- Advertisement -
- Advertisement -
ಡಿಸೆಂಬರ್ 6ರಂದು ನಡೆದ, ದೇಶವನ್ನೆ ಬೆಚ್ಚಿಬೀಳಿಸಿದ ಹೈದರಾಬಾದ್ ಪಶುವೈದ್ಯೆಯ ಕೊಲೆ ಮತ್ತು ಅತ್ಯಾಚಾರದ ಆರೋಪಿಗಳ ಎನ್‌ಕೌಂಟರ್ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ 4 ಆರೋಪಿಗಳ ಶವಗಳನ್ನು ಮರು ಪೋಸ್ಟ್ ಮಾರ್ಟಮ್ ಮಾಡುವಂತೆ ಆದೇಶಿಸಿದೆ.
ತೆಲಂಗಾಣ ಎನ್‌ಕೌಂಟರ್‌ನಲ್ಲಿ ಹತರಾದ ಆರೋಪಿಗಳ ಶವವನ್ನು ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಲಾಗಿದ್ದು ಈಗ ಮತ್ತೆ ಪೋಸ್ಟ್ ಮಾರ್ಟಮ್ ಮಾಡಬೇಕಾಗಿದೆ.
ಈ ವಿಚಾರ ರಾಷ್ಟ್ರಾದ್ಯಂತ ಪರ ವಿರೋಧದ ಅಲೆಯನ್ನು ಹುಟ್ಟುಹಾಕಿತ್ತು. ಪೊಲೀಸರಿಗೆ ಜೈಕಾರ, ಸಿಹಿ ತಿನ್ನಿಸುವುದು ನಡೆದಿತ್ತು. ನಂತರ ಪೊಲೀಸರು ಆತ್ಮರಕ್ಷಣೆಗಾಗಿ ನಾವು ಎನ್‌ಕೌಂಟರ್ ಮಾಡಬೇಕಾಯಿತು ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು.


