Homeರಾಷ್ಟ್ರೀಯಪ್ರತಿ ಭಾರತೀಯರನ್ನು ಸರಾಸರಿ ಐದು ವರ್ಷ ಮುಂಚಯೆ ಕೊಲ್ಲುತ್ತಿರುವ ‘ವಾಯು ಮಾಲಿನ್ಯ’!

ಪ್ರತಿ ಭಾರತೀಯರನ್ನು ಸರಾಸರಿ ಐದು ವರ್ಷ ಮುಂಚಯೆ ಕೊಲ್ಲುತ್ತಿರುವ ‘ವಾಯು ಮಾಲಿನ್ಯ’!

ಲಕ್ನೊ ನಿವಾಸಿಗಳು ತಮ್ಮ ಆಯುಷ್ಯದ 9.5 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ

- Advertisement -
- Advertisement -

ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಸರಾಸರಿ ಭಾರತೀಯ ನಿವಾಸಿಗಳು ತಮ್ಮ ಜೀವನದ ಐದು ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಚಿಕಾಗೋ ವಿಶ್ವವಿದ್ಯಾನಿಲಯದ (ಇಪಿಐಸಿ) ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ವರದಿ ಮಾಡಿದೆ. ಈ ವರದಿಯು, ದೆಹಲಿಯಲ್ಲಿ ಪ್ರಸ್ತುತ ಮಾಲಿನ್ಯದ ಮಟ್ಟವು ಮುಂದುವರಿದರೆ ಅಲ್ಲಿ ವಾಸಿಸುವ ಜನರು 10 ವರ್ಷಗಳವರೆಗೆ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ ಎಂದು ಸೂಚಿಸಿದೆ.

ವಿಶ್ವದ ಇತರ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ವಾಯು ಮಾಲಿನ್ಯದ ಅತಿ ಹೆಚ್ಚು ಆರೋಗ್ಯದ ಹೊರೆಯನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ಇದಕ್ಕೆ ಕಾರಣ ಹೆಚ್ಚಿನ ಜನಸಂಖ್ಯೆ ಮತ್ತು ಹೆಚ್ಚಿನ ಕಣಗಳ ಮಾಲಿನ್ಯದ ಸಾಂದ್ರತೆ ಎಂದು ವರದಿಯೂ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ಸರಾಸರಿ ವಾರ್ಷಿಕ ‘PM2.5’ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ ಐದು ಮೈಕ್ರೋಗ್ರಾಂಗಳಿಗಿಂತ ಹೆಚ್ಚಿರಬಾರದು. ಆದರೆ ದೆಹಲಿಯಲ್ಲಿ ಸರಾಸರಿ ವಾರ್ಷಿಕ PM2.5 ಸಾಂದ್ರತೆಯೆಯೂ 21 ಪಟ್ಟು ಹೆಚ್ಚು ಹೊಂದಿದೆ. ದೆಹಲಿಯ ‘PM2.5’ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 107 ಮೈಕ್ರೋಗ್ರಾಂಗಳನ್ನು ಮೀರಿದೆ.

‘PM2.5’ ಎಂಬುವುದು 2.5 ಮೈಕ್ರೊಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳನ್ನು ಸೂಚಿಸುತ್ತದೆ. ಇದು ಮಾನವ ಕೂದಲುಗಿಂತ 100 ಪಟ್ಟು ಹೆಚ್ಚು ತೆಳ್ಳಗಿರುತ್ತದೆ. ವಾತಾವರಣದಲ್ಲಿ ನಡೆಯುವ ಇಂಧನ ಮತ್ತು ರಾಸಾಯನಿಕ ಕ್ರಿಯೆಗಳನ್ನು ಸುಡುವ ಪರಿಣಾಮವಾಗಿ ಈ ಕಣಗಳು ರೂಪುಗೊಳ್ಳುತ್ತವೆ.

2013 ರಿಂದ ವಿಶ್ವದ ಮಾಲಿನ್ಯದಲ್ಲಿ 44% ನಷ್ಟು ಹೆಚ್ಚಳವು ಭಾರತದಿಂದ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು WHO ಮಾರ್ಗಸೂಚಿಗಳಿಗಿಂತ ಸುಮಾರು 11 ಪಟ್ಟು ಹೆಚ್ಚಾಗಿದೆ.

ಕಳೆದ ಎರಡು ದಶಕಗಳಲ್ಲಿ ಕೈಗಾರಿಕೀಕರಣ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ ಭಾರತದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಜನಸಂಖ್ಯೆ ಬೆಳವಣಿಗೆಯು ಮತ್ತೊಂದು ಪ್ರಮುಖ ಅಂಶವಾಗಿದ್ದು, ಇದರಿಂದಾಗಿ ಶಕ್ತಿ ಮತ್ತು ಪಳೆಯುಳಿಕೆ ಇಂಧನ ಬಳಕೆಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ.

ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ: 5 ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತ‍ ಜನ ರೈತರನ್ನು ದೂಷಿಸುತ್ತಿದ್ದಾರೆ- ಸುಪ್ರೀಂ ತರಾಟೆ

130 ಕೋಟಿ ಭಾರತೀಯರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾರ್ಗಸೂಚಿಗಳನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 63% ಕ್ಕಿಂತ ಹೆಚ್ಚು ಜನಸಂಖ್ಯೆಯು ಭಾರತದ ಸ್ವಯಂ ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡವಾದ ಪ್ರತಿ ಘನ ಮೀಟರ್‌ಗೆ 40 ಮೈಕ್ರೋಗ್ರಾಂಗಳನ್ನು ಮೀರುವ ಪ್ರದೇಶಗಳಲ್ಲಿದೆ.

ಸಿಂದೂ-ಗಂಗಾ ಬಯಲು ಪ್ರದೇಶವು 50 ಕೋಟಿಗೂ ಹೆಚ್ಚು ಭಾರತೀಯರ ನೆಲೆಯಾಗಿದ್ದು, ಇದು ಭಾರತದ ಅತ್ಯಂತ ಕಲುಷಿತ ಪ್ರದೇಶವಾಗಿದೆ. ಹೊಸ ವರದಿಯ ಪ್ರಕಾರ, ಇಲ್ಲಿ ವಾಸಿಸುವ ಜನರು ತಮ್ಮ ಜೀವಿತಾವಧಿಯ 7.6 ವರ್ಷಗಳನ್ನು ಕಳೆದುಕೊಳ್ಳುತ್ತಾರೆ. ನಿರ್ದಿಷ್ಟವಾಗಿ ಲಕ್ನೋ ನಿವಾಸಿಗಳು ತಮ್ಮ ಜೀವನದ 9.5 ವರ್ಷಗಳನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ವಾಸಿಸುವ ಜನರು ವಾಯುಮಾಲಿನ್ಯದಿಂದಾಗಿ ಹೆಚ್ಚಿನ ಜೀವಿತಾವಧಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ವಾಯು ಮಾಲಿನ್ಯವು ಜಾಗತಿಕವಾಗಿ 2.2 ವರ್ಷಗಳ ಜೀವಿತಾವಧಿಯನ್ನು ಕಸಿಯುತ್ತಿದೆ ಎಂದು ವರದಿ ತಿಳಿಸಿದೆ. ಇದನ್ನು ಧೂಮಾಪಾನ ಮಾಡಿದ ಪರಿಣಾಮಕ್ಕೆ ಹೋಲಿಸಬಹುದಾಗಿದೆ. ವಾಯು ಮಾಲಿನ್ಯದಿಂದ ಆಲ್ಕೋಹಾಲ್ ಬಳಕೆ ಮತ್ತು ಅಸುರಕ್ಷಿತ ನೀರು ಬಳಸಿ ಮೃತಪಡುವುದಕ್ಕಿಂತ ಮೂರು ಪಟ್ಟು ಹೆಚ್ಚು ಜನರು ಅಸುನೀಗುತ್ತಿದ್ದಾರೆ. ಎಚ್‌ಐವಿ ಏಡ್ಸ್‌ ರೋಗಕ್ಕೆ ಸಾಯುವುದಕ್ಕಿಂತ ಆರು ಪಟ್ಟು ಹೆಚ್ಚು ಜನರು ವಾಯು ಮಾಲಿನ್ಯದಿಂದ ಮೃತಪಡುತ್ತಾರೆ. ಸಂಘರ್ಷ ಮತ್ತು ಭಯೋತ್ಪಾದನೆಯಲ್ಲಿ ಮೃತಪಡುವುದಕ್ಕಿಂತ 89 ಪಟ್ಟು ಹೆಚ್ಚಿನ ಜನರು ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೇಸಿಗೆ ಎದುರಿಸಲು ಸಿದ್ಧತೆ: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್‌ ಸ್ಥಾಪನೆಗೆ ಮುಂದಾದ ಬಿಡಬ್ಲ್ಯೂಎಸ್ಎಸ್ಬಿ

ಬೆಂಗಳೂರು: ಬೇಸಿಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಸಂಭಾವ್ಯ ಕೊರತೆಯನ್ನು ನೀಗಿಸಲು ಸಿದ್ಧತೆಗಳನ್ನು ಹೆಚ್ಚಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ...

ಸೋನಮ್ ವಾಂಗ್‌ಚುಕ್ ಆರೋಗ್ಯವಾಗಿದ್ದಾರೆ, ವೈದ್ಯಕೀಯ ಕಾರಣಕ್ಕೆ ಬಿಡುಗಡೆ ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ವೈದ್ಯಕೀಯ ಆಧಾರದ ಮೇಲೆ ಬಂಧನದಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ (ಫೆ.11) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. "ವೈದ್ಯಕೀಯ ಆಧಾರದಲ್ಲಿ ಸೋನಮ್ ವಾಂಗ್‌ಚುಕ್ ಅವರ...

ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಗುಂಡಿನ ದಾಳಿ; ಶಂಕಿತನ ಸೇರಿದಂತೆ 10 ಜನರು ಸಾವು

ಬ್ರಿಟಿಷ್ ಕೊಲಂಬಿಯಾದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಶಂಕಿತ ಬಂದೂಕುಧಾರಿ ಮಹಿಳೆಯೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಹತ್ತಿರದ ನಿವಾಸದಲ್ಲಿ...

‘ನನ್ನ ಗಡ್ಡ ಎಳೆದು ಟೋಪಿ ಕಿತ್ತೆಸೆದರು..’; ಶಿರಡಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಸ್ಲಿಂ ಪ್ರಯಾಣಿಕನ ಮೇಲೆ ಗುಂಪುದಾಳಿ

ಮನ್ಮಾಡ್ ಕಾಕಿನಾಡ ಶಿರಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಸುಮಾರು 20 ಜನರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಫೀಜ್‌ಪೇಟೆ ರೈಲು ನಿಲ್ದಾಣದ ಬಳಿ ಘಟನೆ ನಡೆದಿದ್ದು, ಮೊಹಮ್ಮದ್...

ಪ್ರಧಾನಿ ಮೋದಿ ಕುರಿತ ‘ದಿ ವೈರ್’ನ ವಿಡಂಬನಾತ್ಮಕ ಅನಿಮೇಷನ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಬಂಧ

ಸುದ್ದಿ ಸಂಸ್ಥೆ 'ದಿ ವೈರ್' ಪೋಸ್ಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿಡಂಬನಾತ್ಮಕ ಅನಿಮೇಷನ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ ನಿರ್ಬಂಧಿಸಿವೆ. ಸೋಮವಾರ (ಫೆ.10) ಸಂಜೆ ಸುಮಾರು ಎರಡು...

‘ಭಾರತವನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ?’; ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅಮೆರಿಕದೊಂದಿಗೆ ಇತ್ತೀಚೆಗೆ ಘೋಷಿಸಲಾದ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಲೋಕಸಭೆಯಲ್ಲಿ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ತೀವ್ರ ದಾಳಿ ಮಾಡಿದ...

ಗಾಜಾ| ಮನೆ ಅವಶೇಷದಲ್ಲಿ ತನ್ನ ಕುಟುಂಬದ ಸದಸ್ಯರ ಮೂಳೆ ಹುಡುಕಿದ ವ್ಯಕ್ತಿ

ಗಾಜಾ ನಗರದಲ್ಲಿದ್ದ ತನ್ನ ಮನೆಯ ಅವಶೇಷಗಳ ರಾಶಿಯ ನಡುವೆ ಕುಳಿತಿರುವ ಮಹಮೂದ್ ಹಮ್ಮದ್, ದೊಡ್ಡ ಜರಡಿಯಲ್ಲಿ ಮಣ್ಣನ್ನು ತೆಗೆದು ಅಲ್ಲಾಡಿಸಿ, ಅದನ್ನು ಹೊರಗೆ ಎಸೆಯುವ ಮೊದಲು ಎಚ್ಚರಿಕೆಯಿಂದ ನೋಡುವ ವಿಡಯೊ ನೋಡಿದವರ ಮನಕಲಕುತ್ತದೆ....

ವಿಪಕ್ಷಗಳಿಂದ ಅವಿಶ್ವಾಸ ನೋಟಿಸ್: ಕಲಾಪಕ್ಕೆ ಗೈರಾದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ

'ಪಕ್ಷಪಾತ'ದ ಆರೋಪ ಹೊರಿಸಿ ವಿಪಕ್ಷಗಳು 'ಅವಿಶ್ವಾಸ ನೋಟಿಸ್' ನೀಡಿರುವ ಹಿನ್ನೆಲೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಲಾಪದಿಂದ ದೂರ ಉಳಿದಿದ್ದಾರೆ. ಬುಧವಾರ (ಫೆ.11) ಸ್ಪೀಕರ್ ಪೀಠದಲ್ಲಿ ಹಿರಿಯ ಬಿಜೆಪಿ ಸಂಸದರಾದ ಪಿ.ಸಿ ಮೋಹನ್...

ಕೆನಡಾ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿ ಕನಿಷ್ಠ 10 ಸಾವು, 27 ಮಂದಿಗೆ ಗಾಯ

ಬ್ರಿಟಿಷ್ ಕೊಲಂಬಿಯಾದ ಪೀಸ್ ಪ್ರದೇಶದಲ್ಲಿರುವ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು, 27 ಮಂದಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ. ಶಂಕಿತ ಎಂದು ನಂಬಲಾದವರ ಮನೆಯಲ್ಲಿ ಇನ್ನೂ...

ಉತ್ತರ ಪ್ರದೇಶ| ಭೂಮಿ ವಿವಾದದಲ್ಲಿ ದಲಿತ ಮಹಿಳೆಯರ ಮೇಲೆ ಹಲ್ಲೆ- ಜಾತಿ ನಿಂದನೆ

ಉತ್ತರ ಪ್ರದೇಶದ ಮಾಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹಂಡಿಯಾ ಗ್ರಾಮದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಭೂ ವಿವಾದ ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ. ಪ್ರಬಲ ಜಾತಿ ಜನರು ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು...