HomeಅಂಕಣಗಳುKarnataka against SIRSIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ ಮಾಡಿದ್ದ ನಾಗರಿಕ ಸಂಘಟನೆಗಳು, ಇದೀಗ ನೋಟಿಸ್ ಮತ್ತು ವಿಚಾರಣೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಎರಡನೇ ಎಫ್‌ಐಆರ್ ಬಿಡುಗಡೆಗೊಳಿಸಿದೆ.

ಶನಿವಾರ (ಸೆ.12) ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್‌ಐಆರ್ ವಿರೋಧಿ ಜಾತ್ಯಾತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಎಸ್‌ಐಆರ್ ಮೂಲಕ ಕರ್ನಾಟಕದ ಸುಮಾರು 1 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಸಂಚು ಹಾಗೂ ಲಕ್ಷಾಂತರ ಅರ್ಹ ಮತದಾರರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಎಫ್‌ಐಆರ್‌ ಬಿಡುಗಡೆ ಮಾಡಿದರು.

“ಈ ಹಿಂದೆಎನ್ಯುಮರೇಷನ್ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಕುರಿತು ನಾಗರಿಕ ಸಮುದಾಯದ ಕಡೆಯಿಂದ FIR–1ನ್ನು ಹೊರತರಲಾಗಿತ್ತು. ಅದರಲ್ಲಿ, ಜನರಿಗೆ ಸೂಕ್ತ ಮಾಹಿತಿ ನೀಡದೆ, ಬಿಎಲ್‌ಒಗಳಿಗೆ ಸೂಕ್ತ ತರಬೇತಿ ಕೊಡದೆ ಗಡಿಬಿಡಿಯಲ್ಲಿ ಎನ್ಯುಮರೇಷನ್ ಪ್ರಕ್ರಿಯೆ ನಡೆಸಿ ರಾಜ್ಯದ 1 ಕೋಟಿ 8 ಲಕ್ಷ ಮತದಾರರನ್ನು ASDDO ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಹೊರ ಹಾಕಿದ ಅಕ್ರಮಗಳನ್ನುದಾಖಲಿಸಲಾಗಿತ್ತು. ಈಗ, FIR-2ರಲ್ಲಿ ನೋಟೀಸ್ ಮತ್ತು ಹಿಯರಿಂಗ್ ಅವಧಿಯಲ್ಲಿ ಚುನಾವಣಾ ಆಯೋಗ ಎಸಗಿರುವ ಅಕ್ರಮಗಳನ್ನುದಾಖಲಿಸಲಾಗಿದೆ” ಎಂದು ಒಕ್ಕೂಟ ಹೇಳಿದೆ.

ಚುನಾವಣಾ ಆಯೋಗ ಮ್ಯಾಪ್ ಮಾಡದವರು ಮತ್ತು ತಾರ್ಕಿಕ ವೈರುದ್ಯ ಉಲ್ಲವರು ಎಂದು ಕರಡು ಪಟ್ಟಿಯಲ್ಲಿರುವ 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಿದೆ. ಈ ನೋಟಿಸ್ ನೀಡುವ ಮತ್ತು ವಿಚಾರಣೆ ಪ್ರಕ್ರಿಯೆಯಲ್ಲಿ ಈ ಕೆಳಗಿನ ಅಕ್ರಮಗಳನ್ನು ಚುನಾವಣಾ ಆಯೋಗ ಎಸಗಿದೆ ಎಂದು ಒಕ್ಕೂಟ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

ಅಕ್ರಮ 1-ಅಬ್ಜೆಕ್ಷನ್ ಸಲ್ಲಿಸಲು ಸಮಯವಕಾಶವನ್ನೇ ನೀಡಿಲ್ಲ : ಅಬ್ಜೆಕ್ಷನ್ ಸಲ್ಲಿಸಲು ಜನರಿಗೆ ಒಂದು ತಿಂಗಳ ಕಾಲಾವಕಾಶ ನೀಡುವುದಾಗಿ ಚುನಾವಣಾ ಆಯೋಗ ಹೇಳಿತ್ತು. ಒಂದು ತಿಂಗಳು ಸಾಲುವುದಿಲ್ಲ, ಕನಿಷ್ಟ 6 ತಿಂಗಳ ಸಮಯಾವಕಾಶ ನೀಡಬೇಕು ಎಂದು ನಾಗರಿಕ ಸಂಘಟನೆಗಳು ಕೇಳಿದ್ದವು. ಆದರೆ, ನೋಟಿಫಿಕೇಷನ್ ಅವಧಿ ಆಗಸ್ಟ್ 24ರಿಂದ ಪ್ರಾರಂಭವಾದರೂ ಸೆಪ್ಟೆಂಬರ್ 4ರ ತನಕ ಬಹುತೇಕ ಕಡೆಗಳಲ್ಲಿ ನೋಟೀಸ್ ಅನ್ನೇ ವಿತರಿಸಿರಲಿಲ್ಲ. ಬಹುಪಾಲು ಕಡೆ 5ರಂದು ನೋಟೀಸ್‌ಗಳನ್ನು ನೀಡಿ 7ಕ್ಕೆ ಹಿಯರಿಂಗ್ ಅಟೆಂಡ್ ಮಾಡಲು ತಿಳಿಸಲಾಗಿದೆ. ಅನಕ್ಷರಸ್ತ ಜನರಿಗೆನೋಟಿಸ್ ಅರ್ಥವೇ ಆಗಿಲ್ಲ. ಏನು ಮಾಡಬೇಕು ಎಂದು ತಿಳಿಸುವವರೂ ಇಲ್ಲ. ಬಹುಪಾಲು ಜನರಬಳಿ ಎಸ್‌ಐಆರ್‌ಗೆ ಕೇಳುವ ದಾಖಲೆಗಳಿಲ್ಲ. ದಾಖಲೆಗಳನ್ನು ಪಡೆಯಲು ಸಮಯವೂ ಇಲ್ಲ. ದಾಖಲೆಗಳನ್ನು ಸುಲಭವಾಗಿ ನೀಡುತ್ತಲೂಇಲ್ಲ. ಖುದ್ದಾಗಿ ಅವರೇ ಬರಬೇಕು ಎಂದು ಹೇಳುತ್ತಿರುವುದರಿಂದ ದುಡಿಯಲು ದೂರದ ಊರುಗಳಿಗೆ ಹೋದವರು ರಜಪಡೆದು ವಾಪಾಸ್ ಬರಲೂ ಆಗುತ್ತಿಲ್ಲ. ಅವರಪರವಾಗಿಹಾಜರಾಗಲುಕುಟುಂಬದವರಿಗೂಅವಕಾಶ ನೀಡುತ್ತಿಲ್ಲ. ಒಟ್ಟಿನಲ್ಲಿ ಜನರು ಆತಂಕದಲ್ಲಿದ್ದಾರೆ. ದಾರಿಕಾಣದ ಪರಿಸ್ಥಿತಿನಿರ್ಮಾಣವಾಗಿದೆ. ಅಲೆಮಾರಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು, ಅನಕ್ಷರಸ್ಥರು, ಅನಾಥರು, ಕಡು ಬಡವರನ್ನು ದಾಖಲೆ ಇಲ್ಲ ಎಂದು ಮತಪಟ್ಟಿಯಿಂದ ಹೊರಹಾಕಲ್ಪಡುವುದು ಸ್ಪಷ್ಟವಾಗಿದೆ.

ಅಕ್ರಮ 2-ಹೇಳಿದ್ದಕ್ಕಿಂತ ಹೆಚ್ಚು ದಾಖಲೆಗಳನ್ನು ಕೊಡುವಂತೆ ಬಲವಂತ : ಅನೇಕ ಕಡೆ ಹಿಯರಿಂಗ್ ಅನ್ನು ಪೋಲೀಸ್ ವೆರಿಫಿಕೇಷನ್ ರೀತಿ ನಡೆಸಲಾಗುತ್ತಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಕೇಳಲಾಗುತ್ತಿದೆ. ಎರಡು ಮಾತ್ರವಲ್ಲ 8,9 ದಾಖಲೆಗಳ ತನಕ ಕೇಳಿರುವ ಉದಾಹರಣೆಗಳಿವೆ. ಎಸ್‌ಐಆರ್ ನೋಟೀಸ್‌ನಲ್ಲಿ ಸೂಚಿಸಲಾಗಿರುವ ದಾಖಲೆಗಳಿಗಿಂತಲೂ ಹೆಚ್ಚಿನ ದಾಖಲೆಗಳನ್ನು [ಉದಾ: ಬ್ಯಾಂಕ್ ಪಾಸ್] ಆ್ಯಪ್ ಕೇಳುತ್ತಿದೆ. ದಾಖಲೆಗಳನ್ನು ಜೋಡಿಸಲು ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಅನಕ್ಷರಸ್ತ ಹಾಗೂ ಬಡ ಕುಟುಂಬದ ಜನರು ಆ್ಯಪ್ ಕೇಳುವ ದಾಖಲೆಗಳನ್ನು ನೀಡಲಾಗದೆ ಹತಾಶರಾಗಿ ಕಣ್ಣೀರು ಹಾಕುತ್ತಾ ಹಿಂತಿರುಗುತ್ತಿದ್ದಾರೆ.

ಅಕ್ರಮ 3–ಅರ್ಹ ಮತದಾರರನ್ನೂ ದಾಖಲೆ ಹೆಸರಿನಲ್ಲಿ ಡಿಲೀಟ್ ಮಾಡುವ ಹುನ್ನಾರ: ದಾಖಲೆಗಳು ಇಲ್ಲದೆ ಇದ್ದರೆ ಮತಗಳನ್ನು ಡಿಲೀಟ್ ಮಾಡಲಾಗುತ್ತದೆ ಎಂದು ಹೇಳುವುದು ಭಯೋತ್ಪಾದನಾ ಕೃತ್ಯವಾಗಿದೆ. ಡಿಲೀಟ್ ಮಾಡುವುದು ಸಂವಿಧಾನಿಕ ಅಪರಾಧ. ಯಾರದೇ ಮತಗಳನ್ನು ಡಿಲೀಟ್ ಮಾಡಬೇಕಾದರೂ ನಾಲ್ಕರಲ್ಲಿ ಒಂದು ಕಾರಣ ಸಾಬೀತಾಗಲೇಬೇಕು. [ಭಾರತೀಯ ಪ್ರಜೆ ಅಲ್ಲ, 18 ವರ್ಷ ವಯಸ್ಸಾಗಿಲ್ಲ, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಅಥವಾ ಯಾವುದಾದರೂ ನ್ಯಾಯಲಯ ಮತರದ್ದತಿಯ ಶಿಕ್ಷೆನೀಡಿದೆ]. ನಾಲ್ಕರಲ್ಲಿ ಯಾವುದೂ ಕಾರಣವಿಲ್ಲದೆ ಅವರು ಕೇಳುವ ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಮತಪಟ್ಟಿಯಿಂದ ತೆಗೆದುಹಾಕುವುದು ಅನೈತಿಕ, ಅಕ್ರಮ ಘೋರ ಅಪರಾಧ. ಈ ಅಪರಾಧವನ್ನು ಸ್ವಯಂ ಚುನಾವಣಾಆಯೋಗವೇ ಹಾಡುಹಗಲಲ್ಲೇ ಮಾಡುತ್ತಿದೆ.

ಅಕ್ರಮ 4–ಡಿಲೀಟ್ ಮಾಡಲ್ಪಟ್ಟವರಿಗೆ ಅಪೀಲಿಗೂ ಅವಕಾಶವಿಲ್ಲ : ASDDO ಅಡಿ ಡಿಲೀಟ್ ಆದವರಿಗೆ ಅಪೀಲ್ ಸಲ್ಲಿಸಲೂ ಅವಕಾಶ ನೀಡದೆ ಒಮ್ಮೆಗೆ ಡಿಲೀಟೆಡ್ ಎಂದು ಪರಿಗಣಿಸುತ್ತಿರುವುದು ಅಕ್ರಮ. ಬದುಕಿದ್ದರೂ ಸತ್ತಿದ್ದಾರೆ ಎಂದು ಘೋಷಿಸಿರುವ. ಮನೆಯಲ್ಲೇ ಇದ್ದರೂ ಶಿಪ್ಟೆಡ್ ಎಂದು ನಮೂದಿಸಿರುವ, ಮನೆಗೇ ಬರದೆ ಆಬ್ಸೆಂಟ್ ಅಥವಾ ಅದರ್ಸ್ ಎಂದು ತಪ್ಪಾಗಿ ಡಿಲೀಟ್ ಮಾಡಿರುವ, ಸಾವಿರಾರು ಪ್ರಕರಣಗಳು ನಮ್ಮ ಎದುರಿಗೆ ಇವೆ. ಅಂದರೆ ಚುನಾವಣಾ ಆಯೋಗದ ಸಿಬ್ಬಂದಿ ಮಾಡಿರುವ ತಪ್ಪುಗಳಿಗೂ ಜನರನ್ನೇ ಹೊಣೆಗಾರರನ್ನಾಗಿ ಮಾಡಿ, ಕನಿಷ್ಟ ಅಪೀಲಿಗೂ ಅವಕಾಶ ಇಲ್ಲದೆ ಡಿಲೀಟ್ ಮಾಡಿರುವುದು ಅಕ್ರಮ.

ಅಕ್ರಮ 5: ಕಾಣೆಯಾದʼಅದರ್ಸ್ʼ: ಚುನಾವಣಾ ಆಯೋಗʼಅದರ್ಸ್ -O’ ಎಂಬ ಹೊಸ ಕೆಟಗರಿಯನ್ನು ಕರ್ನಾಟಕದಲ್ಲಿ ಸೇರಿಸಿತ್ತು. ಅದರಡಿ 3 ಲಕ್ಷ 83 ಸಾವಿರ ಜನರನ್ನು ಡಿಲೀಟ್ ಮಾಡಲಾಗಿತ್ತು. ಇವರು ಯಾರು ಎಂದು ಕೇಳಿದಾಗ? ಎನ್ಯುಮುರೇಶನ್ ಫಾರಂ ಹಿಂತಿರುಗಿಸಲು ನಿರಾಕರಿಸಿದವರು ಎಂದು ಚುನಾವಣಾ ಆಯೋಗ ಉತ್ತರ ಕೊಟ್ಟಿತ್ತು. ಎನ್ಯುಮರೇಶನ್ ಫಾರಂ ಹಿಂತಿರುಗಿಸಲು ಲಕ್ಷಾಂತರ ಜನರು ನಿರಾಕರಿಸುವುದು ಸಾಧ್ಯವೇ? ಎಂಬಪ್ರಶ್ನೆಗೆ ಇವರ ಬಳಿ ಉತ್ತರಇರಲಿಲ್ಲ. ಈಗ ಈ ಕೆಟಗರಿಯನ್ನೇತೆಗೆದು ಹಾಕಲಾಗಿದೆ. ಚುನಾವಣಾ ಆಯೋಗ ಇಷ್ಟೊಂದು ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವುದು, ತಪ್ಪು ಮಾಹಿತಿ ನೀಡುವುದು ಅಪರಾಧ.

ಅಕ್ರಮ 6– ಸುಳ್ಳು ಡಿಕ್ಲೆರೇಷನ್‌ಗೆ ಸಹಿ ಹಾಕುವಂತೆ ಸೂಚನೆ :ASDDO ಅಡಿ ಡಿಲೀಟ್ ಆದವರು ಫಾರಂ ನಂ.6 ತುಂಬಿಮರು ನೊಂದಾಯಿಸಿಕೊಳ್ಳಿ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇದರಲ್ಲಿ“ ನಾನು ತಪ್ಪುಮಾಹಿತಿ ನೀಡಿದ್ದಲ್ಲಿ ಒಂದು ವರ್ಷದ ಕಾರಾಗೃಹ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂಬ ಅರಿವು ನನಗಿದೆ…”ಎಂಬ ಒಪ್ಪಂದಕ್ಕೆ ಸಹಿ ಹಾಕಿಸಲಾಗುತ್ತಿದೆ. ಆದರೆ, ಅದೇ ಸಂದರ್ಭದಲ್ಲಿ ಫಾರಂ ನಂ.6 ತುಂಬುವಾಗ“ನಾನು ಮೊದಲ ಬಾರಿಗೆ ನನ್ನ ಹೆಸರನ್ನು ಮತದಾರರಪಟ್ಟಿಯಲ್ಲಿ ಸೇರಿಸಲು ಅರ್ಜಿ ನೀಡುತ್ತಿದ್ದೇನೆ…”ಎಂಬ ಸುಳ್ಳು ಡಿಕ್ಲೆರೇಷನ್ ಕೊಡಿ ಎಂದುಕೇಳಲಾಗುತ್ತಿದೆ. ಸುಳ್ಳುಡಿಕ್ಲೆರೇಷನ್ ಕೊಡಿ ಎಂದು ಹೇಳುವುದು ಅಕ್ರಮ ಅಪರಾಧ. ಚುನಾವಣಾ ಆಯೋಗವೇ ಇಂತಹ ಹಸಿ ಸುಳ್ಳಿನ ಅಕ್ರಮ ಕೆಲಸವನ್ನು ಮತದಾರರಿಂದ ಮಾಡಿಸಬಹುದೇ?

ಅಕ್ರಮ 7–ಶಿಫ್ಟ್ ಆದವರಿಗೆ ಬಾಗಿಲು ಬಂದ್: ಬಾಡಿಗೆ ಮನೆ ಅಥವಾ ಕೆಲಸದ ಕಾರಣಕ್ಕೆ ಸ್ಥಳಾಂತರಗೊಂಡಿರುವ ಮತದಾರರಿಗೆ ಎನ್ಯುಮರೇಷನ್ ಫಾರಂ ನಿರಕಾರಿಸಲಾಗಿತ್ತು. ಈಗ ಫಾರಂ 8ಅನ್ನು ಸಹ ನಿರಾಕರಿಸಲಾಗುತ್ತಿದೆ. ಮಾತ್ರವಲ್ಲ, ಈ ರೀತಿ ಉಳಿದು ಹೋಗಿರುವಮತದಾರರನ್ನು ತಲುಪಿ ಅವರನ್ನು ಮರು ನೊಂದಾಯಿಸಿಕೊಳ್ಳುವ ಯಾವ ವಿಶೇಷ ಡ್ರೈವ್ ಅನ್ನೂ ಚುನಾವಣಾ ಆಯೋಗ ನಡೆಸುತ್ತಿಲ್ಲ. ಡಿಲೀಟೆಡ್ ಓಟರ್ಸ್ ಪಟ್ಟಿಯನ್ನುಆಯಾಬೂತುಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಚುನಾವಣಾ ಆಯೋಗದ ಮ್ಯಾನ್ಯುಯಲ್ ನಂತೆ ಹಾಗೂ ಆಯೋಗವೇ ಕಳಿಸಿರುವ ಸುತ್ತೋಲೆ ಪ್ರಕಾರ ಎಲ್ಲಿಯೂ ಸಹ ‘ಗ್ರಾಮ ಮತ್ತುವಾರ್ಡ್ ಸಭೆ’ಗಳನ್ನುನಡೆಸಿಲ್ಲ. ಅವರು ಎಲ್ಲಿದ್ದಾರೆ ಎಂದು ಪತ್ತೆಹಚ್ಚಲು ಆಗುತ್ತಿಲ್ಲ ಎಂಬ ಮತ್ತೊಂದು ದೊಡ್ಡಸುಳ್ಳನ್ನು ಚುನಾವಣಾ ಆಯೋಗ ಹೇಳುತ್ತಿದೆ.

ಅಕ್ರಮ 7–ಉಳ್ಳವರಿಗೊಂದುನ್ಯಾಯ, ಇಲ್ಲದವರಿಗೊಂದು ನ್ಯಾಯ: ಸೆಲೆಬ್ರಿಟಿಗಳಿಗೆ ಮನೆಗೆ ಹೋಗಿ ಅಲ್ಲೇ ಅವರ ದಾಖಲೆ ಪಡೆದು ಸಮಸ್ಯೆಯನ್ನು ಇತ್ಯಾರ್ಥಗೊಳಿಸುವಂತೆ ಖುದ್ದು ಚುನಾವಣಾಅಧಿಕಾರಿಯೇ ಸೂಚನೆ ನೀಡುತ್ತಿದ್ದಾರೆ. ಇನ್ನೊಂದೆಡೆ ಅಲೆಮಾರಿ, ಆದಿವಾಸಿ, ದಲಿತ, ಅಲ್ಪಸಂಖ್ಯಾತ ಮುಂತಾದ ಶೋಷಿತಸ ಮುದಾಯಗಳ ಕೈಗೆ ನೋಟೀಸ್ ಸಹ ನೀಡದೆ ಬಂದು ತೆಗೆದುಕೊಂಡು ಹೋಗಿ, ಅದನ್ನೂ ತನ್ನಿ, ಇದನ್ನು ತನ್ನಿ ಎಂದು ಸತಾಯಿಸಲಾಗುತ್ತಿದೆ. ಇದುಕಾನೂನಿನ ದೃಷ್ಟಿಯಲ್ಲಿ ‘ಎಲ್ಲರೂಸಮಾನರು’ ಎಂಬ ಮೂಲಭೂತತತ್ವದಉಲ್ಲಂಘನೆಯಾಗಿದೆ. ಅಪರಾಧವಾಗಿದೆ.

ಎಸ್‌ಐಆರ್ ಬಗ್ಗೆ ತಾತ್ವಿಕ ಭಿನ್ನಾಭಿಪ್ರಾಯ ಇದ್ದಾಗಿಯೂ ನಮ್ಮ ವಿರೋಧವನ್ನು ರಚನಾತ್ಮಕವಾಗಿ ಅಭಿವ್ಯಕ್ತಪಡಿಸಿದ್ದೇವೆ. ಕಳೆದ ಮೂರು ತಿಂಗಳ ಕಾಲ ನಾವು ಎಸ್‌ಐಆರ್‌ನಿಂದ ಜನರು ಮತ ಕಳೆದುಕೊಳ್ಳದಂತೆ ತಡೆಯಲು ಹಗಲಿರುಳು ಕೆಲಸಮಾಡಿದ್ದೇವೆ. ಚುನಾವಣಾ ಆಯೋಗಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಅನೇಕ ಸಲಹೆಗಳನ್ನು ನೀಡಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸಿ, ಹೆಲ್ಪ್ ಡೆಸ್ಕುಗಳನ್ನು ತೆರೆದು ನೊಂದಾವಣಿ ಪ್ರಕ್ರಿಯೆಗೆ ಸಹಕರಿಸಿದ್ದೇವೆ. ಸರಳ ಆಪ್‌ಗಳನ್ನು ತಂದು ಜನರ ಸೇರ್ಪಡೆಗೆ ಪ್ರಯತ್ನಿಸಿದ್ದೇವೆ. ಆದರೆ ಇದೆಲ್ಲದರ ಹೊರತಾಗಿಯೂ ಚುನಾವಣಾ ಆಯೋಗ ಅಕ್ರಮ ಮತ್ತು ಅರಾಜಕ,‘ ತಾನು ಹೇಳಿದ್ದೇ ಸರಿ’ ಎಂಬ ಸರ್ವಾಧಿಕಾರಿ ನಡೆಯ ಮೂಲಕ ಮತದಾರರ ಪಟ್ಟಿಯನ್ನುಅಭಿವೃದ್ಧಿಪಡಿಸುವ ಬದಲು ಸಂಪೂರ್ಣವಾಗಿ ಧ್ವಂಸಗೊಳಿಸಿಬಿಟ್ಟಿದೆ. ಉಳಿದಿರುವ ಸಮಯದಲ್ಲಿ, ಇದೇ ಪ್ರಕ್ರಿಯೆಯ ಮೂಲಕ ಅರ್ಹ ಮತದಾರರನ್ನು ಒಳ ತಂದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿಚ್ಚಳವಾಗಿ ಗೋಚರಿಸುತ್ತಿದೆ. ಹಾಗಾಗಿ, ನಾವು ಈ ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ತಿರಸ್ಕರಿಸುವ ತೀರ್ಮಾನಕ್ಕೆಬಂದಿದ್ದೇವೆ ಎಂದು ಒಕ್ಕೂಟ ತಿಳಿಸಿದೆ.

ಮುಂದಿನ ಹಂತವಾಗಿ ಎಸ್‌ಐಆರ್ ಅನ್ನು ರದ್ದುಗೊಳಿಸುವ ತನಕ ಎಡೆಬಿಡದೆ ಎಲ್ಲಾ ರೀತಿಯ ಹೋರಾಟವನ್ನೂ ನಡೆಸಲು ನಾಗರಿಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳೆಲ್ಲಾ ಸೇರಿ ಒಕ್ಕೊರಲ ತೀರ್ಮಾನ ಮಾಡಿದ್ದೇವೆ.
ಎಸ್‌ಐಆರ್ ಪ್ರಕ್ರಿಯೆಯ ಅಸಲಿಯತ್ತನ್ನು ಹೊರತೆಗೆದು ಸಾಕ್ಷ್ಯಗಳನ್ನು ಒಟ್ಟುಗೂಡಿಸಲು ರಾಜ್ಯದ 100 ಬೂತುಗಳಲ್ಲಿ ‘ಮತಕಾವಲು ಸಾಕ್ಷಿ ಸರ್ವೆ’ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ. ಇದಕ್ಕಾಗಿ ಒಂದು ಪರಿಣಾಮಕಾರಿ ಆ್ಯಪ್ ಅನ್ನು ನಮ್ಮ ತಂಡ ಅಭಿವೃದ್ದಿಪಡಿಸಿದೆ ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.

ಇದೇ ತಿಂಗಳ 22ರಿಂದ 30 ರಾಜ್ಯ ವ್ಯಾಪಿಯಾಗಿ ‘SIR ಅಧ್ಯಯನ ಅಭಿಯಾನ’ವನ್ನು ನಡೆಸುತ್ತಿದ್ದೇವೆ. ಈ ಅಭಿಯಾನದ ಭಾಗವಾಗಿ ರಾಜ್ಯದಾದ್ಯಂತ ಸಂಚರಿಸಿ ಜನರು ಎದುರಿಸುತ್ತಿರುವ ಸಂಕಷ್ಟಗಳ ಅಧ್ಯಯನ ನಡೆಸಲಾಗುವುದು. ತಿಂಗಳ ಕೊನೆಯಲ್ಲಿ ಸಮಗ್ರ ವರದಿಯನ್ನು ಸಮಾಜ ಹಾಗೂ ಸರ್ಕಾರಗಳ ಮುಂದೆ ಮಂಡಿಸಲಾಗುವುದು. ಅಕ್ಟೋಬರ್ 15ರಂದು ದೆಹಲಿಯಲ್ಲಿ ಎಸ್‌ಐಆರ್ ಮುಖವಾಡ ಕಳಚುವ ‘ರಾಷ್ಟ್ರೀಯ ಪಬ್ಲಿಕ್ ಹಿಯರಿಂಗ್’ ನಡೆಸಲಾಗುತ್ತಿದೆ. SIR ನಡೆದ ಮತ್ತು ನಡೆಯುತ್ತಿರುವ ಎಲ್ಲಾ ರಾಜ್ಯಗಳ ಜೀವಂತ ಸಾಕ್ಷ್ಯವನ್ನು ಅಂದು ದೇಶದ ಮುಂದೆ ಮುಂದಿಡಲಾಗುವುದು. SIR ವಿರುದ್ಧ ನಾಗರಿಕ ಸಮಾಜ ಸಿದ್ಧಪಡಿಸಿರುವ ಎಫ್‌ಐಆರ್‌ 1 ಮತ್ತು 2ರ ತಳಹದಿಯಾಗಿಟ್ಟುಕೊಂಡು, ಸರ್ವೆ ಸಾಕ್ಷ್ಯಗಳನ್ನು ಆಧರಿಸಿ ಚುನಾವಣಾ ಆಯೋಗದ ಕ್ರಮಗಳನ್ನು ಕ್ರಿಮಿನಲ್ ಚಟುವಟಿಕೆಗಳೆಂದು ಘೋ಼ಷಿಸುವಂತೆ ಕೋರಿ ನ್ಯಾಯಲದ ಬಾಗಿಲುಗಳನ್ನೂ ತಟ್ಟಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ದೋಷಪೂರಿತ ಮತ್ತು ದುರುದ್ದೇಶಪೂರಿತ SIR ರದ್ದಾಗಲೇಬೇಕು. ಇಡೀ ದೇಶವನ್ನು ಈ ರೀತಿಯ ಆತಂಕಕ್ಕೆ ತಳ್ಳಿದ ಮತ್ತು ಪ್ರಜಾತಂತ್ರದ ಅಡಿಪಾಯವನ್ನು ನಾಶಗೊಳಿಸುವ ಅಪರಾಧದ ಹೊಣೆ ಹೊತ್ತು ಚುನಾವಣಾ ಆಯೋಗ ರಾಜೀನಾಮೆ ನೀಡಬೇಕು. ಈ ಅಕ್ರಮ ನಡೆಸುವ ಸರ್ವಾಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿದ ಮತ್ತು ಪಕ್ಷಪಾತಿ ರೀತಿಯಲ್ಲಿ ಅದನ್ನು ಆಯ್ಕೆ ಮಾಡಿದ ಮೋದಿ ಸರ್ಕಾರ ಜನರಲ್ಲಿ ಕ್ಷಮೆ ಕೋರಬೇಕು ಹಾಗೂ ಚುನಾವಣಾ ಆಯೋಗದ ಆಯ್ಕಾ ಪದ್ದತಿಯನ್ನೇ ರದ್ದುಗೊಳಿಸಿ ಕನಿಷ್ಟ ಮೊದಲಿನ ಸ್ಥಿತಿಗೆ ತರಬೇಕು. ರಾಜ್ಯ ಸರ್ಕಾರ ಇದೇ 21-22-23 ರಂದು ಕಸ್ತೂರಿರಂಗನ್ ಮತ್ತು ಬರದ ವಿಚಾರಕ್ಕೆ ವಿಶೇಷ ಅಧಿವೇಶನ ಕರೆದಿದೆ. ಇದು ಸ್ವಾಗತಾರ್ಹ. ಈ ಎರಡು ವಿಷಯಗಳ ಜೊತೆ SIR ಅನ್ನು ಮೂರನೇ ವಿಷಯವಾಗಿ ಚರ್ಚೆಗಿಡಬೇಕು. ಯಾವುದೇಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಾಗೂ ಇದು ಹೊರತರಲಿರುವ ದೋಷಪೂರಿತ ಮತದಾರರ ಪಟ್ಟಿಯನ್ನು ಅಸಹಾಯಕತೆಯೊಂದಿಗೆ ಸ್ವೀಕರಿಸಬಾರದು ಮತ್ತು ಸ್ಥಳೀಯ ಚುನಾವಣೆಗಳಿಗೂ ಬಳಸಬಾರದು. ಈ ಅಕ್ರಮ ಪಟ್ಟಿಯನ್ನುಸಂಪೂರ್ಣವಾಗಿ ತಿರಸ್ಕರಿಸಬೇಕು. ನ್ಯಾಯಾಲಯದಲ್ಲೂ ಚಾಲೆಂಜ್ ಮಾಡಬೇಕು ಮತ್ತು ರಾಜ್ಯ ವ್ಯಾಪಿ ಸೋಷಿಯಲ್ ಆಡಿಟಿಂಗ್ ಅನ್ನು ಕೈಗೆತ್ತಿಕೊಳ್ಳುವ ಮೂಲಕ ಎಲ್ಲಾ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಮತದಾರರಪಟ್ಟಿಗೆ ಕರೆತರುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಟ ಪ್ರಕಾಶ್‌ ರಾಜ್, ನೂರ್‌ ಶ್ರೀಧರ್, ಬಿ.ಟಿ ಲಲಿತಾನಾಯ್ಕ್, ಜೆ.ಎಂ ವೀರಸಂಗಯ್ಯ, ಕೆ.ಮಹಾಂತೇಶ್, ಸೀತಾರಾಮ್ ಗುಂಡಪ್ಪ, ತಾಹಿರ್ ಹುಸೇನ್, ಅಬ್ದುಲ್ ಮಜೀದ್, ಅಮ್ಜದ್ ಪಾಷಾ, ನಾಗೇಶ್ ಅರಳಕುಪ್ಪೆ, ತಾರಾರಾವ್, ಕಿರಣ್ ಕಮಲ್ ಪ್ರಸಾದ್, ಹೆಣ್ಣೂರು ಶ್ರೀನಿವಾಸ್, ರಾಮಕೃಷ್ಣಪ್ಪ ಸೇರಿದಂತೆ ವಿವಿಧ ಜಾತ್ಯಾತೀತ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...