HomeಅಂಕಣಗಳುKarnataka against SIRಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

- Advertisement -
- Advertisement -

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು ‘ಡೆಕನ್ ಹೆರಾಲ್ಡ್’ ವರದಿ ಮಾಡಿದೆ. 

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಮತದಾರರು ತಮ್ಮ ಕುಟುಂಬಸ್ಥರೊಂದಿಗೆ ಕಡ್ಡಾಯ ವಂಶಾವಳಿ ಜೋಡಣೆ (Progeny Mapping) ಅಥವಾ ಲಿಂಕ್ ಸ್ಥಾಪಿಸಲು ಹೆಣಗಾಡುತ್ತಿರುವಾಗ ಈ ವ್ಯವಸ್ಥಿತ ಲೋಪ ಬಯಲಾಗಿದೆ.

ವಿಶೇಷವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ. ನಾಗೊಂಡನಹಳ್ಳಿ, ಗಾಂಧಿನಗರ, ವಿಜಯನಗರ, ವಿನಾಯಕನಗರ, ಹಾಗದೂರು, ಇಮ್ಮಡಿಹಳ್ಳಿ, ಅಂಬೇಡ್ಕರ್ ನಗರ, ಪ್ರಶಾಂತ್ ಲೇಔಟ್, ಪಟ್ಟಂದೂರು ಅಗ್ರಹಾರ, ವೈಟ್‌ಫೀಲ್ಡ್ ಮತ್ತು ನಲ್ಲೂರಹಳ್ಳಿ ನಿವಾಸಿಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾವು ವರ್ಷಗಳಿಂದ ಸತತವಾಗಿ ಮತ ಚಲಾಯಿಸುತ್ತಾ ಬಂದಿದ್ದ ಮತಗಟ್ಟೆಗಳು ಎಸ್‌ಐಆರ್ (SIR) ಪೋರ್ಟಲ್ ಮತ್ತು ಬೂತ್ ಮಟ್ಟದ ಅಧಿಕಾರಿಗಳ (BLO) ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ 2002ರ ಡಿಜಿಟಲೀಕೃತ ಮೂಲ ದತ್ತಾಂಶದಲ್ಲಿ (Database) ಪತ್ತೆಯಾಗುತ್ತಿಲ್ಲ ಎಂದು ಮತದಾರರು ದೂರಿದ್ದಾರೆ.

ವೈಟ್‌ಫೀಲ್ಡ್ ಬಳಿಯ ಹಾಗದೂರಿನ ರೈತ ರಾಜಪ್ಪ ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದು, “ನಮ್ಮ ಕುಟುಂಬವು ಕಳೆದ ಐದು ತಲೆಮಾರುಗಳಿಗೂ ಹೆಚ್ಚು ಕಾಲ ಇಲ್ಲೇ ವಾಸಿಸುತ್ತಿದೆ. ನಾವು ಯಾವಾಗಲೂ ಇಮ್ಮಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲೇ ಮತ ಚಲಾಯಿಸುತ್ತಾ ಬಂದಿದ್ದೇವೆ. ಆದರೆ, ಈಗ 2002ರ ಡಿಜಿಟಲ್ ಪಟ್ಟಿಯಲ್ಲಿ ಆ ಮತಗಟ್ಟೆಯನ್ನೇ ಪತ್ತೆಹಚ್ಚಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತದಾರರ ಹಕ್ಕುಗಳ ಕಾರ್ಯಕರ್ತ ಮಣಿ ನಿಸರ್ಗ ಅವರು ಮಾತನಾಡಿ, “ಮಹದೇವಪುರ ವಿಧಾನಸಭಾ ಕ್ಷೇತ್ರದ ಕನಿಷ್ಠ 50 ಮತಗಟ್ಟೆಗಳು 2002ರ ಡಿಜಿಟಲೀಕರಣಗೊಂಡ ಪಟ್ಟಿಯಿಂದ ಸಂಪೂರ್ಣವಾಗಿ ಕಾಣೆಯಾಗಿವೆ. ನಾವು ನೆರೆಯ ಆನೇಕಲ್ ಮತ್ತು ಹೊಸಕೋಟೆ ಕ್ಷೇತ್ರಗಳ ಡಿಜಿಟಲ್ ಪಟ್ಟಿಗಳನ್ನು ಸಹ ಪರಿಶೀಲಿಸಿದ್ದೇವೆ. ಆದರೆ ಈ ಮತಗಟ್ಟೆಗಳು ಅಲ್ಲಿಯೂ ಪತ್ತೆಯಾಗಿಲ್ಲ. 2002 ಕ್ಕಿಂತ ಮುಂಚಿನಿಂದಲೂ ಅನೇಕ ಮತದಾರರು ಇದೇ ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದಾಗಿ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ” ಎಂದು ಮಾಹಿತಿ ನೀಡಿದ್ದಾರೆ.

ಈ ಆತಂಕಗಳ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಇದಕ್ಕೆ ತಾಂತ್ರಿಕ ಮತ್ತು ಭೌಗೋಳಿಕ ಕಾರಣಗಳನ್ನು ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ, ಇಂತಹ ಎಲ್ಲಾ ಪ್ರಕರಣಗಳು ದಾಖಲೆಗಳು ಸಂಪೂರ್ಣವಾಗಿ ನಾಪತ್ತೆಯಾಗಿವೆ ಎಂಬುದನ್ನು ಸೂಚಿಸುವುದಿಲ್ಲ. 2008 ರ ಕ್ಷೇತ್ರ ಪುನರ್ವಿಂಗಡಣೆಯ (Delimitation) ಸಮಯದಲ್ಲಿ, ಹಿಂದಿನ ವರ್ತೂರು ವಿಧಾನಸಭಾ ಕ್ಷೇತ್ರವನ್ನು ರದ್ದುಪಡಿಸಲಾಗಿತ್ತು. ಅದರ ಪ್ರದೇಶಗಳನ್ನು ಮುಖ್ಯವಾಗಿ ಮಹದೇವಪುರ, ಸಿವಿ ರಾಮನ್ ನಗರ ಮತ್ತು ಆನೇಕಲ್ ಕ್ಷೇತ್ರಗಳ ನಡುವೆ ಮರುಹಂಚಿಕೆ ಮಾಡಲಾಯಿತು. ತದನಂತರದ ತರ್ಕಬದ್ಧಗೊಳಿಸುವಿಕೆ (Rationalisation) ಪ್ರಕ್ರಿಯೆಯಲ್ಲಿ ಮತಗಟ್ಟೆಗಳ ವಿಲೀನ, ಸೇರ್ಪಡೆ ಮತ್ತು ಅಳಿಸುವಿಕೆ ನಡೆದಿರುವುದರಿಂದ, “ಇಷ್ಟು ಹಳೆಯದಾದ ಮೂಲ ಮತಗಟ್ಟೆಗಳನ್ನು ಈಗಿನ ಡಿಜಿಟಲ್ ವ್ಯವಸ್ಥೆಯಲ್ಲಿ ಹುಡುಕುವುದು ಕಷ್ಟವಾಗಿದೆ ಎನ್ನಲಾಗಿದೆ.” 

ಇದೇ ವಿಷಯವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಪ್ರತಿಕ್ರಿಯಿಸಿ, “ಬೂತ್‌ಗಳು ಕಾಣೆಯಾಗಿರುವ ಮತ್ತು ತಾಂತ್ರಿಕ ವೈಪರೀತ್ಯಗಳ ಕುರಿತು ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು. 2002 ರಲ್ಲಿ ರಾಜ್ಯದಲ್ಲಿ ಸುಮಾರು 34,000 ಮತಗಟ್ಟೆಗಳಿದ್ದವು, ಆದರೆ ಇಂದು ಅವುಗಳ ಸಂಖ್ಯೆ ಸುಮಾರು 59,000 ಕ್ಕೆ ಏರಿಕೆಯಾಗಿದೆ. ಡಿಜಿಟಲೀಕರಿಸಿದ ದಾಖಲೆಗಳಲ್ಲಿ ಮತಗಟ್ಟೆಗಳು ಕಾಣೆಯಾಗಿರುವುದು ಕಂಡುಬಂದರೆ, ಜಿಲ್ಲಾ ಚುನಾವಣಾ ಅಧಿಕಾರಿಗಳು ಆ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ” ಎಂದು ಭರವಸೆ ನೀಡಿದ್ದಾರೆ.

2002 ರ ಪಟ್ಟಿಯಲ್ಲಿ ವಂಶಾವಳಿ ಜೋಡಣೆಗಾಗಿ (Mapping) ತಮ್ಮ ಹೆಸರುಗಳನ್ನು ಕಂಡುಹಿಡಿಯಲು ಸಾಧ್ಯವಾಗದ ಮತದಾರರು ಸದ್ಯದ ವಿವರಗಳೊಂದಿಗೆ ಸಹಿ ಮಾಡಿದ ‘ಗಣತಿ ನಮೂನೆ’ಯನ್ನು (Enumeration Form) ಭರ್ತಿ ಮಾಡಿ ಸಲ್ಲಿಸಬೇಕು. ನೋಟಿಸ್ ಸ್ವೀಕರಿಸಿದ ನಂತರ ಅವರು ಚುನಾವಣಾ ಆಯೋಗವು ಅನುಮೋದಿಸಿದ 12 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. 

ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರವೂ ಎಸ್‌ಐಆರ್ (SIR) ಗಣತಿ ನಮೂನೆಗಳನ್ನು ಸ್ವೀಕರಿಸದ ಅಥವಾ ಹೆಸರು ಬಿಟ್ಟುಹೋಗಿರುವ ಮತದಾರರು ಹೊಸದಾಗಿ ಹೆಸರು ಸೇರಿಸಲು ಕಡ್ಡಾಯವಾಗಿ ನಮೂನೆ-6 (Form-6) ಅನ್ನು ಸಲ್ಲಿಸಬೇಕು ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.

“ಮತ್ತೊಂದೆಡೆ, ಸೈಯದ್ ಬಿಲಾಲ್ ಇರ್ಫಾನ್ ಎಂಬುವವರು ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು, ‘ಇದು ಕಂಪ್ಯೂಟರ್ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಡೆದಿರುವ ತಾಂತ್ರಿಕ ಲೋಪ (Backend Database Indexing)’ ಎಂದು ಆರೋಪಿಸಿದ್ದಾರೆ. ಕಾಗದದ ಮೇಲಿರುವ (Physical Copy) 2002ರ ಮೂಲ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ, ಆನ್‌ಲೈನ್ ಪೋರ್ಟಲ್ ಮತ್ತು ಬಿಎಲ್‌ಒ (BLO) ಆಪ್‌ಗಳಲ್ಲಿ ಹುಡುಕಿದಾಗ ‘ದಾಖಲೆಗಳು ಕಂಡುಬಂದಿಲ್ಲ’ (No Records Found) ಎಂಬ ತಪ್ಪು ಸಂದೇಶ ಬರುತ್ತಿದೆ. ಇದು ಡಿಜಿಟಲ್ ಮೂಲಕ ಹೆಸರುಗಳನ್ನು ಜೋಡಿಸುವ ಕೆಲಸಕ್ಕೆ ಅಡ್ಡಿಯಾಗಿದೆ.” ಎಂದು ತಿಳಿಸಿದ್ದಾರೆ. 

ವರ್ತೂರಿನ ಸುಮಾರು 8,878 ಮತದಾರರನ್ನು ಒಳಗೊಂಡ ಭಾಗ (Part) 166 ರಿಂದ 180 ರವರೆಗಿನ ವ್ಯಾಪ್ತಿಯಲ್ಲಿ ಇಂತಹ ವೈಪರೀತ್ಯಗಳನ್ನು ಅವರು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಡಿಜಿಟಲೀಕರಿಸಿದ ಡೇಟಾಬೇಸ್‌ನ ರಾಜ್ಯವ್ಯಾಪಿ ತಪಾಸಣೆ (Audit) ನಡೆಸಬೇಕು, ಸಮಸ್ಯೆ ಬಗೆಹರಿಯುವವರೆಗೆ ಹಸ್ತಚಾಲಿತ (Manual) ಪರಿಶೀಲನೆಗೆ ಅವಕಾಶ ನೀಡಬೇಕು ಮತ್ತು ತಾಂತ್ರಿಕ ವೈಫಲ್ಯಗಳಿಂದಾಗಿ ಯಾವುದೇ ನಿಜವಾದ ಮತದಾರರು ಹಕ್ಕಿನಿಂದ ವಂಚಿತರಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

2002ರ ಎಸ್‌ಐಆರ್ ನಂತರ ವಿಶೇಷ ನೋಂದಣಿ ಅಭಿಯಾನಗಳ ಮೂಲಕ ಕೆಲವು ಮತದಾರರನ್ನು ಸೇರಿಸಲಾಗಿತ್ತು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಉದಾಹರಣೆಗೆ, ಮಾರ್ಚ್ 2002 ರಲ್ಲಿ ಕೊನೆಯ SIR ಮುಕ್ತಾಯವಾಯಿತು, ಆದರೆ ಜುಲೈ-ಅಕ್ಟೋಬರ್ 2002 ರಲ್ಲಿ ನಡೆದ ವಿಶೇಷ ನೋಂದಣಿ ಶಿಬಿರದ ಸಮಯದಲ್ಲಿ ಹೊಸ ಮತದಾರರನ್ನು ಪೂರಕ ಪಟ್ಟಿಗೆ (Supplementary Roll) ಸೇರಿಸಲಾಯಿತು. ಅಂತಹ ಮತದಾರರ ಗುರುತಿನ ಚೀಟಿಯಲ್ಲಿಯೇ ನೋಂದಣಿ ದಿನಾಂಕವಿರುತ್ತದೆ. ಅವರು ನಂತರ ಅದೇ ಮತಗಟ್ಟೆಯಿಂದ ಮತ ಚಲಾಯಿಸಿದ್ದರೂ, ಮಾರ್ಚ್ 2002 ರ ಎಸ್‌ಐಆರ್ ಮೂಲ ಪಟ್ಟಿಯಲ್ಲಿ ಅವರ ಹೆಸರುಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇದೇ ರೀತಿಯ ದೂರು ಬ್ಯಾಟರಾಯನಪುರ ಕ್ಷೇತ್ರದಿಂದಲೂ ಕೇಳಿಬಂದಿದೆ. ಇಲ್ಲಿನ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯ ಹಲವಾರು ಮತಗಟ್ಟೆಗಳು ಮತ್ತು ಮತದಾರರ ದಾಖಲೆಗಳು ಇಸಿಐ (ECI) ವೆಬ್‌ಸೈಟ್‌ನಿಂದ ಕಾಣೆಯಾಗಿವೆ ಎಂದು ಆರೋಪಿಸಿ, ಬಿಜೆಪಿಯ ಮಾಜಿ ಕೌನ್ಸಿಲರ್ ಅಶ್ವತ್ಥನಾರಾಯಣ ಗೌಡ ಅವರು ಸಿಇಒಗೆ ಅರ್ಜಿ ಸಲ್ಲಿಸಿದ್ದಾರೆ. 

ಯಲಹಂಕದ ಗಡಿ ವಿಂಗಡಣೆಯ ನಂತರ, ಹಳೆಯ ಮತಗಟ್ಟೆ ಸಂಖ್ಯೆ 206 ರಿಂದ 215 ರಲ್ಲಿದ್ದ ಸುಮಾರು 15,000 ಮತದಾರರು ಈಗ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಪುಲಕೇಶಿನಗ‍ರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಿಗೆ ಹರಡಿಕೊಂಡಿದ್ದಾರೆ. ಆದರೆ ಮ್ಯಾಪಿಂಗ್ ಸಮಯದಲ್ಲಿ ಇವರನ್ನು ಕೈಬಿಡಲಾಗಿದೆ. ಒಟ್ಟಾರೆಯಾಗಿ ಸುಮಾರು 30,000 ಮತದಾರರು ಇದರಿಂದ ಪ್ರಭಾವಿತರಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅಶ್ವತ್ಥನಾರಾಯಣ ಗೌಡರು ಒತ್ತಾಯಿಸಿದ್ದಾರೆ. 

ತಾಂತ್ರಿಕ ಡಿಜಿಟಲೀಕರಣದ ಹೆಸರಿನಲ್ಲಿ ಸಾಮಾನ್ಯ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದು, ಚುನಾವಣಾ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಿ ಈ ಲೋಪದೋಷಗಳನ್ನು ಸರಿಪಡಿಸಬೇಕಿದೆ.

ವರದಿ ಕೃಪೆ: ಡೆಕನ್ ಹೆರಾಲ್ಡ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...