Homeಕರ್ನಾಟಕಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

- Advertisement -
- Advertisement -

ಶಿವಮೊಗ್ಗದಲ್ಲಿ ಆ ದಿನ ಕ್ರಿಸ್‌ಮಸ್ ಹಬ್ಬ. ಎಂದಿನಂತೆ ಶಾಂತಿ ಸಮಾಧಾನದಿಂದ ಕ್ರಿಸ್‌ಮಸ್ ಆಚರಿಸುವ ಕ್ರಿಶ್ಚಿಯನ್ನರು, ಹಬ್ಬದ ದಿನ ಏರ್ಪಡಿಸುವ ಮೆರವಣಿಗೆ ನೋಡುವುದೇ ಚಂದ. ಅವರ ಪ್ರಯರ್ ಮತ್ತು ನಡಿಗೆ ಸಮ್ಮಿಳನಗೊಂಡಿರುತ್ತದೆ; ರಸ್ತೆ ಬದಿಯಲ್ಲಿ ನಿಂತು ನೋಡುವ ಧರ್ಮಸಹಿಷ್ಣು ಜನರಿಗೆ ತಾವೂ ಹೋಗಿ ಶಾಂತಿ ನಡಿಗೆಯಲ್ಲಿ ಭಾಗವಹಿಸಬೇಕೆಂಬ ಆಸೆ ಮೂಡಿದರೂ ಆಶ್ಚರ್ಯವಿಲ್ಲ. ಕ್ರಿಶ್ಚಿಯನ್ನರ ಈ ಹಬ್ಬದಲ್ಲಿ ತಮ್ಮ ಹಿಂದೂ ಗೆಳೆಯರನ್ನ ಕರೆದು ಮಾಂಸಾಹಾರ, ಪಾನೀಯಗಳ ನೀಡಿ ಉಪಚರಿಸುವುದನ್ನು ಅನುಭವಿಸಿ ನೋಡುವುದೇ ಚಂದ. ತಮ್ಮ ಈ ಸಂಭ್ರಮವನ್ನು ಚಾಚು ತಪ್ಪದೆ ನಡೆಸುತ್ತ ಬಂದ ಕ್ರಿಶ್ಚಿಯನ್ನರಿಗೆ ಪ್ರಥಮ ಬಾರಿಗೆ ಈ ವರ್ಷ ಮನಸ್ಸು ಕದಡಿಹೋಗಿತ್ತು. ಕಾರಣ, ಹಿಂದೂ ಜಾಗರಣ ವೇದಿಕೆಯವರು ಮಾಡಿದ ಸಮ್ಮೇಳನ ಮತ್ತು ಅಲ್ಲಿಗೆ ಬಂದಿದ್ದ ಪ್ರಜ್ಞಾ ಸಿಂಗ್ ಎಂಬ ಸಂಸದೆ ಮಾಡಿದ ಭಾಷಣ. ’ಕ್ರಿಶ್ಚಿಯನ್ನರ ಮಿಷನರಿ ಶಾಲೆಗೆ ನಿಮ್ಮ ಮಕ್ಕಳನ್ನ ಕಳುಹಿಸಬೇಡಿ, ಅಲ್ಲಿ ಕಲಿಯುವ ಮಕ್ಕಳು ಸ್ವಾರ್ಥಿಗಳಾಗಿ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವ ಶಾಲೆಗೆ ಕಳಿಸಿ’ ಎಂದು ಅವರು ಕರೆಕೊಟ್ಟಿದ್ದರು.

ಮಿಷನರಿ ಶಾಲೆಯಲ್ಲಿ ಓದಿದ ಮಕ್ಕಳೆಲ್ಲಾ ತಂದೆ ತಾಯಿಗಳನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರೆ ಎಂದು ಯಾವ ಸಮೀಕ್ಷೆ ಹೇಳಿದೆ ಎಂದು ಸಾದ್ವಿಯವರನ್ನು ಯಾರೂ ಕೇಳಲಿಲ್ಲ; ಅವರೂ ಹೇಳುವ ಗೋಜಿಗೆ ಹೋಗಲಿಲ್ಲ. ಹೇಳಿಕೇಳಿ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಾಳುಮಾಡಲೆಂದೇ ಆಯೋಜಿಸಿದ್ದ ಶೋಭಯಾತ್ರೆ ಅಂಗವಾಗಿ ಇಡೀ ಊರನ್ನು ಕೇಸರಿಮಯಗೊಳಿಸಿದ್ದ ಜಾಗರಣ ವೇದಿಕೆ ಜನರು, ಚರ್ಚಿನ ಎದುರೇ ಹೆಚ್ಚಾಗಿ ಕೇಸರಿ ಧ್ವಜಗಳನ್ನು ಹರಡಿದ್ದರು. ಅಲ್ಲದೆ ಆ ದಿನ ಮದ್ಯಮಾರಟವನ್ನು ನಿಷೇಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ನರ ಕಡೆಯಿಂದ ಯಾವ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ಇರಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡುವಂತೆ ಆದೇಶಿಸಿರುವ ಕ್ರಿಸ್ತನ ಬೋಧನೆಯನ್ನು ಒಂದು ಮಟ್ಟಕ್ಕಾದರೂ ಅನುಸರಿಸುವ ಈ ತೀರ ಅಲ್ಪಸಂಖ್ಯಾತ ಸಮುದಾಯ ಹೇಗೋ ಇಷ್ಟು ದಿನ ನೆಮ್ಮದಿಯನ್ನು ಅರಸಿ ಬದುಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕ್ರಿಶ್ಚಿಯನ್ನರ ಹಬ್ಬಕ್ಕೆ ಹಿಂದೂ ಜಾಗರಣದವರು ತೋರಿದ ಅಸಹನೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿತು. ಜನರಿಂದ ಟೀಕೆಗೆ ಗುರಿಯಾದರು; ಅದರಲ್ಲೂ ಕ್ರಿಶ್ಚಿಯನ್ನರ ಶಾಲೆಯಲ್ಲಿ ಓದಿ ಸತ್ಪ್ರಜೆಗಳಾಗಿರುವ ಹೆಣ್ಣುಮಕ್ಕಳ ಆಕ್ರೋಶಕ್ಕೆ ಗುರಿಯಾದರು. ಇಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದ ಮನಸ್ಸುಗಳಲ್ಲಿ ದ್ವೇಷವೂ ಶ್ರೇಣೀಕರಣಗೊಂಡಿರುತ್ತದೆ. ಸದ್ಯಕ್ಕೆ ಮುಸ್ಲಿಮರನ್ನ ತನ್ನ ಪರಮವೈರಿ ಎಂದು ಪರಿಗಣಿಸಿರುವ ಪ್ರಜ್ಞಾಸಿಂಗ್ ಮನಸ್ಸು ಬಿಡುವು ಸಿಕ್ಕಾಗ ಕ್ರಿಶ್ಚಿಯನ್ನರ ಮೇಲೆ ಹರಿಹಾಯುತ್ತೆ; ಆ ನಂತರ ದಲಿತರ ಮೇಲೆರಗುತ್ತದೆ. ಸದ್ಯಕ್ಕೆ ಅವರ ಪರಮ ವೈರಿ ಮುಸ್ಲಿಮರಾಗಿರುವುದರಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ನೇರವಾಗಿ ಮುಸ್ಲಿಂ ವಿರುದ್ಧ ಸಮರದ ಹೇಳಿಕೆ ಕೊಡುತ್ತಾರೆ. ಸಾಲದ್ದಕ್ಕೆ, ಭಾರತದ ಚೈತನ್ಯವಾದ ಮತ್ತು ಜಾತ್ಯತೀತ ಪರಿಕಲ್ಪನೆಯನ್ನ ಎತ್ತಿಹಿಡಿದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು, ಸಂಸತ್ ಭವನದಲ್ಲಿ ಕುಳಿತ ಗೌರವಾನ್ವಿತ ಸಂಸದೆ ಬೇರೆ ಇವರು! (ಬಾಂಬ್ ಬ್ಲಾಸ್ಟ್ ಆಪಾದನೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಇವರು, ಸದ್ಯ ಸಂಸದೆಯಾಗಿ ಅದರ ಸ್ಥಾನಮಾನಕ್ಕೂ ಬಿಡಿಗಾಸು ಗೌರವ ನೀಡುತ್ತಿಲ್ಲ!) ತಮ್ಮ ಸ್ಥಾನಮಾನದ ಘನತೆಯ ಅರಿವಿಲ್ಲದ ಇವರಿಂದ ಉದುರಿದ ಮಾತುಗಳು ಇಂತಿದ್ದವು: ’ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ; ಆದ್ದರಿಂದ ನಮ್ಮ ಹೆಣ್ಣುಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತ ಮಾಡಿಸಿ ಇಟ್ಟುಕೊಳ್ಳಿ. ನಮ್ಮ ಹೆಣ್ಣುಮಕ್ಕಳು ನಡೆದಾಡುವ ಅಟಂಬಾಂಬುಗಳಂತಿರಬೇಕು’ ಎಂದು ಕರೆಕೊಟ್ಟಿದ್ದಾರೆ. ಜೊತೆಗೆ ತನ್ನ ಇಡೀ ಭಾಷಣವನ್ನು ಹಿಂಸಾಪ್ರಚೋದಕವಾಗಿ ಮಾಡಿಮುಗಿಸಿದರು. ಈ ಸಾಧ್ವಿಯ ಮಾತು ನೆರೆದವರಲ್ಲಿ ರೋಮಾಂಚನವುಂಟು ಮಾಡಿ ಚಪ್ಪಾಳೆ ಗಿಟ್ಟಿಸಿತು! ಅಂದರೆ ಈ ಭಾಷಣ ಬರೀ ಪ್ರಜ್ಞಾಸಿಂಗ್ ಭಾಷಣ ಮಾತ್ರವಾಗಿರದೆ ಎಲ್ಲಾ ಬಿಜೆಪಿಗಳು ಚಪ್ಪರಿಸುತ್ತಿದ್ದಾರೆ!

ಇದನ್ನೂ ಓದಿ: ಚುನಾವಣಾ ಪರ್ವ: ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಗೌರವ ಕೊಡುವ ಯಾವೊಬ್ಬ ಬಿಜೆಪಿಯವನೂ ಇಲ್ಲವೇ? ಇದ್ದರೆ ಸಾಧ್ವಿಯ ಭಾಷಣವನ್ನು ಖಂಡಿಸಬೇಕಿತ್ತು ಮತ್ತು ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಅದಾಗಲಿಲ್ಲ. ಎಂತಹ ನರಹತ್ಯೆಯ ಮಾತನ್ನಾಡಿದರೂ ಅದನ್ನು ಖಂಡಿಸುವ-ಪ್ರಶ್ನಿಸುವ ಮನುಷ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅವರುಗಳ ಅಂತರಂಗದ ಮಾತುಗಳು ಪ್ರಜ್ಞಾಸಿಂಗ್ ಬಾಯಲ್ಲಿ ಉದುರತ್ತವಷ್ಟೇ. ಪ್ರಜ್ಞಾಸಿಂಗರ ಚಾಕು ಚೂರಿ ಮಾತಿಗೆ ಹರ್ಷನನ್ನು ಕೊಂದವರ ಕಡೆಯವರ್‍ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈ ಶಿವಮೊಗ್ಗದ ಇತಿಹಾಸವನ್ನು ಕೆದಕಿದರೆ ಕೋಮು ರಾಡಿ ಹಬ್ಬಿಸಿದಾಗಲೆಲ್ಲಾ ಕೊಲೆಗಳಾಗಿವೆ. ಕೊಲೆಯಾದವನ ಶವವನ್ನು ಊರ ತುಂಬ ಮೆರವಣಿಗೆ ಮಾಡಿ ಈಶ್ವರಪ್ಪನಂತಹವರು ಗೆದ್ದು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಹರ್ಷನ ಕೊಲೆಯನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಪ್ರಜ್ಞಾಸಿಂಗ್ ಕರೆಸಿ ಚಾಕು ಚೂರಿ ಸಾಣೆ ಹಿಡಿಸಲು ಸಲಹೆಕೊಡಿಸಿದ್ದಾರೆ. ಈಶ್ವರಪ್ಪನವರ ಕೆಲಸಗಳಿಗೆ ಪ್ರತಿಯಾಗಿ ಕೆಲವು ಮುಸ್ಲಿಂ ಮೂಲಭೂತವಾದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ದ್ವೇಷಕ್ಕೆ ಶತಮಾನದ ಇತಿಹಾಸವಿದೆ. ಆದರೆ, ಇದರ ನಡುವೆ ರಂಜಾನ್ ಹಬ್ಬದಲ್ಲಿ ಬಿರಿಯಾನಿಗಾಗಿ ಹಂಬಲಿಸುವ ಹಿಂದೂಗಳಿದ್ದಾರೆ; ಹಾಗೆಯೇ ಕ್ರಿಸ್‌ಮಸ್ ಹಬ್ಬದ ಊಟಕ್ಕಾಗಿ ಕಾಯುವ ಕೆಲ ಹಿಂದೂಗಳು ಸದ್ದಿಲ್ಲದೆ ಧರ್ಮ ಸಾಮರಸ್ಯದ ಝರಿ ಬತ್ತದಂತೆ ಕಾಯ್ದುಕೊಂಡು ಹೋಗುತ್ತಿದ್ದಾರೆ. ಇವರ ನಡುವೆ ಪ್ರಜ್ಞಾ ಮತ್ತು ಈಶ್ವರಪ್ಪನ ದನಿ ಕರ್ಕಷವಾಗುತ್ತಿದೆಯಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...