Homeಕರ್ನಾಟಕಸರ್ಕಾರದ ವೈಫಲ್ಯಗಳನ್ನು ಕೇಸರಿ ಶಾಲುಗಳ ಹಿಂದೆ ಅಡಗಿಸಿಡಲು ಸಾಧ್ಯವಿಲ್ಲ: ಜನಪರ ಸಂಘಟನೆಗಳ ಆಕ್ರೋಶ

ಸರ್ಕಾರದ ವೈಫಲ್ಯಗಳನ್ನು ಕೇಸರಿ ಶಾಲುಗಳ ಹಿಂದೆ ಅಡಗಿಸಿಡಲು ಸಾಧ್ಯವಿಲ್ಲ: ಜನಪರ ಸಂಘಟನೆಗಳ ಆಕ್ರೋಶ

- Advertisement -
- Advertisement -

ಸಂವಿಧಾನ ಬದ್ಧವಾದ ಶಿಕ್ಷಣದ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯದ ಪರವಾಗಿ ಹಾಗೂ ಕೇಸರಿ ಶಾಲು – ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಷಡ್ಯಂತ್ರವನ್ನು ಜನಪರ ಸಂಘಟನೆಗಳು ವಿರೋಧಿಸಿದ್ದು, ಇದರ ವಿರುದ್ಧ ಒಕ್ಕೊರಲಿನ ದನಿಯೆತ್ತಲು ದೃಢ ನಿರ್ಧಾರ ತೆಗದುಕೊಳ್ಳಲಾಗಿದೆ. ಸರ್ಕಾರದ ಆಡಳಿತ ವೈಫಲ್ಯಗಳನ್ನು ಕೇಸರಿಶಾಲುಗಳ ಹಿಂದೆ ಅಡಗಿಸಿಡಲು ಸಾಧ್ಯವಿಲ್ಲ ಎಂದು ಜನಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

“ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯದಲ್ಲಿ ಕೇಸರಿಶಾಲು- ಹಿಜಾಬ್ ಎಂಬ ವಿಷಯದ ಸುತ್ತ ಕೋಮು ಗಲಭೆಯ ಜ್ವಾಲೆ ಹತ್ತಿ ಉರಿಯುತ್ತಿರುವುದು ಎಲ್ಲರನ್ನೂ ಕಂಗೆಡಿಸಿದೆ. ಮುಖ್ಯವಾಗಿ, ರಾಜ್ಯದ ಸಾವಿರಾರು ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳು ತಮ್ಮ ತಪ್ಪೇನೂ ಇಲ್ಲದಿದ್ದರೂ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಾ, ಪ್ರತಿದಿನ ಕಾಲೇಜುಗಳ ಗೇಟುಗಳ ಮುಂದೆ ಏಕಾಂಗಿ ಪ್ರತಿಭಟನೆಗಳನ್ನು ನಡೆಸುತ್ತಾ ತೀವ್ರವಾದ ತೊಂದರೆಗೆ ಗುರಿಯಾಗಿದ್ದಾರೆ. ಆಡಳಿತ ನಡೆಸಬೇಕಾದ ಸರ್ಕಾರದ ಪ್ರತಿನಿಧಿಗಳು ತಮ್ಮ ದ್ವೇಷಪೂರಿತ ತಪ್ಪುಮಾಹಿತಿಯ ಭಾಷಣಗಳಿಂದ ಕೋಮು ಸಂಘರ್ಷದ ಬೀಜ ಬಿತ್ತುತ್ತಿದ್ದರೆ, ಜನರ ನೋವುಗಳಿಗೆ ಸ್ಪಂದಿಸಬೇಕಾದ ಸರ್ಕಾರದ ಯಂತ್ರಾಂಗಗಳೂ ಮಾಧ್ಯಮಗಳೂ ಏಕಪಕ್ಷೀಯ ನಡವಳಿಕೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ” ಎಂದು ಜನಪರ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

“ಕ್ಷುಲ್ಲಕ ನೆಪವೊಡ್ಡಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಗೇಟುಗಳನ್ನು ಮುಚ್ಚುತ್ತಿರುವುದು, ಶಾಲಾ-ಕಾಲೇಜುಗಳಲ್ಲಿ ಎಳೆವಯಸ್ಸಿನ ವಿದ್ಯಾರ್ಥಿಗಳನ್ನು ರಾಜಕಾರಣದ ಕೆಸರಿನೊಳಕ್ಕೆ ಎಳೆದು ತರುತ್ತಿರುವುದು ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಸಮವಸ್ತ್ರದ ಸುತ್ತಲಿನ ಸಮಸ್ಯೆಯೆಂಬಂತೆ ಬಿಂಬಿಸಲಾಗುತ್ತಿದ್ದರೂ, ಇದರ ಹಿಂದೆ ಸಂಘಪರಿವಾರದ ಕೋಮುವಾದಿ ರಾಜಕಾರಣ ಕೆಲಸ ಮಾಡುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಇದ್ಯಾವುದೂ ಆಕಸ್ಮಿಕವಾಗಿ ಸಂಭವಿಸುತ್ತಿರುವುದೆಂದು ಅಥವಾ ವಿದ್ಯಾರ್ಥಿಗಳು ತಮ್ಮಂತೆ ತಾವೇ ಇಂತಹ ಗದ್ದಲಕ್ಕಿಳಿದಿದ್ದಾರೆಂದು ನಂಬಲು ಸಾಧ್ಯವಿಲ್ಲ” ಎಂದು ಸಂಘಟನೆಗಳು ಸಂಶಯ ವ್ಯಕ್ತಪಡಿಸಿದೆ.

“ಈ ಇಡೀ ಗದ್ದಲದಲ್ಲಿ ವಿದ್ಯಾರ್ಥಿಗಳ, ವಿಶೇಷವಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಒಂದೆಡೆ, ಸಾಚಾರ್ ವರದಿ ಸ್ಪಷ್ಟವಾಗಿ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸ್ಥಿತಿಗತಿ ಎಷ್ಟು ಶೋಚನೀಯವಾಗಿದೆಯೆಂಬುದನ್ನು ಎತ್ತಿ ತೋರಿಸಿದೆ. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಕಾಲೇಜಿನ ಮೆಟ್ಟಿಲು ಹತ್ತುತ್ತಿರುವುದನ್ನು ಸ್ವಾಗತಿಸಬೇಕೇ ಹೊರತು ಅವರನ್ನು ಧಾರ್ಮಿಕ ಆಚರಣೆಗಳ ಕಾರಣ ಮುಂದಿಟ್ಟು ಕಾಲೇಜುಗಳ ಗೇಟುಗಳ ಹೊರಗೆ ನಿಲ್ಲಿಸುವುದಲ್ಲ” ಸಂಘಟನೆಗಳು ಹೇಳಿದೆ.

“ಈ ರೀತಿ ಮಾಡುವುದರಿಂದ ಆ ಹೆಣ್ಣುಮಕ್ಕಳು ಮಾತ್ರವಲ್ಲದೆ ಇಡೀ ವಿದ್ಯಾರ್ಥಿ ಸಮುದಾಯದ ಮೇಲೆ ಅನಿಶ್ಚಿತತೆಯ ಕತ್ತಿ ತೂಗುತ್ತಿದೆ. ಶಾಲಾಕಾಲೇಜುಗಳ ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಕೋವಿಡ್‌ನ ಕಾರಣದಿಂದ ಅಪಾರ ಏರುಪೇರುಗಳನ್ನು ಕಂಡಿದ್ದ ಶಿಕ್ಷಣ ವ್ಯವಸ್ಥೆಯು ನಿಧಾನವಾಗಿ ಒಂದಿಷ್ಟು ಚೇತರಿಸಿಕೊಳ್ಳುತ್ತಿರುವಂತೆಯೇ ಆರಂಭಿಸಲಾಗಿರುವ ಈ ಗದ್ದಲದಿಂದ ದೂರಗಾಮಿ ದುಷ್ಪರಿಣಾಮಗಳು ಉಂಟಾಗಲಿವೆ” ಎಂದು ಹೇಳಿದೆ.

“ದುಬಾರಿ ಫೀಸು ಮತ್ತು ಡೋನೆಷನ್ ಹಾವಳಿ ಬಡ ವಿದ್ಯಾರ್ಥಿಗಳನ್ನು ಹಿಂಡುತ್ತಿದೆ ಮತ್ತು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ. ಹಾಗೆಯೇ ಕಾಲೇಜು ಶಿಕ್ಷಣ ಮುಗಿಸುವ ವಿದ್ಯಾರ್ಥಿಗಳಿಗೆ ತಕ್ಕನಾದ ಸಾಕಷ್ಟು ಉದ್ಯೋಗಾವಕಾಶಗಳಿಲ್ಲದೆ, ಅಭದ್ರ ಉದ್ಯೋಗಗಳಲ್ಲಿ ನಮ್ಮ ಯುವಜನರು ನಲುಗುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ, ಯುವಜನರ ಈ ಮೂಲ ಸಮಸ್ಯೆಗಳನ್ನು ಸರ್ಕಾರ ಕೇಸರಿ ಶಾಲಿನ ಹಿಂದೆ ಮರೆಮಾಚಲು ಹೊರಟಿದೆ” ಎಂದು ಆಕ್ರೋಶ ವ್ಯಕ್ತವಾಗಿದೆ.

“ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸಂವಿಧಾನದ ತತ್ವಗಳಲ್ಲಿ ನಂಬಿಕೆಯುಳ್ಳ ನಾಡಿನ ಎಲ್ಲ ಸೌಹಾರ್ದಪ್ರೇಮಿ ಬಂಧುಗಳೂ ಒಕ್ಕೊರಲಿನಿಂದ ಶಿಕ್ಷಣದ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ‍್ಯದ ಪರವಾಗಿ ದೊಡ್ಡಮಟ್ಟದಲ್ಲಿ ದನಿಯೆತ್ತಬೇಕಾದ ಅಗತ್ಯವಿದೆ” ಎಂದು ಹೇಳಿದೆ.

ಇದನ್ನೂ ಓದಿ: ವಿಜಯಪುರ: ಮುಸ್ಲಿಮರ ನರಹತ್ಯೆಗೆ ಎಬಿವಿಪಿ ಸದಸ್ಯೆಯಿಂದ ಕರೆ; ವಿಡಿಯೊ ವೈರಲ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...