Homeಚಳವಳಿಭಾರತ ಮೋದಿ, ಯಡಿಯೂರಪ್ಪನವರದಲ್ಲ, ಭಾರತವನ್ನು ಕಟ್ಟಿದವರು ನಾವು - ಕೆ.ಎನ್ ಉಮೇಶ್

ಭಾರತ ಮೋದಿ, ಯಡಿಯೂರಪ್ಪನವರದಲ್ಲ, ಭಾರತವನ್ನು ಕಟ್ಟಿದವರು ನಾವು – ಕೆ.ಎನ್ ಉಮೇಶ್

ಕೊರೊನಾ ಬರುವುದಕ್ಕಿಂತ ಮುಂಚೆ ದೇಶದಲ್ಲಿ 28% ಬಡತನ ಇತ್ತು. ಲಾಕ್‌ಡೌನ್ ನಂತರ ಅದು ದುಪ್ಪಟ್ಟಾಗಿದೆ. ದೇಶದಲ್ಲಿ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಾಯಂ ಕೆಲಸ ಎಂಬದನ್ನು ಕಿತ್ತುಹಾಕಿ ಆ ಜಾಗದಲ್ಲಿ ಗುತ್ತಿಗೆ ಪದ್ದತಿ ತರಲಾಗುತ್ತಿದೆ.

- Advertisement -
- Advertisement -

ಭಾರತ ಮೋದಿ, ಯಡಿಯೂರಪ್ಪನವರದಲ್ಲ, ಭಾರತವನ್ನು ಕಟ್ಟಿದವರು ನಾವು ಅಂದರೆ ದೇಶದ ಕಾರ್ಮಿಕರು. ಬಿಜೆಪಿ ಸಂತತಿಯ ಪಾಪದ ಕೊಡ ತುಂಬಿದೆ. ಹಾಗಾಗಿ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಿಐಟಿಯು ಮುಖಂಡ ಕೆ.ಎನ್ ಉಮೇಶ್ ಆರೋಪಿಸಿದ್ದಾರೆ.

ಕಾರ್ಮಿಕರು, ಶ್ರಮಜೀವಿಗಳ ಹಕ್ಕುಗಳ ರಕ್ಷಣೆಗಾಗಿ – ಕೋವಿಡ್ ಸಂಕಷ್ಟ ಪರಿಹಾರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ‘ವಿಧಾನ ಸೌಧ ಚಲೋ’ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನರೇಂದ್ರ ಮೋದಿಯವರು ಅವೈಜ್ಞಾನಿಕ ಲಾಕ್‌ಡೌನ್ ಹೇರಿದ್ದಲ್ಲದೇ, ಸಾಂಕ್ರಾಮಿಕ ಕಾಲದಲ್ಲಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ಸರ್ಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ದೂರಿದರು.

ಸಿಐಟಿಯು ರಾಜ್ಯ ಅಧ್ಯಕ್ಷರಾದ ವರಲಕ್ಷ್ಮಿಯವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, “ನಮ್ಮ ದೇಶದೊಳಗೆ ಪ್ರಜಾಪ್ರಭುತ್ವ ಇಲ್ಲದಾಗಿದೆ, ಯಾಕೆಂದರೆ ಸರ್ಕಾರ ಪ್ರಜೆಗಳಿಗೆ ಕೆಲಸ ಮಾಡುತ್ತಿಲ್ಲ. ಬದಲಿಗೆ ದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ಕಂಪನಿಗಳಿಗಾಗಿ, ವಿದೇಶಿ ಹೂಡಿಕೆದಾರರಿಗಾಗಿ ಕೆಲಸ ಮಾಡುತ್ತಿದೆ. ಅವರ ಪರವಾದ ಕಾನೂನುಗಳನ್ನು ಲೋಕಸಭೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕರ ಸಾಮೂಹಿಕ ಚೌಕಾಶಿಯನ್ನು ಸರ್ಕಾರ ಇಲ್ಲದಾಗಿಸಿದೆ. ಕೊರೋನಾ ಸಮಯದಲ್ಲಿ ಜನರಿಗೆ ಕೆಲಸ ಮಾಡಬೇಕಿದ್ದ ಸರ್ಕಾರ ಶ್ರೀಮಂತರ ಪರವಾಗಿದೆ. ಇದರಿಂದ ಕಾರ್ಮಿಕರು ಕೆಲಸ ಮಾತ್ರವಲ್ಲ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಮಿಕರು, ಶ್ರಮಜೀವಿಗಳ ಹಕ್ಕುಗಳ ರಕ್ಷಣೆಗಾಗಿ-ಕೋವಿಡ್ ಸಂಕಷ್ಟ ಪರಿಹಾರಕ್ಕಾಗಿವಿಧಾನ ಸೌಧ ಚಲೋ

Posted by Naanu Gauri on Wednesday, September 23, 2020

ಕೊರೊನಾ ಬರುವುದಕ್ಕಿಂತ ಮುಂಚೆ ದೇಶದಲ್ಲಿ 28% ಬಡತನ ಇತ್ತು. ಲಾಕ್‌ಡೌನ್ ನಂತರ ಅದು ದುಪ್ಪಟ್ಟಾಗಿದೆ. ದೇಶದಲ್ಲಿ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಾಯಂ ಕೆಲಸ ಎಂಬದನ್ನು ಕಿತ್ತುಹಾಕಿ ಆ ಜಾಗದಲ್ಲಿ ಗುತ್ತಿಗೆ ಪದ್ದತಿ ತರಲಾಗುತ್ತಿದೆ. ಇದರಿಂದ ಕಾರ್ಮಿಕರು ತಮಗಿದ್ದ ಕಾನೂನುಬದ್ಧ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು-ಕಾರ್ಮಿಕರನ್ನು ಬೀದಿಪಾಲು ಮಾಡಿ ತಮಗೆ ಬೇಕಾದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ದೇಶದ 1% ಶ್ರೀಮಂತರಿಗಾಗಿ ದೇಶದ 99% ಜನರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನರ ಕೈಗೆ ಸರ್ಕಾರ ನೇರ ನಗದು ನೀಡಬೇಕು. ಕಾರ್ಮಿಕರಿಗೆ ಹಣ ನೀಡಿದರೆ ಅವರು ಖರ್ಚು ಮಾಡುತ್ತಾರೆ. ಇದರಿಂದ ಉತ್ಪಾದನೆ ಹೆಚ್ಚಾಗುತ್ತದೆ, ಉದ್ಯೋಗಗಳು ಹೆಚ್ಚಾಗುತ್ತವೆ. ಆದರೆ ಸರ್ಕಾರ ಇದನ್ನು ಬಿಟ್ಟು ಬಂಡವಾಳಶಾಹಿಗಳಿಗೆ ಮಾತ್ರ ಹಣ ನೀಡುತ್ತಿದೆ. ಕೊಂಡುಕೊಳ್ಳಲು ಜನರ ಬಳಿ ಹಣವಿಲ್ಲದ ಮೇಲೆ ಉತ್ಪಾದನೆ ಮಾಡಿ ಏನು ಪ್ರಯೋಜನ? ಇಷ್ಟು ಸಾಮಾನ್ಯ ಜ್ಞಾನ ಸರ್ಕಾರಕ್ಕಿಲ್ಲವೇ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರ್ ಕಿಡಿಕಾರಿದ್ದಾರೆ.

ಕಾರ್ಮಿಕರ ಮಸೂದೆಗಳು ಮೊದಲು ವಿಚ್ಛೇದನಕ್ಕೆ ಅರ್ಜಿ ಹಾಕಿ ಮದುವೆ ಮಾಡಿದಂತೆ. ಮಾಲೀಕರನ್ನು ಕಾಪಾಡಲು ಕಾರ್ಮಿಕರ ಸಂಘಟನಾ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಮಾಲೀಕರು ಕಾರ್ಮಿಕರ ಪರ ಕಾನೂನುಗಳು ಇರುವಾಗಲೇ ಉಲ್ಲಂಘನೆ ಮಾಡುತ್ತಾರೆ, ಇನ್ನು ಅವೂ ಇಲ್ಲದೆ ಇರುವಾಗಿನ ಅವಸ್ಥೆ ಅರ್ಥ ಮಾಡಿಕೊಳ್ಳಿ. ಇದೇ 28ಕ್ಕೆ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಸಿಐಟಿಯು ಬೆಂಬಲ ನೀಡುತ್ತದೆ
– ಮೀನಾಕ್ಷಿ ಸುಂದರ್

ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವರು ಬರಬೇಕು, ತಮ್ಮ ಹಕ್ಕೊತ್ತಾಯಗಳನ್ನು ಆಲಿಸಬೇಕೆಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.


ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳ ವಾಪಸಾತಿಗೆ ಆಗ್ರಹ: ಸೆ. 28 ರಂದು ’ಭಾರತ್ ಬಂದ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...