Homeಮುಖಪುಟಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆ ದಾಟಿದ ಆರೋಪ: ಮತ್ತೆ 14 ಜನ ತಮಿಳು ಮೀನುಗಾರರನ್ನು ಬಂಧಿಸಿದ...

ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆ ದಾಟಿದ ಆರೋಪ: ಮತ್ತೆ 14 ಜನ ತಮಿಳು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

- Advertisement -
- Advertisement -

ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿದ ಆರೋಪದ ಮೇಲೆ ಮತ್ತೆ ಹದಿನಾಲ್ಕು ತಮಿಳುನಾಡು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಎರಡು ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ. ಬುಧವಾರ ಬೆಳಗ್ಗೆ ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಮೀನುಗಾರರು ತಲೈಮನ್ನಾರ್ ಮತ್ತು ಧನುಷ್ಕೋಡಿ ನಡುವೆ ಲಂಗರು ಹಾಕುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಶ್ರೀಲಂಕಾ ನೌಕಾಪಡೆಯು ಸ್ಥಳದಲ್ಲಿ ಮೀನುಗಾರರನ್ನು ಸುತ್ತುವರೆದಿದೆ, ಎಲ್ಲಾ 14 ವ್ಯಕ್ತಿಗಳನ್ನು ಬಂಧಿಸಿದೆ. ವಶಪಡಿಸಿಕೊಂಡ ದೋಣಿಗಳು ರಾಮೇಶ್ವರಂ ನಿವಾಸಿಗಳಾದ ಮೈಕೆಲ್ ರಾಜ್ ಮತ್ತು ನಿಜೋ ಎಂಬುವರಿಗೆ ಸೇರಿದವು.

ಅವರ ಬಂಧನದ ನಂತರ, ಹೆಚ್ಚಿನ ತನಿಖೆಗಾಗಿ ಮೀನುಗಾರರನ್ನು ಮತ್ತು ದೋಣಿಗಳನ್ನು ತಲೈಮನ್ನಾರ್‌ನಲ್ಲಿರುವ ಶ್ರೀಲಂಕಾ ನೌಕಾಪಡೆಯ ಶಿಬಿರಕ್ಕೆ ಕೊಂಡೊಯ್ಯಲಾಯಿತು. ವಿಚಾರಣೆಯ ನಂತರ ಮೀನುಗಾರರನ್ನು ಮನ್ನಾರ್ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆಯ ನಡುವಿನ ಉದ್ವಿಗ್ನತೆಯ ಮತ್ತಷ್ಟು ಹೆಚ್ಚಿಸಿದೆ. ಸಮುದ್ರದಲ್ಲಿ ಲಂಕಾ ಕಡೆಯಿಂದ ಆಕ್ರಮಣಕಾರಿ ವರ್ತನೆಯ ಆರೋಪಗಳಿವೆ. ಇತ್ತೀಚೆಗೆ, ರಾಮೇಶ್ವರಂ ಮೀನುಗಾರರು ಶ್ರೀಲಂಕಾ ನೌಕಾಪಡೆಯ ಉಲ್ಬಣಗೊಳ್ಳುತ್ತಿರುವ ಕ್ರಮಗಳನ್ನು ಪ್ರತಿಭಟಿಸಿ ಒಂದು ತಿಂಗಳ ಕಾಲ ಮುಷ್ಕರವನ್ನು ಆಚರಿಸಿದ್ದರು. ಶ್ರೀಲಂಕಾದಿಂದ ಮೀನುಗಾರರ ಬಂಧನಗಳು, ದೋಣಿ ವಶಪಡಿಸಿಕೊಳ್ಳುವಿಕೆ ಮತ್ತು ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆಎಂದು ಅವರು ಹೇಳುತ್ತಾರೆ.

ಶ್ರೀಲಂಕಾ ಅಧಿಕಾರಿಗಳಿಂದ ಹೆಚ್ಚುತ್ತಿರುವ ಭಾರತೀಯ ಮೀನುಗಾರರ ಬಂಧನವನ್ನು ಪರಿಹರಿಸಲು ತುರ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ್ದರು.

ಇಂತಹ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಏಳು ವರ್ಷಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಅತಿ ಹೆಚ್ಚು ತಮಿಳುನಾಡು ಮೀನುಗಾರರ ಬಂಧನಕ್ಕೆ 2024 ಸಾಕ್ಷಿಯಾಗಿದೆ ಎಂದು ಹೇಳಿದರು.

ತಮಿಳುನಾಡು ಸರ್ಕಾರವು ನಿರಂತರವಾಗಿ ಈ ವಿಷಯವನ್ನು ಎತ್ತಿದ್ದು, ರಾಜ್ಯದ ಮೀನುಗಾರ ಸಮುದಾಯದ ರಕ್ಷಣೆಗಾಗಿ ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ; ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಕ್ರಿಶ್ಚಿಯನ್ ಮೈಕೆಲ್ ಜಾಮೀನು ಅರ್ಜಿ, ಸುಪ್ರೀಂ ಕೋರ್ಟ್‌ನಿಂದ ಸಿಬಿಐಗೆ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ...

‘ಪ್ರಜಾಪ್ರಭುತ್ವದಲ್ಲಿ ಇದು ಕಳವಳಕಾರಿ, ಸಿಜೆಪಿ ಪ್ರಶ್ನೆಗಳಿಗೆ ನನ್ನ ಬೆಂಬಲವಿದೆ’: CJP ನಾಯಕರ ಬೆನ್ನಿಗೆ ನಿಂತ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ!

ಕಾಕ್‌ರೋಚ್ ಜನತಾ ಪಾರ್ಟಿಯ ಯುವ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ಕಸ್ಟಡಿ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಪ್ರಜಾಪ್ರಭುತ್ವವಾದಿ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ...

ಯೇಸುವಿನ ದರ್ಶನದ ಹೆಸರಲ್ಲಿ 191 ಜನರ ಮಾರಣಹೋಮ : ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಸೇರಿ 29 ಮಂದಿ ತಪ್ಪಿತಸ್ಥರು ಎಂದ ನ್ಯಾಯಾಲಯ  

ಬರೋಬ್ಬರಿ 191 ಜನರ ಸಾವಿಗೆ ಕಾರಣನಾದ ಕೀನ್ಯಾದ ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಮತ್ತು ಆತನ ಸಹಚರರನ್ನು ಸೋಮವಾರ (ಅಕ್ಟೋಬರ್ 19) ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದ್ದು, ನವೆಂಬರ್ 6ರಂದು ಶಿಕ್ಷೆ ಪ್ರಮಾಣ...

ಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್ ಕೈಬಿಟ್ಟಿದೆ, ಕುಡಿಯಲು ನೀರೂ ಇಲ್ಲ ಎಂದ ಇಮಾಮ್

ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ)...

‘ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’: ಎಸ್ಐಆರ್ ವಿರೋಧಿಸಿ ಅ. 28ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆಗೆ ಪ್ರಕಾಶ್ ಅಂಬೇಡ್ಕರ್ ಕರೆ

ಮುಂಬೈ: ಮತದಾನದ ಹಕ್ಕು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ,...

ಹೋರಾಟಗಾರನ ಕೊಲೆ, ಅಮಿತ್ ಶಾ ಭೇಟಿ : ಪಂಜಾಬ್‌ನಲ್ಲಿ ಎಎಪಿಗೆ ಮುಳುವಾಗುತ್ತಾ ಡ್ರಗ್ ವಿರೋಧಿ ಜನಾಕ್ರೋಶ?

ಕಳೆದ ವಾರ ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕನೊಬ್ಬ 42 ವರ್ಷದ ಮಾದಕವಸ್ತು ವಿರೋಧಿ ಕಾರ್ಯಕರ್ತ (Anti-Drugs Activist's) ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಹತ್ಯೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ....

ಜಂತರ್ ಮಂತರ್ ಅತಿಕ್ರಮಣ ಆರೋಪ: ಸಿಜೆಪಿಯ ಅಶುತೋಷ್, ಸೌರವ್ ಬಂಧನ ಮುಂದುವರಿಕೆ, ಅಪರಾಧ ವಿಭಾಗಕ್ಕೆ ತನಿಖೆ ವರ್ಗಾವಣೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಹ-ಸಂಚಾಲಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು...

‘ವೋಟ್ ಚೋರಿ ಸರ್ಕಾರ’ದಿಂದ ಗ್ರಾಮೀಣ ಕಾರ್ಮಿಕರ ಕೂಲಿ ಕಳ್ಳತನವೂ ಪರಿಪೂರ್ಣ: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ಭಾರತದ ಬಡವರು ಮತ್ತು...