Homeಮುಖಪುಟಶೇ.90ರಷ್ಟು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಇಲ್ಲ ರೋಹಿಂಗ್ಯನ್ನರಿಗೆ ಆಶ್ರಯ

ಶೇ.90ರಷ್ಟು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಇಲ್ಲ ರೋಹಿಂಗ್ಯನ್ನರಿಗೆ ಆಶ್ರಯ

- Advertisement -
- Advertisement -

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಮ್ಯಾನ್ಮಾರ್‌ನ ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರಿಗೆ ನೆಲೆ ಸಿಕ್ಕಿಲ್ಲ. ಇಂಡೋನೇಷ್ಯಾದ ಜನರು ರೋಹಿಂಗ್ಯನ್ನರು ದೇಶ ತೊರೆಯುವಂತೆ ಆಗ್ರಹಿಸಿ ತಿರುಗಿ ಬಿದ್ದಿದ್ದಾರೆ.

ಕಳೆದ ಬುಧವಾರ ಇಂಡೋನೇಷ್ಯಾದ ಅಚೆ ಪ್ರಾಂತ್ಯದ ರಾಜಧಾನಿ ಬಂದಾ ಅಚೆಯಲ್ಲಿ ಸುಮಾರು 137 ರೋಹಿಂಗ್ಯಾಗಳು ಆಶ್ರಯ ಪಡೆದಿದ್ದ ಸ್ಥಳೀಯ ಸಮುದಾಯ ಭವನದ ನೆಲಮಾಳಿಗೆಯ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಾಳಿ ನಡೆಸಿದೆ.

ದಿ ಅಸೋಸಿಯೇಟೆಡ್ ಪ್ರೆಸ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪೊಲೀಸ್‌ ಭದ್ರತೆಯನ್ನು ಬೇಧಿಸಿ ಹಸಿರು ಜಾಕೆಟ್‌ ಧರಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ರೋಹಿಂಗ್ಯಾಗಳು ಆಶ್ರಯ ಪಡೆದಿದ್ದ ಸಮುದಾಯ ಭವನಕ್ಕೆ ನುಗ್ಗಿರುವುದು ಮತ್ತು ಈ ವೇಳೆ ರಕ್ಷಣೆಗಾಗಿ ಗೋಗರೆಯುತ್ತಿದ್ದ ಮಕ್ಕಳು, ಮಹಿಳೆಯರನ್ನು ಭದ್ರತಾ ಅಧಿಕಾರಿಗಳು ಟ್ರಕ್‌ಗೆ ಹತ್ತಿಸಿ ಬೇರೆಡೆಗೆ ಕರೆದೊಯ್ದಿರುವುದನ್ನು ಕಾಣಬಹುದು.

ಈ ಘಟನೆಗೆ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ದುಖಃ ವ್ಯಕ್ತಪಡಿಸಿದೆ.

ಇಂಡೋನೇಷ್ಯಾದ ಜನತೆ ರೋಹಿಂಗ್ಯಾಗಳ ಮೇಲೆ ತಿರುಗಿಬಿದ್ದ ಕಾರಣ ಸಂಘರ್ಷ ತಪ್ಪಿಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ರೋಹಿಂಗ್ಯಾಗಳನ್ನು ಹೊತ್ತು ಇಂಡೋನೇಷ್ಯಾ ಕಡೆ ಬರುವ ದೋಣಿಗಳನ್ನು ಸಮುದ್ರದಲ್ಲೇ ತಡೆದು ವಾಪಸ್ ಕಳುಹಿಸುತ್ತಿದೆ.

ಇಂಡೋನೇಷ್ಯಾದ ನೌಕಾಪಡೆ ಗುರುವಾರ ಅಚೆ ಪ್ರಾಂತ್ಯದ ಸಮುದ್ರ ತೀರಕ್ಕೆ ಆಗಮಿಸುತ್ತಿದ್ದ ರೋಹಿಂಗ್ಯಾ ನಿರಾಶ್ರಿತರಿಂದ ತುಂಬಿದ್ದ ದೋಣಿಯನ್ನು ಬಲವಂತವಾಗಿ ಅಂತಾರಾಷ್ಟ್ರೀಯ ಜಲ ಗಡಿಯಿಂದ ಹೊರಗೆ ಕಳುಹಿಸಿದೆ.

ಸುಮಾತ್ರಾ ದ್ವೀಪದ ಭಾಗವಾಗಿರುವ ಅಚೆ ಪ್ರಾಂತ್ಯಕ್ಕೆ ನಿರಾಶ್ರಿತರನ್ನು ಹೊತ್ತ ಹೆಚ್ಚಿನ ದೋಣಿಗಳು ಆಗಮಿಸುತ್ತಿವೆ. ಎಲ್ಲಾ ದೋಣಿಗಳು ಬಾಂಗ್ಲಾದೇಶದ ಕಡೆಯಿಂದ ಬರುತ್ತಿವೆ ಎಂದು ವರದಿಗಳು ಹೇಳಿವೆ. ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ರೋಹಿಂಗ್ಯನ್ನರು ತುಂಬಿ ತುಳುಕುತ್ತಿದ್ದಾರೆ. ಪರಿಣಾಮ ಕಳೆದ ನವೆಂಬರ್‌ನಿಂದ ಅನೇಕ ಜನರು ದೋಣಿಗಳ ಮೂಲಕ ಆಳ ಸಾಗರದಲ್ಲಿ ಅಪಾಯಕಾರಿ ಪ್ರಯಾಣ ಮಾಡಿ ಮಲೇಶ್ಯಾ, ಇಂಡೋನೇಷ್ಯಾಗಳಿಗೆ ತೆರಳುತ್ತಿದ್ದಾರೆ.

2027ರಲ್ಲಿ ತಮ್ಮ ಜನ್ಮ ನಾಡು ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಬ್ಬಾಳಿಕೆ ತಡೆಯಲಾಗದೆ ಸಾವಿರಾರು ರೋಹಿಂಗ್ಯನ್ನರು ತಮ್ಮದೆಲ್ಲವನ್ನೂ ತೊರೆದು ಬಾಂಗ್ಲಾದೇಶ, ಭಾರತದಂತಹ ಕೆಲ ರಾಷ್ಟ್ರಗಳಿಗೆ ತೆರಳಿ ನೆಲೆಸಿದ್ದಾರೆ.

ಬಾಂಗ್ಲಾದಿಂದ 1,500ಕ್ಕೂ ಹೆಚ್ಚು ರೋಹಿಂಗ್ಯನ್ನರು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಅವರಿಗೆ ಆಶ್ರಯ ನೀಡಲು ಅಲ್ಲಿನ ಜನರಿಂದ ವಿರೋಧವಿರುವ ಕಾರಣ ಸರ್ಕಾರ ಹೆದರುತ್ತಿದೆ. ಜನರು ತಿರುಗಿಬಿದ್ದರೆ ನಿಭಾಯಿಸುವುದು ಕಷ್ಟ ಎಂದರಿತಿರುವ ಇಂಡೋನೇಷ್ಯಾ ಸರ್ಕಾರ, ನಮ್ಮಲ್ಲಿ ರೋಹಿಂಗ್ಯನ್ನರಿಗೆ ಆಶ್ರಯ ನೀಡಲು ಸಾಧ್ಯವಾಗುತ್ತಿಲ್ಲ. ಬೇರೆ ಯಾವುದಾದರು ದೇಶಗಳು ಅವರಿಗೆ ಆಶ್ರಯ ನೀಡಿ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

ಥೈಲ್ಯಾಂಡ್ ಮತ್ತು ಮಲೇಷಿಯಾದಂತೆ ವಿಶ್ವಸಂಸ್ಥೆಯ 1951ರ ನಿರಾಶ್ರಿತರಿಗೆ ಆಶ್ರಯ ನೀಡುವ ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ ಹಾಕಿಲ್ಲ. ಆದ್ದರಿಂದ, ಬಾಂಗ್ಲಾದೇಶದಿಂದ ಬರುವ ರೋಹಿಂಗ್ಯಾಗಳನ್ನು ಸ್ವೀಕರಿಸಲು ಅದು ಬಾಧ್ಯತೆ ಹೊಂದಿಲ್ಲ. ಇಲ್ಲಿಯವರೆಗೆ, ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಇಂಡೋನೇಷ್ಯಾ ನೀಡಿದೆ.

ಇಂಡೋನೇಷ್ಯಾದ 277 ಮಿಲಿಯನ್ ಜನ ಸಂಖ್ಯೆಯಲ್ಲಿ ಮುಸ್ಲಿಮರು ಶೇ. 90ರಷ್ಟಿದ್ದಾರೆ. ಆದರೂ, ಮುಸ್ಲಿಮರೇ ಆದ ರೋಹಿಂಗ್ಯನ್ನರಿಗೆ ಆಶ್ರಯ ನೀಡಲು ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ರೋಹಿಂಗ್ಯನ್ನರು ನಮ್ಮ ದೇಶಕ್ಕೆ ಹೊರೆ, ಅವರ ನಡವಳಿಕೆ ಸರಿಯಿಲ್ಲ, ಇತ್ಯಾದಿ ಕಾರಣಗಳನ್ನು ಇಂಡೋನೇಷ್ಯಾದ ಜನತೆ ಮುಂದಿಟ್ಟಿದ್ದಾರೆ. ಒಟ್ಟಿನಲ್ಲಿ ಅತ್ತ ಜನ್ಮ ನಾಡು, ಇತ್ತ ಅನ್ಯ ನಾಡಿನಲ್ಲೂ ನೆಲೆಯಿಲ್ಲದೆ ಸಾವಿರಾರು ಬಡ ಜೀವಗಳು ಈ ಭೂಮಿಯಲ್ಲೇ ನೆಲೆ ಕಳೆದುಕೊಂಡಂತಾಗಿದೆ.

ಫೋಟೋ ಕೃಪೆ : ಸಿಎನ್‌ಎನ್‌

ಇದನ್ನೂ ಓದಿ : ಇಸ್ರೇಲ್‌ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ದಕ್ಷಿಣ ಆಫ್ರಿಕಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...