Homeಅಂತರಾಷ್ಟ್ರೀಯಇರಾನ್‌ನಲ್ಲಿ ಹಮಾಸ್‌ ಸರ್ವೋಚ್ಛ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ಅನ್ನು ದೂಷಿಸಿದ ಐಆರ್‌ಜಿಸಿ

ಇರಾನ್‌ನಲ್ಲಿ ಹಮಾಸ್‌ ಸರ್ವೋಚ್ಛ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ಅನ್ನು ದೂಷಿಸಿದ ಐಆರ್‌ಜಿಸಿ

- Advertisement -
- Advertisement -

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಬುಧವಾರ ಇರಾನ್‌ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಮತ್ತು ಇರಾನ್‌ನ ಎಲೈಟ್ ರೆವೆಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ.

ಹನಿಯೆಹ್ ಸಾವಿಗೆ ತೀವ್ರ ದುಖಃ ವ್ಯಕ್ತಪಡಿಸಿರುವ ಹಮಾಸ್, ಮಂಗಳವಾರ ಬೆಳಿಗ್ಗೆ ಟೆಹ್ರಾನ್‌ನಲ್ಲಿರುವ ನಿವಾಸದ ಮೇಲೆ ನಡೆದ ವಿಶ್ವಾಸಘಾತುಕ ಝಿಯೋನಿಸ್ಟ್ ದಾಳಿಯಲ್ಲಿ ಹನಿಯೆಹ್ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಮಂಗಳವಾರ ನಡೆದ ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಹನಿಯೆಹ್ ಭಾಗವಹಿಸಿದ್ದರು.

“ಇಂದು ಮುಂಜಾನೆ, ಟೆಹ್ರಾನ್‌ನಲ್ಲಿರುವ ಇಸ್ಮಾಯಿಲ್ ಹನಿಯೆ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಪರಿಣಾಮ ಹನಿಯೆಹ್ ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ನೀಡಲಾಗುವುದು” ಎಂದು ಎಲೈಟ್ ರೆವೆಲ್ಯೂಷನರಿ ಗಾರ್ಡ್ಸ್ ಮಂಗಳವಾರ ತಿಳಿಸಿದೆ.

ಕಳೆದ ಏಪ್ರಿಲ್‌ನಲ್ಲಿ, ಗಾಝಾದಲ್ಲಿ ವಾಹನದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೊಂದರಲ್ಲಿ ಹನಿಯೆಹ್‌ ಅವರ ಮೂವರು ಪುತ್ರರು ಮತ್ತು ನಾಲ್ವರು ಮೊಮ್ಮಕ್ಕಳು ಕೊಲ್ಲಲ್ಪಟ್ಟಿದ್ದರು. ಗಾಝಾದ ಅಲ್-ಶಾತಿ ಶಿಬಿರದ ಬಳಿ ಅವರು ಚಲಾಯಿಸುತ್ತಿದ್ದ ಕಾರಿಗೆ ಬಾಂಬ್ ದಾಳಿ ನಡೆಸಿ, ಹನಿಯೆಹ್ ಅವರ ಮೂವರು ಪುತ್ರರಾದ ಹಝೆಮ್, ಅಮೀರ್ ಮತ್ತು ಮೊಹಮ್ಮದ್ ಅನ್ನು ಹತ್ಯೆ ಮಾಡಲಾಗಿತ್ತು. ಹಮಾಸ್ ನಡೆಸುತ್ತಿರುವ ಮಾಧ್ಯಮಗಳ ಪ್ರಕಾರ, ದಾಳಿಯಲ್ಲಿ ಅವರ ನಾಲ್ವರು ಮೊಮ್ಮಕ್ಕಳೂ ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು, ಹಮಾಸ್ ಮುಖ್ಯಸ್ಥ ಸಹೋದರಿ ಸೇರಿದಂತೆ ತನ್ನ ಕುಟುಂಬದ ಹತ್ತು ಸದಸ್ಯರನ್ನು ಕಳೆದುಕೊಂಡಿದ್ದರು. ಗಾಝಾ ನಗರದಲ್ಲಿ ನಡೆದ ಮತ್ತೊಂದು ಆಪಾದಿತ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಅವರು ಕೊಲ್ಲಟ್ಟಿದ್ದರು. ಇಸ್ರೇಲ್‌ನಲ್ಲಿ ವಾಸಿಸುವ ಹನಿಯೆಹ್ ಅವರ ಇನ್ನೊಬ್ಬ ಸಹೋದರಿಯನ್ನೂ ಏಪ್ರಿಲ್‌ನಲ್ಲಿ ಭಯೋತ್ಪಾದಕ ಗುಂಪಿನ ಸಂಪರ್ಕ ಮತ್ತು ಭಯೋತ್ಪಾದಕ ಕೃತ್ಯಗಳ ಆರೋಪ ಹೊರಿಸಿ ಬಂಧಿಸಲಾಗಿತ್ತು.

ಇದನ್ನೂ ಓದಿ; ವಯನಾಡ್ ಭೂಕುಸಿತ ದುರಂತ: 143 ಕ್ಕೆ ತಲುಪಿದ ಸಾವಿನ ಸಂಖ್ಯೆ, 186 ಜನರು ಪ್ರಾಣಾಪಾಯದಿಂದ ಪಾರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...

ಉಮರ್ ಖಾಲಿದ್ ಬಂಧನ ನಿರಂಕುಶ; ಕಾನೂನು ಆಧಾರವಿಲ್ಲ: ವಿಶ್ವಸಂಸ್ಥೆ ಕಾರ್ಯಪಡೆ

"ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಕಾರ್ಯಕರ್ತ ಮತ್ತು ಸಂಶೊಧನಾ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಬಂಧನವು ನಿರಂಕುಶವಾಗಿದೆ, ಅದಕ್ಕೆ ಯಾವುದೇ ಕಾನೂನು ಆಧಾರವಿಲ್ಲ" ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿದೆ. ಸಾಮಾಜಿಕ ಕಾರ್ಯಕರ್ತರ...

ಮಹಾರಾಷ್ಟ್ರ | ಲೈಂಗಿಕ ದೌರ್ಜನ್ಯ ಆರೋಪ : ಸ್ವಯಂ ಘೋಷಿತ ದೇವಮಾನವನ ಬಂಧನ

ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿ, ಆ ವಿಡಿಯೋಗಳನ್ನು ಇಟ್ಟುಕೊಂಡು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಮತ್ತು ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖಾರಟ್‌ನನ್ನು ಮಹಾರಾಷ್ಟ್ರದ ನಾಸಿಕ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ....

‘ಕಾಂಗ್ರೆಸ್ ಜೊತೆ ಬಲವಂತದ ಮದುವೆ ಆಗಿತ್ತು’: ಖರ್ಗೆ ಅವರ ‘ಮೋದಿ ಜೊತೆ ಮದುವೆ’ ಟೀಕೆಗೆ ದೇವೇಗೌಡ ತಿರುಗೇಟು

ಸಂಸತ್ತಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ 'ಮದುವೆ' ಮತ್ತು 'ಪ್ರೀತಿ' ಹೇಳಿಕೆಗೆ ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸಂಸದ ಎಚ್‌ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರು ಕಾಂಗ್ರೆಸ್ ಅನ್ನು "ಪ್ರೀತಿಸಿದರು" ಆದರೆ ಮೋದಿ (ಬಿಜೆಪಿ)...

ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ - ನಟಿ ಕಂಗನಾ ರನೌತ್, ಅವರನ್ನು ಟಪೋರಿ ಎಂದು ಕರೆದಿದ್ದಾರೆ. ಅವರ ನಡವಳಿಕೆಯು ಮಹಿಳೆಯರಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಎಂದು...

ಎಸ್‌ಬಿಐಗೆ ವಂಚನೆ ಪ್ರಕರಣ : ಅನಿಲ್ ಅಂಬಾನಿ ವಿಚಾರಣೆ ನಡೆಸಿದ ಸಿಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ 2,929 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮಾ.19) ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರನ್ನು ಕೇಂದ್ರ...