ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು ಮರೆಮಾಚಿಕೊಂಡು ಸೇವಿಸುತ್ತಿರುವುದು ಸೆರೆಯಾಗಿದೆ.
ಈ ಕ್ಲಿಪ್‌ನಲ್ಲಿ, ಸದನದಲ್ಲಿ ಕುಳಿತಿರುವಾಗ ಚೌಧರಿ ತಮ್ಮ ಅಂಗೈಗೆ ಒಂದು ವಸ್ತುವನ್ನು ಉಜ್ಜಿಕೊಂಡು ನಂತರ ಅದನ್ನು ಬಾಯಿಗೆ ಹಾಕಿಕೊಳ್ಳುತ್ತಿರುವುದು ಸೆರೆಯಾಗಿದೆ. ಉಪಮುಖ್ಯಮಂತ್ರಿ ವಿಧಾನಸಭೆಯೊಳಗೆ ‘ಖೈನಿ’ (ತಂಬಾಕು ಅಗಿಯುವುದು) ಸೇವಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ವಿರೋಧ ಪಕ್ಷದ ಬೆಂಬಲಿಗರು ಹೇಳಿಕೊಂಡಿದ್ದಾರೆ.
ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಚೌಧರಿಯನ್ನು ಅಣಕಿಸಿ ಎಕ್ಸ್‌ನಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡಿದೆ.
ಸಾಮಾಜಿಕ ಜಾಳತಾಣದಲ್ಲಿ ವಿಡಿಯೊ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ, ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಹಲವಾರು ಬಳಕೆದಾರರು ಆಪಾದಿತ ಕೃತ್ಯವನ್ನು ಟೀಕಿಸಿದರು. ವಿಧಾನಸಭೆಯು “ಪ್ರಜಾಪ್ರಭುತ್ವದ ದೇವಾಲಯ” ಮತ್ತು ಅಂತಹ ನಡವಳಿಕೆ ನಿಜವಾಗಿದ್ದರೆ, ಅದು ಅಶಿಸ್ತಿಗೆ ಸಮಾನವಾಗಿದೆ ಎಂದು ಹೇಳಿದರು. ಇತರರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಉಪಮುಖ್ಯಮಂತ್ರಿಯವರ ಬೆಂಬಲಿಗರು ಅವರು ತಂಬಾಕು ಸೇವಿಸದೇ ಇರಬಹುದು, ಬದಲಾಗಿ ಮೌತ್ ಫ್ರೆಶ್ನರ್ ಅಥವಾ ಏಲಕ್ಕಿಯನ್ನು ಬಳಸುತ್ತಿರಬಹುದು ಎಂದು ವಾದಿಸಿದರು. ವೈರಲ್ ವೀಡಿಯೊದ ಬಗ್ಗೆ ಚೌಧರಿ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.


