Homeಮುಖಪುಟಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

ಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

- Advertisement -
- Advertisement -

ದೆಹಲಿಯ ತೀನ್‌ಮೂರ್ತಿ ಭವನದಲ್ಲಿರುವ ದೇಶದ ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಸದ್ಯಕ್ಕೆ ನರೇಂದ್ರ ಮೋದಿಯವರ ಕೊಠಡಿ ಅಪೂರ್ಣವಾಗಿದೆ. ಯಾವಾಗ ಅವರನ್ನು ಬೀಳ್ಕೊಡಲಾಗುವುದೋ ಆಗ, ಅವರು ತೆಗೆದುಕೊಂಡು ಒಳ್ಳೆಯ, ಕೆಟ್ಟ ತೀರ್ಮಾನಗಳ ನೆನಪುಗಳನ್ನು ಹೆಣೆಯುತ್ತ ಹೋದಲ್ಲಿ, ಆ ಮ್ಯೂಸಿಯಂನಲ್ಲಿ ನೋಟು ರದ್ದತಿಗೆ ಒಂದು ಸ್ಥಾನ ಅಥವಾ ಕೊಠಡಿ ಖಂಡಿತವಾಗಿಯೂ ಇರಲಿದೆ. ಆ ಕೊಠಡಿಯಲ್ಲಿ ಗುಲಾಬಿ ಬಣ್ಣದ 2000 ರೂಪಾಯಿಯ ನೋಟಿಗೂ ಸ್ಥಾನ ಇರಲಿದೆ. ಆ ಕೊಠಡಿಯನ್ನು ಹುಚ್ಚ ತುಘಲಕ್ ಎಂದು ಕರೆಯಲಾಗುವುದೋ ಅಥವಾ ತಮಾಷೆಯ ಕೊಠಡಿಯೆಂದು ಕರೆಯಲಾಗುವದೋ ಗೊತ್ತಿಲ್ಲ.

ಆ ಹೊಸ ರೀತಿಯ ಸಂಗ್ರಹಾಲಯದಲ್ಲಿ ಈ ನೋಟಿನ ಬಗ್ಗೆ ರಚಿಸಲಾದ ಜೋಕುಗಳಿಗೂ ಜಾಗ ಇರುವ ಸಾಧ್ಯತೆ ಇದೆ. ಬೇರೆ ಏನಾದರೂ ಇರಲಿ ಬಿಡಲಿ, ‘ಆಜ್ ತಕ್’ನ ಆಂಕರ್‌ನ ಆ ವಿಡಿಯೋ ತುಣುಕು; ನೋಟು ರದ್ದತಿಯ ದಿನದಂದು 2000 ರೂಪಾಯಿಯಲ್ಲಿ ‘ನ್ಯಾನೊ ಚಿಪ್’ನ ಇದೆ ಎಂದು ಖಡಾಖಂಡಿತವಾಗಿ ವರದಿ ಮಾಡುತ್ತಿರುವ ವಿಡಿಯೋ ತುಣುಕಂತೂ ಇರಲಿದೆ. ನನ್ನ ಮಾತು ನಡೆದರೆ, 2000 ರೂಪಾಯಿ ನೋಟನ್ನು ಹಿಂಪಡೆದಾಗ, ಆರ್‌‌ಓ‌ಎಫ್‌ಎಲ್ ಗಾಂಧಿ (ROFL Gandhi) ಹೆಸರಿನಲ್ಲಿ ಬಂದ ಈ ಟ್ವೀಟ್‌ಗೂ ಸಂಗ್ರಾಹಲಯದಲ್ಲಿ ಸ್ಥಾನ ನೀಡಬೇಕು; “ವಿಶ್ವಾಸಾರ್ಹ ಮೂಲಗಳ ಪ್ರಕಾರ 2000ದ ನೋಟಿನ ಚಿಪ್‌ಗೆ 5Gಯೊಂದಿಗೆ ಕನೆಕ್ಷನ್ ಆಗುತ್ತಿಲ್ಲ. ಈಗ 5G ಹೊಂದಿರುವ ಹೊಸ 5000ದ ಸೂಪರ್ ನ್ಯಾನೋ ಚಿಪ್‌ನ ನೋಟು ಬರಲಿದೆ. ಒಂದು ವೇಳೆ ಕಾಳಧನದ ಧಣಿಗಳು ಇದನ್ನು ತಿಜೋರಿಯಲ್ಲಿ ಇಟ್ಟರೆ, ಅದು ಖುದ್ದಾಗಿ ಊಬರ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಆರ್‌ಬಿಐನ ಕಚೇರಿಗೆ ವಾಪಸ್ ಬರುವುದು!”

ಆ ಕೊಠಡಿಯಲ್ಲಿ 2016ರ ನವೆಂಬರ್ 8ರ ಸಂಜೆಯಿಂದ ಶುರುಮಾಡಿ 2023ರ ಮೇ 23ರತನಕದ ನೋಟುರದ್ದತಿಯ ಕಥೆಯನ್ನು ಹೇಳಲಾಗುವುದು. ಪ್ರಧಾನ ಮಂತ್ರಿ ದೊಡ್ಡದೊಡ್ಡ ಭರವಸೆ ನೀಡಿದ ಭಾಷಣದ ವಿಡಿಯೋ ತುಣುಕಿನೊಂದಿಗೆ ಆ ಕಥೆ ಪ್ರಾರಂಭವಾಗುವುದು. ಅದರಲ್ಲಿ ಇತರ ಅನೇಕ ಉಪಕಥೆಗಳು ಇರಲಿವೆ: ದೇಶಾದ್ಯಂತ ಕಂಡುಬಂದ ಸರತಿ ಸಾಲುಗಳು, ಹಳೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾತುರದಿಂದ ಕಾಯುತ್ತಿರುವ ಕಣ್ಣುಗಳು ಇತ್ಯಾದಿ. ನಿಸ್ಸಂದೇಹವಾಗಿ, ಅಲ್ಲಿ ಅನೇಕ ದಸ್ತಾವೇಜುಗಳೂ ಇರಲಿವೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಹೊಸ ನಿರ್ದೇಶನಗಳು, ದಿನನಿತ್ಯ ಬದಲಾಗುತ್ತಿರುವ ಬ್ಯಾಂಕ್‌ಗಳ ನಿಯಮಗಳು.

ಒಂದು ವೇಳೆ ಆ ಸಂಗ್ರಹಾಲಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ, ಯಾವುದೇ ವಿತ್ತೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಪಡೆದುಕೊಳ್ಳದೇ, ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್‌ನ ಎಚ್ಚರಿಕೆಯನ್ನು ಕಡೆಗಣಿಸಿ ಹೇಗೆ ದೇಶದ ಕರೆನ್ಸಿಯೊಂದಿಗೆ ಇಷ್ಟು ದೊಡ್ಡ ಆಟ ಆಡಲಾಯಿತು ಎಂಬುದನ್ನು ಅದರಲ್ಲಿ ದಾಖಲಿಸಲಾಗುವುದು. ಒಂದು ವೇಳೆ ಆ ಸಂಗ್ರಹಾಲಯ ಭವಿಷ್ಯದ ಪ್ರಜ್ಞೆಯನ್ನು ಹೊಂದಿದ್ದರೆ ಅದರಲ್ಲಿ ನೋಟು ರದ್ದತಿಯ ದಾವೆಗಳು ಮತ್ತು ಅದರ ಅಸಲಿಯತ್ತನ್ನು ಎದುರುಬದರು ಇರಿಸುವ ಒಂದು ಪ್ಯಾನೆಲ್ ಕೂಡ ಇರಿಸಬೇಕಾಗುವುದು. ನೋಟು ರದ್ದತಿಯಿಂದ ದೊಡ್ಡ ಪ್ರಮಾಣದಲ್ಲಿ ಕಾಳ ಧನ ಇಲ್ಲವಾಗುವುದು, ಭ್ರಷ್ಟಾಚಾರಕ್ಕೆ ಪೆಟ್ಟು ಬೀಳುವುದು ಎಂಬ ದಾವೆಗಳನ್ನು ಮಾಡಲಾಗಿತ್ತು. ಹೊರಬಂದ ಅಸಲಿಯತ್ತೇನೆಂದರೆ, ರಿಸರ್ವ್ ಬ್ಯಾಂಕಿನದ್ದೇ ವರದಿಯ ಪ್ರಕಾರ 99.3% ನೋಟುಗಳು ವಾಪಸ್ ಬಂದುಬಿಟ್ಟವು. ದುಡ್ಡಿನ ದೊಡ್ಡದೊಡ್ಡ ಚೀಲಗಳನ್ನು ಹೊಂದಿದ್ದ ಸೇಠರ ದುಡ್ಡು ಮುಳುಗಲಿಲ್ಲ, ಆದರೆ ಬಡವರ ಕರುಳಲ್ಲಿದ್ದ ಒಂದಿಷ್ಟು ನೋಟುಗಳು ಖಂಡಿತವಾಗಿಯೂ ಕೊಳೆತುಹೋದವು. ಕಾಳ ಧನ ಇರಿಸಿಕೊಳ್ಳುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಕರೆನ್ಸಿ ನೋಟುಗಳ ಕಂತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ ಎಂಬುದು ಈ ತೀರ್ಮಾನದ ಹಿಂದಿದ್ದ ತಿಳಿವಳಿಕೆ. ಗೊತ್ತಾಗಿದ್ದೇನೆಂದರೆ, ಕಾಳಧನ ಇಟ್ಟುಕೊಳ್ಳುವವರು ನಮಗಿಂತ ಜಾಣರಾಗಿರುತ್ತಾರೆ, ಅವರು ತಮ್ಮ ಧನ, ಬೇನಾಮಿ ಸಂಪತ್ತನ್ನು ಭೂಮಿ ಅಥವಾ ವಜ್ರದಂತಹ ವಸ್ತುಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ನಕಲಿ ನೋಟುಗಳ ಸಂಖ್ಯೆಯೂ ಹೆಚ್ಚಿದೆ ಎಂಬ ದಾವೆ ಹೂಡಲಾಗುತ್ತು. ನಂತರ ರಿಸರ್ವ್ ಬ್ಯಾಂಕ್ ಹೇಳಿದ್ದೇನೆಂದರೆ, ನಕಲಿ ನೋಟುಗಳು ಅನುಪಾತ ಇರುವುದು ಕೇವಲ 0.0007%ರಷ್ಟು ಎಂದು.

ಇಲ್ಲಿ ಪ್ರಧಾನಮಂತ್ರಿ ಸಂಗ್ರಾಹಾಲಯದ ಗುಲಾಬಿ ಬಣ್ಣದ ವ್ಯಂಗದ ಕೊಠಡಿ ನಿಮಗೆ ಒಂದು ಪ್ರಶ್ನೆ ಕೇಳಲಿದೆ: ಒಂದು ವೇಳೆ 500 ಮತ್ತು 1000 ರೂಪಾಯಿಗಳ ದೊಡ್ಡ ನೋಟಿನದ್ದೇ ಸಮಸ್ಯೆಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಮೌಲ್ಯದ 2000 ರೂಪಾಯಿ ನೋಟಿನಿಂದ ಆ ಸಮಸ್ಯೆಯ ಪರಿಹಾರ ಆಗುವುದು ಹೇಗೆ? ಒಂದು ವೇಳೆ ಭ್ರಷ್ಟರಿಗೆ 1000 ರೂಪಾಯಿಯ ನೋಟುಗಳಿಂದ ಹಣ ಶೇಖರಣೆ ಮಾಡಲು ಅನುಕೂಲ ಆಗುತ್ತಿದೆ ಎಂದಲ್ಲಿ 2000 ರೂಪಾಯಿಯ ನೋಟುಗಳಿಂದ ಅವರಿಗೆ ಇನ್ನಷ್ಟು ಅನುಕೂಲ ಆಗುವುದಿಲ್ಲವೇ? ಈ ಪ್ರಶ್ನೆಯ ಉತ್ತರ ಆಗಲೂ ಸಿಗಲಿಲ್ಲ, ಇಲ್ಲಿಯತನಕವೂ ಸಿಕ್ಕಿಲ್ಲ. ತುಘಲಕ್ ದರ್ಬಾರಿನಿ ರೀತಿಯ ನೋಟು ರದ್ದತಿ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ ಕಾಳಧನ ಇಲ್ಲವಾಗಿಸುವ ದಾವೆಯ ಆಧಾರದ ಮೇಲೆ ಚುನಾವಣೆ ಗೆದ್ದರು, ಒಂದೆರಡು ಬಾರಿ ನೋಟು ರದ್ದತಿಯ ವಾರ್ಷಿಕ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು. ಯಾರಿಗೂ ಗೊತ್ತಾಗದ ಹಾಗೆ ಸರಕಾರವು 2018ರಲ್ಲಿಯೇ 2000 ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸಿತು ಹಾಗೂ ಮತ್ತೆ 2022 ಮೇ 19ರಂದು ಮತ್ತೆ ಇದನ್ನು ವಾಪಸ್ ಪಡೆಯುವ ಘೋಷಣೆ ಮಾಡಿತು. ಮತ್ತೆ ಇದನ್ನು ಭ್ರಷ್ಟಾಚಾರದ ವಿರುದ್ಧದ ಅಂತಿಮ ಯುದ್ಧ ಎಂದು ಭಟ್ಟಂಗಿಗಳು ದಾವೆ ಹೂಡಿದರು, ಆದರೆ ಈ ಬಾರಿ ಕೇಳುವವರು ಯಾರೂ ಇಲ್ಲ. 2000 ರೂಪಾಯಿ ನೋಟುಗಳ ಚಲಾವಣೆ ಹೆಚ್ಚು ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಇಷ್ಟು ಸರಳ ವಿಷಯವನ್ನು ತಿಳಿದುಕೊಳ್ಳಲು ಇಡೀ ದೇಶದೊಂದಿಗೆ ಇಂತಹ ಪ್ರಯೋಗ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಹೇಳಿಲ್ಲ. 2000ದ ನಕಲಿ ನೋಟುಗಳನ್ನು ಮಾಡುವುದು ಮುಂಚಿನ 1000 ನೋಟುಗಳಿಗಿಂತ ಸುಲಭ ಎಂಬುದು ಕೇಳಿಬಂದಿದೆ. ಈಗ ಮತ್ತೊಮ್ಮೆ 2000 ಮೌಲ್ಯದ 181 ಕೋಟಿ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಕಸರತ್ತು ಶುರುವಾಗಿದೆ, ಈಗ ಮತ್ತೊಮ್ಮೆ ಪ್ರತಿನಿತ್ಯ ಮಿತಿಗಳನ್ನು ನಿಗದಿಪಡಿಸಲಾಯಿತು, ಮತ್ತೊಮ್ಮೆ ಪ್ರತಿ ವಾರ ನಿಯಮಗಳನ್ನು ಬದಲಿಸಲಾಯಿತು, ಯಾವ ನೋಟುಗಳು ತನ್ನಿಂತಾನೆ ಚಲಾವಣೆಯಿಂದ ಹೊರಹೋಗುತ್ತಿದ್ದವೋ, ಅವುಗಳನ್ನು ಇಲ್ಲವಾಗಿಸಲು ಇಷ್ಟು ದೊಡ್ಡ ದುಬಾರಿಯಾದ ಕಸರತ್ತನ್ನು ಏಕೆ ಮಾಡಲಾಯಿತು ಎಂಬುದಕ್ಕೆ ಕಾರಣ ಎಂದೂ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಂದುಕೊಂಡುಬಿಡಿ, ಸರಕಾರವು ನೋಟುರದ್ದತಿಯ ಸಮಾಧಿಯ ಮೇಲೆ 2000ದ ನೋಟಿನ ರೂಪದ ಗುಲಾಬಿ ಹೂ ಅರ್ಪಿಸಿದೆ ಎಂದು.

ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ, ಮೋದಿಯವರ ಪ್ರಧಾನಿ ಅವಧಿಯ ನೋಟು ರದ್ದತಿಯ ಕೊಠಡಿ ಎಂದಿಗಾದರೂ ತಯ್ಯಾರಾಗಲಿ, ಅಲ್ಲಿಯತನಕ ವಿಶ್ವದೆಲ್ಲೆಡೆಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ, ಭಾರತದ ನೋಟು ರದ್ದತಿಯ ಕೇಸ್ ಸ್ಟಡಿ ಪ್ರಕಟವಾಗುವುದು; ಚಲನೆಯಲ್ಲಿರುವ ಆರ್ಥವ್ಯವಸ್ಥೆಯೊಂದಿಗೆ ಆಟವಾಡಬಾರದು ಎಂಬುದು ಉದಾಹರಣೆಯ ರೂಪದಲ್ಲಿ ಅದು ಚರ್ಚೆಯಾಗುವುದು. ಹೇಗೆ ಕಣ್ಣಿನ ಆಪರೇಷನ್‌ನ್ನು ಸ್ಕ್ರೂಡ್ರೈವರ್‌ನಿಂದ ಮಾಡಲಾಗುವುದಿಲ್ಲವೋ ಹಾಗೆಯೇ ಆಧುನಿಕ ಅರ್ಥವ್ಯವಸ್ಥೆಯ ಕರೆನ್ಸಿಯನ್ನು ಹವ್ಯಾಸಿಗಳ ಕೈಗೆ ನೀಡಲಾಗುವುದಿಲ್ಲ ಎಂಬ ಪಾಠ ಮಾಡಲಾಗುವುದು. ಆ ಕೊಠಡಿಯ ಕೊನೆಯಲ್ಲಿ ಈ ಬರಹವಿರುವ ಒಂದು ಪಟ್ಟಿಯನ್ನು ಇರಿಸುವ ಸಾಧ್ಯತೆ ಇದೆ; “ಎಚ್ಚರಿಕೆ: ಕರೆನ್ಸಿ ನೋಟುಗಳೊಂದಿಗೆ ಆಟವಾಡುವುದು ಕರೆಂಟ್‌ನೊಂದಿಗೆ ಆಟವಾಡಿದಂತೆ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...