Homeಅಂತರಾಷ್ಟ್ರೀಯನ್ಯೂಜೆರ್ಸಿ: ಮುಸ್ಲಿಂ ದ್ವೇಷ ಕಾರಿದ ಹಿಂದೂ ಮತೀಯವಾದಿ ಹೇಳಿಕೆಗೆ ಟೀನೆಕ್ ಮೇಯರ್‌ ಕ್ಷಮೆಯಾಚನೆ

ನ್ಯೂಜೆರ್ಸಿ: ಮುಸ್ಲಿಂ ದ್ವೇಷ ಕಾರಿದ ಹಿಂದೂ ಮತೀಯವಾದಿ ಹೇಳಿಕೆಗೆ ಟೀನೆಕ್ ಮೇಯರ್‌ ಕ್ಷಮೆಯಾಚನೆ

- Advertisement -
- Advertisement -

ನ್ಯೂಜೆರ್ಸಿ: ಸೆಪ್ಟೆಂಬರ್‌ನಲ್ಲಿ ನಡೆದ ಸಿಟಿ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಹಿಂದೂ ಮತೀಯವಾದಿಯ ಹೇಳಿಕೆಗೆ ನ್ಯೂಜೆರ್ಸಿಯ ಟೀನೆಕ್ ಟೌನ್‌ಶಿಪ್‌ನ ಮೇಯರ್ ಮತ್ತು ಇಬ್ಬರು ಸಿಟಿ ಕೌನ್ಸಿಲ್ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದಾರೆ.

ಮತೀಯವಾದಿಗಳಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಈ ಭಾಷಣವು ರಾಜ್ಯಾದ್ಯಂತ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು.

ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷವನ್ನು ಖಂಡಿಸುವ ಅಧಿಕೃತ ಹೇಳಿಕೆಯನ್ನು ಅಕ್ಟೋಬರ್ 28 ರಂದು ಮೇಯರ್ ಜಿಮ್ ಡನ್ಲೆವಿ ಬಿಡುಗಡೆ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯು ತೀವ್ರತರವಾದದ್ದು. ಈ ಅಪಾಯಕಾರಿ ಮತೀಯವಾದಿಗಳಿಗೆ ಟೀನೆಕ್ ಅಥವಾ ನ್ಯೂಜೆರ್ಸಿಯಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ‘ಕ್ಲಾರಿಯಾನ್‌’ ಸುದ್ದಿ ಜಾಲತಾಣ ವರದಿ ಮಾಡಿದೆ.

ಅಕ್ಟೋಬರ್ 25ರಂದು ನಡೆದ ಸಿಟಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಮತ್ತು ಕೌನ್ಸಿಲ್ ಸದಸ್ಯರು ಜನರಲ್ಲಿ ಕ್ಷಮೆಯಾಚಿಸಿದ್ದರು. ಈ ಸಮಯದಲ್ಲಿ ಹಲವಾರು ಮುಸ್ಲಿಂ ಸದಸ್ಯರು, ಹಿಂದೂ ಉಗ್ರಗಾಮಿಗಳ ಮುಸ್ಲಿಂ ವಿರೋಧಿ ವರ್ತನೆ ಹಾಗೂ ವಿಷಕಾರಿ ಹೇಳಿಕೆಗಳ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

“ಇಸ್ಲಾಂ ವಿರುದ್ಧ ದ್ವೇಷ ಕಾರಿದ ವ್ಯಕ್ತಿಯನ್ನು ತಕ್ಷಣವೇ ತಡೆದು ನಿಲ್ಲಿಸಬೇಕಿತ್ತು” ಎಂದು ಕೌನ್ಸಿಲ್ಮನ್ ಕೀತ್ ಕಪ್ಲಾನ್ ಹೇಳಿದ್ದಾರೆ.

“ಹಿಂದೂ ರಾಷ್ಟ್ರೀಯತೆ ಒಂದು ಕೆಟ್ಟ ವಿಷಯ ಎಂದು ನನಗೆ ತಿಳಿದಿರಲಿಲ್ಲ. ಇಲ್ಲಿ ದಾಳಿಯಾಗಿದೆ ಅಥವಾ ತಪ್ಪಾಗಿ ಬಿಂಬಿಸಲಾಗಿದೆ ಎಂದು ಭಾವಿಸುವ ಪ್ರತಿಯೊಬ್ಬರಲ್ಲಿಯೂ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕೌನ್ಸಿಲ್ವುಮನ್ ಕರೆನ್ ಒರ್ಗೆನ್ ತಿಳಿಸಿದ್ದಾರೆ.

ವಿವೇಕ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಸೆಪ್ಟೆಂಬರ್ 20, 2022ರಂದು ಕೌನ್ಸಿಲ್ ಸಭೆಯ ಸಮಯದಲ್ಲಿ ಮಾತನಾಡಿದ್ದನು. ಮತದಾರರಿಗಾಗಿ ಮೀಸಲಿಟ್ಟ ವೇದಿಕೆಯನ್ನು ಬಳಸಿಕೊಂಡ ಆತ ಮುಸ್ಲಿಮರನ್ನು ಭಯೋತ್ಪಾದಕರು ಮತ್ತು ಅತ್ಯಾಚಾರಿಗಳು ಎಂದು ಜರಿದಿದ್ದನು. ಮುಸ್ಲಿಮರು 9/11ರ ಘಟನೆಯನ್ನು ‘ಆನಂದಿಸಿದ್ದಾರೆ’ ಮತ್ತು ದೇಶಗಳನ್ನು ‘ನಾಶ’ ಮಾಡಲು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ಆರೋಪಿಸಿದ್ದನು.

“ನೀವು ದೇಶದಲ್ಲಿ (ಭಾರತ) ನಡೆಯುವ ಅತ್ಯಾಚಾರದ ಬಗ್ಗೆ ಮಾತನಾಡುತ್ತೀರಿ. ಅವು ಮುಸ್ಲಿಮರಿಂದ ನಡೆಯುತ್ತಿವೆ. ಈ ಮುಸ್ಲಿಮರು ಎಲ್ಲ ಹುಡುಗಿಯನ್ನು ಸೆಳೆದುಕೊಳ್ಳುತ್ತಾರೆ. ಎಲ್ಲರನ್ನೂ ಮತಾಂತರ ಮಾಡಲು ಪ್ರಯತ್ನಿಸುತ್ತಾರೆ. ನಂತರ ಅವರು ಮಕ್ಕಳನ್ನು ಮಾಡಿ, ಹುಡುಗಿಯರನ್ನು ಕೊಲ್ಲುತ್ತಾರೆ” ಎಂದು ಮಾತನಾಡಿದ್ದನು.

ಭಾರತದಲ್ಲಿ ಹಿಂಸಾತ್ಮಕ ಧೋರಣೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಾಗೂ ಅವುಗಳೊಂದಿಗೆ ಸಂಬಂಧ ಹೊಂದಿರುವ ಯುಎಸ್ ಮೂಲದ ಹಿಂದೂ ಬಲಪಂಥೀಯ ಗುಂಪುಗಳ ಬಗ್ಗೆ ತನಿಖೆಗೆ ಒತ್ತಾಯಿಸುವ ನಿರ್ಣಯವನ್ನು ಟೀನೆಕ್ ಡೆಮಾಕ್ರಟಿಕ್ ಮುನ್ಸಿಪಲ್ ಕಮಿಟಿ (ಟಿಡಿಎಂಸಿ) ಅಂಗೀಕರಿಸಿದ ನಂತರ ಈ ಟೀಕೆಗಳನ್ನು ವಿವೇಕ್‌ ಮಾಡಿದ್ದನು.

ಇದನ್ನೂ ಓದಿರಿ: ಬೆಂಗಳೂರು: ‘ಬಿಟ್ಟಿ ಚಾಕರಿ’ಯಿಂದ ನೊಂದ ಮಸಣ ಕಾರ್ಮಿಕರು ಸಂಘಟಿತರಾಗುವತ್ತ ಹೆಜ್ಜೆ

ವಿವೇಕ್ ಮಾಡಿದ ಮುಸ್ಲಿಂ ವಿರೋಧಿ ಟೀಕೆಗಳನ್ನು ಕೌನ್ಸಿಲ್ ಖಂಡಿಸಲು ವಿಫಲವಾದ ನಂತರ, ಹಲವಾರು ಮುಸ್ಲಿಂ ಟೀನೆಕ್ ನಿವಾಸಿಗಳು ಮತ್ತು ಸ್ನೇಹಿತರು ಆಕ್ರೋಶ ಹೊರಹಾಕಿದ್ದರು. ಅಕ್ಟೋಬರ್‌ನ ಸಿಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ, ಮುಸ್ಲಿಂ ವಿರೋಧಿ ದ್ವೇಷದ ಭಾಷಣದ ವಿರುದ್ಧ ಕೌನ್ಸಿಲ್‌ನ ನಿಷ್ಕ್ರಿಯತೆಯನ್ನು ಖಂಡಿಸಿದ್ದರು.

ಕೌನ್ಸಿಲ್ಮನ್ ಕಪ್ಲಾನ್ ಮಾತನಾಡಿ, “ತಪ್ಪು ಮಾಹಿತಿಯನ್ನು ಹರಡುವ ಯಾರನ್ನಾದರೂ ನಿಲ್ಲಿಸುವುದಾಗಿದ್ದರೆ ಕಳೆದ ತಿಂಗಳು ನೀವು ಎಲ್ಲಿದ್ದೀರಿ? ಮುಸ್ಲಿಮರು 9/11 ಅನ್ನು ಆನಂದಿಸಿದ್ದಾರೆ. ಅವರು ಕ್ರಿಶ್ಚಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾರೆ. ಮಕ್ಕಳನ್ನು ಮಾಡಿ ಕೊಲ್ಲುತ್ತಾರೆ ಎಂದು ಹಿಂದೂ ಉಗ್ರಗಾಮಿ ಹೇಳುತ್ತಿದ್ದನು. ಇದು ಸ್ಪಷ್ಟ ತಪ್ಪು ಮಾಹಿತಿಯಲ್ಲವೇ?” ಎಂದು ಕೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...