Homeಫ್ಯಾಕ್ಟ್‌ಚೆಕ್FACT CHECK : ಶಿವಲಿಂಗ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು

FACT CHECK : ಶಿವಲಿಂಗ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು

- Advertisement -
- Advertisement -

ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ವಿವಿದೆಡೆ ಕೋಮು ದ್ವೇಷದ ಘಟನೆಗಳು ಸುದ್ದಿಯಾಗುತ್ತಿರುವ ನಡುವೆ, ಸೆಪ್ಟೆಂಬರ್ 27, 2024ರಂದು ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿನ ದೇವಾಲಯವೊಂದರ ಶಿವಲಿಂಗ ಭಗ್ನಗೊಂಡ ರೀತಿಯಲ್ಲಿ ಪತ್ತೆಯಾಗಿತ್ತು.

ಈ ಕುರಿತು ಸಿಟಿ ನ್ಯೂಸ್ ಹಿಮಾಚಲ್ ಎಂಬ ಸ್ಥಳೀಯ ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ವಿಡಿಯೋ ಕ್ಲಿಪ್‌ವೊಂದು ವ್ಯಾಪಕವಾಗಿ ವೈರಲ್ ಆಗಿತ್ತು. ವಿಡಿಯೋದಲ್ಲಿ ದೇವಸ್ಥಾಯಕ್ಕೆ ಹಾನಿ ಮಾಡಿದ ದೃಶ್ಯವಿತ್ತು. ವಿಡಿಯೋ ಕುರಿತು ವಿವರಿಸಿದ್ದ ಸುದ್ದಿ ಸಂಸ್ಥೆಯ ವರದಿಗಾರ “ಯಾರೋ ದುಷ್ಕರ್ಮಿಗಳ ಕೃತ್ಯ” ಎಂದಿದ್ದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಪೊಲೀಸರು “ಘಟನೆಯ ಕುರಿತು ತನಿಖೆ ಕೈಗೊಂಡಿದ್ದೇವೆ, ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ” ಎಂದಿದ್ದರು.

ರಾಜ್ಯದಲ್ಲಿ ಜನಸಂಖ್ಯೆಯ ಬದಲಾವಣೆಯೇ ದೇವಸ್ಥಾನ ಅಪವಿತ್ರಗೊಳ್ಳಲು ಕಾರಣ ಎಂದು ವಿಡಿಯೋ ಹಂಚಿಕೊಳ್ಳಲಾಗಿತ್ತು.

ಸೆಪ್ಟೆಂಬರ್ 27, 2024ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಬಲಪಂಥೀಯ ಬಳಕೆದಾರ ರೌಶನ್ ಸಿನ್ಹಾ (@MrSinha) ಹಿಮಾಚಲ ಪ್ರದೇಶದಲ್ಲಿ ದುಷ್ಕರ್ಮಿಗಳನ್ನು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾರೆ. ದೇವಭೂಮಿ ಹಿಮಾಚಲದಲ್ಲಿ ಹಿಂದೆ ಇದು ಸಾಮಾನ್ಯ ವಿಷಯವಾಗಿರಲಿಲ್ಲ. ಆದರೆ, ಅದು ಹೊಸ ಸಾಮಾನ್ಯ ವಿಷಯವಾಗಿದೆ. ಜನಸಂಖ್ಯಾ ಬದಲಾವಣೆಯು ನಿಜ ಮತ್ತು ಭಯಾನಕವಾಗಿದೆ” ಎಂದು ಬರೆದುಕೊಂಡಿದ್ದರು.

ದೀಪಕ್ ಶರ್ಮಾ (SonofBharat7) ಎಂಬ ಮತ್ತೋರ್ವ ಬಲಂಥೀಯ ಎಕ್ಸ್ ಬಳಕೆದಾರ ಸೆಪ್ಟೆಂಬರ್ 27ರಂದು ವಿಡಿಯೋ ಹಂಚಿಕೊಂಡು ” ಹಿಮಾಚಲ ಪ್ರದೇಶದಲ್ಲಿ 20 ವರ್ಷ ಹಳೆಯ ಶಿವಲಿಂಗ ಧ್ವಂಸಗೊಂಡಿದೆ. ದೇವಭೂಮಿಯು ಇಂತಹ ರಾಕ್ಷಸರಿಂದ ಮುಕ್ತವಾಗಿತ್ತು. ಆದರೆ, ಯಾವಾಗಿನಿಂದ ಮೃಗಗಳು ಇಲ್ಲಿ ತಮ್ಮ ದುಷ್ಟ ಕಣ್ಣುಗಳನ್ನು ನೆಟ್ಟಿತೋ, ಅಂದಿನಿಂದ ಇಂತಹ ಘಟನೆಗಳು ಹೆಚ್ಚುತ್ತಿವೆ. ಹಿಮಾಚಲದ ಜನರೇ.. ಪ್ರತಿ ರಾಕ್ಷಸರಿಗೂ ತಕ್ಕ ಪಾಠ ಕಲಿಸುವವರೆಗೆ ನಿಲ್ಲಬೇಡಿ, ಬೇಕಾದರೆ ಇಡೀ ದೇಶವೇ ನಿಮ್ಮೊಂದಿಗಿದೆ” ಎಂದು ಬರೆದುಕೊಂಡಿದ್ದರು.

ಬಿಜೆಪಿ ನಾಯಕ ಮತ್ತು ಅಸ್ಸಾಂ ನಗರ ವ್ಯವಹಾರಗಳ ಸಚಿವ ಅಶೋಕ್ ಸಿಂಘಾಲ್ (@TheAshokSinghal)ಅವರು ಸೆಪ್ಟೆಂಬರ್ 28ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “ಇಂದು ಹಿಮಾಚಲ ಪ್ರದೇಶದಲ್ಲಿ ದುಷ್ಕರ್ಮಿಗಳು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾರೆ. ಮಾತೆ ಕಾಮಕ್ಯಳ ಭೂಮಿಯಲ್ಲಿ ಇದು ನಾಳೆಯೂ ನಡೆಯಬಹುದು. ಅದಕ್ಕಾಗಿಯೇ ನಾವು ನಮ್ಮ ಜಾತಿ, ಮತ, ಮಗಳನ್ನು ರಕ್ಷಿಸಿಕೊಳ್ಳಬೇಕು. ನಮ್ಮ ಗುರುತು, ಭೂಮಿ ಮತ್ತು ಪರಂಪರೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ನಮ್ಮ ಸಂಕಲ್ಪದಲ್ಲಿ ದೃಢವಾಗಿ ನಿಲ್ಲಬೇಕು. ಜನಸಂಖ್ಯಾಶಾಸ್ತ್ರವು ವಿಧಿಯಾಗಿದೆ” ಎಂದು ಬರೆದುಕೊಂಡಿದ್ದರು.

ಎಲ್ಲಾ ಪೋಸ್ಟ್‌ಗಳಲ್ಲಿ ಜನಸಂಖ್ಯೆ ಬದಲಾವಣೆ ಎಂದು ಉಲ್ಲೇಖಿಸುವ ಮೂಲಕ, ಇಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ. ಅದುವೇ ಈ ಘಟನೆಗೆ ಕಾರಣ ಎಂದು ಪರೋಕ್ಷವಾಗಿ ಹೇಳಲಾಗಿದೆ.

ದೇವಾಲಯದ ಅಪವಿತ್ರತೆಯ ಸುದ್ದಿ ವೈರಲ್ ಆದ ನಂತರ, ಸೆಪ್ಟೆಂಬರ್ 27, 2024 ರಂದು ಹಲವಾರು ಹಿಂದುತ್ವವಾದಿ ಸಂಘಟನೆಗಳು ನಗ್ರೋಟಾದ ಶಾಸಕ ರಘುಬೀರ್ ಸಿಂಗ್ ಬಾಲಿ ನೇತೃತ್ವದಲ್ಲಿ ಗಾಂಧಿ ಮೈದಾನದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿತ್ತು. ನ್ಯೂಸ್ 24 ಹಿಮಾಚಲದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅದನ್ನು ನೇರ ಪ್ರಸಾರ ಮಾಡಲಾಗಿತ್ತು.

ಫ್ಯಾಕ್ಟ್‌ಚೆಕ್ : ಶಿವಲಿಂಗ ಧ್ವಂಸಗೊಳಿಸಿ, ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿ ಕೋಮು ಆಯಾಮ ಪಡೆಯುತ್ತಿದ್ದಂತೆ ಕಂಗ್ರಾ ಡಿಎಸ್‌ಪಿ ಅಂಕಿತ್ ಶರ್ಮಾ ಘಟನೆ ಕುರಿತು ಹೇಳಿಕೆ ಕೊಟ್ಟಿದ್ದರು.

ಸಿಸಿಟಿವಿ ಕ್ಯಾಮಾರಗಳ ಪರಿಶೀಲನೆ ಬಳಿಕ, ಶಿವಲಿಂಗವನ್ನು ಧ್ವಂಸಗೊಳಿಸಿ, ದೇವಸ್ಥಾನವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ 35 ವರ್ಷದ ನಿಶಾ ದೇವಿ ಎಂಬಾಕೆಯ ಮೇಲೆ ಬಿಎನ್‌ಎಸ್‌ ಸೆಕ್ಷನ್ 298ರ ಅಡಿ ನಗ್ರೋಟಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದರು.

ಮುಂಜಾನೆ 3:30 ರಿಂದ 4:00 ಗಂಟೆಯ ನಡುವೆ ಈ ಕೃತ್ಯ ನಡೆದಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಿಶಾ ದೇವಿಯನ್ನು ಯೋಲ್‌ನಲ್ಲಿ ಬಂಧಿಸಿದ್ದಾರೆ. ಮಹಿಳೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ. 2020ರಲ್ಲಿ, ಅವರು ಧರ್ಮಶಾಲಾದ ಫತೇಪುರದ ದೇವಸ್ಥಾನದಲ್ಲಿ ಶಿವಲಿಂಗವನ್ನು ಹಾನಿಗೊಳಿಸಿದ್ದರು. ದೇವಸ್ಥಾನಗಳಲ್ಲಿ ವಿಗ್ರಹಗಳಿಗೆ ಹಾನಿ ಮಾಡುತ್ತಲೇ ಇರುತ್ತಾರೆ. ಮಹಿಳೆ ಮಾನಸಿಕವಾಗಿ ವಿಭಿನ್ನ ಸಾಮರ್ಥ್ಯ ಹೊಂದಿರುವವಳು. ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ” ಎಂದು ಡಿಎಸ್‌ಪಿ ವಿವರಿಸಿದ್ದರು.

ಅನಂತ್ ಜ್ಞಾನ್ ಎಂಬ ಸ್ಥಳೀಯ ಹಿಂದಿ ಮಾಧ್ಯಮವು ಸೆಪ್ಟೆಂಬರ್ 27, 2024 ರಂದು ಸಿಸಿಟಿವಿ ದೃಶ್ಯವೊಂದನ್ನು ಅಪ್ಲೋಡ್ ಮಾಡಿತ್ತು. ಅದರಲ್ಲಿ ಶಾಲು ಹೊದ್ದು ವ್ಯಕ್ತಿಯೊಬ್ಬರು ಮಧ್ಯರಾತ್ರಿ 03:39 ರಿಂದ 03:44 ರವರೆಗೆ ದೇವಸ್ಥಾನದ ಒಳಗೆ ಮತ್ತು ಹೊರಗೆ ಹೋಗುತ್ತಿರುವುದನ್ನು ನೋಡಬಹುದು “ನಗ್ರೋಟಾದಲ್ಲಿ ಶಿವಲಿಂಗಕ್ಕೆ ಹಾನಿ ಮಾಡಿದ ವ್ಯಕ್ತಿ ಮಹಿಳೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯಲಾಗಿತ್ತು.

ಘಟನೆಯ ಕುರಿತ ಪಂಜಾಬ್ ಕೇಸರಿ ಹಿಮಾಚಲ ಸುದ್ದಿ ಸಂಸ್ಥೆಯ ವರದಿಯನ್ನೂ ನಾವು ಪರಿಶೀಲಿಸಿದ್ದೇವೆ. ಅದರಲ್ಲಿ “ಕಳೆದ ಗುರುವಾರ ರಾತ್ರಿ ಗಾಂಧಿ ಮೈದಾನದ ಬಳಿ ಶಿವಲಿಂಗಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯನ್ನು ಒಂದು ದಿನದ ನಂತರ ಯೋಲ್ ಬಳಿ ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ನಿಶಾದೇವಿ ಎಂದು ಗುರುತಿಸಲಾಗಿದ್ದು, ಅವರು ಯೋಲ್ ಕಡೆಗೆ ಹೋಗುತ್ತಿದ್ದರು. ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಪೊಲೀಸರು ತಿಳಿಸಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ಮಹಿಳೆ ಅದೇ ಬಟ್ಟೆಯನ್ನು ಧರಿಸಿ ಕೈಯಲ್ಲಿ ಅದೇ ಚೀಲವನ್ನು ಹಿಡಿದಿರುವುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರ ಅನುಮಾನ ದೃಢಪಟ್ಟಿದೆ” ಎಂದು ತಿಳಿಸಲಾಗಿತ್ತು.

ಒಟ್ಟಿನಲ್ಲಿ, ಶಿವಲಿಂಗ ಧ್ವಂಸ ಮತ್ತು ದೇವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿ ನಿಶಾ ದೇವಿ ಎಂಬಾಕೆಯಾಗಿದ್ದು, ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮ ಇಲ್ಲ.

ಇದನ್ನೂ ಓದಿ : FACT CHECK : ಬೆಂಗಳೂರು ಬಳಿ ಗುಹೆಯಲ್ಲಿ 188 ವರ್ಷದ ವ್ಯಕ್ತಿ ಪತ್ತೆ? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...