Homeಅಂತರಾಷ್ಟ್ರೀಯಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

- Advertisement -
- Advertisement -

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ತಾರತಮ್ಯದಿಂದ ಕೂಡಿದೆ ಎಂದಿದೆ.

ಪ್ಯಾಲೆಸ್ತೀನ್ ಅಥಾರಿಟಿ

ಪ್ಯಾಲೆಸ್ತೀನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸ ಕಾನೂನನ್ನು ‘ಅಪಾಯಕಾರಿ ಬೆಳವಣಿಗೆ’ ಎಂದು ಬಣ್ಣಿಸಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಚಿವಾಲಯವು, “ಆಕ್ರಮಿತ ಪ್ಯಾಲೆಸ್ತೀನ್’ ಭೂಪ್ರದೇಶದ ಮೇಲೆ ಇಸ್ರೇಲ್‌ಗೆ ಯಾವುದೇ ಸಾರ್ವಭೌಮತ್ವವಿಲ್ಲ” ಎಂದು ಒತ್ತಿ ಹೇಳಿದೆ.

“ಹೊಸ ಕಾನೂನು ಮತ್ತೊಮ್ಮೆ ಇಸ್ರೇಲಿ ವಸಾಹತುಶಾಹಿ ವ್ಯವಸ್ಥೆಯ ಮುಖವನ್ನು ಬಯಲು ಮಾಡಿದೆ. ಇದು ಶಾಸಕಾಂಗದ ರಕ್ಷಣೆಯಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆ” ಎಂದಿದೆ.

ಹಮಾಸ್

ಮರಣದಂಡನೆ ಕಾನೂನಿನ ಅಂಗೀಕಾರವು ಇಸ್ರೇಲ್ ಜೈಲುಗಳಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನಿಯರ ‘ಜೀವಕ್ಕೆ ಬೆದರಿಕೆ ಒಡ್ಡುವ ಅಪಾಯಕಾರಿ ಮುನ್ಸೂಚನೆ’ ಎಂದು ಗಾಝಾದ ಆಡಳಿತ ನೋಡಿಕೊಳ್ಳುತ್ತಿರುವ ಗುಂಪು ಹಮಾಸ್ ಟೀಕಿಸಿದೆ.

“ಇಸ್ರೇಲ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಕಾನೂನುಗಳ ಮೇಲೆ ಗೌರವವಿಲ್ಲ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿಯಿಲ್ಲ ಎಂಬುವುದು ಈ ನಿರ್ಧಾರದಿಂದ ಮತ್ತೊಮ್ಮೆ ಸಾಬೀತಾಗಿದೆ” ಎಂದು ಹಮಾಸ್ ಹೇಳಿದೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು, ಇಸ್ರೇಲ್‌ನ ಕ್ರೌರ್ಯದಿಂದ ಪ್ಯಾಲೆಸ್ತೀನ್ ಕೈದಿಗಳನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಹಮಾಸ್ ಕರೆ ನೀಡಿದೆ.

ಪ್ಯಾಲೆಸ್ತೀನ್ ನ್ಯಾಷನಲ್ ಇನಿಶಿಯೇಟಿವ್‌ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ

ಪ್ಯಾಲೆಸ್ತೀನಿಯನ್ ನ್ಯಾಷನಲ್ ಇನಿಶಿಯೇಟಿವ್‌ನ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ ಅವರು ಈ ಶಾಸನದ ‘ಗಂಭೀರತೆ’ಯ ಬಗ್ಗೆ ಎಚ್ಚರಿಸಿದ್ದಾರೆ. ಇದು ಪ್ಯಾಲೆಸ್ತೀನ್ ರಾಜಕೀಯ ಕೈದಿಗಳು ಮತ್ತು ಹೋರಾಟಗಾರರನ್ನು ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿ ವ್ಯವಸ್ಥೆಯಲ್ಲಿ ಉಂಟಾಗಿರುವ ‘ಫ್ಯಾಸಿಸ್ಟ್ ಬದಲಾವಣೆಯ ಆಳವನ್ನು’ ಇಂತಹ ಅನ್ಯಾಯದ ಮತ್ತು ಅಮಾನವೀಯ ಕಾನೂನು ಪ್ರತಿಬಿಂಬಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್

ಗಾಝಾ ಮೂಲದ ಮಾನವ ಹಕ್ಕುಗಳ ಸಂಸ್ಥೆ ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ (ಪಿಸಿಹೆಚ್‌ಆರ್) ಹೊಸ ಕಾನೂನನ್ನು ‘ಕಠಿಣ ಪದಗಳಲ್ಲಿ’ ಖಂಡಿಸಿದೆ.

ಈ ಕಾನೂನು ಪ್ಯಾಲೆಸ್ತೀನಿಯರನ್ನು ಗುರಿಯಾಗಿಸಿಕೊಂಡಿದೆ ಮತ್ತು ಕಾನೂನಿನ ಮುಖವಾಡದ ಅಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ನಡೆಸುವ ಇಸ್ರೇಲ್‌ನ ಸುದೀರ್ಘ ನೀತಿಯನ್ನು ಗಟ್ಟಿಗೊಳಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಸಿಹೆಚ್‌ಆರ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಯುಎನ್‌ ಹ್ಯೂಮನ್ ರೈಟ್ಸ್ ಆಫಿಸ್

ಪ್ಯಾಲೆಸ್ತೀನ್‌ನಲ್ಲಿರುವ ಯುಎನ್‌ ಮಾನವ ಹಕ್ಕುಗಳ ಕಚೇರಿ ತಾರತಮ್ಯದಿಂದ ಕೂಡಿದ ಈ ಮರಣದಂಡನೆ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ ಇಸ್ರೇಲ್‌ಗೆ ಒತ್ತಾಯಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇಸ್ರೇಲ್ ಹೊಂದಿರುವ ಬದ್ಧತೆಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯು ಎಲ್ಲಾ ಸಂದರ್ಭಗಳಲ್ಲೂ ಮರಣದಂಡನೆಯನ್ನು ವಿರೋಧಿಸುತ್ತದೆ. ಈ ಹೊಸ ಕಾನೂನಿನ ಜಾರಿಯು ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯನ್ನು ನಿಷೇಧಿಸುವ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.

ಮುಂದುವರಿದು, ಈ ಕಾನೂನು ಜನಾಂಗೀಯ ಪ್ರತ್ಯೇಕತೆ ಮತ್ತು ವರ್ಣಭೇದ ನೀತಿಯ ನಿಷೇಧದ ಮೇಲಿನ ಇಸ್ರೇಲ್‌ನ ಉಲ್ಲಂಘನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಏಕೆಂದರೆ, ಇದು ಕೇವಲ ಆಕ್ರಮಿತ ಪಶ್ಚಿಮ ದಂಡೆ ಮತ್ತು ಇಸ್ರೇಲ್‌ನಲ್ಲಿರುವ ಪ್ಯಾಲೆಸ್ತೀನ್‌ನಿಯರಿಗೆ ಮಾತ್ರ ಅನ್ವಯಿಸುತ್ತದೆ, ಇವರಿಗೆ ಹೆಚ್ಚಾಗಿ ಅನ್ಯಾಯದ ವಿಚಾರಣೆಗಳ ನಂತರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್

ಇಸ್ರೇಲ್ ಹೊಸ ಕಾನೂನನ್ನು ರದ್ದುಗೊಳಿಸಬೇಕು ಎಂದು ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಒತ್ತಾಯಿಸಿದೆ. “ಇದು ‘ಕ್ರೌರ್ಯ, ತಾರತಮ್ಯ ಮತ್ತು ಮಾನವ ಹಕ್ಕುಗಳ ಬಗೆಗಿನ ಸಂಪೂರ್ಣ ತಿರಸ್ಕಾರದ ಸಾರ್ವಜನಿಕ ಪ್ರದರ್ಶನ” ಎಂದು ಬಣ್ಣಿಸಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸಂಶೋಧನೆ, ವಕಾಲತ್ತು, ನೀತಿ ಮತ್ತು ಪ್ರಚಾರಗಳ ಹಿರಿಯ ನಿರ್ದೇಶಕಿ ಎರಿಕಾ ಗುವೆರಾ-ರೋಸಾಸ್ ಅವರು, ಪ್ಯಾಲೆಸ್ತೀನ್ ಕೈದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಸೈನಿಕರ ಮೇಲಿನ ಎಲ್ಲಾ ಆರೋಪಗಳನ್ನು ಇಸ್ರೇಲ್ ಕೈಬಿಟ್ಟ ಕೆಲವೇ ವಾರಗಳಲ್ಲಿ ಈ ಕಾನೂನು ಅಂಗೀಕಾರವಾಗಿದೆ ಎಂದಿದ್ದಾರೆ.

ವರ್ಷಗಳಿಂದ ಪ್ಯಾಲೆಸ್ತೀನಿಯರ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ಕಾನೂನು ಬಾಹಿರkNf ಹತ್ಯೆ ಸೇರಿದಂತೆ ಇತರ ಆತಂಕಕಾರಿ ದಮನ ಕ್ರಮಗಳನ್ನು ನೋಡುತ್ತಿದ್ದೇವೆ. ಇವುಗಳನ್ನು ಎಸಗುವವರು ಯಾವುದೇ ಶಿಕ್ಷೆಯಿಲ್ಲದೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವೇ ನಡೆಸುವ ಈ ಮರಣದಂಡನೆಗಳಿಗೆ ಅವಕಾಶ ನೀಡುವ ಹೊಸ ಕಾನೂನು ಅಂತಹ ನೀತಿಗಳ ಪರಮಾವಧಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೌನ್ಸಿಲ್ ಆಫ್ ಯುರೋಪ್

ಯುರೋಪ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಲೈನ್ ಬರ್ಸೆಟ್ ಅವರು, ಇಸ್ರೇಲ್‌ನ ಹೊಸ ಕಾನೂನಿನ ಅಂಗೀಕಾರವನ್ನು ‘ಗಂಭೀರ ಹಿನ್ನಡೆ’ ಎಂದು ಖಂಡಿಸಿದ್ದಾರೆ.

“ಮರಣದಂಡನೆಯು ಸಮಕಾಲೀನ ಮಾನವ ಹಕ್ಕುಗಳ ಮಾನದಂಡಗಳಿಗೆ ಹೊಂದಿಕೆಯಾಗದ ಒಂದು ಹಳೆಯ ಕಾಲದ ಕಾನೂನು ಪದ್ಧತಿಯಾಗಿದೆ. ಅಷ್ಟೇ ಅಲ್ಲದೆ, ತಾರತಮ್ಯದಿಂದ ಕೂಡಿದ ಯಾವುದೇ ರೀತಿಯ ಮರಣದಂಡನೆಯ ಅನ್ವಯವು ಕಾನೂನಿನ ಆಡಳಿತವಿರುವ ದೇಶದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಬರ್ಸೆಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ದೇಶವು ಯುರೋಪ್ ಕೌನ್ಸಿಲ್‌ನ ಹಲವಾರು ಒಪ್ಪಂದಗಳಿಗೆ ಬದ್ಧವಾಗಿದೆ ಮತ್ತು ಅದರ ವಿವಿಧ ಸಹಕಾರ ಕಾರ್ಯವಿಧಾನಗಳಲ್ಲಿ ಭಾಗವಹಿಸುತ್ತದೆ ಎಂಬ ಅಂಶವನ್ನೂ ಅವರು ನೆನಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಈ ಕಾನೂನಿಗೆ ಸಂಬಂಧಿಸಿದ ಮುಂಬರುವ ಬೆಳವಣಿಗೆಗಳನ್ನು ಯುರೋಪ್ ಕೌನ್ಸಿಲ್ ಸೂಕ್ಷ್ಮವಾಗಿ ಗಮನಿಸಲಿದೆ. ಇಸ್ರೇಲ್ ಸಹಿ ಮಾಡಿರುವ ಯುರೋಪ್ ಕೌನ್ಸಿಲ್ ಒಪ್ಪಂದಗಳ ಮೇಲೆ ಮತ್ತು ಅದು ಭಾಗವಹಿಸುವ ಸಹಕಾರ ಕಾರ್ಯವಿಧಾನಗಳ ಮೇಲೆ ಈ ಕಾನೂನು ಬೀರುವ ಪರಿಣಾಮಗಳನ್ನು ಕೌನ್ಸಿಲ್ ಪರಿಶೀಲಿಸಲಿದೆ ಎಂದು ಬರ್ಸೆಟ್ ಹೇಳಿದ್ದಾರೆ.

ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ

ಐರಿಶ್ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯು ಹೊರಡಿಸಿದ ಹೇಳಿಕೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ ಇಸ್ರೇಲ್‌ನ ಹೊಸ ಕಾನೂನನ್ನು ಖಂಡಿಸಿದ್ದಾರೆ. “ಈ ಹೊಸ ಕಾನೂನು ಪ್ಯಾಲೆಸ್ತೀನಿಯರಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ತಾರತಮ್ಯದ ಸ್ವರೂಪವನ್ನು ಹೊಂದಿರುವುದು ನನಗೆ ವಿಶೇಷವಾಗಿ ಕಳವಳ ಉಂಟುಮಾಡಿದೆ” ಎಂದು ಅವರು ಹೇಳಿದ್ದಾರೆ.

“ಬದುಕುವ ಹಕ್ಕು ಮೂಲಭೂತ ಮಾನವ ಹಕ್ಕು. ಐರ್ಲೆಂಡ್ ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಮರಣದಂಡನೆಯ ಬಳಕೆಯನ್ನು ಸತತವಾಗಿ ಮತ್ತು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳಿರುವ ಅವರು, ಈ ಕಾನೂನನ್ನು ಜಾರಿಗೆ ತರದಂತೆ ಇಸ್ರೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ

ಇಟಲಿಯ ವಿದೇಶಾಂಗ ಸಚಿವ ತಾಜಾನಿ ಅವರು ಈ ಕಾನೂನು ಅಧಿಕೃತವಾಗಿ ಅಂಗೀಕಾರವಾಗುವ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಹೊಸ ಮಸೂದೆಯನ್ನು ಹಿಂಪಡೆಯುವಂತೆ ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಇಸ್ರೇಲ್ ಸರ್ಕಾರಕ್ಕೆ ವಿನಂತಿಸಿವೆ ಎಂದು ತಾಜಾನಿ ತಿಳಿಸಿದ್ದಾರೆ.

ವಿಶೇಷವಾಗಿ ವಿಶ್ವಸಂಸ್ಥೆಯಲ್ಲಿ ಮತದಾನದ ಮೂಲಕ ಅಂಗೀಕರಿಸಲಾದ ನಿರ್ಣಯಗಳ ಪ್ರಕಾರ, ಮರಣದಂಡನೆಯ ಮೇಲಿನ ತಡೆಯಾಜ್ಞೆಗೆ ಬದ್ಧರಾಗಿರಬೇಕು. ಈ ಬದ್ಧತೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಾಜಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

“ನಮ್ಮ ಪಾಲಿಗೆ, ಜೀವನವು ಒಂದು ಸಂಪೂರ್ಣ ಮೌಲ್ಯವಾಗಿದೆ; ಶಿಕ್ಷೆಯನ್ನು ವಿಧಿಸುವ ಸಲುವಾಗಿ ಅದನ್ನು ಕಸಿದುಕೊಳ್ಳುವ ಹಕ್ಕನ್ನು ತನ್ನದಾಗಿಸಿಕೊಳ್ಳುವುದು ಮಾನವೀಯವಲ್ಲದ ಕ್ರಮವಾಗಿದೆ ಮತ್ತು ಇದು ವ್ಯಕ್ತಿಯ ಘನತೆಯನ್ನು ಉಲ್ಲಂಘಿಸುತ್ತದೆ” ಎಂದು ಅವರು ಹೇಳಿದ್ದಾರೆ.









 











ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...