Homeಮುಖಪುಟಲಿಂಗ ಸಮಾನತೆಗೆ ಒತ್ತು : ಪೊಲೀಸ್ ಪಾಸಿಂಗ್-ಔಟ್ ಪ್ರತಿಜ್ಞೆ ಪರಿಷ್ಕರಿಸಿದ ಕೇರಳ ಸರ್ಕಾರ

ಲಿಂಗ ಸಮಾನತೆಗೆ ಒತ್ತು : ಪೊಲೀಸ್ ಪಾಸಿಂಗ್-ಔಟ್ ಪ್ರತಿಜ್ಞೆ ಪರಿಷ್ಕರಿಸಿದ ಕೇರಳ ಸರ್ಕಾರ

- Advertisement -
- Advertisement -

ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರವು ಪೊಲೀಸ್ ಪಡೆಗಳ ಪಾಸಿಂಗ್-ಔಟ್ ಪರೇಡ್‌ ಪ್ರತಿಜ್ಞೆಯನ್ನು ತಿದ್ದುಪಡಿ ಮಾಡಿದೆ.

ಪರಿಷ್ಕೃತ ಪ್ರತಿಜ್ಞೆಯಲ್ಲಿ ‘ಪೊಲೀಸ್‌ಮ್ಯಾನ್’ (Police Man) ಎಂಬ ಪದವನ್ನು ತೆಗೆದು ಹಾಕಿ ಲಿಂಗ-ತಟಸ್ಥ ಪದ ‘ಪೊಲೀಸ್ ಸಿಬ್ಬಂದಿ’ (Police Personnel) ಎಂದು ಬದಲಾಯಿಸಿದೆ ಎಂದು ವರದಿಯಾಗಿದೆ.

ಜನವರಿ 3, ಶುಕ್ರವಾರ ಹೆಚ್ಚುವರಿ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅವರು ಪ್ರತಿಜ್ಞೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದಾರೆ. ಪರಿಷ್ಕರಣೆ ಕಾರಣದಿಂದ ಪೊಲೀಸರು ಇನ್ನು ಮುಂದೆ ಪಾಸಿಂಗ್ ಔಟ್‌ ವೇಳೆ “ಪೊಲೀಸ್ ಸಿಬ್ಬಂದಿಯಾಗಿ’ ನಾನು ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಲಿದ್ದಾರೆ.

2011ರಲ್ಲಿ ಸುತ್ತೋಲೆ ಹೊರಡಿಸಿದ್ದ ರಾಜ್ಯ ಪೊಲೀಸ್ ಮುಖ್ಯಸ್ಥರು, ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಹುದ್ದೆಯ ಮುಂದೆ ‘ಮಹಿಳೆ’ ಎಂದು ಉಲ್ಲೇಖಿಸುವುದನ್ನು ನಿಷೇಧಿಸಿದ್ದರು. ಉದಾ : ವುಮೆನ್ ಪೊಲೀಸ್ ಕಾನ್‌ಸ್ಟೇಬಲ್, ವುಮೆನ್‌ ಹೆಡ್‌ ಕಾನ್‌ಸ್ಟೇಬಲ್, ವುಮೆನ್‌ ಸಬ್‌-ಇನ್‌ಸ್ಪೆಕ್ಟರ್, ವುಮೆನ್ ಸರ್ಕಲ್ ಇನ್‌ಸ್ಪೆಕ್ಟರ್‌ ಮತ್ತು ವುಮೆನ್‌ ಸೂಪರಿಡೆಂಟ್‌ ಆಫ್ ಪೊಲೀಸ್.

ಕೇರಳ ಪೊಲೀಸ್ ಕಾಯ್ದೆ- 2011ರ ಪರಿಚ್ಛೇದ 87ರ ಪ್ರಕಾರ, ಪೊಲೀಸ್ ಪಡೆಗೆ ಸೇರುವ ಪ್ರತಿಯೊಬ್ಬ ವ್ಯಕ್ತಿಯೂ ತರಬೇತಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ ನಂತರ, ನೇಮಕಾತಿ ಪ್ರಾಧಿಕಾರ ಅಥವಾ ನಾಮ ನಿರ್ದೇಶನಗೊಂಡ ಅಧಿಕಾರಿಯ ಮುಂದೆ (ನಿಗದಿತ ಸ್ವರೂಪದಲ್ಲಿ) ಪ್ರಮಾಣ ವಚನ ಸ್ವೀಕರಿಸಬೇಕು.

ಲಿಂಗ-ನಿರ್ದಿಷ್ಟ ಅರ್ಹತೆ ಇಲ್ಲದೆ ಬೆಟಾಲಿಯನ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಉಲ್ಲೇಖಿಸಲು ‘ಹವಾಲ್ದಾರ್’ ಪದವನ್ನು ಬಳಸಲು ಪೊಲೀಸ್ ಪಡೆ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ : ವಚಾತಿ ನಾಯಕ ಷಣ್ಮುಗಂ ತಮಿಳುನಾಡು ಸಿಪಿಎಂ (ಎಂ) ಮೊದಲ ದಲಿತ ಕಾರ್ಯದರ್ಶಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...