Homeಮುಖಪುಟಬ್ರೆಜಿಲ್‌ನಲ್ಲಿ ಎಡಪಕ್ಷದ ನಾಯಕ ಲುಲಾ ದಿಗ್ವಿಜಯ; ದಶಕದ ನಂತರ ಬಲಪಂಥೀಯ ಸರ್ಕಾರ ಪತನ

ಬ್ರೆಜಿಲ್‌ನಲ್ಲಿ ಎಡಪಕ್ಷದ ನಾಯಕ ಲುಲಾ ದಿಗ್ವಿಜಯ; ದಶಕದ ನಂತರ ಬಲಪಂಥೀಯ ಸರ್ಕಾರ ಪತನ

- Advertisement -
- Advertisement -

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಲೂಯಿಝ್‌ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಪ್ರಸ್ತುತ ಅಧಿಕಾರದಲ್ಲಿರುವ ಜೈರ್ ಬೋಲ್ಸನಾರೊ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಎಡಪಂಥೀಯ ನಾಯಕರಾದ ಲುಲಾ ಅವರು ದಿಗ್ವಿಜಯ ಸಾಧಿಸಿದ್ದು, ಬಲಪಂಥೀಯ ಸರ್ಕಾರಕ್ಕೆ ದಶಕದ ನಂತರದ ಅಂತ್ಯಹಾಡಲಾಗಿದೆ.

ಲುಲಾ ಅವರು 50.8% ಮತಗಳನ್ನು ಹೊಂದಿದ್ದಾರೆ. ಬೋಲ್ಸನಾರೊ ಅವರಿಗೆ 49.2% ರಷ್ಟು ಮತಗಳು ಬಿದ್ದಿವೆ. 99.1%ರಷ್ಟು ಮತ ಯಂತ್ರಗಳನ್ನು ಎಣಿಸಲಾಗಿದೆ. ಫಲಿತಾಂಶವನ್ನು ‘ಗಣಿತಾತ್ಮಕವಾಗಿ ವ್ಯಾಖ್ಯಾನಿಸಲು ಇಷ್ಟು ಸಾಕಾಗುತ್ತದೆ’ ಎಂದು ಸುಪ್ರೀಂ ಎಲೆಕ್ಟೋರಲ್ ಕೋರ್ಟ್ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೋಲ್ಸನಾರೊ ಅವರ ಬಲಪಂಥೀಯವಾದಕ್ಕೆ ಹಿನ್ನಡೆಯಾಗಿದೆ. ಬ್ರೆಜಿಲ್ ದೇಶವು ಕೋವಿಡ್‌ ಸಾಂಕ್ರಾಮಿಕದ ವೇಳೆ ಕಳಪೆ ನಿರ್ವಹಣೆಗೆ ಸಾಕ್ಷಿಯಾಯಿತು. ಹೀಗಾಗಿ ಬಲಪಂಥೀಯ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಅನುಭವಿಸಿತು ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಲುಲಾ ಅವರು ಬ್ರೆಜಿಲ್‌ನಲ್ಲಿ ‘ಶಾಂತಿ ಮತ್ತು ಏಕತೆ’ಗೆ ಕರೆ ನೀಡಿದ್ದಾರೆ. ದೇಶವು ಇನ್ನು ಮುಂದೆ ಅಂತರಾಷ್ಟ್ರೀಯ ಅಡಿಯಾಳಲ್ಲ ಎಂದಿರುವ ಅವರು ‘ಅಮೆಜಾನ್‌ ಉಳಿವಿನ ಅಗತ್ಯ’ವನ್ನು ಎತ್ತಿಹಿಡಿದಿದ್ದಾರೆ.

ತಮ್ಮ ಭಾಷಣದಲ್ಲಿ ಲುಲಾ ಅವರು, ಬೆಂಬಲಿಗರು ಮತ್ತು ಪ್ರತಿಸ್ಪರ್ಧಿಗಳಿಗೆ ಸಮಾನವಾಗಿ ವಂದನೆಗಳನ್ನು ಅರ್ಪಿಸಿದ್ದಾರೆ. ಬ್ರೆಜಿಲ್‌ನ ಶಾಂತಿ, ಪ್ರಜಾಪ್ರಭುತ್ವ ಮತ್ತು ಅವಕಾಶಗಳ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ.

ಲಿಂಗ ಮತ್ತು ಜನಾಂಗೀಯ ಸಮಾನತೆ, 33.1 ಮಿಲಿಯನ್ ಬ್ರೆಜಿಲಿಯನ್ನರ ಮೇಲೆ ಪರಿಣಾಮ ಬೀರುವ ಹಸಿವಿನ ಬಿಕ್ಕಟ್ಟನ್ನು ಎದುರಿಸುವ ತುರ್ತು ಅಗತ್ಯವಿದೆ ಎಂದಿದ್ದಾರೆ. “ಆರ್ಥಿಕತೆಯ ಚಕ್ರ ಮತ್ತೆ ತಿರುಗುತ್ತದೆ” ಎಂದು ಭರವಸೆಯನ್ನು ನೀಡಿದ್ದಾರೆ.

‘ಭೂಮಿಗೆ ಜೀವಂತ ಅಮೆಜಾನ್‌ನ ಅಗತ್ಯವಿದೆ’

“ಶಾಶ್ವತ ಯುದ್ಧದ ಸ್ಥಿತಿಯಲ್ಲಿ, ವಿಭಜಿತ ರಾಷ್ಟ್ರದಲ್ಲಿ ವಾಸಿಸಲು ಯಾರ ಆಸಕ್ತಿಯೂ ಇಲ್ಲ” ಎಂದು 77 ವರ್ಷ ವಯಸ್ಸಿನ ಎಡಪಂಥೀಯ ನಾಯಕ ಘೋಷಿಸಿದ್ದಾರೆ. “ಈ ದೇಶಕ್ಕೆ ಶಾಂತಿ ಮತ್ತು ಏಕತೆಯ ಅಗತ್ಯವಿದೆ. ಈ ಜನರು ಇನ್ನು ಮುಂದೆ ಹೋರಾಡಲು ಬಯಸುವುದಿಲ್ಲ” ಎಂದು ತಿಳಿಸಿದ್ದಾರೆ.

“ಇಂದು ನಾವು ಬ್ರೆಜಿಲ್ ಹಿಂತಿರುಗಿದೆ ಎಂದು ಜಗತ್ತಿಗೆ ಹೇಳುತ್ತೇವೆ” ಎಂದಿದ್ದಾರೆ.

ಅಮೆಜಾನ್ ಮಳೆಕಾಡಿನ ಭವಿಷ್ಯ, ಜಾಗತಿಕ ಹವಾಮಾನ ತುರ್ತುಸ್ಥಿತಿ ಕುರಿತು ಪಶ್ಚಿಮ ದೇಶಗಳು ಗಮನ ಹರಿಸಲು ಈ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದೆ.

“ಬ್ರೆಜಿಲ್ ಹವಾಮಾನ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ತನ್ನ ಪಾತ್ರವನ್ನು ಹಿಂಪಡೆಯಲು ಸಿದ್ಧವಾಗಿದೆ, ನಮ್ಮ ಎಲ್ಲಾ ಜೀವವೈವಿಧ್ಯವನ್ನು ರಕ್ಷಿಸಲಾಗುತ್ತದೆ, ವಿಶೇಷವಾಗಿ ಅಮೆಜಾನ್ ಅರಣ್ಯವನ್ನು ರಕ್ಷಿಸಲಾಗುತ್ತದೆ” ಎಂದಿರುವ ಲುಲಾ, “ಬ್ರೆಜಿಲ್ ಮತ್ತು ಈ ಭೂಮಿಗೆ ಜೀವಂತ ಅಮೆಜಾನ್ ಅಗತ್ಯವಿದೆ” ಎಂಬ ಸಂದೇಶ ನೀಡಿದ್ದಾರೆ.

‘ಗುಲಾಬಿ’ ಅಲೆ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಟ್ವೀಟ್‌ ಮಾಡಿ, “ಉಭಯ ನಾಯಕರು ತಮ್ಮ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ನವೀಕರಿಸುತ್ತಾರೆ” ಎನ್ನುವ ಮೂಲಕ ಲುಲಾ ಅವರನ್ನು ಅಭಿನಂದಿಸಿದ್ದಾರೆ.

“ಮುಕ್ತ, ನ್ಯಾಯೋಚಿತ ಮತ್ತು ವಿಶ್ವಾಸಾರ್ಹ” ಚುನಾವಣೆಯಲ್ಲಿನ ಗೆಲುವಿಗಾಗಿ ಚುನಾಯಿತ ಬ್ರೆಜಿಲ್ ಅಧ್ಯಕ್ಷರನ್ನು ಭಾನುವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅಭಿನಂದಿಸಿದ್ದಾರೆ. ದೇಶಗಳ ನಡುವಿನ ಸಹಕಾರವನ್ನು ಮುಂದುವರೆಸಲು ಎದುರು ನೋಡುತ್ತಿರುವುದಾಗಿ ಬಿಡನ್‌ ತಿಳಿಸಿದ್ದಾರೆ.

ಇದನ್ನೂ ಓದಿರಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

ಕೊಲಂಬಿಯಾ ಮತ್ತು ಚಿಲಿಯ ಚುನಾವಣೆಗಳಲ್ಲಿ ಎಡಪಂಥೀಯ ವಿಜಯಗಳ ನಂತರ ಲ್ಯಾಟಿನ್ ಅಮೆರಿಕಾದಲ್ಲಿ ಎಡಪಂಥೀಯರ ಗೆಲವು ‘ಗುಲಾಬಿ ಅಲೆ’ಯನ್ನು ಮುನ್ನೆಲೆಗೆ ತಂದಿದೆ.

ಬಡತನದಲ್ಲಿ ಜನಿಸಿದ ಮಾಜಿ ಯೂನಿಯನ್ ನಾಯಕ ಲುಲಾ, 1970ರ ದಶಕದಲ್ಲಿ ಬ್ರೆಜಿಲ್‌ನ ಮಿಲಿಟರಿ ಸರ್ಕಾರದ ವಿರುದ್ಧ ಮುಷ್ಕರಗಳನ್ನು ನಡೆಸಿದ್ದರು. ಜನನಾಯಕರಾಗಿ ಹೊಮ್ಮಿದ ಅವರು ಎರಡು ಅವಧಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಆದಾಗ್ಯೂ ಅವರ ವರ್ಕರ್ಸ್ ಪಕ್ಷದಿಂದಾದ ಆರ್ಥಿಕ ಹಿಂಜರಿತ ಮತ್ತು ಮಿತಿಮೀರಿದ ಭ್ರಷ್ಟಾಚಾರ ಹಗರಣದ ಆರೋಪದಿಂದಾಗಿ ಜೈಲುಪಾಲಾಗಿದ್ದರು. ಲಂಚದ ಪ್ರಕರಣಗಳ ಹಿನ್ನೆಲೆಯಲ್ಲಿ 19 ತಿಂಗಳ ಕಾಲ ಜೈಲಿನಲ್ಲಿದ್ದರು. ಈ ಶಿಕ್ಷೆಗಳನ್ನು ಕಳೆದ ವರ್ಷ, ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಮೂರನೇ ಅವಧಿಗೆ ಲುಲಾ ಅವರು ಆಯ್ಕೆಯಾಗಿದ್ದು, ಹಲವಾರು ಸವಾಲುಗಳು ಅವರ ಮುಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...