Homeಮುಖಪುಟಬಿಹಾರದ ಜೆಹಾನಾಬಾದ್‌ನ ಬಾಬಾ ಸಿದ್ಧನಾಥ ದೇವಾಲಯದಲ್ಲಿ ಕಾಲ್ತುಳಿತ: ಕನಿಷ್ಠ ಏಳು ಮಂದಿ ಸಾವು, ಒಂಬತ್ತು ಮಂದಿಗೆ...

ಬಿಹಾರದ ಜೆಹಾನಾಬಾದ್‌ನ ಬಾಬಾ ಸಿದ್ಧನಾಥ ದೇವಾಲಯದಲ್ಲಿ ಕಾಲ್ತುಳಿತ: ಕನಿಷ್ಠ ಏಳು ಮಂದಿ ಸಾವು, ಒಂಬತ್ತು ಮಂದಿಗೆ ಗಾಯ

- Advertisement -
- Advertisement -

ಸೋಮವಾರ ಮುಂಜಾನೆ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್‌ನಲ್ಲಿರುವ ಬಾಬಾ ಸಿದ್ಧನಾಥ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಭಕ್ತರು ದೇವಸ್ಥಾನದಲ್ಲಿ ಜಮಾಯಿಸಿದ್ದರು.

“ಆಡಳಿತದ ವ್ಯವಸ್ಥೆಗಳ ಕೊರತೆಯಿಂದಾಗಿ ನೂಕುನುಗ್ಗಲು ಉಂಟಾಗಿದೆ ಎಂದು ದೇವಾಲಯದಲ್ಲಿ ಹಾಜರಿದ್ದವರು ಹೇಳಿದರು. ಕೆಲವು ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಸ್ವಯಂಸೇವಕರು ಕ್ರೌಡ್ ಮ್ಯಾನೇಜ್‌ಮೆಂಟ್‌ನಲ್ಲಿ ತೊಡಗಿರುವ ಭಕ್ತರ ಮೇಲೆ ‘ಲಾಠಿ’ಗಳನ್ನು ಬಳಸಿದರು, ಇದು ನೂಕುನುಗ್ಗಲಿಗೆ ಕಾರಣವಾಯಿತು” ಎಂದು ಮೃತರ ಸಂಬಂಧಿಕರು ಹೇಳಿದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೂವು ಮಾರುವವರೊಂದಿಗೆ ಮಾರಾಮಾರಿ ನಡೆದ ನಂತರ ಸ್ವಯಂಸೇವಕರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ದೇವಸ್ಥಾನದಲ್ಲಿ ಹಾಜರಿದ್ದ ಭಕ್ತರೊಬ್ಬರು ಹೇಳಿದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತು, ದೇವಾಲಯದ ಆಡಳಿತದಿಂದ ಯಾರೂ ಇರಲಿಲ್ಲ ಎಂದು ಅವರು ಹೇಳಿದರು. ಪೊಲೀಸ್ ಆಡಳಿತದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.

ಘಟನೆಯನ್ನು ದೃಢೀಕರಿಸಿದ ಜೆಹಾನಾಬಾದ್ ಡಿಎಂ ಅಲಂಕೃತಾ ಪಾಂಡೆ, “ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್‌ನಲ್ಲಿರುವ ಬಾಬಾ ಸಿದ್ಧನಾಥ ದೇವಾಲಯದಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ” ಎಂದು ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ದಿವಾಕರ್ ಕುಮಾರ್ ವಿಶ್ವಕರ್ಮ, “ಘಟನಾ ಸ್ಥಳಕ್ಕೆ ಡಿಎಂ ಮತ್ತು ಎಸ್‌ಪಿ ಭೇಟಿ ನೀಡಿದ್ದು, ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.. ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ. ನಾವು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ವಿಚಾರಣೆ ನಡೆಸುತ್ತಿದ್ದೇವೆ. ಮೃತಪಟ್ಟವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ, ಇದರ ನಂತರ ನಾವು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುತ್ತೇವೆ” ಎಂದರು.

ಇದನ್ನೂ ಓದಿ; ಕೊಚ್ಚಿಹೋದ ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್; ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ, ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತಾದ ಕಾಳಿಘಾಟ್ ನಿವಾಸದ ಹೊರಭಾಗದಲ್ಲಿ ಶುಕ್ರವಾರ ನಡುರಾತ್ರಿ ಭಾರಿ ಹೈಡ್ರಾಮಾವೊಂದು ಸಂಭವಿಸಿದೆ. 2...

́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20 ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ...

ಯೂಟರ್ನ್ ಹೊಡೆದ ಚುನಾವಣಾ ಆಯೋಗ : SIR ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವು

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಎಸ್‌ಐಆರ್ ವೇಳೆ ಡಿಲೀಟ್ ಪಟ್ಟಿಗೆ (ಎಎಸ್‌ಡಿಡಿ) ಬಿದ್ದ ಅರ್ಹ ಮತದಾರರು ತಮ್ಮ ಹಕ್ಕು ಮರಳಿ...

‘ಪ್ರಧಾನಿ ಮೋದಿಯನ್ನು ಗೊಂದಲಕ್ಕೀಡುಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ!’: ಅಮಿತ್ ಷಾಗೆ ರಾಹುಲ್ ಗಾಂಧಿ ಆಗ್ರಹ!

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ...

‘ಅಮೆರಿಕ ಅಧ್ಯಕ್ಷರ ಹತ್ಯೆ ಮಾಡುವಂತೆ ಧ್ವನಿ ಕೇಳಿಸುತ್ತಿತ್ತು’: ವೈಟ್ ಹೌಸ್ ಬಳಿ ಮಾರಕಾಸ್ತ್ರಗಳಿದ್ದ ಕಾರಿನೊಂದಿಗೆ ವೆನಿಜುವೆಲ್ಲಾ ಪ್ರಜೆ ಬಂಧನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ...

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...

ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ : ಕೇಂದ್ರದಿಂದ ಸ್ಪಷ್ಟನೆ ಕೋರಿದ ಕರ್ನಾಟಕ ಸರ್ಕಾರ

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು...

ಸಿಜೆಐ ಸೂರ್ಯ ಕಾಂತ್ ವಿರುದ್ಧದ ಪೋಸ್ಟ್ ಪ್ರಕರಣ: ಕೇರಳ ಕಾಂಗ್ರೆಸ್ ನಾಯಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್...

ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಪಡೆಯುವುದು ಫಲಾನುಭವಿಗಳ ಹಕ್ಕಲ್ಲ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ

'ಗೃಹಲಕ್ಷ್ಮಿ' ಒಂದು ಕಲ್ಯಾಣ (ಪರೋಪಕಾರಿ) ಯೋಜನೆಯಾಗಿದ್ದು, ಇದರ ಅನುಷ್ಠಾನವು ಹೆಚ್ಚಾಗಿ ಆಡಳಿತಾತ್ಮಕ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಈ ಯೋಜನೆಯ ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನ್ಯಾಯಾಂಗದ ಹಸ್ತಕ್ಷೇಪದ...