Homeಕರ್ನಾಟಕಸಾಗರ: ಥಿಯೇಟರ್ ಸಮುರಾಯ್ ತಂಡದಿಂದ 'ಮಳ್ಳ ಗಿಂಪೆಲ್' ನಾಟಕ ಪ್ರದರ್ಶನ

ಸಾಗರ: ಥಿಯೇಟರ್ ಸಮುರಾಯ್ ತಂಡದಿಂದ ‘ಮಳ್ಳ ಗಿಂಪೆಲ್’ ನಾಟಕ ಪ್ರದರ್ಶನ

- Advertisement -
- Advertisement -

ಕನ್ನಡ ಮತ್ತು ಸಂಸ್ಕತಿ ಇಲಾಖೆಯ(ಶಿವಮೊಗ್ಗ) ಸಹಯೋಗದೊಂದಿಗೆ ಸಾಗರದ ಹೆಗ್ಗೋಡಿನ ‘ಥಿಯೇಟರ್ ಸಮುರಾಯ’ ತಂಡವು  “ಮಳ್ಳ ಗಿಂಪೆಲ್” ಎಂಬ ನಾಟಕವನ್ನು ಪ್ರಸ್ತುತ ಪಡಿಸಿತು.

ಡಿಸೆಂಬರ್ 22ರಂದು ನೀನಾಸಮ್ ಗೊಂಬೆಮನೆಯಲ್ಲಿ ಶ್ರೀಯುತ ಮಂಜು ಕೊಡಗು ಅವರ ನಿರ್ದೇಶನದಲ್ಲಿ ನಾಟಕವು ಎಂಟು ಜನ ಥಿಯೇಟರ್ ಸಮುರಾಯ್ ನಟ-ನಟಿಯರಿಂದ ನಾಟಕವು ಅದ್ಭುತವಾಗಿ ಮೂಡಿಬಂದಿತು.

”ಅಳುವ ಅಳಿಸಿಕೊಳ್ಳುವ, ತಾನು ಶ್ರೇಷ್ಠ – ಆತ ಕನಿಷ್ಟ, ಪ್ರಬಲ-ದುರ್ಬಲ ಈ ಮುಂತಾದ ಪ್ರಚಲಿತ ಬಳಕೆಯ ಚರ್ಚೆಯನ್ನು ನಗಣ್ಯ ಮಾಡಿ, ಆಕ್ರಮಣ ಅನ್ನುವುದು ಮೇಲಿನ ಅರ್ಥದಲ್ಲಿ ಮಾತ್ರವೇ ನಡೆಯದೆ ಜೀವನದ ಅತೀ ಸಣ್ಣದೆಂದು ಗುರುತಿಸುವ, ಗುರುತಿಸಿ ಮರೆತುಬಿಡುವ ‘ಸೂಕ್ಷ್ಮವು-ನಗಣ್ಯವು’ ಎಂದು ನಾವು ಪರಿಭಾವಿಸುವ ಅನೇಕ ಸಣ್ಣ ಕಾರಣಗಳಲ್ಲೂ ಈ ‘ಆಕ್ರಮಣಶೀಲತೆ’ ತುಂಬಾ ಪ್ರಭಾವೀ ರೀತಿಯಲ್ಲಿ ಕೆಲಸಮಾಡುತ್ತದೆ.

ಸಮಾಜದ “ಶ್ರೇಷ್ಟತೆಯ ಹುಂಬತನ”ವೆನ್ನುವುದು ಮಾನಸಿಕ ದಬ್ಬಾಕೆಯೂ ಹೌದು, ಎಂಬುದನ್ನು ಸಿಂಗರ್ ಸರಳವಾಗಿ ಗಿಂಪೆಲ್ಲನ ಮೂಲಕ ತೆರೆದಿಡುವ ಆಥೆಯ ಸಂರಚನೆಯಾಗಿದೆ.

ಈ ಪ್ರಯೋಗದಲ್ಲಿ ಕನ್ನಡದ ದ್ರಾವಿಡ ಭಾರತದ ಹಾಡುಗಳು ಅಲ್ಲಲ್ಲಿ ಬಂದು ಹೋಗುತ್ತವೆ. ನಟರೇ ಸಿದ್ಧಪಡಿಸಿದ ವಾದ್ಯಗಳು ಬಳಸಲಾಯಿತು. ಅನೇಕ ಪಾತ್ರಗಳು ಬೊಂಬೆಯ ಮಾದರಿಯಲ್ಲಿ “ಪಾತ್ರ ಪ್ರತಿನಿಧಿ”ಗಳಾಗುತ್ತವೆ. ಗೊಂಬೆ ಬಳಕೆಯ ಮೂಲಕ ವಿಶೇಷ ಪಾತ್ರಗಳನ್ನು ಸೃಷ್ಟಿಸಿ ಮನಮುಟ್ಟುವಂತೆ ಅಭಿನಯಿಸಿದರು. ಪ್ರಯೋಗವನ್ನು ಹೆಚ್ಚು ವಿಜೃಂಭಿಸದೇ, ಕಥೆಯ ನಿರೂಪಣಾ ವಿಧಾನವನ್ನು ಮುಂದಿಟ್ಟುಕೊಂಡು “ನಟ ಮತ್ತು ಪಾತ್ರ” ಈ ಎರಡರ ಸಾಂಗತ್ಯ-ಭಿನ್ನತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024; ಐದನೇ ಹಂತದಲ್ಲಿ 60.09% ಮತದಾನ

0
ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳ ಮತದಾರರು ಸೋಮವಾರ ನಡೆದ ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಅಂದಾಜು 60.09% ರಷ್ಟು ಮತದಾನದೊಂದಿಗೆ ಕೊನೆಗೊಂಡಿತು, ಪಶ್ಚಿಮ ಬಂಗಾಳದಲ್ಲಿ...