Homeಮುಖಪುಟಉತ್ತರ ಪ್ರದೇಶ | ‘ಶಾಲೆಗೆ ಕೀರ್ತಿ ತರಲು’, ‘ನಿರ್ದೇಶಕರ ಸಮಸ್ಯೆ ಪರಿಹಾರಕ್ಕೆ' ವಾಮಾಚಾರ ಮಾಡಿ 9...

ಉತ್ತರ ಪ್ರದೇಶ | ‘ಶಾಲೆಗೆ ಕೀರ್ತಿ ತರಲು’, ‘ನಿರ್ದೇಶಕರ ಸಮಸ್ಯೆ ಪರಿಹಾರಕ್ಕೆ’ ವಾಮಾಚಾರ ಮಾಡಿ 9 ವರ್ಷದ ಬಾಲಕನ ಹತ್ಯೆ

- Advertisement -
- Advertisement -

“ಶಾಲೆಗೆ ಕೀರ್ತಿ ತರಲು” ಮತ್ತು “ಶಾಲಾ ನಿರ್ದೇಶಕರ ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ” ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮತ್ತು ಅದರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ 9 ವರ್ಷದ ಮಗುವನ್ನು ಮಾಟಮಂತ್ರದ ಅಚರಣೆಯ ಭಾಗವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.ಉತ್ತರ ಪ್ರದೇಶ

ಸೆಪ್ಟೆಂಬರ್ 23 ರಂದು ಆಗ್ರಾದಿಂದ 35 ಕಿಮೀ ದೂರದಲ್ಲಿರುವ ಸದಾಬಾದ್ ಪ್ರದೇಶದ ಶಾಲಾ ನಿರ್ದೇಶಕರ ಕಾರಿನಲ್ಲಿ ಹತ್ರಾಸ್ ಪೊಲೀಸರು ಬಾಲಕನ ಶವವನ್ನು ಪತ್ತೆ ಮಾಡಿದಾಗ ಬಾಲಕನ ಸಾವು ಬೆಳಕಿಗೆ ಬಂದಿದೆ ಎಂದು ವರದಿಯು ಹೇಳಿದೆ. ಬಾಲಕನ ಸಾವಿಗೆ ಸಂಬಂಧಿಸಿದಂತೆ ಗುರುವಾರ ರಸ್‌ಗವಾನ್‌ನ ಶಾಲೆಯಲ್ಲಿ ನಿರ್ದೇಶಕ, ನಿರ್ದೇಶಕನ ತಂದೆ ಮತ್ತು ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸರು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನಾವು ಶಾಲಾ ನಿರ್ದೇಶಕ ದಿನೇಶ್ ಬಾಘೆಲ್, ಅವರ ತಂದೆ ಜಸೋಧನ್ ಸಿಂಗ್ ಮತ್ತು ಮೂವರು ಶಾಲಾ ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ, ವೀರಪಾಲ್ ಸಿಂಗ್ ಮತ್ತು ಲಕ್ಷ್ಮಣ್ ಸಿಂಗ್ ಅವರನ್ನು ಬಂಧಿಸಿದ್ದೇವೆ” ಎಂದು ಹತ್ರಾಸ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಶೋಕ್ ಕುಮಾರ್ ತಿಳಿಸಿದ್ದಾರೆ. ಶಾಲೆಯ ಆವರಣದಲ್ಲಿರುವ ಕೊಠಡಿಯೊಂದರಿಂದ ಹಗ್ಗ, ಧಾರ್ಮಿಕ ಚಿತ್ರಗಳು ಮತ್ತು ಕೀ ಕೂಡ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂಓದಿ:  ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಕುಡಿದ ಅಮಲಿನಲ್ಲೆ ಆಸ್ಪತ್ರೆಗೆ ಧಾವಿಸಿದ್ದ ಆರೋಪಿ ಕುಟುಂಬದ ಸದಸ್ಯರು

ಸೆಪ್ಟೆಂಬರ್ 22 ರಂದು ಬೆಳಿಗ್ಗೆ 12 ಗಂಟೆಗೆ ಶಾಲೆಯ ವಿದ್ಯಾರ್ಥಿಗಳು ಮಲಗಿದ್ದಾಗ ಶಾಲೆಯ ಶಿಕ್ಷಕಿ ಸೋಲಂಕಿ ಮಗುವನ್ನು ಹಾಸಿಗೆಯಿಂದ ಎತ್ತಿಕೊಂಡು ಹೊರಗೆ ಕರೆತಂದರು ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. “ಅವರು ಮಗುವನ್ನು ಗೊತ್ತುಪಡಿಸಿದ ಕೋಣೆಯಲ್ಲಿ ಬಲಿಕೊಡಲು ಯೋಜಿಸಿದ್ದರು. ಆದರೆ ಈ ನಡುವೆ ಬಾಲಕ ಎಚ್ಚರಗೊಂಡು ಅಳಲು ಪ್ರಾರಂಭಿಸಿದ್ದರು. ಹಾಗಾಗಿ ಶಿಕ್ಷಕ ಸೋಲಂಕಿ ಮಗುವಿನ ಬಾಯಿಯನ್ನು ಮುಚ್ಚಿ ಹಾಸ್ಟೆಲ್‌ನ ನೆಲಮಹಡಿಗೆ ಕರೆತಂದು ಕತ್ತು ಹಿಸುಕಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಅವರನ್ನು ಮೇಲ್ವಿಚಾರಣೆ ಮಾಡಲು ವೀರಪಾಲ್ ಮತ್ತು ಲಕ್ಷ್ಮಣ್ ಸಿಂಗ್ ನಿಂತಿದ್ದರು ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. ಶಾಲಾ ನಿರ್ದೇಶಕರ ತಂದೆ ಜಸೋಧನ್ ಸಿಂಗ್ ಈಗಾಗಲೇ ತನ್ನ ಮಗ ದಿನೇಶ್ ಬಘೇಲ್‌ಗೆ ವಿಧಿ ವಿಧಾನದ ಬಗ್ಗೆ ತಿಳಿಸಿದ್ದು, ಅವರು ಶವವನ್ನು ಬಿಸಾಕಲು ಸಿದ್ಧರಾಗಿದ್ದರು. ಈ ವೇಳೆ ಬಾಘೆಲ್ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬಾಲಕನ ತಂದೆ ಸೆಪ್ಟೆಂಬರ್ 23 ರಂದು ಸಹ್ಪೌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನ್ನ ಮಗನ ಸಾವಿಗೆ ಶಾಲಾ ನಿರ್ದೇಶಕರನ್ನು ದೂಷಿಸಿದ್ದಾರೆ. “ಸೆಪ್ಟೆಂಬರ್ 23 ರಂದು ಬೆಳಿಗ್ಗೆ ನಮಗೆ ಕರೆ ಮಾಡಿದ ಬಾಘೆಲ್ ನನ್ನ ಮಗನಿಗೆ ಹುಷಾರಿಲ್ಲ ಮತ್ತು ತಕ್ಷಣದ ವೈದ್ಯಕೀಯ ಸಹಾಯಕ್ಕಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದರು” ಎಂದು ಅವರು ಹೇಳಿದ್ದಾರೆ.

ನಾವು ಹಾಸ್ಟೆಲ್‌ಗೆ ಧಾವಿಸಿದೆವು ಆದರೆ ಅಲ್ಲಿ ಬಾಘೆಲ್ ಮತ್ತು ನಮ್ಮ ಮಗನನ್ನು ಕಂಡುಕೊಂಡೆವು ಎಂದು ಹೇಳಿದ್ದಾರೆ ನೋಡಿದ್ದೇವೆ. “ಹಾಸ್ಟೆಲ್ ತಲುಪಿ ನಾವು ಬಾಘೇಲ್ ಅವರನ್ನು ಸಂಪರ್ಕಿಸಿ ಮಗನ ಬಗ್ಗೆ ಕೇಳಿದಾಗ, ಅವರು ನನ್ನ ಮಗನ ಸ್ಥಿತಿ ಹದಗೆಟ್ಟಿದ್ದರಿಂದ ಆಗ್ರಾಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು. ನಮಗೆ ಅನುಮಾನ ಬಂದು ಆ ಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿದೆವು. ಬಾಘೇಲ್ ಅವರನ್ನು ದಾರಿಯಲ್ಲೆ ಕಾಯಲು ಹೇಳಿ, ನಂತರ ನಾವೂ ಅವರನ್ನು ಹಿಂಬಾಲಿಸಿದೆವು. ಈ ವೇಳೆ ಬಾಘೆಲ್‌ನನ್ನು ಪತ್ತೆಹಚ್ಚಿದಾಗ ನನ್ನ ಮಗ ಅವರ ಕಾರಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ” ಎಂದು ತಂದೆ ಹೇಳಿದ್ದಾರೆ.

ಇದನ್ನೂಓದಿ: ತೆಲಂಗಾಣ: ಶವ ಸಂಸ್ಕಾರ ಮಾಡದಂತೆ ದಲಿತ ಕುಟುಂಬವನ್ನು ತಡೆದ ರಿಯಲ್ ಎಸ್ಟೇಟ್‌ ಏಜೆಂಟ್‌ಗಳು  

ಪೊಲೀಸರು ಅದೇ ದಿನ ದಿನೇಶ್ ಬಘೇಲ್‌ನನ್ನು ಬಂಧಿಸಿದ್ದರೂ, ಬಾಲಕನ ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. “ನಾವು ಬಾಘೇಲ್‌ನನ್ನು ಬಂಧಿಸಿದ ನಂತರ ನಮ್ಮ ತನಿಖೆಯನ್ನು ಪ್ರಾರಂಭಿಸಿದೆವು. ರಸ್ಗವಾ ಗ್ರಾಮದಲ್ಲಿ ಅವನ ಮತ್ತು ಅವನ ಕುಟುಂಬಕ್ಕೆ ಹತ್ತಿರವಿರುವ ಹಲವಾರು ಜನರೊಂದಿಗೆ ಮಾತನಾಡಿದ್ದೇವೆ. ಅವರ ತಂದೆ ಜಸೋಧನ್ ಸಿಂಗ್ ವಾಮಾಚಾರದಲ್ಲಿ ನಂಬಿಕೆ ಹೊಂದಿದ್ದಾಗಿ, ಎರಡು ತಿಂಗಳ ಹಿಂದೆ ಅಪ್ರಾಪ್ತ ಬಾಲಕನನ್ನು ಬಲಿಕೊಡುವಂತೆ ಮಗನಿಗೆ ಸಲಹೆ ನೀಡಿದ್ದರು ಎಂದು ತಿಳಿದು ಬಂದಿತ್ತು” ಎಂದು ಪೊಲೀಸರು ಹೇಳಿದ್ದಾರೆ.

“ವಾಮಾಚಾರ ಯೋಜನೆಯನ್ನು ಕಾರ್ಯಗತಗೊಳಿಸಲು ಜಸೋಧನ್‌ಗೆ ಸಾಧ್ಯವಾಗಿರಲಿಲ್ಲ. ನಾವು ಅವರ ತಂದೆಯನ್ನು ವಿಚಾರಣೆಗೆ ಒಳಪಡಿಸಿದಾ, ಘೋರ ಅಪರಾಧದ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದರು” ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

ಇದರ ನಂತರ ಪೊಲೀಸರು ಮತ್ತೆ ಬಾಘೇಲ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ಅವರು ತಮ್ಮ ತಂದೆಯ ಸಲಹೆಯ ಮೇರೆಗೆ ರಾಮ್ ಪ್ರಕಾಶ್ ಸೋಲಂಕಿ ಅವರನ್ನು ಸೆಪ್ಟೆಂಬರ್ 22 ರ ರಾತ್ರಿ ತನ್ನ ಹಾಸ್ಟೆಲ್ ಕೋಣೆಯಿಂದ ಅಪ್ರಾಪ್ತರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ.ಉತ್ತರ ಪ್ರದೇಶ

“ಬಾಘೇಲ್ ಆರಂಭದಲ್ಲಿ ಮಗುವಿಗೆ ಅನಾರೋಗ್ಯವಿದೆ ಎಂದು ನಮಗೆ ತಿಳಿಸಿದ್ದರು. ಆದ್ದರಿಂದ ಅವನು ಮೊದಲು ಅವನನ್ನು ಸದಾಬಾದ್‌ನ ಆಸ್ಪತ್ರೆಗೆ ಮತ್ತು ನಂತರ ಆಗ್ರಾಕ್ಕೆ ಕರೆದೊಯ್ದನು. ಅಲ್ಲಿ ವೈದ್ಯರು ಬಾಲಕ ಸತ್ತಿದ್ದಾರೆ ಎಂದು ಘೋಷಿಸಿದರು. ಆದ್ದರಿಂದ ಅವನು ಬಾಲಕನ ಶವವನ್ನು ಹತ್ರಾಸ್‌ನಲ್ಲಿರುವ ರಾಸ್‌ಗಾವಾನ್‌ಗೆ ಕರೆತರುತ್ತಿದ್ದೆನು ಎಂದು ಅವರು ಹೇಳಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಹಾಗೂ ಕತ್ತಿನ ಮೂಳೆಗಳು ಮುರಿದಿರುವುದು ದೃಢಪಟ್ಟಿದೆ.

ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...