ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಅಸ್ಸಾಂ ಸಚಿವಾಲಯದ ಸಮೀಪದಲ್ಲಿ ಸಿಜೆಪಿ ಸಂಘಟನೆಯು ತನ್ನ ಮೊದಲ ಪ್ರಾದೇಶಿಕ ಸ್ವಯಂಸೇವಕರ ಸಭೆಯನ್ನು ನಡೆಸಲು ನಿರ್ಧರಿಸಿತ್ತು..ಅದಕ್ಕೂ ಮುನ್ನ ದಿಸ್ಪುರ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ಹೇಳಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ರಾಂಕಾ, ಶಾಲೆಗಳ ಕುರಿತಾದ ತಮ್ಮ ತಂಡದ ಅಭಿಯಾನವು ರಾಜ್ಯದಲ್ಲಿನ ಶಾಲೆಗಳ ಸ್ಥಿತಿಗತಿಯತ್ತ ಗಮನ ಸೆಳೆಯಬಹುದು ಎಂಬ ಆತಂಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಇತ್ತು ಎಂದು ಹೇಳಿದ್ದಾರೆ.
“ಅಸ್ಸಾಂನ ಶಾಲೆಗಳ ವಾಸ್ತವ ಸ್ಥಿತಿಯನ್ನು ನಾವು ತೋರಿಸಿದರೆ, ಆ ಶಾಲೆಗಳ ಪರಿಸ್ಥಿತಿ ದೇಶಕ್ಕೆ ಗೊತ್ತಾಗಿಬಿಡುತ್ತದೆ ಎಂಬ ಭಯ ಹಿಮಂತ ಬಿಸ್ವ ಶರ್ಮಾ ಅವರಿಗಿದೆ. ಕಾಜಿರಂಗದಲ್ಲಿ ನಮ್ಮ ಜನರ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳಲಾಗುತ್ತಿದೆ, ಮತ್ತು ಅಲ್ಲಿನ ಭೂಮಿ, ಅರಣ್ಯ ಹಾಗೂ ನೀರನ್ನು ಕಸಿದುಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ಹೇಗೆ ನೀಡಲಾಗುತ್ತಿದೆ ಎಂಬ ವಿಷಯದಿಂದಾಗಿ ಹಿಮಂತ ಬಿಸ್ವ ಶರ್ಮಾ ಹೆದರಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅಸ್ಸಾಂ ಪೊಲೀಸರು ಅಶುತೋಷ್ ರಾಂಕಾ ಮತ್ತು ಸಿಜೆಪಿ ತಂಡವನ್ನು ವಶಕ್ಕೆ ಪಡೆದಿದ್ದು, ಅವರನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಶು ಮತ್ತು ಅವರ ತಂಡದವರು ಅಸ್ಸಾಂನಲ್ಲಿ ಸ್ವಯಂಸೇವಕರ ಸಣ್ಣ ಸಭೆಯೊಂದನ್ನು ನಡೆಸಲು ಹೊರಟಿದ್ದರು” ಎಂದು ಹೇಳಿದ್ದಾರೆ.


