Homeಮುಖಪುಟಅಸ್ಸಾಂನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲು

ಅಸ್ಸಾಂನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲು

- Advertisement -
- Advertisement -

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಹಿಂಸಾಚಾರ, ಪ್ರಚೋದನೆ, ಹಲ್ಲೆ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮುಂದುವರಿದಾಗ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿ ಗೂಂಡಾಗಳು ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ,  ಹಿಂಸಾಚಾರ, ಪ್ರಚೋದನೆ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. PDPP ಕಾಯಿದೆಯ 120(B)143/147/188/283/353/ 332/333/427 IPC R/W ಸೆಕ್ಷನ್ 3 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಬ್ಯಾರಿಕೇಡ್‌ಗಳನ್ನು ಮುರಿಯಲು ಜನಸಂದಣಿಯನ್ನು ಪ್ರಚೋದಿಸಿದ್ದಕ್ಕಾಗಿ ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿಗಳು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶಿಸಿದ ಕೆಲವೇ ಗಂಟೆಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ, ಜನಸಮೂಹವನ್ನು ಪ್ರಚೋದಿಸಿದ ನಿಮ್ಮ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ನಾನು ಡಿಜಿಪಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ರಾಜ್ಯ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದು, ಲೋಕಸಭೆ ಚುನಾವಣೆ ಬಳಿಕ ಅವರನ್ನು ಬಂಧಿಸಲಾಗುವುದು. ಖಾನಪಾರಾ ಪ್ರದೇಶದಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯ ಘಟನೆಯ ನಂತರ ರಾಹುಲ್ ಗಾಂಧಿ ಸುಮಾರು 3,000 ಜನರು ಮತ್ತು 200 ವಾಹನಗಳೊಂದಿಗೆ ಗುವಾಹಟಿಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಅಸ್ಸಾಂ ಸಿಎಂ ಆರೋಪಿಸಿದ್ದಾರೆ.

3000 ಜನರು ಮತ್ತು 200 ವಾಹನಗಳು ಗುವಾಹಟಿ ಪ್ರವೇಶಿಸಿದರೆ ಪರಿಸ್ಥಿತಿ ಏನಾಗಬಹುದು ಎಂದು ನಾವು ಊಹಿಸಬಹುದು. ಆರು ದಿನಗಳಿಂದ ನಾವು ಅವರಿಗೆ ಆರಾಮದಾಯಕವಾದ ಮಾರ್ಗದಲ್ಲಿ ಹೋಗೋಣ ಆದರೆ ಗುವಾಹಟಿಯ ಮಧ್ಯದ ಮಾರ್ಗದಲ್ಲಿ ಹೋಗಬೇಡಿ ಎಂದು ಹೇಳುತ್ತಿದ್ದೆವು. ಇದರಿಂದ ಅವರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆ ಜ.14ರಂದು ಮಣಿಪುರದಿಂದ ಪ್ರಾರಂಭವಾಗಿತ್ತು. ಇದೀಗ ಯಾತ್ರೆಯ ಅಸ್ಸಾಂನಲ್ಲಿ ಮುಂದುವರಿಯುತ್ತಿದೆ. ಜನವರಿ 25ರವರೆಗೆ ಅಸ್ಸಾಂನಲ್ಲಿ ಯಾತ್ರೆ ಮುಂದುವರಿಯಲಿದೆ.

ಇದನ್ನು ಓದಿ: ಜೈಲಿನಲ್ಲಿ ಸಂದರ್ಶಕರ ಕೈಗೆ ‘ಜೈ ಶ್ರೀ ರಾಮ್’ ಮುದ್ರೆ ಹಾಕುತ್ತಿರುವ ಅಧಿಕಾರಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪುನಃ ಅಗ್ರಸ್ಥಾನ ಪಡೆದ ಗೌತಮ್ ಅದಾನಿ; ಶೇ. 13 ರಷ್ಟು ಸಂಪತ್ತು ಹೆಚ್ಚಳ

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ರ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಖ್ಯೆಯು ದಾಖಲೆಯ 391 ಕ್ಕೆ ತಲುಪಿದ್ದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಮತ್ತು ಅವರ ಕುಟುಂಬವು...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: SIR ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರು, ತಜ್ಞರ ಕಳವಳ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದೊಳಗೆ ದಾಖಲಾಗಿರುವ ಭಿನ್ನಾಭಿಪ್ರಾಯಗಳು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್  ನಡೆಸಿದ ತನಿಖಾ ವರದಿ ಪ್ರಕಾರ,...

ಚಲಿಸುವ ರೈಲಿನಲ್ಲಿ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯ: ಮುಸ್ಲಿಂ ಯುವಕನ ಆರೋಪ

ಮುಂಬೈಯಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಆರೋಪಿಸಿದ್ದಾನೆ. ದಾಳಿಕೋರರು ತನ್ನ ಶರ್ಟ್ ಹರಿದು, ಥಳಿಸಿ, ಬಲವಂತವಾಗಿ "ಜೈ ಶ್ರೀ ರಾಮ್" ಎಂದು ಜಪಿಸುವಂತೆ...

ಫಾರ್ಮ್ 6 ರಲ್ಲಿನ ಬದಲಾವಣೆಗಳು ಕಾನೂನುಬಾಹಿರ; ಆಯೋಗದೊಳಗಿನ ಭಿನ್ನಾಭಿಪ್ರಾಯ ಗಂಭೀರ: ಮಾಜಿ ಸಿಇಸಿ ಓ.ಪಿ. ರಾವತ್

"ಶಾಸನಬದ್ಧ ಮತದಾರರ ನೋಂದಣಿ ಫಾರ್ಮ್ ನಂ 6 ರಲ್ಲಿ ಮಾಡಲಾದ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್ ತಿಳಿಸಿದ್ದಾರೆ. "ಚುನಾವಣಾ ಆಯೋಗದೊಳಗಿನ...

‘ಸಲ್ವಾರ್ ತೆಗೆಯಲು ಯತ್ನ, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಚಾಟಿ 

ನವದೆಹಲಿ: ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಸೇರಿದಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ...

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ; ಕೂಡಲೇ ಎಸ್‌ಐಆರ್ ನಿಲ್ಲಿಸಿ: ವಿಪಕ್ಷಗಳ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್...

‘ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧ’: ಮುಸ್ಲಿಂ ಮಹಿಳೆಯರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಶಾಸಕನ ಅತ್ಯಾಚಾರ ಬೆದರಿಕೆ

ಭೋಪಾಲ್: ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಆಗಮಿಸುವುದನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಂ ಹುಡುಗರು ಮಾತ್ರ...

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23)...

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ...