Homeಕರ್ನಾಟಕಬೆಂಗಳೂರು - 'ನಮ್ಮ ಮೆಟ್ರೊ' ಪ್ರಯಾಣ ದರ ಏರಿಕೆಗೆ ಗ್ರೀನ್ ಸಿಗ್ನಲ್

ಬೆಂಗಳೂರು – ‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆಗೆ ಗ್ರೀನ್ ಸಿಗ್ನಲ್

- Advertisement -
- Advertisement -

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಂಡಳಿಯು ದರ ಏರಿಕೆಗೆ ಶಿಫಾರಸನ್ನು ಅನುಮೋದಿಸಿದ್ದು, ಹಾಗಾಗಿ ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೊ ಪ್ರಯಾಣ ಕೂಡಾ ದುಬಾರಿಯಾಗಲಿದೆ. ಯಾವ ಮಟ್ಟದಲ್ಲಿ ದರ ಹೆಚ್ಚಳ ಆಗಲಿದೆ ಮತ್ತು ಯಾವತ್ತಿನಿಂದ ಇದು ಜಾರಿಯಾಗಲಿದೆ ಎಂಬ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ವರದಿಯಾಗಿದೆ.

2017 ರಿಂದ ಬಿಎಂಆರ್‌ಸಿಎಲ್ ಮಾಡುತ್ತಿರುವ ಮೊದಲ ದರ ಪರಿಷ್ಕರಣೆ ಇದಾಗಿದೆ. ಎರಡು ವಾರಗಳ ಹಿಂದೆಯಷ್ಟೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಟಿಕೆಟ್ ಮತ್ತು ಪಾಸ್ ಬೆಲೆಗಳನ್ನು ಶೇಕಡಾ 15 ರಷ್ಟು ಹೆಚ್ಚಿಸಿತ್ತು. ಪ್ರಸ್ತುತ ಮೆಟ್ರೋ ದರಗಳು ರೂ. 10 ರಿಂದ ರೂ. 60 ರವರೆಗೆ ಇದ್ದು, ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ.

“ಸ್ಮಾರ್ಟ್ ಕಾರ್ಡ್‌ಗಳು ಮತ್ತು ಇತರ ಟಿಕೆಟ್ ವ್ಯವಸ್ಥೆಗಳಿಗೆ ರಿಯಾಯಿತಿಗಳ ವಿವರಗಳೊಂದಿಗೆ ಯಾವ ಮಟ್ಟದಲ್ಲಿ ಹೆಚ್ಚಳವಾಗಲಿದೆ ಎಂಬುವುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು” ಎಂದು ಬಿಎಂಆರ್‌ಸಿಎಲ್ ವಕ್ತಾರರು ತಿಳಿಸಿದ್ದಾರೆ. ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಬಿಎಂಆರ್‌ಸಿಎಲ್ ಪ್ರಸ್ತುತ 77 ಕಿ.ಮೀ ಮೆಟ್ರೋ ರೈಲಿನ ಜಾಲವನ್ನು ನಿರ್ವಹಿಸುತ್ತಿದ್ದು, ಪರ್ಪಲ್ ಲೈನ್ 43.5 ಕಿ.ಮೀ ಮತ್ತು ಗ್ರೀನ್ ಲೈನ್ 33.5 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಬೈಯಪ್ಪನಹಳ್ಳಿ-ಎಂಜಿ ರಸ್ತೆ ಮಾರ್ಗದಲ್ಲಿ 2011 ರಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ, ಬಿಎಂಆರ್‌ಸಿಎಲ್ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ವರದಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,280 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.

ಆದಾಗ್ಯೂ, 2022-23 ರಲ್ಲಿ 476 ಕೋಟಿ ರೂ. ನಷ್ಟವಾಗಿದ್ದು, 2023-24 ರಲ್ಲಿ ಇದು 341 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ನಿಗಮ ವರದಿ ಮಾಡಿದೆ. ರಜಾದಿನಗಳಲ್ಲದ ವಾರದ ದಿನಗಳಲ್ಲಿ ದೈನಂದಿನ ಮೊಟ್ರೋ ಪ್ರಯಾಣಿಕರ ಸಂಖ್ಯೆ 8.5 ಲಕ್ಷ ತಲುಪಿದ್ದು, ನಷ್ಟ ಇಳಿಕೆಗೆ ಕಾರಣ ಎಂದು ವರದಿ ಉಲ್ಲೇಖಿಸಿವೆ.

ಸಾರ್ವಜನಿಕ ಸಮಾಲೋಚನೆಯ ನಂತರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾಗಿದೆ. ಸಮಿತಿಯು ದರಗಳಲ್ಲಿ 15-20 ಪ್ರತಿಶತದಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ.

ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ “45% ದರ ಏರಿಕೆ ಮಾಡುವ” ಕ್ರಮವನ್ನು ಟೀಕಿಸಿದ್ದು, ಈ ನಿರ್ಧಾರದಿಂದ ಅವರು “ನಿರಾಶೆ”ಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ವಾರ, ಮೋಹನ್ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ಮೆಟ್ರೋ ದರ ಪರಿಷ್ಕರಣೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ದರ ಪರಿಷ್ಕರಣೆಯು ಜನರನ್ನು ಸಾರ್ವಜನಿಕ ಸಾರಿಗೆಯಿಂದ ಖಾಸಗಿ ಸಾರಿಗೆಗೆ ಹೊರಳುವಂತೆ ಮಾಡುತ್ತದೆ, ಇದು ಕೊನೆಗೆ ನಗರದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

“ಬಿಎಂಆರ್‌ಸಿಎಲ್ ತನ್ನ ಸೇವೆಗಳಲ್ಲಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಮೆಟ್ರೋದಲ್ಲಿ ಜನದಟ್ಟಣೆಯಿಂದಾಗಿ ಬಾಗಿಲುಗಳ ಅಸಮರ್ಪಕ ಕಾರ್ಯಗಳು ಮತ್ತು ಪ್ರಯಾಣಿಕರಲ್ಲಿ ವಿವಾದಗಳು ಉಂಟಾಗಿದ್ದು, ಇದು ಸ್ವೀಕಾರಾರ್ಹವಲ್ಲ. ಬಿಎಂಆರ್‌ಸಿಎಲ್ ಮೆಟ್ರೋ ಬೋಗಿಗಳನ್ನು ಸೇರಿಸುವುದು, ವಿಳಂಬವಾದ ಮಾರ್ಗಗಳನ್ನು ತ್ವರಿತಗೊಳಿಸುವುದು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಆದ್ಯತೆ ನೀಡಬೇಕು” ಎಂದು ಸಂಸದ ಮೋಹನ್ ಹೇಳಿದ್ದಾರೆ.

“ಮಟ್ರೋ ಭದ್ರತೆಯನ್ನು ಹೆಚ್ಚಿಸಿ, ಪ್ರವೇಶ ಮತ್ತು ನಿರ್ಗಮನವನ್ನು ಸುಗಮಗೊಳಿಸಬೇಕು. ಪಾರ್ಕಿಂಗ್, ಕ್ಯೂ ವ್ಯವಸ್ಥೆಗಳು ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಬೇಕು. ಈ ಸಮಸ್ಯೆಗಳನ್ನು ಸರಿಪಡಿಸದೆ ಪ್ರಯಾಣ ದರಗಳನ್ನು ಹೆಚ್ಚಿಸಿದರೆ ಜನರು ಖಾಸಗಿ ವಾಹನಗಳತ್ತ ಹೊರಳುತ್ತಾರೆ. ನಗರದ ದಟ್ಟಣೆ ಇನ್ನಷ್ಟು ಹದಗೆಡುತ್ತದೆ. ಬಿಎಂಆರ್‌ಸಿಎಲ್ ತನ್ನ ಆದ್ಯತೆಗಳನ್ನು ಪುನರ್ವಿಮರ್ಶಿಸಬೇಕು” ಎಂದು ಅವರು ಶುಕ್ರವಾರ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂಓದಿ:  ‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು

‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ‘ಪ್ರಜ್ಞಾಹೀನ’, ಕೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ವರದಿ

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ಕೋಮ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಜ್ಞಾಹೀನರಾಗಿದ್ದಾರೆ ಎಂದು ನಂಬಲಾಗಿದೆ ಎಂದು ಗುಪ್ತಚರ ಆಧಾರಿತ ರಾಜತಾಂತ್ರಿಕ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ದಿ ಟೈಮ್ಸ್ ವರದಿ...

ಪ. ಬಂಗಾಳ : ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ವೇಳೆ (ಎಸ್‌ಐಆರ್‌) ತೆಗೆದು ಹಾಕಿದ್ದ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸುವಂತೆ ಮೇಲ್ಮನವಿ ನ್ಯಾಯಮಂಡಳಿ ಸೋಮವಾರ (ಏ.6) ಆದೇಶಿಸಿರುವುದಾಗಿ ವರದಿಯಾಗಿದೆ. ರತುವಾ...

ಹೈದರಾಬಾದ್| ಐಪಿಎಲ್ ಪಂದ್ಯದಿಂದ ಭಾರೀ ಸಂಚಾರ ದಟ್ಟಣೆ; ಆಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆ ಸಾವು

ಏಪ್ರಿಲ್ 5 ರ ಭಾನುವಾರ ಉಪ್ಪಳದಲ್ಲಿ ಉಂಟಾದ ಭಾರೀ ಸಂಚಾರ ದಟ್ಟಣೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ನಲ್ಲಿ ಸಿಲುಕಿಕೊಂಡಿದ್ದ ಬಿಷ್ಣಾ ಎಂಬ 30 ವರ್ಷದ ಮಹಿಳೆ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಉಪ್ಪಳದ...

ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಎಸ್‌ಐಆರ್ ಪೂರಕ ಪಟ್ಟಿಯಿಂದ 95% ಮುಸ್ಲಿಂ ಮತದಾರರ ಹೆಸರು ತೆಗೆದುಹಾಕಲಾಗಿದೆ: ವರದಿ 

ಸುವೇಂದು ಅಧಿಕಾರಿ ಪ್ರತಿನಿಧಿಸುವ ಪೂರ್ವ ಮಿಡ್ನಾಪುರ ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮದಲ್ಲಿ ಒಂದು ಅಧ್ಯಯನವು ಆತಂಕಕಾರಿ ಅಸಮಾನತೆಯನ್ನು ಎತ್ತಿ ತೋರಿಸಿದೆ, ಅಲ್ಲಿ ಮತದಾರರಲ್ಲಿ ಕಡಿಮೆ ಪಾಲು ಇದ್ದರೂ ಎಸ್‌ಐಆರ್ ಪೂರಕ ಪಟ್ಟಿಯಿಂದ ಅಳಿಸಲಾದ ಮತದಾರರಲ್ಲಿ...

ಟೋಲ್ ಪ್ಲಾಜಾಗಳಲ್ಲಿನ ಅಶುಚಿತ್ವ ಶೌಚಾಲಯಗಳ ಬಗ್ಗೆ ವರದಿ ಮಾಡಿದರೆ ಬಹುಮಾನ: ಕೇಂದ್ರ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನೈರ್ಮಲ್ಯದ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೋಲ್ ಪ್ಲಾಜಾಗಳಲ್ಲಿ ಅಶುಚಿಯಾದ ಶೌಚಾಲಯ ಸೌಲಭ್ಯಗಳ ಬಗ್ಗೆ ವರದಿ ಮಾಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವ...

ಮಣಿಪುರ: ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಬಲಿ; ಕುಕಿ ದಂಗೆಕೋರರಿಂದ ದಾಳಿ ಆರೋಪ; ಇದು ಅನಾಗರಿಕ ಕೃತ್ಯ ಎಂದ ಸಿಎಂ 

ಗುವಾಹಟಿ: ಮಣಿಪುರದ ಮೈತೇಯಿ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಐದು ತಿಂಗಳ ಗಂಡು ಮಗು ಸೇರಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಮೊಯಿರಾಂಗ್...

ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ವಿಪಕ್ಷಗಳಿಂದ ನೋಟಿಸ್‌ : ಕಾರಣ ನೀಡದೆ ತಿರಸ್ಕರಿಸಿದ ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು-ವರದಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷ ಸಂಸದರು ಸಲ್ಲಿಸಿದ್ದ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದ್ದಾರೆ. ಉಭಯ...

ಎನ್‌ಸಿಪಿ ನಾಯಕನ ಕೊಲೆ ಪ್ರಕರಣ : ಛತ್ತೀಸ್‌ಗಢ ಮಾಜಿ ಸಿಎಂ ಅಜಿತ್ ಜೋಗಿ ಮಗ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ

2003ರ ಕೊಲೆ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಹಿಂದೂ ಸೋಮವಾರ (ಏ.6) ವರದಿ ಮಾಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್...

ಪ. ಬಂಗಾಳ | ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಸೂಕ್ತ ಕಾರಣ ನೀಡದ ಚುನಾವಣಾ ಆಯೋಗ : ಕಾಂಗ್ರೆಸ್ ಅಭ್ಯರ್ಥಿ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರ ಅರ್ಜಿಗಳ ವಿಚಾರಣೆಗಾಗಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾದ ಮೇಲ್ಮನವಿ ನ್ಯಾಯಮಂಡಳಿಯು, ಮುಂಬರುವ ವಿಧಾನಸಭಾ ಚುನಾವಣೆಯ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಭಾನುವಾರ...

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...