ಭಾರತ ಐಕ್ಯತೆ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿಯವರು ಸುರಿವ ಮಳೆಯ ನಡುವೆಯೇ ಮೈಸೂರಿನಲ್ಲಿ ಭಾಷಣ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಹುಲ್ ಗಾಂಧಿಯವರ ಬದ್ಧತೆ ಇದು ಎಂದು ಹೊಗಳುತ್ತಿದ್ದಾರೆ.
ರಾಜ್ಯದಲ್ಲಿ ಮೂರನೇ ದಿನದ ಭಾರತ್ ಜೋಡೋ ಯಾತ್ರೆ ಮೈಸೂರು ಬಂಡಿಪಾಳ್ಯ ಸರ್ಕಲ್ ತಲುಪುತ್ತಿದ್ದಂತೆ ರಭಸವಾಗಿ ಮಳೆ ಸುರಿಯತೊಡಗಿತು. ಮಳೆ ಲೆಕ್ಕಿಸದೇ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾವೇಶದಲ್ಲಿ ನೆರಿದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಭಾನುವಾರದ ಯಾತ್ರೆಗೆ ವಿರಾಮ ನೀಡಿದರು.
ಆಗಮಿಸಿದ್ದ ಸಾವಿರಾರು ಜನ ಮಳೆಯಲ್ಲೇ ತೋಯಿಸಿಕೊಂಡು ರಾಹುಲ್ ಭಾಷಣಕ್ಕೆ ಕಿವಿಗೊಟ್ಟರು. ಕಾಂಗ್ರೆಸ್ ನಾಯಕರು ಕೂಡ ರಾಹುಲ್ ಜೊತೆಯಲ್ಲೇ ಮಳೆಯಲ್ಲಿ ಭಾಷಣ ಕೇಳಿದರು. ಸದ್ಯ ರಾಹುಲ್ ಗಾಂಧಿ ಅವರ ಮಳೆಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಳೆ ನಡುವೆಯೇ ಮಾತು ಆರಂಭಿಸಿದ ರಾಹುಲ್, “ರಾಷ್ಟ್ರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜನರ ನಡುವೆ ದ್ವೇಷವನ್ನು ಹೆಚ್ಚಿಸುತ್ತಿದೆ. ದೇಶದಲ್ಲಿ ಪ್ರೀತಿ, ಸಹನೆ ಮೂಡಿಸಲು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದೇವೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಕುರಿತು ಪ್ರಧಾನಿ ಮೋದಿ ಅವರಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಅನೇಕ ಶಾಲಾ ಸಂಘಟನೆಗಳು 40 ಪರ್ಸೆಂಟ್ ಕಮಿಷನ್ ಕುರಿತು ಸರ್ಕಾರದ ಬಗ್ಗೆ ಆರೋಪ ಮಾಡಿವೆ. ಮೋದಿಯವರು ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ” ಎಂದು ಟೀಕಿಸಿದರು.
ಪ್ರತಿ ದಿನ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬೆಲೆ ಏರಿಕೆ ಸಮಸ್ಯೆ ಬಡಜನರನ್ನು ಕಾಡುತ್ತಿದೆ. ದೇಶದ ಸಮಸ್ಯೆಗಳಿಗೆ ಕಿವಿಯಾಗಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಯಾತ್ರೆ ನಡೆಯಲಿದೆ. ಬಿಜೆಪಿಯವರು ಎಷ್ಟೇ ಕುತಂತ್ರ ಮಾಡಿದರೂ ಯಾವುದೇ ಕಾರಣಕ್ಕೂ ಯಾತ್ರೆ ಮಧ್ಯದಲ್ಲಿ ನಿಲ್ಲುವುದಿಲ್ಲ” ಎಂದರು.
ಮೆಚ್ಚುಗೆಯ ಮಳೆ ಸುರಿಸಿದ ಜನತೆ
“ಜನ ನಾಯಕನಿಗಿರಬೇಕಾದ ಬದ್ದತೆ ಇದು. ಇದೇ ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ” ಎಂದು ಪದ್ಮಾ ರೇಖಾ ಎನ್ನುವವರು ಪೋಸ್ಟ್ ಮಾಡಿದ್ದಾರೆ.
“ರಾಜಕೀಯ ಏನಾಗುತ್ತೊ ಏನಾಗಲ್ವೊ ಗೊತ್ತಿಲ್ಲ. I’m sure, ಈ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಮುಗಿಸುವುದರೊಳಗೆ ಕಿಂದರಿಜೋಗಿಯಂತೆ ದೇಶದುದ್ದಗಲಕ್ಕೂ ಕೋಟ್ಯಾಂತರ ಅಭಿಮಾನಿಗಳನ್ನು, ನಿಜವಾದ ದೇಶಪ್ರೇಮಿಗಳನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಾರೆ! ಮನುಷ್ಯನಿಗೆ ಏನಾದರೂ ಸಾಧಿಸಲು ಬೇಕಿರುವುದು true commitment. ಅದು ಇವರಿಗಿದೆ. ಸ್ಪಷ್ಟತೆಯಿದೆ. ಬರೆದಿಟ್ಟುಕೊಳ್ಳಿ, ದೇಶವನ್ನು ಕಟ್ಟಿಯೇ ಕಟ್ಟುತ್ತಾರೆ” ಎಂದು ಲೇಖಕಿ ಪಲ್ಲವಿ ಇಡೂರು ಪೋಸ್ಟ್ ಮಾಡಿದ್ದಾರೆ.
“ಮಳೆ, ಚಳಿ, ಬಿಸಿಲು ಗಾಳಿ… ಯಾವುದಕ್ಕೂ ನಿಲ್ಲದು ಈ ಚೈತ್ರಯಾತ್ರೆ. ಮೈಸೂರಿನಲ್ಲಿ ಮಳೆಯಲ್ಲೂ ರಾಹುಲ್ ಗಾಂಧಿ ಅವರ ಭಾಷಣ” ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೊಗಳಿದ್ದಾರೆ.
“ಕಾಲ ಬದಲಾಗಲಿದೆ, ಬರವಳಿದು ಪ್ರೀತಿಯ ಮಳೆ ಸುರಿಯಲಿದೆ. ನಳನಳಿಸಲಿದೆ ಭಾರತ. ಸೃಷ್ಟಿಯಾಗಲಿದೆ ಇತಿಹಾಸ” ಎಂದು ಬರಹಗಾರ ರಾ.ಚಿಂತನ್ ಅಭಿಪ್ರಾಯಪಟ್ಟಿದ್ದಾರೆ.

“ಮೂರನೇ ದಿನದ ಭಾರತ ಐಕ್ಯತಾ ಯಾತ್ರೆ ಅಭೂತಪೂರ್ವ ಜನಬೆಂಬಲದೊಂದಿಗೆ ಮಳೆ ಗಾಳಿ ಚಳಿ ಅಂಜದೆ ಮುರಿದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ರಾಹುಲ್ ಗಾಂಧಿಯವರು ಮುನ್ನಡೆಸುತ್ತಿದ್ದಾರೆ” ಎಂದು ಅಭಿಲಾಷ್ ರೆಡ್ಡಿ ಬರೆದುಕೊಂಡಿದ್ದಾರೆ.
“ಇಚ್ಚಾಶಕ್ತಿ ಇರುವ ನಾಯಕ ಯಾವ ಅಡ್ಡಿಗೂ ಅಂಜಿ ಓಡುವುದಿಲ್ಲ. ಭಾರತ್ ಜೋಡೋ ಯಾತ್ರೆ ವೇದಿಕೆ ಕಾರ್ಯಕ್ರಮದ ನಡುವೆ ಧಾರಾಕಾರ ಮಳೆ, ಜನರಿರುವ ಮಳೆ ನನಗೂ ಇರಲಿ ಎಂಬ ಧೀಮಂತಿಕೆಯ ಗುಣ ರಾಹುಲ್‌ಗಾಂಧಿ ಅವರದ್ದು. ಮಳೆಗೆ ಅಂಜದೆ ಕುರ್ಚಿಗಳನ್ನೇ ಛತ್ರಿಗಳನ್ನಾಗಿಸಿ ಭಾಷಣ ಆಲಿಸಿದ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೆ ಇಲ್ಲ” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇಚ್ಚಾಶಕ್ತಿ ಇರುವ ನಾಯಕ ಯಾವ ಅಡ್ಡಿಗೂ ಅಂಜಿ ಓಡುವುದಿಲ್ಲ.#BharatJodoYatra ವೇದಿಕೆ ಕಾರ್ಯಕ್ರಮದ ನಡುವೆ ಧಾರಾಕಾರ ಮಳೆ,
ಜನರಿಗಿರುವ ಮಳೆ ನನಗೂ ಇರಲಿ ಎಂಬ ಧೀಮಂತಿಕೆಯ ಗುಣ @RahulGandhi ಅವರದ್ದು.ಮಳೆಗೆ ಅಂಜದೆ ಕುರ್ಚಿಗಳನ್ನೇ ಛತ್ರಿಗಳನ್ನಾಗಿಸಿ ಭಾಷಣ ಆಲಿಸಿದ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ,
ಧನ್ಯವಾದಗಳು. pic.twitter.com/34s8pxIqeM— Karnataka Congress (@INCKarnataka) October 2, 2022
“ಜಾತಿ ಧರ್ಮಗಳಿಂದ ಬೇರ್ಪಡಿಸಿರುವ ಕೋಮುವಾದಿಗಳಿಂದ ರಕ್ಷಿಸಲು ಮಳೆ ಬಿಸಿಲು ಗಾಳಿ ಎನ್ನದೆ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿಯವರ ಹೋರಾಟಕ್ಕೆ ಜಯವಾಗಲಿ” ಎಂದು ನಾರಾಯಣಸ್ವಾಮಿ ಎಂ. ಎಂಬವರು ಟ್ವೀಟ್ ಮಾಡಿದ್ದಾರೆ.
ಜಾತಿ ಧರ್ಮಗಳಿಂದ ಬೇರ್ಪಡಿಸಿರುವ ಕೋಮುವಾದಿಗಳಿಂದ ರಕ್ಷಿಸಲು ಮಳೆ ಬಿಸಿಲು ಗಾಳಿ ಎನ್ನದೆ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿಯವರ ಹೋರಾಟಕ್ಕೆ ಜಯವಾಗಲಿ 🙏 pic.twitter.com/cbmoaXLOns
— ನಾರಾಯಣಸ್ವಾಮಿ.ಎಂ (@1975Swamy) October 2, 2022
“ಜೀವ ಭಯ ಇದೆ ಅಂತ ಕಾರ್ಯಕ್ರಮ ರದ್ದು ಮಾಡಿ ಓಡಿ ಹೋದ ವ್ಯಕ್ತಿಗೂ ಜೀವದ ಭಯವನ್ನೇ ತೊರೆದು ಬಿಸಿಲು ಮಳೆ ಎನ್ನದೆ ಜನರೆಡೆಗೆ ದೇಶದ ಐಕ್ಯತೆಗೆ ಯಾತ್ರಿಸುತ್ತಿರುವ ಈ ವ್ಯಕ್ತಿಗೂ ಅಜಗಜಾಂತರ” ಎಂದು ಸುನಿಲ್ ಕುಬೇರ ಎಂಬವರು ಟ್ವೀಟ್ ಮಾಡಿದ್ದಾರೆ.
ಜೀವ ಭಯ ಇದೆ ಅಂತ ಕಾರ್ಯಕ್ರಮ ರದ್ದು ಮಾಡಿ ಓಡಿ ಹೋದ ವ್ಯಕ್ತಿಗೂ… ಜೀವದ ಭಯವನ್ನೇ ತೊರೆದು ಬಿಸಿಲು ಮಳೆ ಎನ್ನದೆ ಜನರೆಡೆಗೆ ದೇಶದ ಐಕ್ಯತೆಗೆ ಯಾತ್ರಿಸುತ್ತಿರುವ ಈ ವ್ಯಕ್ತಿಗೂ ಅಜಗಜಾಂತರ…. pic.twitter.com/HnpYRkrAhc
— sunil kubera (@sunilya19) October 3, 2022
ಹೀಗೆ ಹಲವಾರು ಜನರು ಮೆಚ್ಚುಗೆ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.



Good j.cagresa
J.raval.2023.170.cgeres.g.j
173.kranteka.asbily.2023.j.cgresh
I.kotresh.j.cgers.g.jida