Homeಮುಖಪುಟಬೆಳಗಾವಿ| ಕೂಲಿ ನೇಕಾರರಿಗೆ ಕಾರ್ಮಿಕ ಇಲಾಖೆ ನೀಡುವ 'ಸ್ಮಾರ್ಟ್ ಕಾರ್ಡ್'ನಲ್ಲಿ ಲೋಪ, ಅನ್ಯಾಯ ಸರಿಪಡಿಸಲು...

ಬೆಳಗಾವಿ| ಕೂಲಿ ನೇಕಾರರಿಗೆ ಕಾರ್ಮಿಕ ಇಲಾಖೆ ನೀಡುವ ‘ಸ್ಮಾರ್ಟ್ ಕಾರ್ಡ್’ನಲ್ಲಿ ಲೋಪ, ಅನ್ಯಾಯ ಸರಿಪಡಿಸಲು ಆಗ್ರಹ

- Advertisement -
- Advertisement -

ಹಗಲಿರುಳೆನ್ನದೆ ಮಗ್ಗಗಳ ಮುಂದೆ ಕುಳಿತು ಬಟ್ಟೆ ನೇಯುವ ಬೆಳಗಾವಿ ಭಾಗದ ಲಕ್ಷಾಂತರ ಕೂಲಿ ನೇಕಾರರ ಬದುಕು ಇಂದು ಭರವಸೆಯಿಲ್ಲದ ತೂಗುಯ್ಯಾಲೆಯಲ್ಲಿದೆ. ಒಂದೆಡೆ ಕಳೆದ ಒಂದು ದಶಕದಿಂದ (10 ವರ್ಷ) ಮಾಲೀಕರಿಂದ ಶ್ರಮಕ್ಕೆ ತಕ್ಕಂತೆ ಕೂಲಿ ಹೆಚ್ಚಳವಾಗಿಲ್ಲ. ಇನ್ನೊಂದೆಡೆ, ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಗೆ ತರುತ್ತಿರುವ ಕಲ್ಯಾಣ ಮಂಡಳಿ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ನೈಜ ಶ್ರಮಿಕರಿಗೆ ತಲುಪುವ ಬದಲು, ಮಗ್ಗದ ಮಾಲೀಕರ ಪಾಲಾಗುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

‘ಸ್ಮಾರ್ಟ್ ಕಾರ್ಡ್’ ವಿತರಣೆಯಲ್ಲಿ ತಾಂತ್ರಿಕ ಲೋಪ:

ಕಾರ್ಮಿಕ ಇಲಾಖೆಯು ಅಸಂಘಟಿತ ಕೂಲಿ ನೇಕಾರರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ‘ಸ್ಮಾರ್ಟ್ ಕಾರ್ಡ್’ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ, ಈ ಕಾರ್ಡ್‌ಗಳನ್ನು ರೂಪಿಸುವಲ್ಲಿ ಇಲಾಖೆಯು ತಾಂತ್ರಿಕ ಲೋಪ ಎಸಗಿದೆ ಎಂದು ‘ಕೂಲಿ ನೇಕಾರ ಕಾರ್ಮಿಕ ಸಂಘಟನೆ’ ಆಕ್ರೋಶ ಹೊರಹಾಕಿದೆ.

ಮಗ್ಗದ ಮಾಲೀಕ ಮತ್ತು ಅವರ ಬಳಿ ದಿನಗೂಲಿಗೆ ದುಡಿಯುವ ಕಾರ್ಮಿಕ – ಇಬ್ಬರನ್ನೂ ಕಾರ್ಮಿಕ ಇಲಾಖೆಯು ಪ್ರತ್ಯೇಕವಾಗಿ ವರ್ಗೀಕರಿಸದೆ, ಕೇವಲ ‘ನೇಕಾರ’ ಎಂಬ ಒಂದೇ ಸರಳೀಕೃತ ಹೆಸರಿನಡಿ ವರ್ಗೀಕರಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಜವಳಿ ಇಲಾಖೆಯಲ್ಲಿ ಮಾಲೀಕರು ಮತ್ತು ಕೂಲಿ ಕಾರ್ಮಿಕರಿಗೆ ಪ್ರತ್ಯೇಕ ಯೂನಿಟ್ ಐಡಿ ವ್ಯವಸ್ಥೆ ಇದೆ. ಆದರೆ ಕಾರ್ಮಿಕ ಇಲಾಖೆಯು ಈ ವ್ಯತ್ಯಾಸವನ್ನು ಪರಿಗಣಿಸದೆ ಇರುವುದರಿಂದ, ಕಾರ್ಮಿಕರಿಗಾಗಿ ಮೀಸಲಾಗಿರುವ ‘ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ’ಯ ಸೌಲಭ್ಯಗಳು ಮತ್ತು ಹಣಕಾಸಿನ ನೆರವು ನೇರವಾಗಿ ಮಗ್ಗದ ಮಾಲೀಕರ ಪಾಲಾಗುವ ಅಪಾಯ ತಲೆದೋರಿದೆ.

‘ಕಲ್ಯಾಣ ಮಂಡಳಿ’ ಮೇಲೆ ಮಾಲೀಕರ ಕಣ್ಣು

ಇತ್ತೀಚೆಗೆ ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ನೇಕಾರರ ಅಭಿವೃದ್ಧಿ, ಸಾಲ ಸೌಲಭ್ಯ ಹಾಗೂ ‘ಕಾರ್ಮಿಕ ಕಲ್ಯಾಣ ಸೌಲಭ್ಯ’ಗಳ ಕುರಿತು ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಗ್ಗದ ಮಾಲೀಕರ ಪ್ರತಿನಿಧಿಗಳು ಸಚಿವರ ಜೊತೆ ‘ಕಲ್ಯಾಣ ಮಂಡಳಿ’ ಕುರಿತು ಮಾತುಕತೆ ನಡೆಸಿರುವುದು ಕೂಲಿ ನೇಕಾರರ ಆತಂಕಕ್ಕೆ ಕಾರಣವಾಗಿದೆ.

“ಜವಳಿ ಇಲಾಖೆಯಿಂದ ಸಿಗುವ ಶೇಕಡಾ 0 ರಿಂದ 3ರಷ್ಟು ಬಡ್ಡಿ ರಹಿತ ಸಾಲ, ಜಿಎಸ್‌ಟಿ ವಿನಾಯಿತಿ, ವಿದ್ಯುತ್ ಸಬ್ಸಿಡಿ (10 ಹೆಚ್‌ಪಿವರೆಗೆ ಉಚಿತ/ಸಬ್ಸಿಡಿ) ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಯೋಜನೆಗಳ ಲಾಭವನ್ನು ಈಗಾಗಲೇ ಮಾಲೀಕರೇ ಪಡೆಯುತ್ತಿದ್ದಾರೆ. ಹೀಗಿರುವಾಗ, ಕೇವಲ ರಕ್ತ ಬೆವರು ಹರಿಸುವ ಬಡ ಕೂಲಿ ಕಾರ್ಮಿಕರಿಗಾಗಿ ಇರುವ ‘ಕಾರ್ಮಿಕ ಕಲ್ಯಾಣ ಮಂಡಳಿ’ಯ ಸೌಲಭ್ಯಗಳಲ್ಲೂ ಮಾಲೀಕರು ಪಾಲುದಾರಿಕೆ ಸಾಧಿಸಲು ಹುನ್ನಾರ ನಡೆಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೂಲಿ ಹೆಚ್ಚಿಸದ, ಇರುವ ಮಜೂರಿಯನ್ನೂ ಕಡಿತಗೊಳಿಸುವ ಮಾಲೀಕರಿಗೆ ಕಾರ್ಮಿಕರ ಕಾಳಜಿ ಎಲ್ಲಿದೆ?” ಎಂದು ಕೂಲಿ ನೇಕಾರ ಕಾರ್ಮಿಕ ಸಂಘಟನೆಯ ಪ್ರಮುಖರಾದ ರವಿ ಪಾಟೀಲ ಅವರು ಪ್ರಶ್ನಿಸಿದ್ದಾರೆ.

ಸಂಘಟನೆಯಿಂದ ಮನವಿ

ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ‘ಕೂಲಿ ನೇಕಾರ ಕಾರ್ಮಿಕ ಸಂಘಟನೆ’ಯು (ಕರ್ನಾಟಕ ಶ್ರಮಿಕ ಶಕ್ತಿ ಅಂಗ ಸಂಘಟನೆ) ಬೆಳಗಾವಿಯ ಕಾರ್ಮಿಕ ಇಲಾಖೆಯ ಉಪವಿಭಾಗ-2ರ ಮುಖ್ಯ ಅಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಖಾಸಗಿ ಸಂಸ್ಥೆಗಳ ಮೂಲಕ ಬೇಕಾಬಿಟ್ಟಿ ಕಾರ್ಡ್ ಹಂಚಿಕೆ ಮಾಡುವುದನ್ನು ತಡೆದು, ನೈಜ ಕಾರ್ಮಿಕರನ್ನು ಸರಿಯಾಗಿ ಗುರುತಿಸಿ ಕಾರ್ಡ್ ತಿದ್ದುಪಡಿ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

ಕೂಲಿ ನೇಕಾರ ಕಾರ್ಮಿಕ ಬೇಡಿಕೆಗಳು:
  1. ಕಳೆದ 10 ವರ್ಷಗಳಿಂದ ಬಾಕಿ ಉಳಿದಿರುವ ಕೂಲಿ ಮಜೂರಿಯನ್ನು ತಕ್ಷಣವೇ ಹೆಚ್ಚಿಸಬೇಕು. ಕಾನೂನು ಪ್ರಕಾರ ಕೂಲಿ ನೇಕಾರರಿಗೆ ಬೋನಸ್, ಪಿಎಫ್ (PF) ಹಾಗೂ ಇಎಸ್‌ಐ (ESI) ಸೌಲಭ್ಯಗಳನ್ನು ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿ ಕೊಡಿಸಬೇಕು.
  2. ಸ್ಮಾರ್ಟ್ ಕಾರ್ಡ್‌ನಲ್ಲಿ ‘ಮಾಲೀಕ’ ಮತ್ತು ‘ಕಾರ್ಮಿಕ’ ನಡುವಿನ ವ್ಯತ್ಯಾಸವನ್ನು ಪ್ರತ್ಯೇಕವಾಗಿ ನಮೂದಿಸಬೇಕು. ಕಾರ್ಮಿಕ ಇಲಾಖೆಯು ‘ನೇಕಾರ’ ಎಂಬ ಒಂದೇ ಪದ ಬಳಸಿ ಗೊಂದಲ ಉಂಟುಮಾಡುವುದನ್ನು ತಕ್ಷಣ ನಿಲ್ಲಿಸಬೇಕು.
  3. ಸ್ಮಾರ್ಟ್ ಕಾರ್ಡ್‌ನಲ್ಲಿ ಕಾರ್ಮಿಕನ ಹೆಸರು, ಭಾವಚಿತ್ರದ ಜೊತೆಗೆ ಆತ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ‘ಮಗ್ಗದ ಯೂನಿಟ್’ ವಿವರಗಳನ್ನು ಸ್ಪಷ್ಟವಾಗಿ ತೋರಿಸಬೇಕು.
  4. ಕಾರ್ಮಿಕ ಇಲಾಖೆಯ ಯೋಜನೆಗಳು ಮತ್ತು ‘ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ’ಯ ಲಾಭಗಳು ಕೇವಲ ಕೂಲಿ ಕಾರ್ಮಿಕರಿಗೆ ಮಾತ್ರ ದೊರೆಯುವಂತಾಗಬೇಕು. ಮಾಲೀಕರು ಇದರ ಫಲಾನುಭವಿಗಳಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
  5. ಜವಳಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಕಾರ್ಮಿಕ ಸಚಿವರು ಜಂಟಿಯಾಗಿ ಈ ಸಮಸ್ಯೆಯನ್ನು ಆಲಿಸಿ, ಮಧ್ಯಪ್ರವೇಶಿಸುವ ಮೂಲಕ ಕೂಲಿ ನೇಕಾರರ ಹಕ್ಕುಗಳನ್ನು ರಕ್ಷಿಸಬೇಕು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2016ರಲ್ಲೇ ತಮ್ಮನ್ನು ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ IAS ಜಿಜಿ ಥಾಮ್ಸನ್

ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗಲೇ ಬಿಜೆಪಿ ಪರವಾಗಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದರು ಎಂಬ ಕಟು ಸತ್ಯವೊಂದು ಈಗ ಬಹಿರಂಗವಾಗಿದೆ. ಅವರು ನನಗೆ...

ಚಿಕ್ಕಮಗಳೂರು : ಚುನಾವಣಾ ಆಯೋಗದ ವಿರುದ್ಧ ಜನಾಂದೋಲನಕ್ಕೆ ಪ್ರಕಾಶ್ ರಾಜ್ ಕರೆ

ನ್ಯಾಯಾಂಗದ ಮೂಲಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಕೆಳಗಿಳಿಸುವುದು ಸಾಧ್ಯವಾಗದಿರಬಹುದು, ಆದರೆ ಜನರ ಹಕ್ಕುಗಳಿಗಾಗಿ ಬೀದಿ ಚಳವಳಿ ನಡೆಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು. ಎಸ್‌ಐಆರ್ ಪರಿಶೋಧನೆ ಮತ್ತು...

ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ...

SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...

ಕರ್ನಾಟಕ ಎಸ್ಐಆರ್: ಅಳಿಸುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ಸುಮಾರು 6000 ಮತದಾರರು ನಾಪತ್ತೆ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಂಕಿಅಂಶಗಳ ವ್ಯತ್ಯಾಸ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ, ಚುನಾವಣಾ ಆಯೋಗದ ಅಂಕಿಅಂಶಗಳಲ್ಲೇ ಸುಮಾರು 6 ಸಾವಿರ ಮತದಾರರ ಅಳಿಸುವಿಕೆಗೆ ಸಂಬಂಧಿಸಿದ ವ್ಯತ್ಯಾಸ ಬೆಳಕಿಗೆ ಬಂದಿದೆ. ಮತದಾರರ...

Breaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಅದರ ಲಿಂಗಾನುಪಾತದ ಅಂಕಿಅಂಶಗಳು ಗಂಭೀರವಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಲಭ್ಯವಿರುವ 34 ಜಿಲ್ಲೆ/ನಗರ ಆಡಳಿತ ಘಟಕಗಳ...

ಎಸ್ಐಆರ್‌ನಲ್ಲಿ ಬದುಕಿದ್ದರೂ ‘ಮೃತ’, ಮನೆಯಲ್ಲಿದ್ದರೂ ‘ಸ್ಥಳಾಂತರ’: ಚಿಕ್ಕಬಳ್ಳಾಪುರದ ಸಂತ್ರಸ್ತರನ್ನು ಭೇಟಿಯಾದ ಪ್ರಕಾಶ್ ರಾಜ್ 

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ...