Homeಮುಖಪುಟರೈಲು ತಡೆ ಪ್ರಕರಣ: ಜಿಗ್ನೇಶ್ ಮೆವಾನಿ ಸೇರಿ 31 ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ರೈಲು ತಡೆ ಪ್ರಕರಣ: ಜಿಗ್ನೇಶ್ ಮೆವಾನಿ ಸೇರಿ 31 ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

- Advertisement -
- Advertisement -

2017ರಲ್ಲಿ ಗುಜರಾತ್‌ ಸರ್ಕಾರದ ವಿರುದ್ಧದ ಪ್ರತಿಭಟನೆಯ ವೇಳೆ ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಇತರ 30 ಜನರನ್ನು ಗುಜರಾತ್‌ನ ಮೆಟ್ರೋಪಾಲಿಟನ್ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರ ಪೀಠವು, ಶಾಸಕ, ದಲಿತ ನಾಯಕ ಮೆವಾನಿ ಮತ್ತು ಇತರರನ್ನು ದೋಷಮುಕ್ತಗೊಳಿಸಿದೆ. 2017ರಲ್ಲಿ ಗುಜರಾತ್‌ ಸರಕಾರದ ನೀತಿಗಳ ವಿರುದ್ಧ ‘ರೈಲ್ ರೋಕೋ’ ಪ್ರತಿಭಟನೆ ವೇಳೆ ಮೆವಾನಿ ಮತ್ತು ಇತರರ ವಿರುದ್ಧ ಅಹ್ಮದಾಬಾದ್‌ ರೈಲ್ವೆ ಪೊಲೀಸರು ಕಲುಪುರ್ ರೈಲು ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ರೈಲನ್ನು ತಡೆದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು.

ಜಿಗ್ನೇಶ್ ಮೆವಾನಿ ಮತ್ತು ಇತರ 30 ಜನರ ವಿರುದ್ಧ ಕಾನೂನುಬಾಹಿರ ಸಭೆ, ಗಲಭೆ, ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಡಿಯಲ್ಲಿ ಮತ್ತು ರೈಲ್ವೇ ಕಾಯಿದೆಯ ಸೆಕ್ಷನ್ 153ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 31 ಆರೋಪಿಗಳ ಪೈಕಿ 13 ಮಂದಿ ಮಹಿಳೆಯರಾಗಿದ್ದರು.

ಜಿಗ್ನೇಶ್ ಮೆವಾನಿ ಅವರು ವಡ್ಗಾಮ್ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕರಾಗಿದ್ದಾರೆ ಮತ್ತು NGO ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕರಾಗಿದ್ದಾರೆ.

ಅಹ್ಮದಾಬಾದ್‌ನ ಕ್ರಾಸ್‌ರೋಡ್ಸ್‌ನಲ್ಲಿ ಕಾನೂನುಬಾಹಿರ ಸಭೆ, ಗಲಭೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಲ್ಲಿ 2016ರಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಮೆವಾನಿ ಮತ್ತು ಇತರ ಆರು ಮಂದಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಖುಲಾಸೆಗೊಳಿಸಲಾಗಿತ್ತು. ಪೊಲೀಸರ ಅನುಮತಿಯಿಲ್ಲದೆ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಪೊಲೀಸ್ ವಾಹನಗಳ ಧ್ವಂಸ, ಮತ್ತು ಗಲಭೆ ಕುರಿತ ಆರೋಪ ಹೊರಿಸಲಾಗಿತ್ತು. ಅವರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ವಚ್ಚತಾ ಕಾರ್ಮಿಕರ ಜೊತೆ ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸುತ್ತಿದ್ದರು.

ಇದನ್ನು ಓದಿ: ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಭಾರತದಲ್ಲಿ ಮುಸ್ಲಿಮ್‌ ವಿರೋಧಿ ಪ್ರಚಾರಕ್ಕೆ ಸಾಮಾಜಿಕ ಮಾದ್ಯಮವನ್ನು ಹೇಗೆ ಬಳಸಲಾಗಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಥನಾಲ್ ಪ್ರಮಾಣವನ್ನು ಶೇ. 20ರಿಂದ 30ಕ್ಕೆ ಏರಿಸಲು ಕೇಂದ್ರ ಸರ್ಕಾರದಲ್ಲಿ ಈ ಹಿಂದೆಯೇ ಚರ್ಚೆಯಾಗಿತ್ತು!: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!

ಬೆಂಗಳೂರು: ಕರ್ನಾಟಕದಲ್ಲಿ E20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದ ಎಥನಾಲ್ ಬೆರೆಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ...

ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗೆ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ರಾಜೀನಾಮೆ

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ಪಶ್ಚಿಮ ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ, ಒಂದು ತಿಂಗಳಲ್ಲಿ ಸಮಿತಿಯಿಂದ ಹೊರಗುಳಿದ 19 ಸದಸ್ಯರಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಹೊರಗುಳಿದ...

‘ನೋಟ್ ಬಂದಿ’ ಆರ್ಥಿಕತೆ ಹಾಳು ಮಾಡಿದೆ, ‘ವೋಟ್ ಬಂದಿ’ ರಾಜಕೀಯ ನಾಶಪಡಿಸುತ್ತಿದೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದೆ. 2016ರಲ್ಲಿ ಜಾರಿಗೊಳಿಸಿದ 'ನೋಟ್ ಬಂದ್' ದೇಶದ ಆರ್ಥಿಕತೆಯನ್ನು ಹಾಳುಮಾಡಿದ್ದರೆ, ಈಗ ನಡೆಯುತ್ತಿರುವ 'ವೋಟ್ ಬಂದ್' ದೇಶದ ರಾಜಕೀಯ...

“ಪಟಾಕಿಗಳನ್ನು ಸಿಡಿಸುವುದರಿಂದ ಹಲವು ರೋಗ-ರುಜಿನಗಳು ಗುಣಮುಖವಾಗುತ್ತವೆ” – ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಹೇಳಿಕೆ!

ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ದ ನಿಯಂತ್ರಿಸಲು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದ ಟಾಲಿಗಂಜ್ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ...

ಎನ್‌ಡಿಎ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಕರ್ನಾಟಕದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ...

ಗೂಗಲ್ ‘ರೀಯೂನಿಯನ್’ ಜಾಹೀರಾತು ಬಿಡುಗಡೆಯಾಗಿ 13 ವರ್ಷ: ಕುನಾಲ್ ಕಾಮ್ರಾ ಪೋಸ್ಟ್‌ನಿಂದ ಮತ್ತೆ ನೆನಪಾದ ಗಡಿ ಮೀರಿದ ಸೌಹಾರ್ದತೆ!

13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 13ರಂದು ಗೂಗಲ್ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಪ್ರಸಿದ್ಧ ‘ರೀಯೂನಿಯನ್’ (Google Reunion) ಜಾಹೀರಾತು, ಇಂದು ಸಾಮಾಜಿಕ ಜಾಲತಾಣ...

ಕೇಂದ್ರ ಸಚಿವರ ಜೇಬು ತುಂಬಿಸಲು ಎಥನಾಲ್ ದಂಧೆ!: 130 ಕೋಟಿ ಜನರಿಗೆ 20% ಹೆಸರಲ್ಲಿ 40% ಎಥನಾಲ್ – ಪ್ರಿಯಾಂಕ್‌ ಖರ್ಗೆ!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ...

ಎಥೆನಾಲ್ ಅತಿಯಾದ ಮಿಶ್ರಣ: ಸಾವಿರಾರು ವಾಹನಗಳಿಗೆ ಸಮಸ್ಯೆ, ಎಂಜಿನ್‌ಗಳು ಸ್ಥಗಿತ; ಆರೋಪ ಮತ್ತಷ್ಟು ತೀವ್ರಗೊಳಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿವಾದ ಕರ್ನಾಟಕದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ವಿವಿಧೆಡೆ ಸಾವಿರಾರು ವಾಹನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ, ಎಂಜಿನ್‌ಗಳು ಪದೇಪದೇ ಸ್ಥಗಿತಗೊಳ್ಳುತ್ತಿವೆ ಮತ್ತು...

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...