Homeಮುಖಪುಟಪ್ರತಿ ಊರಿನ ಸರ್ಕಾರಿ ಶಾಲೆಯಲ್ಲೂ ಇಂತಹ ಶಿಕ್ಷಕಿ ಇರಬೇಕಲ್ಲವೇ?

ಪ್ರತಿ ಊರಿನ ಸರ್ಕಾರಿ ಶಾಲೆಯಲ್ಲೂ ಇಂತಹ ಶಿಕ್ಷಕಿ ಇರಬೇಕಲ್ಲವೇ?

- Advertisement -
- Advertisement -

ಶಿಕ್ಷಣವು ನಿಮ್ಮನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತದೆ…. ಉತ್ತಮ ಶಿಕ್ಷಣ, ಉತ್ತಮ ಜ್ಞಾನವು ನಮ್ಮ ಪ್ರತಿಭೆಯನ್ನು ಹೆಚ್ಚಿಸುತ್ತದೆ. ಅದೇ ರೀತಿಯಲ್ಲಿ ತಮಿಳುನಾಡಿನ ಸರ್ಕಾರ ಶಾಲೆಯಲ್ಲಿ ಓದುತ್ತಿರುವ ದಿನಗೂಲಿ ಕಾರ್ಮಿಕನ ಚಿಕ್ಕ ಮಗಳು ವಿಮಾನ ಹತ್ತುತ್ತಾಳೆ ಎಂಬುದನ್ನು ಆಕೆಯ ಪೋಷಕರೇ ನಂಬಲಾಗಲಿಲ್ಲ.

‘ಸೂರರೈ ಪೋಟ್ರು’ ಸಿನಿಮಾದ ಚಿತ್ರತಂಡವು ಆಯೋಚಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸೇಲಂ ಜಿಲ್ಲೆಯ ಜಾನ್ ಚೆಟ್ಟಿಮಂಕುರಿಚಿಯಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂತರಿಕ್ಷಾ ಮೊದಲ ಬಹುಮಾನ ಪಡೆದುಕೊಂಡಳು. ಪ್ರತಿಫಲವಾಗಿ ಆಕೆಗೆ ವಿಮಾನಯಾನ ಮಾಡುವ ಅವಕಾಶವನ್ನು ಚಿತ್ರತಂಡ ಬಹುಮಾನವಾಗಿ ನೀಡಿದೆ.

ಇಂತಹ ಅವಕಾಶಕ್ಕಾಗಿ ಆಕೆ ತನ್ನ ಶಿಕ್ಷಕಿ ಎಸ್ ಉಮಾ ಮಹೇಶ್ವರಿ ಅವರಿಗೆ ಧನ್ಯವಾದ ಹೇಳುತ್ತಾಳೆ. ಪುಸ್ತಕ ಓದುವ ಅಭಿರುಚಿಯನ್ನು ಮೈಗೂಡಿಸಿಕೊಂಡಿರುವ ಉಮಾ ಅವರು ಸುಮಾರು ಎರಡು ದಶಕಗಳಿಂದ ಹಲವು ಸರ್ಕಾರಿ ಶಾಲೆಯ ಮಕ್ಕಳ ಜೀವನದಲ್ಲಿ ಹೊಸ ಚಿತ್ತಾರ ಮೂಡಿಸಿದ್ದಾರೆ.

ಮಕ್ಕಳಲ್ಲಿ ಹೊಸ ಹುರುಪು, ಚೈತನ್ಯವನ್ನು ತುಂಬುವ ಅವರು, 2005ರಲ್ಲಿ ಆರಂಭವಾದ ಜಾನ್ ಚೆಟ್ಟಿಮಂಕುರಿಚಿ ಸರ್ಕಾರಿ ಶಾಲೆಯಲ್ಲಿ ‘ಕಲೈಕತಿರ್’ ಎಂಬ ಪತ್ರಿಕೆಯನ್ನು ತರುತ್ತಿದ್ದಾರೆ. ಅದು ನಿಯಮಿತವಾಗಿ 6, 7 ಮತ್ತು 8 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೆನ್ನುಹೊರೆಯನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ಓದು ಮತ್ತು ವಿಜ್ಞಾನ ಪ್ರಯೋಗಗಳಿಗೆ ಸಹಕಾರಿಯಾಗಿದೆ. ಉಮಾ ಅವರ ಈ ಚಿಕ್ಕ ಪ್ರಯೋಗವು ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತಿದೆ.

ಸದಾ ಓದಿನಲ್ಲೇ ತಮ್ಮ ಹೆಚ್ಚು ಸಮಯ ಕಳೆಯುವ ಉಮಾ ಅವರು ತಮ್ಮ ವಿದ್ಯಾರ್ಥಿಗಳಿಗೂ ಓದುವ ಹವ್ಯಾಸವನ್ನು ತುಂಬಿದ್ದಾರೆ. ಅವರು ಕೆಲಸ ಮಾಡುವ ಪ್ರತಿಯೊಂದು ಶಾಲೆಯಲ್ಲಿಯೂ ತಮ್ಮ ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯಪುಸ್ತಕಗಳನ್ನು ಮೀರಿ ಓದುವ ಹವ್ಯಾಸವನ್ನು ಬಿತ್ತಿದ್ದಾರೆ ಮತ್ತು ಬಿತ್ತುತ್ತಿದ್ದಾರೆ.

ಇದನ್ನೂ ಓದಿರಿ: 334 ವರ್ಷಗಳ ಇತಿಹಾಸವಿರುವ ಚೆನ್ನೈ ಪಾಲಿಕೆಗೆ ಮೊದಲ ಬಾರಿಗೆ ದಲಿತ ಮಹಿಳೆ ಮೇಯರ್‌

2018ರಲ್ಲಿ ಕ್ರೋಮ್‌ಪೇಟೆಯ ಸರ್ಕಾರಿ ಶಾಲೆಯಲ್ಲಿ ಅವರು ಪ್ರಕಟಿಸುತ್ತಿದ್ದ ‘ಕ್ಲಾಸ್ ರೂಮ್ ಲೈಬ್ರರಿ’, ‘ತುಂಬಿ’ ಮತ್ತು ಅಗರಮ್‌ ಶಾಲೆಯಲ್ಲಿ ಪ್ರಕಟಿಸುತ್ತಿದ್ದ ‘ಯಧುಮ್’ ಎಂಬ ಹೆಸರಿನ ನಿಯತಕಾಲಿಕೆಗಳು ವಿದ್ಯಾರ್ಥಿಗಳಿಗೆ ನೆರವಾಗಿವೆ. ಅನೇಕ ವಿದ್ಯಾರ್ಥಿಗಳು ಹೆಚ್ಚು ಪದಗಳನ್ನು ಕಲಿಯಲು, ಅವುಗಳ ಅರ್ಥಗಳನ್ನು ತಿಳಿಯಲು ಈ ನಿಯತಕಾಲಿಕೆಗಳು ಸಹಾಯ ಮಾಡಿವೆ.

ಅಂಕಪಟ್ಟಿಯ ಅಂಕಗಳು ವಿದ್ಯಾರ್ಥಿಗಳಲ್ಲಿ ಪ್ರಬುದ್ದತೆಯನ್ನು ರೂಪಿಸುವುದಿಲ್ಲ. ಆದರೆ, ಅಂಕಗಳಿಗೂ ಹೊರತಾದ ಜ್ಞಾನವು ಶಾಲಾ ಮಕ್ಕಳನ್ನು ಭಾವಪರವಶರನ್ನಾಗಿಸುತ್ತದೆ. ಅಪ್ರಬುದ್ಧತೆಯನ್ನು ಅಳಿಸಿ ಪ್ರಬುದ್ದತೆಯನ್ನು ಬೆಳೆಸುತ್ತದೆ. ಇದೂ ಕೂಡ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನೂ ಪಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಉಮಾ.

ಈಗ ವಿದ್ಯಾರ್ಥಿಗಳ ಮೂಲ ಕಲ್ಪನೆಗಳು, ಕಥೆಗಳು, ಲೇಖನಗಳು ಮತ್ತು ಸೃಜನಶೀಲ ಚಿತ್ರಣಗಳೊಂದಿಗೆ ಶಾಲೆಯು ಅಭಿವೃದ್ಧಿ ಹೊಂದುತ್ತಿದೆ. ತನ್ನ ಬಿಡುವಿನ ವೇಳೆಯಲ್ಲಿ, ಲೇಖಕರನ್ನು ಭೇಟಿ ಮಾಡಲು ಮತ್ತು ಹೊಸ ಶೀರ್ಷಿಕೆಗಳನ್ನು ಹುಡುಕಲು ಉಮಾ ಅವರು ತಮ್ಮ ಶಾಲೆಯ ಆರು ವಿದ್ಯಾರ್ಥಿಗಳನ್ನು ನಂದನಂನಲ್ಲಿರುವ ಚೆನ್ನೈ ಪುಸ್ತಕ ಮೇಳಕ್ಕೆ ಕರೆದೊಯ್ದು ವಿದ್ಯಾರ್ಥಿಗಳ ಜ್ಞಾನವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.

ಮಕ್ಕಳು ಮತ್ತು ಶಿಕ್ಷಕರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಉಮಾ ಅವರು ನೀಡುವ ಉಡುಗೊರೆಗಳು ಅದ್ಭುತ ಪುಸ್ತಕಗಳಾಗಿರುತ್ತವೆ. ಅವರ ಈ ನಡೆ ಸುತ್ತಲಿನ ಜನರಲ್ಲಿ ಲವಲವಿಕೆಯ ಮನೋಭಾವವನ್ನು ಬೆಳೆಸುತ್ತದೆ ಎಂದು ಕ್ರೋಂಪೇಟೆಯ ಎಂಬಿಎನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಎಂ ಗಾಂಧಿಮತಿ ಹೇಳುತ್ತಾರೆ.

“ವಿದ್ಯಾರ್ಥಿಗಳು ಒಮ್ಮೆ ಪುಸ್ತಕವನ್ನು ತೆಗೆದುಕೊಂಡರೆ, ಅವರು ಬೇಗನೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ವಿಶೇಷವಾಗಿ ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಓದುವುದು ಗಮನಾರ್ಹ” ಎಂದು ಗಾಂಧಿಮತಿ ಹೇಳುತ್ತಾರೆ.

ಮಕ್ಕಳ ಪೋಷಕರು ತಮ್ಮ ಮಕ್ಕಳು ಪುಸ್ತಕಗಳ ಓದಿನಲ್ಲಿ ಮುಳುಗಿರುವುದನ್ನು ನೋಡಿ ಕುತೂಹಲಗೊಳ್ಳುತ್ತಾರೆ ಮತ್ತು ಸಂತೋಷ ಪಡುತ್ತಾರೆ. ಉಮಾ ಅವರ ಸಣ್ಣ ಪುಸ್ತಕ ಸಂಗ್ರಹವು ಈಗ ದೊಡ್ಡ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಏಕೆಂದರೆ ಪೋಷಕರು ಪುಸ್ತಕಗಳ ಬಂಡಲ್‌ಗಳನ್ನು ದಾನ ಮಾಡುತ್ತಿದ್ದಾರೆ, ಲೇಖಕರು ತಮ್ಮ ಪುಸ್ತಕಗಳ ಸಹಿ ಮಾಡಿದ ಪ್ರತಿಗಳನ್ನು ಕೊಡುಗೆ ನೀಡುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಹೇಳುತ್ತಾರೆ.

ವಿದ್ಯಾರ್ಥಿಗಳು ಬರೆದ ಪುಸ್ತಕ ವಿಮರ್ಶೆಗಳನ್ನು ಸ್ಥಳೀಯ ಪತ್ರಿಕೆಗಳು ಪ್ರಕಟಿಸುತ್ತವೆ. ಶಾಲೆಯ ಇಬ್ಬರು ಹುಡುಗಿಯರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. “ಈ ಅವಕಾಶವಿಲ್ಲದಿದ್ದರೆ, ನನಗೆ ಎಂದಾದರೂ ವಿಮಾನದಲ್ಲಿ ಹಾರಲು ಅವಕಾಶ ಸಿಗುತ್ತಿತ್ತೇ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ” ಎಂದು ವಿದ್ಯಾರ್ಥಿನಿ ಅಂತರಿಕ್ಷಾ ಹೇಳುತ್ತಾರೆ.


ಇದನ್ನೂ ಓದಿರಿ: ಮಹಿಳಾ ವಿಶ್ವಕಪ್‌: ಪಾಕ್‌ ವಿರುದ್ಧ ಭಾರತ ಜಯಭೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇಂತಹ ಶಿಕ್ಷಕರು ವಿಧ್ಯಾರ್ಥಿಗಳ ಪಾಲಿಗೆ ದೇವರಿದ್ದ ಹಾಗೆ… ಅಭಿನಂದನೆಗಳು ಈ ಶಿಕ್ಷಕರಿಗೆ.

  2. I would like to congratulate and big Salute for a Ideal Teacher Miss Uma . I suggest to the government of India MHRD consider your valuable service and Award as RASHTRIYA SHIKSHAK SAMMAN PURASKAR 5th September 2022 .
    With regards
    Best of luck
    Your faithfully
    A.P.MUHSIN GPT Teacher govt higher primary Urdu school Aladakatti Haveri Karnataka
    9902653162

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...