಲೆ ತಾವೇ ದಾಳಿ ಮಾಡಿ ಅದನ್ನು ಗೌರಿಯವರ ಬಳಗದ ಮೇಲೆ ಹೊತ್ತುಹಾಕುವ ಆಲೋಚನೆ ದುಷ್ಟಗುಂಪಿನಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ ಅಂತಹ ನಿರ್ದಿಷ್ಟ ಸಂಗತಿಯ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಇಡುವ ಸಾಧ್ಯತೆಯಿದೆ.

ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಧ್ಯಮಗಳ ಮೂಲಕ ಮಾಡುವುದಾದರೆ ಬಲಪಂಥೀಯ ಸಿದ್ಧಾಂತವನ್ನೇ ಹಾಸುಹೊದ್ದುಕೊಂಡಿರುವ ಪತ್ರಿಕೆಗಿಂತ ಉತ್ತಮವಾದ ಸಾಧನ ಇನ್ನಾವುದಿದೆ? ಅದನ್ನೇ ಈಗ ಮಾಡಲಾಗಿದೆ ಎಂಬುದು ವಿವಿಧ ಮೂಲಗಳು (ಇದರಲ್ಲಿ ಪೊಲೀಸ್ ಮೂಲಗಳೂ ಇವೆ) ಅನುಮಾನ ಪಡುತ್ತಿವೆ. ಅಂದರೆ ಗೌರಿ ಹಂತಕರನ್ನು ರಕ್ಷಿಸುವ ಯೋಜನೆಯೊಂದು ಸಿದ್ಧವಾದಂತೆ ಕಾಣುತ್ತಿದೆ. ಏಕೆಂದರೆ, ಸ್ವಂತ ಕೈಯ್ಯಿಂದ ಹಣ ಹಾಕಿ ಹಿತೈಷಿಗಳಿಂದ ಹಣ ಸಂಗ್ರಹಿಸಿ ಕಷ್ಟದ ಮಧ್ಯೆಯೇ ಬದ್ಧತೆಯಿಂದ ಕೆಲಸ ಮಾಡುವ ಜನರೇ ಇರುವ ಟ್ರಸ್ಟ್ ಮೇಲೆ ಆರೋಪ ಮಾಡಿದ್ದಕ್ಕೆ ಬೇರೆ ಕಾರಣಗಳು ಕಾಣುತ್ತಿಲ್ಲ.

‘ಬ್ಲ್ಯಾಕ್‍ಮೇಲ್ ಪತ್ರಕರ್ತರು ಮತ್ತು ಸುಳ್ಳು ಸುದ್ದಿ ಪತ್ರಿಕೆಗಳು’
ನಮ್ಮ ಅಕ್ಕ ಮತ್ತು ತಂದೆಯ ಹೆಸರಿನಲ್ಲಿ ಚಂದಾ ಎತ್ತುವುದಕ್ಕೆ ನನ್ನ ವಿರೋಧ ಎಂದು ಒಬ್ಬ ‘ಪತ್ರಕರ್ತ’ರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಚೆನ್ನಾಗಿ ಬಲ್ಲವರೊಬ್ಬರಿಗೆ ಟಿವಿ ವಾಹಿನಿಯವರು ಸಂಪರ್ಕಿಸಿದ್ದಾರೆ. ಅವರು ಸ್ಪಷ್ಟವಾಗಿ ಗೌರಿಯವರ ಪತ್ರಿಕೆಯ ಕುರಿತು ತನಿಖೆ ನಡೆಯುವುದಾದರೆ ಸ್ವಾಗತ ಮತ್ತು ಅವರ ತಂದೆಯ ಹೆಸರಿನ ಪತ್ರಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಕುರಿತೂ ತನಿಖೆ ನಡೆದರೆ ನಿಜವಾದ ಸಂಗತಿಗಳು ಹೊರಬೀಳುತ್ತವೆ ಎಂದಿದ್ದಾರೆ.

ಪತ್ರಿಕೆಯು ಚಂದಾದಾರರಿಂದ ನಡೆಯದೇ ಬ್ಲ್ಯಾಕ್‍ಮೇಲ್‍ನಿಂದ ನಡೆಯುವುದೇ ‘ನಾರ್ಮಲ್’ ಎಂದು ಭಾವಿಸಿರುವವರ ಗೋಳು ಇದು. ಅಂತಹುದೇ ಬ್ಲ್ಯಾಕ್‍ಮೇಲ್ ಪ್ರಕರಣದಲ್ಲಿ ಸದರಿ ಬಲಪಂಥೀಯ ಪತ್ರಿಕೆಯ ವರದಿಗಾರನ ಮೇಲೂ ಎರಡು ದೂರುಗಳು ದಾಖಲಾಗಿವೆ. ಒಂದು ವರ್ಷದ ಹಿಂದೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಮತ್ತು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರುಗಳಾಗಿವೆ. ಅದರ ಪ್ರತಿಗಳು ‘ಪತ್ರಿಕೆ’ಗೆ ಲಭ್ಯವಾಗಿವೆ. ಆದರೆ, ಅದರ ಕುರಿತು ಸಂಬಂಧಪಟ್ಟವರನ್ನು ಮಾತನಾಡಿಸಿದಾಗ ಗೊತ್ತಾದದ್ದೆಂದರೆ ಸದರಿ ಧ್ಯಾನಸ್ಥ ಆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಬಹಳ ಕಡಿಮೆ. ಅವರ ಸ್ನೇಹಿತನ ಜೊತೆ ಪ್ರಕರಣದಲ್ಲಿ ಸಿಲುಕಿಸಿರಬಹುದೆಂದು ಕಾಣುತ್ತದೆ. ಹೀಗಿದ್ದಾಗಲೂ ತಾನೇ ಬ್ಲ್ಯಾಕ್‍ಮೇಲ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಎಂದು ಬರೆಯುವುದು ಪತ್ರಿಕೋದ್ಯಮದ ನೀತಿ ಸಂಹಿತೆಗೆ ವಿರುದ್ಧವಾದುದು.

ಇದೇ ಮಾತನ್ನು ಆ ದಿನಪತ್ರಿಕೆಯ ಕುರಿತು ಹೇಳಲಾಗದು. ಏಕೆಂದರೆ ಆ ಪತ್ರಿಕೆಯು ಸುಳ್ಳು ಸೃಷ್ಟಿಸುವುದರಲ್ಲಿ ಸಿದ್ಧಹಸ್ತ. ಅದಕ್ಕಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಗಣಪತಿಯಪ್ಪನವರಿಂದ ಒಮ್ಮೆ ಛೀಮಾರಿ ಹಾಕಿಸಿಕೊಂಡಿತ್ತು. ಅಷ್ಟೇ ಅಲ್ಲದೇ ಸುಳ್ಳು ಬರೆದದ್ದಕ್ಕೆ ದಂಡ ಕಟ್ಟುವ ಶಿಕ್ಷೆಯನ್ನು ಶೃಂಗೇರಿ ನ್ಯಾಯಾಲಯ ಆದೇಶಿಸಿದ ವರದಿಗಳಿವೆ.

ಲಂಕೇಶರ ಪರಂಪರೆ ಮತ್ತು ಗೌರಿಯವರ ಹೋರಾಟದ ಕುರಿತು ಮಾತನಾಡಲು ಅಳುಕು ಬೇಡವೇ?

ಜಾತಿ ವ್ಯವಸ್ಥೆ ಮತ್ತು ಕೋಮುವಾದಕ್ಕೆ ವಿರೋಧ ಇವು ಪಿ.ಲಂಕೇಶರು ಎಂದೂ ರಾಜಿ ಮಾಡಿಕೊಳ್ಳದ ಎರಡು ಸಂಗತಿಗಳು. ಹಾಗೆಯೇ ಸ್ವಂತ ಅನುಕೂಲಕ್ಕಾಗಿ ಅಧಿಕಾರಸ್ಥರನ್ನು ಓಲೈಸುವುದು ಅವರ ಮೈಮೇಲೆ ಮುಳ್ಳು ತರಿಸುತ್ತಿತ್ತು. ಆ ಮುಳ್ಳುಗಳು ಅಧಿಕಾರಸ್ಥರಿಗೆ ಚುಚ್ಚುತ್ತಿತ್ತು. ಅದನ್ನು ಅಷ್ಟೇ ಕಠೋರವಾಗಿ ಮುಂದುವರೆಸಿಕೊಂಡು ಬಂದಿದ್ದು ಗೌರಿ ಲಂಕೇಶ್. ಆದರೆ ಲಂಕೇಶರ ಪತ್ರಿಕೆಯ ಮಾಲೀಕತ್ವ ಹೊಂದಿದ್ದ ಇಂದ್ರಜಿತ್ ತುಳಿದ ದಾರಿಯೇ ಬೇರೆ. ಅಧಿಕಾರಸ್ಥರನ್ನು ಓಲೈಸುವುದಕ್ಕೆ ಹಲವು ದಾರಿಗಳನ್ನು ಆಗಿಂದಾಗ್ಗೆ ಹಿಡಿಯುತ್ತಲೇ ಇದ್ದರು.

ಒಮ್ಮೆ ಯಡಿಯೂರಪ್ಪನವರನ್ನು ಸನ್ಮಾನಿಸಿ ಬಾಯಿಗೆ ಬಂದದ್ದು ಮಾತನಾಡಲು ಹೊರಟಾಗ ಯಡಿಯೂರಪ್ಪನವರೇ ‘ಇಂಥದ್ದೆಲ್ಲಾ ನಿಮ್ಮ ತಂದೆಯವರಿಗೆ ಇಷ್ಟವಾಗುತ್ತಿರಲಿಲ್ಲ, ಸುಮ್ಮನಿರಿ’ ಎಂದು ಹೇಳಿದರೆಂದರೆ, ಇಂದ್ರಜಿತ್ ಎಂಬ ವ್ಯಕ್ತಿಯ ಮಟ್ಟವನ್ನು ಊಹಿಸಬಹುದು.

ಪಿ.ಲಂಕೇಶರ ಆತ್ಮಕಥೆಯ ಹೆಸರು ಹುಳಿಮಾವಿನ ಮರ. ಅದೊಂದು ರೂಪಕಾತ್ಮಕವಾದ ಹೆಸರಾಗಿದ್ದರೂ, ಅವರ ಪ್ರೀತಿಯ ತೋಟದಲ್ಲೂ ಒಂದು ಹುಳಿಮಾವಿನ ಮರವಿತ್ತು. ಆ ತೋಟವು ಪ್ರತೀವರ್ಷ ಅವರ ಗೆಳೆಯರೆಲ್ಲರೂ ಸೇರುತ್ತಿದ್ದ ತಾಣವೂ ಆಗಿತ್ತು. ಇಂದು ಆ ತೋಟ ಮಾತ್ರವಲ್ಲದೇ, ಲಂಕೇಶರ ಸಮಾಧಿಯ ಜಾಗವನ್ನೂ ಸೇರಿಸಿ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಕುಟುಂಬದ ಮೂಲಗಳು ತಮಗೆ ಗೊತ್ತೇ ಆಗದಂತೆ ಮಾರಾಟವಾಗಿದ್ದನ್ನು ನೋವಿನಿಂದ ನೆನಪಿಸಿಕೊಳ್ಳುತ್ತವೆ. ಅಂದಹಾಗೆ ಸಮಾಧಿಯನ್ನೂ ಸೇರಿಸಿ ತೋಟ ಮಾರಾಟ ಮಾಡಿದ ವ್ಯಕ್ತಿಯೇ ಇಂದು ಪತ್ರಿಕಾಗೋಷ್ಠಿ ಮಾಡುತ್ತಿರುವುದು.

ಫೆಬ್ರವರಿ 22, 2005. ಬಸವನಗುಡಿ ಪೊಲೀಸ್ ಠಾಣೆ

ಬಸವನಗುಡಿ ಪೊಲೀಸ್ ಠಾಣೆಗೂ, ನಂ.9 ಇಎಟಿ ಸ್ಟ್ರೀಟ್, ಬಸವನಗುಡಿಗೂ ಸಾಕಷ್ಟು ಸಂಬಂಧವಿದೆ. ದುಷ್ಟರನ್ನೂ, ಭ್ರಷ್ಟರನ್ನೂ ಬಯಲುಗೊಳಿಸುವ ಬರಹಗಳನ್ನು ನಿರ್ಭೀತಿಯಿಂದ ಬರೆದ ಪತ್ರಿಕೆಯ ಕಚೇರಿ ಅದಾಗಿತ್ತು. ಅಂತಹ ದುಷ್ಟರು ಕಚೇರಿಯ ಮುಂದೆ ಗಲಾಟೆ ಮಾಡಲು ಬರುವುದು ಯಾವಾಗಲೋ ಒಮ್ಮೆ ನಡೆಯುತ್ತಲೇ ಇತ್ತು. ಆದರೆ, ಫೆಬ್ರವರಿ 22, 2005ರಂದು ಒಂದು ವಿಷಾದಕರ ದೂರು ಆ ಠಾಣೆಗೆ ಹೋಯಿತು.

ಆ ದೂರಿನಲ್ಲಿರುವ ಸಂಗತಿಗಳ ಕುರಿತು ಇಂದು ಇಂದ್ರಜಿತ್ ಮಾತಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಅವರ ಒಡನಾಡಿಗಳು ಕೇಳುತ್ತಾರೆ. ಇಂದು ಗೌರಿಯವರಿಲ್ಲ. ಆದರೆ ಅವರು ಕೊಟ್ಟ ದೂರಿದೆ. ಅದು ಏಳಿಸುವ ಪ್ರಶ್ನೆಗಳು ಹೀಗಿವೆ. ಗೌರಿಯವರಿಗೆ ಬಂದೂಕು ತೋರಿಸಿ ಹೆದರಿಸಿದ್ದು ಯಾರು? ಸ್ವತಃ ಗೌರಿ ಲಂಕೇಶರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೊಟ್ಟ ದೂರು ಏನಾಗಿತ್ತು? ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಕುಟುಂಬ ಸಮೇತ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳು ಅಧಿಕಾರಕ್ಕೆ ಏರಿರುವುದರಿಂದ, ಜಾತ್ಯತೀತ ಶಕ್ತಿಗಳ ವಿರುದ್ಧ ಅವರು ನಿರಂತರ ದಾಳಿಗಳನ್ನು ಮಾಡುತ್ತಲೇ ಇರುತ್ತಾರೆ.
    ಇದಕ್ಕೆ ಜಾತ್ಯತೀತರು ಹೆದರುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...