Homeಕರ್ನಾಟಕಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ನಿಮ್ಮ ಫಲಿತಾಂಶ ನೋಡಲು ಈ ಲಿಂಕ್ ಬಳಸಿ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ನಿಮ್ಮ ಫಲಿತಾಂಶ ನೋಡಲು ಈ ಲಿಂಕ್ ಬಳಸಿ

- Advertisement -
- Advertisement -

ಬಹು ಕಾತುರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 21) ಪ್ರಕಟವಾಗಲಿದೆ. ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ ಬೆಳಿಗ್ಗೆ ವಿವರಣೆ ನೀಡಲಿದೆ.

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, 11 ಗಂಟೆ ನಂತರ ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ನಿಮ್ಮ ಫಲಿತಾಂಶ ನೋಡಲು ಈ ಲಿಂಕ್ ಬಳಸಿ https://karresults.nic.in

2022–23ನೇ ಶೈಕ್ಷಣಿಕ ಸಾಲಿನಲ್ಲಿ 7,27,387ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. ಈಗ ಸದ್ಯ ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ಕೂಡಿಕೆ ಕಾರ್ಯ ಪೂರ್ಣಗೊಂಡಿದ್ದು ಫಲಿತಾಂಶ ಹೊರಬೀಳುತ್ತಿದೆ.

ಇದನ್ನೂ ಓದಿ: ಒಂದೇ ಕುಟುಂಬದ ಇಬ್ಬಿಬ್ಬರು ನಾಮಪತ್ರ ಸಲ್ಲಿಸುವುದೇಕೆ? ಎ, ಬಿ, ಸಿ ಫಾರಂ ಎಂದರೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read