HomeUncategorizedಗಾಜಾದ 'ವಿಶಾಲ ಪ್ರದೇಶಗಳ' ವಶಕ್ಕೆ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ನಿವಾಸಿಗಳು ಹೊರಹೋಗಲು ಆದೇಶಿಸಿದ ಇಸ್ರೇಲ್

ಗಾಜಾದ ‘ವಿಶಾಲ ಪ್ರದೇಶಗಳ’ ವಶಕ್ಕೆ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ನಿವಾಸಿಗಳು ಹೊರಹೋಗಲು ಆದೇಶಿಸಿದ ಇಸ್ರೇಲ್

- Advertisement -
- Advertisement -

ಗಾಜಾದ ‘ವಿಶಾಲ ಪ್ರದೇಶಗಳ’ನ್ನು ವಶಪಡಿಸಿಕೊಳ್ಳಲು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಣೆಗೊಳಿಸುತ್ತೇವೆ. ಇದಕ್ಕಾಗಿ ಗಾಜಾ ನಿವಾಸಿಗಳು ಹೊರಹೋಗುವಂತೆ ಆದೇಶಿಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಘೋಷಿಸಿದ್ದಾರೆ.

ಈ ಕುರಿತು ವಿವರಗಳನ್ನು ನಿರ್ದಿಷ್ಟಪಡಿಸದೆ, ಕಾರ್ಯಾಚರಣೆಯು “ಯುದ್ಧ ವಲಯಗಳಿಂದ ಗಾಜಾದ ಜನಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸುವುದು” ಒಳಗೊಂಡಿರುತ್ತದೆ ಎಂದು ಕ್ಯಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ನ ವೈಮಾನಿಕ ದಾಳಿಗಳಿಂದ ಕಳೆದ 24 ಗಂಟೆಗಳಲ್ಲಿ ಇದುವರೆಗೆ ಡಜನ್ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ವಿಶ್ವಸಂಸ್ಥೆಯ ಆಶ್ರಯ ತಾಣಕ್ಕೆ ದಾಳಿಯಾದಾಗ ಕನಿಷ್ಠ ಒಂಬತ್ತು ಮಕ್ಕಳು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಿಟರಿ ಕಾರ್ಯಾಚರಣೆಯು “ಭಯೋತ್ಪಾದಕರು ಮತ್ತು ಭಯೋತ್ಪಾದಕ ಮೂಲಸೌಕರ್ಯಗಳ ಪ್ರದೇಶವನ್ನು ಪುಡಿಮಾಡಿ ತೆರವುಗೊಳಿಸಲಾಗುತ್ತದೆ. ಮಂಗಳವಾರ ತಡರಾತ್ರಿ ನಮ್ಮ ಇಸ್ರೇಲಿ ಮಿಲಿಟರಿಯ ಅರೇಬಿಕ್ ಮಾಧ್ಯಮದ ವಕ್ತಾರರು ಗಾಜಾದ ದಕ್ಷಿಣ ರಫಾ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳನ್ನು ತೊರೆದು ಉತ್ತರಕ್ಕೆ ತೆರಳುವಂತೆ ಆದೇಶಿಸಿದ್ದಾರೆ ಎಂದು ರಕ್ಷಣಾ ಸಚಿವರ ಹೇಳಿಕೆ ತಿಳಿಸಿದೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ವೀಡಿಯೊ ಭಾಷಣದಲ್ಲಿ ಗಾಜಾದಲ್ಲಿ ಮಿಲಿಟರಿ ವಿಸ್ತರಣೆಯನ್ನು ಘೋಷಿಸಿದರು ಮತ್ತು ಅಲ್ಲಿ ಬಂಧಿಸಲ್ಪಟ್ಟ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾ ಪಟ್ಟಿಯ ಮೇಲೆ ಒತ್ತಡವನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದರು.

“ನಾವು ಮೊರಾಗ್ ಕಾರಿಡಾರ್ ಅನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಇದು ಎರಡನೇ ಫಿಲಡೆಲ್ಫಿ, ಹೆಚ್ಚುವರಿ ಫಿಲಡೆಲ್ಫಿ ಕಾರಿಡಾರ್ ಆಗಿರುತ್ತದೆ” ಎಂದು ಅವರು ಹೇಳಿದರು.

ಮೊರಾಗ್ ಕಾರಿಡಾರ್ ದಕ್ಷಿಣ ಗಾಜಾದಲ್ಲಿ ಖಾನ್ ಯೂನಿಸ್ ಮತ್ತು ರಫಾ ನಡುವೆ ಒಮ್ಮೆ ಇದ್ದ ಮೊರಾಗ್ ವಸಾಹತುವನ್ನು ಸೂಚಿಸುತ್ತದೆ. ಫಿಲಡೆಲ್ಫಿ ಕಾರಿಡಾರ್ ಈಜಿಪ್ಟ್‌ನ ಗಡಿಯಲ್ಲಿ ದಕ್ಷಿಣ ಗಾಜಾದಲ್ಲಿ 14-ಕಿಲೋಮೀಟರ್ (8.7-ಮೈಲಿ) ಭೂಪ್ರದೇಶವಾಗಿದೆ. ನಾವು ಈಗ ಗಾಜಾ ಪಟ್ಟಿಯನ್ನು ವಿಭಜಿಸುತ್ತಿದ್ದೇವೆ ಮತ್ತು ಒತ್ತಡವನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದ್ದೇವೆ. ಇದರಿಂದ ಅವರು ನಮಗೆ ನಮ್ಮ ಒತ್ತೆಯಾಳುಗಳನ್ನು ನೀಡುತ್ತಾರೆ ಮತ್ತು ಅವರು ಅರನ್ನು ನಮಗೆ ನೀಡದಿದ್ದರೆ, ಅವರು ನೀಡುವವರೆಗೆ ಒತ್ತಡ ಹೆಚ್ಚಾಗುತ್ತದೆ” ಎಂದು ನೆತನ್ಯಾಹು ಹೇಳಿದರು.

ಗಾಜಾದಲ್ಲಿ 59 ಇಸ್ರೇಲಿ ಒತ್ತೆಯಾಳುಗಳನ್ನು ಬಂಧಿಸಲಾಗಿದ್ದು, 24 ಜನರು ಜೀವಂತವಾಗಿದ್ದಾರೆಂದು ನಂಬಲಾಗಿದೆ, 35 ಜನರು ಸತ್ತಿದ್ದಾರೆಂದು ನಂಬಲಾಗಿದೆ.

ಗಾಜಾದಲ್ಲಿ ಸಂಭಾವ್ಯ ಪ್ರಮುಖ ನೆಲದ ದಾಳಿಗೆ ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ ಹತ್ತಾರು ಸಾವಿರ ಸೈನಿಕರನ್ನು ಯುದ್ಧಕ್ಕೆ ಕಳುಹಿಸಲಾಗುವುದು, ಇದರಲ್ಲಿ ಹೆಚ್ಚಿನ ಪ್ರದೇಶವನ್ನು ತೆರವುಗೊಳಿಸಲಾಗುವುದು ಎಂದು ಕಾಟ್ಜ್ ಬುಧವಾರ ಹೇಳಿಕೆಯಲ್ಲಿ ಹೇಳಿದ್ದಾರೆ.

ಗಾಜಾದ ಮೇಲೆ ಇಸ್ರೇಲ್ ಮೇಲೆ ತನ್ನ ವೈಮಾನಿಕ ಬಾಂಬ್ ದಾಳಿಯನ್ನು ಮುಂದುವರಿಸುತ್ತಿರುವ ನಡುವೆ ಈ ಘೋಷಣೆ ಬಂದಿದೆ. ದಕ್ಷಿಣ ಗಾಜಾದಲ್ಲಿ ರಾತ್ರಿಯಿಡೀ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಗಳು ತಿಳಿಸಿವೆ.

ಸಾವಿಗೀಡಾದವರಲ್ಲಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು  ರಫಾ ಪ್ರದೇಶದಿಂದ ಸ್ಥಳಾಂತರಗೊಂಡ ನಂತರ ವಸತಿ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂದು ನಾಸರ್ ಆಸ್ಪತ್ರೆ ತಿಳಿಸಿದೆ. ಮಧ್ಯ ಗಾಜಾದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರ ಶವಗಳನ್ನು ಸ್ವೀಕರಿಸಿದ ಅಲ್ ಅವ್ಡಾ ಆಸ್ಪತ್ರೆ ತಿಳಿಸಿದೆ.

ಬುಧವಾರದಂದು ಉತ್ತರ ಗಾಜಾದ ಜಬಲ್ಯ ನಿರಾಶ್ರಿತರ ಶಿಬಿರದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದ ಯುಎನ್‌ಆರ್‌ಡಬ್ಲ್ಯೂಎ ಚಿಕಿತ್ಸಾಲಯದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಒಂಬತ್ತು ಮಕ್ಕಳ ಶವಗಳು ಸೇರಿದಂತೆ 19 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.

ಕಳೆದ ವಾರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್‌ನ ಯುದ್ಧದ ವಿರುದ್ಧ ಪ್ರತಿಭಟಿಸಿದ ನಂತರ ಕ್ಯಾಟ್ಜ್ ಅವರ ಘೋಷಣೆಯೂ ಬಂದಿದೆ. ಪ್ರತಿಭಟನೆಗಳಿಂದ ಉತ್ತೇಜಿತರಾದ ರಕ್ಷಣಾ ಸಚಿವರು, ಹಮಾಸ್ ಎನ್‌ಕ್ಲೇವ್‌ನಲ್ಲಿರುವ ಪ್ಯಾಲೆಸ್ಟೀನಿಯನ್ನರ ಜೀವಕ್ಕೆ “ಅಪಾಯವನ್ನುಂಟುಮಾಡುತ್ತಿದೆ” ಎಂದು ಹೇಳುವ ಮೂಲಕ ಗಾಜಾದ ಜನರು ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ.

ಇಸ್ರೇಲಿ ಮಿಲಿಟರಿ ಶೀಘ್ರದಲ್ಲೇ “ಗಾಜಾದ ಹೆಚ್ಚುವರಿ ಪ್ರದೇಶಗಳಲ್ಲಿ ಬಲವಂತವಾಗಿ” ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು ಮತ್ತು ಹಮಾಸ್ ಅನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ಯಾಲೆಸ್ಟೀನಿಯನ್ನರನ್ನು ಒತ್ತಾಯಿಸಿದ್ದಾರೆ. ಇದು ಯುದ್ಧವನ್ನು ನಿಲ್ಲಿಸಲು ಇದು ಏಕೈಕ ಮಾರ್ಗವಾಗಿದೆ” ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ಎರಡು ವಾರಗಳ ಹಿಂದೆ ಗಾಜಾದ ಮೇಲೆ ತನ್ನ ದಾಳಿಯನ್ನು ಪುನರಾರಂಭಿಸಿದೆ. ಎನ್‌ಕ್ಲೇವ್‌ಗೆ ಪ್ರವೇಶಿಸುವ ಮಾನವೀಯ ನೆರವಿನ ಸಂಪೂರ್ಣ ದಿಗ್ಬಂಧನವನ್ನು ವಿಧಿಸಿದ ವಾರಗಳ ನಂತರ, ಹಮಾಸ್‌ನೊಂದಿಗಿನ ಎರಡು ತಿಂಗಳ ಹಳೆಯ ಕದನ ವಿರಾಮವನ್ನು ಮುರಿದುಹಾಕಿದೆ. ಉಳಿದ 24 ಒತ್ತೆಯಾಳುಗಳನ್ನು ಇನ್ನೂ ಜೀವಂತವಾಗಿ ಇರಿಸಲಾಗಿದೆ ಎಂದು ನಂಬಲಾದವರನ್ನು ಬಿಡುಗಡೆ ಮಾಡುವವರೆಗೆ ತನ್ನ ಪಡೆಗಳು ಗಾಜಾದ ಕೆಲವು ಭಾಗಗಳಲ್ಲಿ ಶಾಶ್ವತ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಎಂದು ಅದು ಎಚ್ಚರಿಸಿದೆ.

ಅಂದಿನಿಂದ ನೂರಾರು ಪ್ಯಾಲೆಸ್ಟೀನಿಯನ್ನರು ಈ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಆಹಾರ ಸರಬರಾಜು ಖಾಲಿಯಾಗುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಇಂಧನ ಮತ್ತು ಹಿಟ್ಟಿನ ತೀವ್ರ ಕೊರತೆಯಿಂದಾಗಿ ಗಾಜಾದಲ್ಲಿನ ಎಲ್ಲಾ ಬೇಕರಿಗಳು ಮುಚ್ಚಲ್ಪಟ್ಟಿವೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ವಿಶ್ವಸಂಸ್ಥೆ ತಿಳಿಸಿವೆ.

ಒತ್ತೆಯಾಳು ಕುಟುಂಬಗಳು ‘ಭಯಭೀತರಾಗಿದ್ದಾರೆ’

ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ನೇತೃತ್ವದ ಇಸ್ರೇಲಿ ಮಿಲಿಟರಿ, ವಾರಗಳಿಂದ ಗಾಜಾದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಗೆ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಗಾಜಾದಲ್ಲಿ ದೀರ್ಘಾವಧಿಯ ಆಕ್ರಮಣವು ಇಸ್ರೇಲಿ ಸಾರ್ವಜನಿಕರಿಂದ ತೀವ್ರ ಪ್ರತಿರೋಧವನ್ನು ಉಂಟುಮಾಡಬಹುದು, ಅವರಲ್ಲಿ ಹೆಚ್ಚಿನವರು ಯುದ್ಧಕ್ಕೆ ಮರಳುವ ಬದಲು ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕಾಗಿ ಕರೆ ನೀಡುತ್ತಿದ್ದಾರೆ.

ಒಪ್ಪಂದದ ಮೂಲಕ ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯುದ್ಧವನ್ನು ಕೊನೆಗೊಳಿಸುವ ಬದಲು, ಇಸ್ರೇಲಿ ಸರ್ಕಾರವು ಗಾಜಾಕ್ಕೆ ಹೆಚ್ಚಿನ ಸೈನಿಕರನ್ನು ಕಳುಹಿಸುತ್ತಿದೆ” ಎಂದು ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳ ವೇದಿಕೆಯು ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಪುನರುಜ್ಜೀವನಗೊಳಿಸಲು ಈಜಿಪ್ಟ್ ಮತ್ತು ಕತಾರ್ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಹಮಾಸ್ ಭಾನುವಾರ ಹೊಸ ಈಜಿಪ್ಟ್ ಪ್ರಸ್ತಾವನೆಗೆ ಒಪ್ಪಿಕೊಂಡಿದೆ ಮತ್ತು ಇಸ್ರೇಲ್ ಸೋಮವಾರ ಪ್ರತಿ-ಪ್ರಸ್ತಾಪದೊಂದಿಗೆ ಪ್ರತಿಕ್ರಿಯಿಸಿದೆ.

ಈಜಿಪ್ಟ್‌ನ ಪ್ರಸ್ತಾವನೆಯು ಹಮಾಸ್ ಐದು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ, ಇದರಲ್ಲಿ ಅಮೆರಿಕನ್-ಇಸ್ರೇಲಿ ಎಡಾನ್ ಅಲೆಕ್ಸಾಂಡರ್ ಸೇರಿದ್ದಾರೆ. ಇದು ನವೀಕರಿಸಿದ ಕದನ ವಿರಾಮಕ್ಕೆ ಬದಲಾಗಿ ಎಂದು ಹಮಾಸ್ ಮೂಲವೊಂದು ತಿಳಿಸಿದೆ. ಇದು ಹಲವಾರು ವಾರಗಳ ಹಿಂದೆ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮಂಡಿಸಿದ ಪ್ರಸ್ತಾವನೆಗೆ ಹೋಲುತ್ತದೆ, ಆದರೂ ಇದು ಮೃತ ಒತ್ತೆಯಾಳುಗಳ ಹೆಚ್ಚುವರಿ ಶವಗಳ ಬಿಡುಗಡೆಯನ್ನು ಸಹ ಒಳಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ನಕ್ಸಲರಿಂದ ಷರತ್ತುಬದ್ಧ ಮಾತುಕತೆಗೆ ಕರೆ; ಬೇಷರತ್ ಶಾಂತಿ ಮಾತುಕತೆಗೆ ಸಿದ್ಧ ಎಂದ ಸರಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...