Homeಮುಖಪುಟಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆಯಿಂದ ಹೊರಗಿಡಲು ಸಾಧ್ಯವೇ?

ಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆಯಿಂದ ಹೊರಗಿಡಲು ಸಾಧ್ಯವೇ?

- Advertisement -
- Advertisement -

ಸರ್ವಧರ್ಮ ಸಮಭಾವವನ್ನು (Secularism) ಪ್ರತಿಪಾದಿಸುವ ಬೇರೆಲ್ಲಾ ರಾಷ್ಟ್ರಗಳಂತೆಯೇ, ಭಾರತಕ್ಕೂ ಕೂಡ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮಕ್ಕೆ ಯಾವ ಸ್ಥಾನವಿರಬೇಕು ಎಂದು ನಿರ್ಧರಿಸಲು ತನ್ನದೇ ಆದ ಹಲವು ಸವಾಲುಗಳಿದ್ದವು. ಸ್ವಾತಂತ್ರ್ಯಾನಂತರದಲ್ಲಿ, ಭಾರತವು ಕೈಗೊಂಡ ಸರ್ವಧರ್ಮ ಸಮಭಾವದ ನಿಲುವು ಧರ್ಮವನ್ನು ಪ್ರಭುತ್ವದಿಂದ (ರಾಜ್ಯಾಂಗ) ಬೇರ್ಪಡಿಸಲು ಉದ್ದೇಶಿಸಿತು. ಆದರೂ, ಸರ್ವಧರ್ಮ ಸಮಭಾವದ ಭಾರತೀಯ ಆವೃತ್ತಿಯು ತನ್ನ ಸಂಕೀರ್ಣತೆಯನ್ನೂ ಮತ್ತು ’ಬಹು-ಮೌಲಿಕತೆ’ಯನ್ನೂ ಉಳಿಸಿಕೊಂಡಿತು. ಪ್ರಭುತ್ವದ ನಿಲುವುಗಳು ಮತ್ತು ಪರಿಣಾಮಕಾರಿ ಕಲಿಕೆಗಿರುವ ಬೇಡಿಕೆಯಿಂದಾಗಿ, ಈ ಸಂಕೀರ್ಣತೆಯು ಶಿಕ್ಷಣ ವ್ಯವಸ್ಥೆಯಲ್ಲಿಯೂ ಪ್ರತಿಧ್ವನಿಸಿತು.

ಸೋಶಿಯಲ್ ಕ್ಯಾರೆಕ್ಟರ್ ಆಫ್ ಲರ್ನಿಂಗ್ ಎಂಬ ಪುಸ್ತಕದಲ್ಲಿ ಎನ್.ಸಿ.ಈ.ಆರ್.ಟಿಯ ಮಾಜಿ ನಿರ್ದೇಶಕರಾದ ಕೃಷ್ಣ ಕುಮಾರರು, ಹೇಗೆ ಶಿಕ್ಷಣ ವ್ಯವಸ್ಥೆಗಳು ಶಿಕ್ಷಣಾರ್ಥಿಯ ಸಾಮಾಜಿಕ ಅಸ್ಮಿತೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ ಎಂಬುದನ್ನು ತಿಳಿಸುತ್ತಾರೆ. ಶಿಕ್ಷಣಾರ್ಥಿಗಳ ಮನೆಯ ಮತ್ತು ಸಾಮುದಾಯಿಕ ಮೌಲ್ಯಗಳನ್ನು ತರಗತಿಗೆ ಕೊಂಡುಬರುವುದು ಅವರ ಕಲಿಕೆಯಲ್ಲಿ ಒಂದು ಸಕಾರಾತ್ಮಕ ಪಾತ್ರ ವಹಿಸುತ್ತದೆ. ಭಾರತದ ಶಿಕ್ಷಣ ನೀತಿಗಳು ಶಿಕ್ಷಣ ಹಾಗೂ ಸಾಮುದಾಯಿಕ ಅನುಭವಗಳ ನಡುವಿನ ಸಂಬಂಧವನ್ನು ಗುರುತಿಸುತ್ತವೆ ಮತ್ತು ತರಗತಿಗಳ ಸಂಸ್ಕೃತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಇದು ವಿವರಿಸುತ್ತದೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು [ನ್ಯಾಷನಲ್ ಕರಿಕ್ಯುಲಮ್ ಫ್ರೇಮ್ ವರ್ಕ್ (2000, 2005)] ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯು (2020) ವಿವಿಧ ಧರ್ಮಗಳ ಬಗ್ಗೆ ಅರಿವು ಮೂಡಿಸುವ ಹಾದಿಯಲ್ಲಿ ಎಲ್ಲಾ ಧರ್ಮಗಳನ್ನು ಗೌರವಯುತವಾಗಿ ಕಾಣುವುದನ್ನು ಶಿಫಾರಸ್ಸು ಮಾಡುತ್ತದೆ. ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಸ್ಟ್ರಿಕ್ಟ್ ಪ್ರೈಮರಿ ಎಜುಕೇಷನ್ ಪ್ರೋಗ್ರಾಮ್ – ಡಿ.ಪಿ.ಈ.ಪಿ) ಮತ್ತು ಶಾಲಾ ಆಡಳಿತ ಸಮಿತಿ (ಸ್ಕೂಲ್ ಮ್ಯಾನೇಜ್‌ಮೆಂಟ್ ಕಮಿಟಿ – ಎಸ್.ಎಂ.ಸಿ) ಮತ್ತು ಇತರೆ ಹಲವು ಕಾರ್ಯಕ್ರಮಗಳೂ ಕೂಡ ಸ್ಥಳೀಯರನ್ನು ಮತ್ತು ಸ್ಥಳೀಯ ಸೂಕ್ಷ್ಮತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಒಳಗೊಳ್ಳುವ ಉದ್ದೇಶಗಳನ್ನು ಹೊಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಾಲೆಯಲ್ಲಿ ಈ ರೀತಿಯ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ಎರಡು ರೀತಿಯಲ್ಲಿ ಉಪಕಾರಿಯಾಗುತ್ತದೆ. ಮೊದಲನೆಯದಾಗಿ, ಈ ರೀತಿಯ ವಾತಾವರಣವು ವಿದ್ಯಾರ್ಥಿಗಳಿಗೆ ದಿನನಿತ್ಯ ಜೀವನಾನುಭವದ ಉದಾಹರಣೆಗಳನ್ನು ನೀಡುವ ಮೂಲಕ ಅವರ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ, ವಿದ್ಯಾರ್ಥಿಗಳು ತಮ್ಮ ಸಮುದಾಯದ ಅನುಭವಗಳನ್ನು ತರಗತಿಗಳಲ್ಲಿ ಹಂಚಿಕೊಳ್ಳುವುದು, ನಾವು ಅವರನ್ನು ಕೇವಲ ಅವರ ಬುದ್ಧಿಮತ್ತೆಗೆ ಮಾತ್ರವಲ್ಲದೇ, ಅವರನ್ನು ಇಡಿಯಾಗಿ ಅವರಿರುವಂತೆಯೇ ಸ್ವೀಕರಿಸುತ್ತೇವೆ ಎಂಬುದನ್ನೂ ತಿಳಿಸುತ್ತದೆ. ಇದು, ಅವರು ಯಾವುದೇ ಭಯ ಅಥವಾ ಅಳುಕಿಲ್ಲದೆ ಕಲಿಯಲು ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಹಿನ್ನೆಲೆಗಳು ಮತ್ತು ಅನುಭವಗಳು ಅವರ ಕಲಿಕೆಯನ್ನು ಹೆಚ್ಚಿಸುತ್ತದೆಯೇ ಹೊರತು ಕುಂದಿಸುವುದಿಲ್ಲ. ಹಾಗಾಗಿಯೇ, ಸ್ಪೇನ್, ಐಲೆಂಡ್, ಸ್ವೀಡನ್‌ಗಳಂತಹ ರಾಷ್ಟ್ರಗಳ ಸರ್ವಧರ್ಮ ಸಮಭಾವದ ಪಠ್ಯಕ್ರಮದಲ್ಲಿಯೂ (secular curriculum) ಕೂಡ ಧಾರ್ಮಿಕ ಮೌಲ್ಯಗಳು ಹಾಗೂ ನೀತಿಗಳು ಮತ್ತು ಧರ್ಮಗಳ ತೌಲನಿಕ ಅಧ್ಯಯನವನ್ನು ಒಳಗೊಂಡಿರುತ್ತದೆ. ಸ್ಪೇನಿನ ಸರ್ಕಾರಿ ಶಾಲೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಧಾರ್ಮಿಕ ಉಡುಪುಗಳ ಮತ್ತು ಸಂಕೇತಗಳ ಮೇರೆಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇರದೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತವೆ.

ಯಾವ ಶಿಕ್ಷಣ ವ್ಯವಸ್ಥೆಯು ಸಾಮಾಜಿಕ- ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಕೇತಗಳನ್ನು ಶಾಲೆಯಿಂದ ಹೊರಗಿಡಲು ಪ್ರಯತ್ನಿಸುತ್ತದೋ, ಅದು ಅಲ್ಪಸಂಖ್ಯಾತರ ಸಂಸ್ಕೃತಿಗಳನ್ನು ಕೆಳದರ್ಜೆಯವೆಂದೂ, ಕೀಳುಮಟ್ಟದ್ದೆಂದೂ ಚಿತ್ರಿಸುತ್ತದೆ. ಇದು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಮೇಲೆ ಮಾನಸಿಕ ಹಿಂಸೆಯನ್ನೆಸಗಿ ಅವರ ಕಲಿಕೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ, ಶೋಷಿತ ಸಮುದಾಯವನ್ನು ಸುಧಾರಿಸುವ ಗುರಿಹೊಂದಿದ ಶಿಕ್ಷಣ ವ್ಯವಸ್ಥೆಯೇ ಅವರ ಸ್ವಂತಿಕೆಯನ್ನು ಹಾಳುಗೆಡವಿ ಅವರನ್ನು ಇನ್ನಷ್ಟು ದೂರತಳ್ಳುತ್ತದೆ. ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಇದಕ್ಕೆ ಉದಾಹರಣೆಗಳಾಗಿವೆ.

ಈ ದೇಶಗಳು ಧರ್ಮವನ್ನು ಶಿಕ್ಷಣದಿಂದ ಸಂಪೂರ್ಣವಾಗಿ ಬೇರ್ಪಡಿಸಲಿಕ್ಕೆ ಪ್ರಯತ್ನಿಸಿದರೂ, ತಮ್ಮ ಶಾಲೆಗಳಲ್ಲಿ ಧಾರ್ಮಿಕ ಮೌಲ್ಯಗಳು ಮತ್ತು ಸಂಕೇತಗಳು ಯಥೇಚ್ಛವಾಗಿಯೇ ಕಂಡುಬರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಮೌಲ್ಯಗಳು ಹಾಗೂ ಸಂಕೇತಗಳನ್ನು ಶಾಲೆಯ ಅಂಗಳಕ್ಕೆ ಹೊತ್ತು ತರುವ ಬಗ್ಗೆ ಯಾವುದೇ ಆಕ್ಷೇಪಣೆಗಳಿರುವುದಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

ಇದು ಭಾರತಕ್ಕೂ ಅನ್ವಯಿಸುತ್ತದೆ. ಧರ್ಮವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದೆ. ಶಾಲೆಗಳು ದಿನನಿತ್ಯ ಕಾರ್ಯ ನಿರ್ವಹಿಸುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಧಾರ್ಮಿಕ ಮೌಲ್ಯಗಳು, ಸಂಕೇತಗಳು ಮತ್ತು ಆಹಾರ ಪದ್ಧತಿಗಳು ಶಾಲೆಗಳ ಸಂಸ್ಕೃತಿಯ ಭಾಗವೇ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ದೀಪ ಬೆಳಗಿಸುವುದು, ಪೂಜೆಗಳು, ಸರಸ್ವತಿ ವಂದನೆಗಳು, ಗಣೇಶ ಸ್ತುತಿಗಳನ್ನೂ ಒಳಗೊಂಡಂತೆ ಅನೇಕ ಆಚರಣೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲದೇ, ದಸರಾ ಮತ್ತು ದೀಪಾವಳಿಗೆ ದೀರ್ಘಕಾಲದ ರಜೆಗಳನ್ನೂ ನೀಡಲಾಗುತ್ತದೆ.

ಸರ್ವವ್ಯಾಪಿಯಾಗಿರುವ ಧಾರ್ಮಿಕ ಸಂಕೇತಗಳು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟು ಸಾಮಾನ್ಯಗೊಳಿಸಲಾಗಿದೆ (normalise) ಎಂದರೆ, ಅದನ್ನು ಯಾರೂ ಗಮನಿಸಲಾಗುವುದೂ ಇಲ್ಲ, ಪ್ರಶ್ನಿಸಲಾಗುವುದೂ ಇಲ್ಲ. ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇವು ಸಾಮಾನ್ಯ ಎನಿಸಿದರೆ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಇದು ವಿಮುಖಗೊಳಿಸುತ್ತದೆ.

ಶಾಲೆಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಸಮಾಜದಲ್ಲಿ ಬದುಕಲು ಕಲಿಸುವ ಕಿರು ಸಮಾಜಗಳೇ ಆಗಿವೆ. ಶಾಲೆಗಳ ಕಾರ್ಯಕಲಾಪಗಳಲ್ಲಿ ರೂಪುಗೊಳ್ಳಬೇಕಿರುವ ಪ್ರಜಾಪ್ರಭುತ್ವ ವ್ಯವಸ್ಥೆಯು ಮುಂದೆ ಅವರು ನಿರ್ವಹಿಸಬೇಕಾದ ಪಾತ್ರಗಳಿಗೆ ಸಜ್ಜುಗೊಳಿಸುತ್ತದೆ. ಶಾಲೆ ಅಥವಾ ಕಾಲೇಜುಗಳು ಕೆಲವೇ ಸಮುದಾಯಗಳ ಆಚಾರ ಮತ್ತು ಪದ್ಧತಿಗಳನ್ನು ಸ್ವಾಗತಿಸಿದರೆ, ಶಿಕ್ಷಕರು ಕೂಡ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಅದೇ ಧಾರ್ಮಿಕ ಶ್ರೇಣೀಕರಣವನ್ನು ಸ್ಥಾಪಿಸುತ್ತಾರೆ ಮತ್ತು ಗಟ್ಟಿಗೊಳಿಸುತ್ತಾರೆ.

ಈ ರೀತಿಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೇಷ್ಠತೆಯ ಪರಿಕಲ್ಪನೆಯಲ್ಲಿ ಬದುಕುವ-ಬೆಳೆಯುವ ವಿದ್ಯಾರ್ಥಿಗಳು, ಮುಂದೆ ನಾಗರಿಕರಾಗಿಯೂ ಅದನ್ನೇ ಮುಂದುವರೆಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಅಧೀನತೆಗೆ ಒಳಪಡುವ ಸಮುದಾಯವು ಪ್ರತ್ಯೇಕಗೊಳಿಸಿದ ಮತ್ತು ಒಂಟಿತನದ ಭಾವನೆಯನ್ನು ಹೊತ್ತು ಬೆಳೆಯುತ್ತದೆ. ಈ ರೀತಿಯ ನಿಷ್ಪ್ರಯೋಜಕ ಮತ್ತು ನಿರರ್ಥಕ
ಸಂದರ್ಭಗಳಲ್ಲಿ, ಮತ್ತದೇ ಶೋಷಿತ ಸಮುದಾಯವು ಬೆಳೆಯಲಿಕ್ಕೆ ಇಚ್ಛಸುತ್ತಿಲ್ಲವೆಂದೂ, ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದೂ ಎಂದೆಂದಿಗೂ ದೂಷಿಸಲ್ಪಡುತ್ತದೆ.

ಶೈಮಾ ಅಮತುಲ್ಲಾಹ್
ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಅಸ್ಮಿತೆಯ ಅನುಸಂಧಾನ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಶಾಲಿನಿ ದೀಕ್ಷಿತ್
ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರು.

ಅನುವಾದ: ಶಶಾಂಕ್ ಎಸ್ ಆರ್

(ಈ ಲೇಖನವು ಮೊದಲು ಇಂಗ್ಲಿಷಿನಲ್ಲಿ, newsclick.in ಅಲ್ಲಿ ಪ್ರಕಟಗೊಂಡಿತ್ತು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...