Homeಮುಖಪುಟಉತ್ತರ ಪ್ರದೇಶ| ಲೈಂಗಿಕ ಕಿರುಕುಳ ಆರೋಪಿತ ವ್ಯಕ್ತಿಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ ದೌರ್ಜನ್ಯ

ಉತ್ತರ ಪ್ರದೇಶ| ಲೈಂಗಿಕ ಕಿರುಕುಳ ಆರೋಪಿತ ವ್ಯಕ್ತಿಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ ದೌರ್ಜನ್ಯ

- Advertisement -
- Advertisement -

ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ಹಳ್ಳಿಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಗುಂಪೊಂದು ಚಪ್ಪಲಿಯಿಂದ ಹೊಡೆದಿದೆ. ಆ ವ್ಯಕ್ತಿ ಮತ್ತು ಅವನ ಕುಟುಂಬದವರು ಲೈಂಗಿಕ ದೌರ್ಜನ್ಯದ ಆರೋಪವನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಬಲಿಪಶುವಿನ ತಂದೆ ಮಹೇಶ್ ಸವಿತಾ ಅವರ ಪ್ರಕಾರ, ಅವರ ಮಗ ವಿಪಿನ್ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿಪಿನ್ ಅವರನ್ನು ಆರೋಪಿಯ ಮನೆಯ ಬಳಿ ತಡೆದು ನಿರ್ದಿಷ್ಟ ಮಾರ್ಗವನ್ನು ಬಳಸಬಾರದು ಎಂಬ ಗುಂಪಿನ ನಿರ್ದೇಶನವನ್ನು ವಿರೋಧಿಸಿದ ನಂತರ ಹಲ್ಲೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸವಿತಾ ಅವರು ಕಿರುಕುಳ ಆರೋಪವನ್ನು ಹಲ್ಲೆಯನ್ನು ಸಮರ್ಥಿಸಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬಲಿಪಶುವಿನ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅರ್ಧ ಡಜನ್‌ಗೂ ಹೆಚ್ಚು ಗ್ರಾಮಸ್ಥರು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವುದು ವೀಡಿಯೊದಲ್ಲಿ ರೆಕಾರ್ಡ್ ಆಗಿದೆ. ಮಧ್ಯವಯಸ್ಕನೊಬ್ಬ ಬಂದು ಯುವಕನನ್ನು ಹೊಡೆಯುತ್ತಿರುವುದು ಕಂಡುಬರುತ್ತದೆ. ನಂತರ ಒಬ್ಬ ಮಹಿಳೆಯನ್ನು ಮುಂದೆ ತಂದು ವಿಪಿನ್ ಮುಖಕ್ಕೆ ಮಸಿ ಬಳಿಯಲು ಕರೆತರಲಾಗಿದ್ದು, ಅವರ ಮಾತಿನ ಚಕಮಕಿಯ ನಡುವೆಯೂ ಯುವಕನ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಮಹೇಶ್ ಸವಿತಾ ತನ್ನನ್ನು ಬಿಡುವಂತೆ ಬೇಡಿಕೊಳ್ಳುತ್ತಿರುವುದನ್ನು, ಜನರ ಪಾದಗಳನ್ನು ಮುಟ್ಟುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಆದರೆ ಆತನ ಮನವಿಗಳನ್ನು ಗುಂಪು ನಿರ್ಲಕ್ಷಿಸಿದೆ.

ಈರ್ವ ಮಹಿಳೆ ವಿಪಿನ್ ಮೇಲೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದಾಗ ನಿಂದನೆ ಹೆಚ್ಚಾಯಿತು. ನಂತರ ಹೊಡೆಯುವುದು ಮುಂದುವರೆದಾಗ ಅವನನ್ನು ಹಳ್ಳಿಯಲ್ಲಿ ಮೆರವಣಿಗೆ ಮಾಡಲಾಯಿತು.

ದಾಳಿಕೋರರನ್ನು, ಪ್ರಭುದಯಾಳ್ ಸೋನಿ, ರವೀಂದ್ರ ಸೋನಿ, ಸಂತೋಷ್ ಸೋನಿ ಅಲಿಯಾಸ್ ಪಪ್ಪು, ಪ್ರಿನ್ಸಿ ಸೋನಿ (ರವೀಂದ್ರ ಅವರ ಪತ್ನಿ), ಹರ್ಷಿತಾ (ಧರ್ಮೇಂದ್ರ ಸೋನಿಯ ಪತ್ನಿ) ಮತ್ತು ಇತರರು ಸೇರಿದ್ದಾರೆ. ಹಲ್ಲೆ ನಡೆಸುವುದಕ್ಕೆ ಮೊದಲೇ ಯೋಜಿಸಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ. “ಅವರು ಈಗಾಗಲೇ ಅವನಿಗಾಗಿ ಕಾಯುತ್ತಿದ್ದರು. ಸುಮಾರು ಏಳು ಜನರು ಅವನನ್ನು ಥಳಿಸಿ ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಮಾಡಿದರು. ಅವರು ಇದನ್ನು ಏಕೆ ಮಾಡಿದರು ಎಂದು ನಮಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದರು.

ಉತ್ತರ ಪ್ರದೇಶ| ದಲಿತ ವರನ ಕುದುರೆ ಸವಾರಿ ತಡೆದ ಪ್ರಬಲಜಾತಿ ಗುಂಪು; ಮದುವೆ ಮೆರವಣಿಗೆ ಮೇಲೆ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತನ ‘ಪಾಕಿಸ್ತಾನ್ ಜಿಂದಾಬಾದ್’ ಪ್ರಕರಣ ರದ್ದು! ಪ್ರತಿಭಟನೆ ವೇಳೆ ‘ಬಾಯಿತಪ್ಪಿ ಬಂದ ಮಾತು’ ಎಂಬ ವಾದ ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್!

ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾರ್ಯಕರ್ತನೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯಿತಪ್ಪಿ...

“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್‌ಯುನಲ್ಲಿ 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಮುಷ್ಕರ

ನವದೆಹಲಿ: ಕಾನೂನುಬಾಹಿರ ವೇತನ ಕಡಿತ, ಶಾಸನಬದ್ಧ ಬೋನಸ್ ಪಾವತಿಸದಿರುವುದು, ಕಾರ್ಮಿಕರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸುವುದು ಮತ್ತು ಸಿಬ್ಬಂದಿ ಕೊರತೆಯಿಂದ ಹೆಚ್ಚುತ್ತಿರುವ ಕೆಲಸದ ಹೊರೆ ಸೇರಿದಂತೆ ಹಲವು ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳನ್ನು ಖಂಡಿಸಿ ದೆಹಲಿಯ ಜವಾಹರಲಾಲ್...

ಅಮೆರಿಕ ಮಧ್ಯಂತರ ಚುನಾವಣೆ | ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಸಾಧಿಸಿದ ಡೆಮಾಕ್ರಟಿಕ್ ಪಕ್ಷ : ಅಧ್ಯಕ್ಷ ಟ್ರಂಪ್‌ಗೆ ತೀವ್ರ ಮುಖಭಂಗ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ (US Midterm Elections 2026) ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ 'ಬ್ಲೂ ವೇವ್' (ನೀಲಿ ಅಲೆ) ಸೃಷ್ಟಿಸಿದ್ದು, ಸಂಸತ್ತಿನ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ)...

ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವಿನ ಶೀತಲ ಸಮರ ಹಾಗೂ ಅಮೆರಿಕದ ಮಿಲಿಟರಿ ಹಾಜರಾತಿಯಿಂದಾಗಿ ತೈಲ ಸಾರಿಗೆ ಮಾರ್ಗಗಳಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ಜಾಗತಿಕ ವಾಣಿಜ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು...

ಗುಜರಾತ್: ‘ತಪ್ಪಿತಸ್ಥನೆಂದು ಸಾಬೀತುಪಡಿಸಲು ಪುರಾವೆಗಳಿಲ್ಲ’: ಗೋಮಾಂಸ ಸಂಗ್ರಹ ಆರೋಪದ ಮುಸ್ಲಿಂ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಗೋಮಾಂಸ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಸುಮಾರು ಹತ್ತು ತಿಂಗಳಿನಿಂದ ಜೈಲಿನಲ್ಲಿದ್ದ ಗುಜರಾತ್‌ನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಯ ವಿರುದ್ಧ ಈ ಹಿಂದೆ ದಾಖಲಾಗಿದ್ದ...

ದೆಹಲಿಯ ‘ವೋಟ್ ಚೋರಿ’ ರ‍್ಯಾಲಿಗೆ ಗೈರು: ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ 60 ಪ್ರಮುಖ ಪದಾಧಿಕಾರಿಗಳು ಅಮಾನತು!

ಅಖಿಲ ಭಾರತ ಯುವ ಕಾಂಗ್ರೆಸ್ ನಾಯಕತ್ವವು ಕಠಿಣ ನಿರ್ಧಾರ ತಳೆದಿದ್ದು, ರಾಷ್ಟ್ರೀಯ ನಾಯಕತ್ವ ನೀಡಿದ್ದ ಕರೆಗೆ ಗೈರುಹಾಜರಾದ ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಬರೋಬ್ಬರಿ 60 ಪ್ರಮುಖ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ...

ಮೂರು ಕೋಟಿ ಒಳನುಸುಳುಕೋರರು ಎಲ್ಲಿಂದ ಬಂದರು?: ‘ವೋಟ್ ಚೋರಿ’ ಬಗ್ಗೆ ಮುಕ್ತ ಚರ್ಚೆಗೆ ಬನ್ನಿ: ಮೋದಿ-ಅಮಿತ್ ಶಾಗೆ ಖರ್ಗೆ ಸವಾಲು

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನದ (ವೋಟ್ ಚೋರಿ) ಆರೋಪಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ತೋರಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಮುಕ್ತ ಚರ್ಚೆಯ ಸವಾಲನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ರಾಷ್ಟ್ರೀಯ...

ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದುವುದನ್ನು ದಂಡನೀಯವಾಗಿಸುವ ಕಾನೂನುಗಳು ಪ್ರಸ್ತುತತೆ ಕಳೆದುಕೊಂಡಿವೆ : ಸುಪ್ರೀಂ ಕೋರ್ಟ್

ಭಾರತದ ಕುಸಿಯುತ್ತಿರುವ ಫಲವತ್ತತೆ ದರವನ್ನು (fertility rate) ಗಮನದಲ್ಲಿಟ್ಟುಕೊಂಡು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಕಾನೂನುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್...

ಅಮೆರಿಕ ಮಧ್ಯಂತರ ಚುನಾವಣೆ : ಜಗತ್ತಿನ ಗಮನ ಸೆಳೆದ ಅಬ್ದುಲ್ ಸಯೀದ್, ಡೆಬ್ ಹಾಲೆಂಡ್ ಮತ್ತು ಇಲ್ಹಾನ್ ಉಮರ್ ಆಯ್ಕೆ!

ಅಮೆರಿಕದ ರಾಜಕೀಯ ಅಖಡಾದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ಮಧ್ಯಂತರ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಹೊರಬಿದ್ದಿದ್ದು, ಡೆಮಾಕ್ರಟಿಕ್ ಪಕ್ಷದ ಸುಧಾರಣಾವಾದಿ ನಾಯಕರ ಜಯಯಾನ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಅಸೋಸಿಯೇಟೆಡ್...

ನ್ಯಾಯಾಲಯದ ಆಕ್ಷೇಪದ ಬಳಿಕವೂ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸಿ ಎಂದ ಚು. ಆಯೋಗ : ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಪ್ರಶಾಂತ್ ಭೂಷಣ್

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಅರ್ಜಿದಾರರು, ಡಿಲೀಟ್ ಆದ ಮತದಾರರು ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಫಾರಂ 6 ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಇತ್ತೀಚೆಗೆ ನೀಡಿರುವ...