Homeಮುಖಪುಟ7 ಮಂದಿ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌‌ ಸಾವು; ವರದಿ ಸಲ್ಲಿಸಲು ಹರ್ಯಾಣ, ಗುಜರಾತ್‌ಗೆ NHRC ಸೂಚನೆ

7 ಮಂದಿ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌‌ ಸಾವು; ವರದಿ ಸಲ್ಲಿಸಲು ಹರ್ಯಾಣ, ಗುಜರಾತ್‌ಗೆ NHRC ಸೂಚನೆ

- Advertisement -
- Advertisement -

ಕಳೆದ ವಾರ ಏಳು ಮಂದಿ ಮ್ಯಾನ್ಯುವಲ್ ಸ್ಕ್ಯಾವೆಂಜರ್‌‌ (ಮಲದ ಗುಂಡಿ ಶುಚಿಗೊಳಿಸುವ ಕಾರ್ಮಿಕರು) ಸಾವನ್ನಪ್ಪಿದ ಬಗ್ಗೆ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಹರಿಯಾಣ ಮತ್ತು ಗುಜರಾತ್ ಸರ್ಕಾರಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಗುರುವಾರ ನಿರ್ದೇಶನ ನೀಡಿದೆ.

ಹರಿಯಾಣದ ಜಜ್ಜರ್ ಜಿಲ್ಲೆಯ ಜಖೋಡಾ ಗ್ರಾಮದಲ್ಲಿ ಸೆಪ್ಟಿಕ್ ಟ್ಯಾಂಕ್  ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲವನ್ನು ಸೇವಿಸಿದ ನಾಲ್ವರು ಕಾರ್ಮಿಕರು ಮಂಗಳವಾರ ಸಾವನ್ನಪ್ಪಿದ್ದರು. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅದೇ ದಿನ, ಗುಜರಾತ್‌ನ ಬಹ್ರುಚ್ ಜಿಲ್ಲೆಯ ದಹೇಜ್ ತಾಲೂಕಿನಲ್ಲಿ ಒಳ ಚರಂಡಿಯೊಳಗೆ ಪ್ರವೇಶಿಸಿದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಈ ಸಾವುಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎರಡೂ ಘಟನೆಗಳಲ್ಲಿ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿರುವುದಾಗಿ ಗುರುವಾರ ವರದಿಯಾಗಿದೆ.

“ಘಟನೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ನಡೆದಿವೆ ಎಂಬ ಕಾರಣಕ್ಕಾಗಿ, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇಂತಹ ಅಪಾಯಕಾರಿ ಚಟುವಟಿಕೆಗಳ ಮೇಲ್ವಿಚಾರಣೆಯ ಜವಾಬ್ದಾರಿಯಿಂದ ನುಣುಕಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಆಯೋಗ ಎಚ್ಚರಿಸಿದೆ.

ಇದನ್ನೂ ಓದಿರಿ: Manual Scavenging: ಮಲದ ಗುಂಡಿ ಸ್ವಚ್ಛಗೊಳಿಸುವವರಲ್ಲಿ 73.31% ಪರಿಶಿಷ್ಟ ಜಾತಿಯವರು

ಘಟನೆಗಳ ಕುರಿತು ವರದಿ ಮಾಡಿರುವ ಮಾಧ್ಯಮಗಳು, “ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿವೆ” ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ.

“ತಪ್ಪಿತಸ್ಥ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮ ಮತ್ತು ನೊಂದ ಕುಟುಂಬಗಳಿಗೆ ಒದಗಿಸಲಾದ ಪರಿಹಾರ, ಪುನರ್ವಸತಿಯ ಸ್ಥಿತಿಗತಿಯ ಕುರಿತು ರಾಜ್ಯ ಸರ್ಕಾರದ ವರದಿಗಳು ತಿಳಿಸಬೇಕು” ಎಂದು ಆಯೋಗ ಸೂಚಿಸಿದೆ.

“ಈ ಕುರಿತು ಜಾಗೃತಿ ಮೂಡಿಸಲು ಮತ್ತು ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌ಗಳ ಸಾವುಗಳು ಇನ್ನಿಲ್ಲದಂತಾಗಲು ಸಾರ್ವಜನಿಕರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮ ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಬೇಕು” ಎಂದು ನಿರ್ದೇಶಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...