Homeಮುಖಪುಟಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ theprint.in ವರದಿ ಮಾಡಿದೆ.

ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಟಿಎಂಸಿಯ 20 ಸಂಸದರು ಪಕ್ಷವನ್ನು ಬಿಟ್ಟು, ಸಂಸತ್ತಿನಲ್ಲಿ ಹೊಸ ಗುಂಪು ಕಟ್ಟಲು ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಬಂಡಾಯ ಟಿಎಂಸಿ ಪಾಳಯದಲ್ಲಿರುವ ಸಂಸದರ ನಿಖರ ಸಂಖ್ಯೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಒಟ್ಟು 28 ಟಿಎಂಸಿ ಸಂಸದರ ಪೈಕಿ 20 ಸಂಸದರ ಬೆಂಬಲ ತಮಗಿದೆ ಎಂದು ದಸ್ತಿದಾರ್ ಪಾಳಯ ಪ್ರತಿಪಾದಿಸುತ್ತಿದೆ, ಆದರೆ 16 ಸಂಸದರು ಬಂಡಾಯವೆದ್ದಿದ್ದಾರೆ ಮತ್ತು ಇನ್ನುಳಿದ 12 ಸಂಸದರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಬಣದಲ್ಲೇ ಇದ್ದಾರೆ ಎಂದು ಪಕ್ಷದ ಇಬ್ಬರು ಹಿರಿಯ ಸಂಸದರು ಹೇಳಿರುವುದಾಗಿ theprint.in ವರದಿ ಉಲ್ಲೇಖಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ, ಮೂರನೇ ಎರಡರಷ್ಟು (2/3) ಸಂಸದರು ತಾವು ಪ್ರತ್ಯೇಕ ಬಣವನ್ನು ರಚಿಸಲು ಬಯಸುತ್ತೇವೆ ಅಥವಾ ಎನ್‌ಡಿಎ ಜೊತೆ ಕೈಜೋಡಿಸುತ್ತೇವೆ ಎಂದು ಹೇಳುವುದು ಮಾತ್ರವೇ ಸಾಕಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದರ ಬದಲಾಗಿ, ಮೊದಲು ಇಡೀ ಬಣವು ಅಧಿಕೃತವಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳುವುದು ಕಡ್ಡಾಯವಾಗಿದೆ ಎಂದು ವರದಿ ಹೇಳಿದೆ.

ಸರಳವಾಗಿ ಹೇಳುವುದಾದರೆ, 20 ಸಂಸದರು ಕೇವಲ “ನಾವು ಟಿಎಂಸಿ ಬಿಟ್ಟು ಪ್ರತ್ಯೇಕ ಗುಂಪು ಆಗುತ್ತೇವೆ” ಅಥವಾ “ನಾವು ಎನ್‌ಡಿಎ ಕೂಟಕ್ಕೆ ಬೆಂಬಲ ನೀಡುತ್ತೇವೆ” ಎಂದು ಘೋಷಿಸಲು ಬರುವುದಿಲ್ಲ.

ಅವರು ತಮ್ಮ ಸಂಸದ ಸ್ಥಾನ ಉಳಿಸಿಕೊಳ್ಳಬೇಕಾದರೆ, ತಮ್ಮ ಇಡೀ ಗುಂಪನ್ನು ಅಧಿಕೃತವಾಗಿ ಮತ್ತೊಂದು ರಾಜಕೀಯ ಪಕ್ಷದೊಂದಿಗೆ (ಉದಾಹರಣೆಗೆ ಬಿಜೆಪಿ ಅಥವಾ ಬೇರೆ ಪಕ್ಷ) ಸಂಪೂರ್ಣವಾಗಿ ವಿಲೀನ ಮಾಡಲೇಬೇಕು.

ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಪ್ರಕಾರ, ಕೇವಲ ಪಕ್ಷ ಸೀಳುವುದು ಅಥವಾ ಪ್ರತ್ಯೇಕ ಬಣ ರಚಿಸುವುದನ್ನು ಈಗ ನಿಷೇಧಿಸಲಾಗಿದೆ. ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ಒಂದಾದರೆ ಮಾತ್ರ ಇವರ ಸ್ಥಾನ ಉಳಿಯುತ್ತದೆ.

ಟಿಎಂಸಿ ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿದ್ದಾಗ, ಅಂದರೆ ಸೋಮವಾರದಂದು ಈ ಆಂತರಿಕ ಭಿನ್ನಮತ ಅಥವಾ ಬಣ ರಾಜಕೀಯದ ಜಗಳ ಬೆಳಕಿಗೆ ಬಂತು.

ಅದೇ ದಿನ, ಟಿಎಂಸಿ ಸಂಸದೆ ಶರ್ಮಿಳಾ ಸರ್ಕಾರ್ ಅವರು ಪಕ್ಷದಲ್ಲಿನ “ಭ್ರಷ್ಟಾಚಾರ”ವೇ ಈ ನಿರ್ಧಾರಕ್ಕೆ ಕಾರಣ ಎಂದು ದೂರಿದ್ದಲ್ಲದೆ, ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಲು 20 ಟಿಎಂಸಿ ಸಂಸದರು ತಮ್ಮದೇ ಆದ “ಪ್ರತ್ಯೇಕ ಬಣ” ರಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ದೆಹಲಿಯ ನಿವಾಸದಲ್ಲಿ ಬಂಡಾಯ ಸಂಸದರ ಸಭೆ ನಡೆದಿದೆ ಎಂದು ವರದಿಯಾಗಿದೆ, ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಟಿಎಂಸಿ ಸಂಸದರನ್ನು ಭೇಟಿಯಾಗಿದ್ದಾರೆ.

ಇದಕ್ಕೂ ಮುನ್ನ, ಉಚ್ಚಾಟಿತ ಟಿಎಂಸಿ ನಾಯಕ ರಿತಾಬ್ರತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕು ಮಂಡಿಸಿ, ತಮಗೆ 58 ಟಿಎಂಸಿ ಶಾಸಕರ ಬೆಂಬಲವಿದೆ ಎಂದು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪತ್ರ ಬರೆದಿದ್ದಾರೆ. 

ಸ್ಪೀಕರ್ ರಿತಾಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಅಂಗೀಕರಿಸಿದ್ದರೂ ಸಹ, ಈ ಆಯ್ಕೆಯ ಸಂಪೂರ್ಣ ಹಕ್ಕು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಸೇರಿದ್ದಾಗಿದೆ ಎಂದು ಸಾಂವಿಧಾನಿಕ ತಜ್ಞರು ತಿಳಿಸಿದ್ದಾರೆ ಎಂದು theprint.in ವರದಿ ಹೇಳಿದೆ.

ಬಣ ಜಗಳ ಈಗ ಲೋಕಸಭೆಯನ್ನು ತಲುಪಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ, ಲೋಕಸಭೆಯ ಮೂರನೇ ಎರಡರಷ್ಟು (2/3) ಸಂಸದರು ಕೇವಲ ಪ್ರತ್ಯೇಕ ಬಣ ರಚಿಸಲು ಬಯಸುವುದರಿಂದ ಅದು ಅಧಿಕೃತ ವಿಲೀನ ಎಂದು ಪರಿಗಣಿಸಲ್ಪಡದ ಕಾರಣ, ಅವರು ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ತಜ್ಞರು ತಿಳಿಸಿದ್ದಾರೆ. 

ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಅವರ ಪ್ರಕಾರ, 20 ಸಂಸದರು ಪಕ್ಷ ತೊರೆದು ಪ್ರತ್ಯೇಕ ಬಣ ರಚಿಸಿದರೆ ಮಾತ್ರ ಅನರ್ಹತೆಯಿಂದ ವಿನಾಯಿತಿ ದೊರೆಯುವುದಿಲ್ಲ. ಸಂವಿಧಾನದ 10ನೇ ಪರಿಚ್ಛೇದದಡಿ ಅವರು ಅನರ್ಹತೆಯ ಅಪಾಯವನ್ನು ಎದುರಿಸಬೇಕಾಗಬಹುದು. 10ನೇ ಪರಿಚ್ಛೇದದ ಪ್ರಕಾರ, ಸಂಸದರು ಸ್ವಯಂಪ್ರೇರಿತವಾಗಿ ಪಕ್ಷದ ಸದಸ್ಯತ್ವ ತ್ಯಜಿಸಿದರೆ ಅಥವಾ ಪಕ್ಷದ ವಿಪ್ ಗೆ ವಿರುದ್ಧವಾಗಿ ನಡೆದುಕೊಂಡರೆ ಅವರನ್ನು ಅನರ್ಹಗೊಳಿಸಬಹುದು.

ತಜ್ಞರ ಅಭಿಪ್ರಾಯದಂತೆ, ಅನರ್ಹತೆಯಿಂದ ಪಾರಾಗಲು ಇರುವ ಏಕೈಕ ಅವಕಾಶವೆಂದರೆ ರಾಜಕೀಯ ಪಕ್ಷದ ವಿಲೀನ. ಅಂದರೆ, ಟಿಎಂಸಿ ಪಕ್ಷವೇ ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ವಿಲೀನಗೊಳ್ಳಬೇಕು. ಆ ವಿಲೀನಕ್ಕೆ ಪಕ್ಷದ ಮೂರನೇ ಎರಡರಷ್ಟು ಸಂಸದರು ಅಥವಾ ಶಾಸಕರು ಒಪ್ಪಿಗೆ ನೀಡಿದರೆ ಮಾತ್ರ ಕಾನೂನಿನ ರಕ್ಷಣೆ ದೊರೆಯುತ್ತದೆ.

ಈ ಹಂತದಲ್ಲಿ ಮೂರನೇ ಎರಡರಷ್ಟು ಸಂಖ್ಯೆಗೆ ಯಾವುದೇ ಮಹತ್ವವಿಲ್ಲ. ಮೊದಲು ಪಕ್ಷದ ವಿಲೀನವಾಗಬೇಕು. ಅದರ ನಂತರ ಮಾತ್ರ ಆ ಸಂಖ್ಯೆಗೆ ಕಾನೂನುಬದ್ಧ ಅರ್ಥ ಬರುತ್ತದೆ ಎಂದು ಆಚಾರ್ಯ ಹೇಳಿದ್ದಾರೆ.

ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ವಿಲೀನ ಎಂದರೆ ಸಂಸದರ ಗುಂಪಿನ ವಿಲೀನವಲ್ಲ, ರಾಜಕೀಯ ಪಕ್ಷದ ಸಂಘಟನೆಯ ವಿಲೀನ. ಕೇವಲ ಪ್ರತ್ಯೇಕ ಬಣ ರಚಿಸುವುದರಿಂದ ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ.

ಹಿಂದೆ ಪಕ್ಷದ ಮೂರನೇ ಒಂದು ಭಾಗದ ಸದಸ್ಯರು ಬೇರ್ಪಟ್ಟರೆ ಅನರ್ಹತೆಯಿಂದ ವಿನಾಯಿತಿ ಪಡೆಯುವ ಅವಕಾಶ ಇತ್ತು. ಆದರೆ 2004ರ ತಿದ್ದುಪಡಿಯ ಮೂಲಕ ಆ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ. ಈಗ ವಿಲೀನದ ಸಂದರ್ಭದಲ್ಲಷ್ಟೇ ವಿನಾಯಿತಿ ಸಾಧ್ಯವಿದೆ. ಕಿರ್ಪಾಲ್ ಅವರ ಪ್ರಕಾರ, ಶಿವಸೇನಾ ಪ್ರಕರಣ ಸೇರಿದಂತೆ ವಿವಿಧ ನ್ಯಾಯಾಂಗ ತೀರ್ಪುಗಳೂ ಪಕ್ಷದ ಸಂಘಟನೆಯ ಮಟ್ಟದಲ್ಲಿ ವಿಲೀನ ಅಥವಾ ವಿಭಜನೆಗೆ ಮಹತ್ವ ನೀಡಿವೆ.

ಹೀಗಾಗಿ, 20 ಟಿಎಂಸಿ ಸಂಸದರು ಪ್ರತ್ಯೇಕ ಬಣ ರಚಿಸಿದರೂ, ಟಿಎಂಸಿ ಪಕ್ಷವೇ ಅಧಿಕೃತವಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳದ ಹೊರತು ಅವರು ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆಯ ಅಪಾಯದಿಂದ ಸಂಪೂರ್ಣವಾಗಿ ಪಾರಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 









ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...