Homeಮುಖಪುಟದೆಹಲಿ ಎಸಿಪಿ ಮೇಲಿನ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿ ಸೇರಿದಂತೆ 18 ಮಂದಿ ಪೊಲೀಸ್...

ದೆಹಲಿ ಎಸಿಪಿ ಮೇಲಿನ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿ ಸೇರಿದಂತೆ 18 ಮಂದಿ ಪೊಲೀಸ್ ವಶಕ್ಕೆ

- Advertisement -
- Advertisement -

ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿರುವ ಯುವತಿ ಸೇರಿದಂತೆ 18 ಜನರನ್ನು ದೆಹಲಿ ಪೊಲೀಸರು ಸೋಮವಾರ (ಅ.5) ವಶಕ್ಕೆ ಪಡೆದಿದ್ದಾರೆ. ಆರೋಪಿತ ಅಧಿಕಾರಿಯ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್, ವಶಕ್ಕೆ ಪಡೆದವರನ್ನು ಪೊಲೀಸ್ ವಶದಲ್ಲಿ ಹಲ್ಲೆಗೈಯಲಾಗಿದೆ ಎಂದು ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. “ವಶಕ್ಕೆ ಪಡೆದವರಲ್ಲಿ ಇಬ್ಬರನ್ನು ಬರ್ಬರವಾಗಿ ಥಳಿಸಲಾಗಿದೆ. ಮಹಿಳೆ ತಮಗೆ ಈ ಹಲ್ಲೆಯ ಬಗ್ಗೆ ತಿಳಿಸಿದ್ದಾಗಿ ತಿಳಿಸಿದ್ದಾರೆ. ಎಲ್ಲ 18 ಜನರನ್ನು ದೆಹಲಿ ಕಾಂಟ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ” ಎಂದು ರತ್ನಾ ಸಿಂಗ್ ತಿಳಿಸಿದ್ದಾರೆ.

“ಸಂತ್ರಸ್ತೆಯನ್ನು ರಕ್ಷಿಸಿ ಎಫ್‌ಐಆರ್ ದಾಖಲಿಸುವ ಬದಲು, ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವವರನ್ನು ಏಕೆ ವಶಕ್ಕೆ ಪಡೆದು ಹಲ್ಲೆ ಮಾಡಲಾಗುತ್ತಿದೆ? ದೆಹಲಿ ಪೊಲೀಸರೇ ಕೂಡಲೇ ಎಲ್ಲರನ್ನೂ ಬಿಡುಗಡೆ ಮಾಡಿ” ಎಂದು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ರತ್ನಾ ಸಿಂಗ್ ಬರೆದುಕೊಂಡಿದ್ದಾರೆ.

ಅಕ್ಟೋಬರ್ 3 ರಂದು ಶನಿವಾರ ಜಂತರ್ ಮಂತರ್‌ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಮೂವರು ಮಹಿಳಾ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ಆರೋಪದ ಬಗ್ಗೆ ಎಫ್‌ಐಆರ್ ಮತ್ತು ತನಿಖೆ ನಡೆಸುವಂತೆ ಒತ್ತಾಯಿಸಿ ಸಂಸತ್ ರಸ್ತೆ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನಾಕಾರರು ಜಮಾಯಿಸಿದಾಗ ಈ ಬಂಧನಗಳು ನಡೆದಿವೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ಪತ್ರಕರ್ತೆಯರು ಭಾಗವಹಿಸಿದ್ದರು.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪ್ರಕಾರ, ಪ್ರತಿಭಟನಾಕಾರರು ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕೆಂದು ಬಯಸಿದ್ದರು. ಘಟನೆ ನಡೆದ ದಿನದಂದು ತಾವು ಪೊಲೀಸ್ ಠಾಣೆಗೆ ಹೋಗಿ ಸಿಸಿಟಿವಿ ಫೂಟೇಜ್‌ಗಳನ್ನು ಕೇಳಿದ್ದೆವು. 24 ಗಂಟೆಗಳ ನಂತರ ಬರುವಂತೆ ಹೇಳಲಾಗಿತ್ತು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ. “ನಾವು ವಾಪಸ್ ಹೋಗಿ ಮತ್ತೆ ಸಿಸಿಟಿವಿ ಫೂಟೇಜ್‌ ಕೇಳಿದೆವು, ಆದರೆ ಅವರು ಅದನ್ನು ನೀಡಲಿಲ್ಲ. ಅವರು ಎಫ್‌ಐಆರ್ ಕೂಡ ದಾಖಲಿಸಿಲ್ಲ ಅಥವಾ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ನಮ್ಮನ್ನೇ ವಶಕ್ಕೆ ಪಡೆದಿದ್ದಾರೆ” ಎಂದು ಆ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಅದೇ ಅಧಿಕಾರಿಯ ವಿರುದ್ಧ ಜುಲೈ ತಿಂಗಳಲ್ಲಿಯೂ ಇದೇ ರೀತಿಯ ದೂರು ನೀಡಲಾಗಿತ್ತು. ಆದರೆ ಯಾವುದೇ ತನಿಖೆ ನಡೆದಿಲ್ಲ ಎಂದು ವಶಕ್ಕೆ ಪಡೆದ ಮತ್ತೊಬ್ಬ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಅನುಪಸ್ಥಿತಿಯನ್ನು ಪ್ರಶ್ನಿಸಿದಾಗ ಎಸಿಪಿ ಒಬ್ಬರು ತನ್ನ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಪತ್ರಕರ್ತೆಯರಲ್ಲಿ ಒಬ್ಬರು ತಿಳಿಸಿದ್ದಾರೆ. “ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ನವದೆಹಲಿ ಜಿಲ್ಲಾ ಪೊಲೀಸರು ದೂರುಗಳನ್ನು ಅಪರಾಧ ವಿಭಾಗಕ್ಕೆ (ಕ್ರೈಂ ಬ್ರಾಂಚ್) ವರ್ಗಾಯಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮುಂಚಿತವಾಗಿ ತಿಳಿಸಿದ್ದರು.

ಹೆಸರಿನ ಟ್ಯಾಗ್ ಇಲ್ಲದೆ ಕರ್ತವ್ಯ ನಿರ್ವಹಿಸಿದ ಪೊಲೀಸರು

ಜಂತರ್ ಮಂತರ್‌ನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರಿನ ಗುರುತಿನ ಚೀಟಿಗಳನ್ನು (name tags) ಧರಿಸಿರಲಿಲ್ಲ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದೆ. ಜುಲೈ 20 ರ ಸಿಜೆಪಿ ಮೆರವಣಿಗೆಯ ಹಿಂಸಾಚಾರದ ನಂತರ ಸಂಭವಿಸಿದಂತೆ, ಸಿಬ್ಬಂದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿ ಗುರಿಯಾಗಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಗ್ಯಾನೇಶ್‌ ಕುಮಾರ್ ವಿರುದ್ಧದ ಪ್ರತಿಭಟನೆಯ ಮೊದಲ ದಿನ, ಪ್ರತಿಭಟನಾಕಾರರು ಪೊಲೀಸರನ್ನು ವೀಡಿಯೊ ಮಾಡಿದರು. ಅವರು ಯಾಕೆ ಟ್ಯಾಗ್‌ಗಳನ್ನು ಧರಿಸಿಲ್ಲ ಎಂದು ಪ್ರಶ್ನಿಸಿದರು. ಕೆಲವು ಸಿಬ್ಬಂದಿ ಟ್ಯಾಗ್‌ಗಳು ಬಿದ್ದುಹೋಗಿವೆ ಎಂದರು, ಇನ್ನು ಕೆಲವರು ಮರೆತುಹೋಗಿದೆ ಎಂದರು, ಹಲವರು ಯಾವುದೇ ಸ್ಪಷ್ಟನೆ ನೀಡಲಿಲ್ಲ.

ವರದಿಯ ಪ್ರಕಾರ, ಜುಲೈ ತಿಂಗಳ ಜನಸಂದಣಿಯನ್ನು ನಿಭಾಯಿಸಿದ ಅಧಿಕಾರಿಗಳು, ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಆನ್‌ಲೈನ್‌ನಲ್ಲಿ ಗುರಿಯಾಗಿಸಲಾಗಿದೆ ಎಂದು ಪರಾಮರ್ಶನಾ ಸಭೆಗಳಲ್ಲಿ ತಿಳಿಸಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಟ್ಯಾಗ್‌ಗಳನ್ನು ತೆಗೆದುಹಾಕಿದ್ದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರಿಗೆ ಭರವಸೆ ನೀಡಲಾಗಿತ್ತು ಎಂದು ವರದಿಯಾಗಿದೆ. ಈ ಬಾರಿ ಹೆಚ್ಚಿನ ಭಾರತೀಯ ಪೊಲೀಸ್ ಸೇವೆ (ಐಪಿಎಸ್‌) ಅಧಿಕಾರಿಗಳು ತಮ್ಮ ಟ್ಯಾಗ್‌ಗಳನ್ನು ಧರಿಸಿಕೊಂಡಿದ್ದರು. ಅನೇಕ ತಳಹಂತದ ಸಿಬ್ಬಂದಿ ಟ್ಯಾಗ್ ಧರಿಸಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಆದಿವಾಸಿ ವಿದ್ಯಾರ್ಥಿಗಳ ಸರಣಿ ಸಾವು ಖಂಡಿಸಿ ಬೃಹತ್ ಪ್ರತಿಭಟನೆ: ಎನ್‌ಎಸ್‌ಯುಐ ಅಧ್ಯಕ್ಷ ಸೇರಿ ಹಲವರ ಬಂಧನ, ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ!

ಮಹಾರಾಷ್ಟ್ರದ ಸರ್ಕಾರಿ ಹಾಗೂ ಅನುದಾನಿತ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಭದ್ರತಾ ಲೋಪ ಖಂಡಿಸಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬುಡಕಟ್ಟು ಕ್ಷೇಮಾಭಿವೃದ್ಧಿ...

ಬಿಜೆಪಿ ನಾಯಕರ ದ್ವೇಷ ಭಾಷಣ, ಹಿಂಸಾಚಾರ, ಜಾಮಿಯಾ ಪೊಲೀಸ್ ದೌರ್ಜನ್ಯ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: 2020ರ ಈಶಾನ್ಯ ದೆಹಲಿ ಹಿಂಸಾಚಾರ, 2019ರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಹಿಂಸಾಚಾರಕ್ಕೂ ಮುನ್ನ ನಡೆದಿದ್ದ ಎನ್ನಲಾದ ದ್ವೇಷ ಭಾಷಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು...

ಬಾಗಲಕೋಟೆಯಲ್ಲಿ ಅಸ್ಪೃಶ್ಯತೆ ಆಚರಣೆ; ದೇವಸ್ಥಾನದಲ್ಲಿ ದಲಿತರಿಗೆ ಪ್ರತ್ಯೇಕ ಊಟ

ಬಾಗಲಕೋಟೆ ಜಿಲ್ಲೆಯಲ್ಲಿ ದೇವಸ್ಥಾನದ ಜಾತ್ರೆಯೊಂದರಲ್ಲಿ ದಲಿತ ಸಮುದಾಯದ ಭಕ್ತರಿಗೆ ಪ್ರತ್ಯೇಕ ಊಟ ಬಡಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದು ಅಸ್ಪೃಶ್ಯತೆಗೆ ಸಂಬಂಧಿಸಿದ ವಿವಾದಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಈ ಘಟನೆ...

ಕ್ಯಾಂಪಸ್ ಹಿಂಸಾಚಾರದ ಬೆನ್ನಲ್ಲೇ SRFTI ಬಳಿ ರ್ಯಾಲಿ: ವಿದ್ಯಾರ್ಥಿಗಳಿಂದ ಕೇಂದ್ರ ಸಚಿವರಿಗೆ ತುರ್ತು ರಕ್ಷಣೆಯ ಮನವಿ

ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (SRFTI)ಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಬೆನ್ನಲ್ಲೇ, ಸಂಸ್ಥೆಯ ಸಮೀಪ ಹಿಂದೂ ಜಾಗರಣ್ ಮಂಚ್ ರ್ಯಾಲಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು...

ಮಲ್ಲೇಶ್ವರಂ ಕ್ಷೇತ್ರದಲ್ಲಿ ಫಾರಂ-7 ಅಕ್ರಮ: ಬಿಜೆಪಿಯ ಬೂತ್ ಏಜೆಂಟ್ ವಿರುದ್ಧ FIR

ರಾಜ್ಯಾದ್ಯಂತ ತೀವ್ರ ರಾಜಕೀಯ ವಿವಾದ ಹಾಗೂ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯ (SIR) ಅಕ್ರಮಗಳ ಸರಣಿಗೆ ಇದೀಗ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರವೂ ಸೇರ್ಪಡೆಯಾಗಿದೆ. ಫಾರಂ-7 ಅನ್ನು ಅಸ್ತ್ರವಾಗಿಸಿಕೊಂಡು ಜೀವಂತವಾಗಿರುವ ಹಾಗೂ...

ಹೆರಿಗೆಗೆ 15000 ರೂ. ಲಂಚದ ಬೇಡಿಕೆ ಆರೋಪ: ಗರ್ಭಿಣಿಯನ್ನು ಆಚೆಗೆ ತಳ್ಳಿದ ಸಿಬ್ಬಂದಿ, ಆಸ್ಪತ್ರೆ ಗೇಟ್‌ ಬಳಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಉತ್ತರ ಪ್ರದೇಶದ ರಾಯ್‌ಬರೇಲಿಯ ಜಿಲ್ಲಾ ಮಹಿಳಾ ಆಸ್ಪತ್ರೆಯ ಗೇಟ್ ಬಳಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಅತ್ಯಂತ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ (ಅಕ್ಟೋಬರ್ 3) ತಡರಾತ್ರಿ ಈ ಘಟನೆ...

ಎಸ್‌ಐಆರ್ ವಿರುದ್ಧ ಮುಂಬೈ ‘ಗರ್ಜನ ಮೋರ್ಚಾ’ದಲ್ಲಿ ರಾಜ್ ಠಾಕ್ರೆ ಗುಡುಗು: EVM ಬದಲು ಬ್ಯಾಲೆಟ್ ಪೇಪರ್‌ಗೆ ಮರಳಲು ಆಗ್ರಹ

ಮುಂಬೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕುರಿತು ದೇಶಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಡುವೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ...

ಉತ್ತರ ಪ್ರದೇಶ: ಯೋಧನ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಟ್ರಕ್‌ಗೆ ಡಿಕ್ಕಿ, ಆತನ ಕುಟುಂಬದ 3 ಮಂದಿ ಮತ್ತು ಚಾಲಕ ಸಾವು 

ಸುಲ್ತಾನ್‌ಪುರ: ಸೇನೆಯ ಸುಬೇದಾರ್ ಮೇಜರ್ ಒಬ್ಬರ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯುತ್ತಿದ್ದ ಸೇನಾ ಆಂಬ್ಯುಲೆನ್ಸ್ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಮೃತ ಯೋಧನ ಕುಟುಂಬದ ಮೂವರು ಸದಸ್ಯರು ಸೇರಿದಂತೆ ನಾಲ್ವರು...

ಕೊಪ್ಪದಲ್ಲಿ ಫಾರಂ-7 ಮೂಲಕ ಅರ್ಹ 243 ಮತದಾರರ ಹೆಸರು ತೆಗೆಯಲು ಯತ್ನ: ಸಿಕ್ಕಿಬಿದ್ದ ಮೇಲೆ ಆಕ್ಷೇಪಣೆ ಹಿಂಪಡೆದ ಬಿಜೆಪಿಗರು

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ನಡೆಯುತ್ತಿರುವ ಪ್ರಯತ್ನಗಳು ರಾಜ್ಯದ ನಾನಾ ಭಾಗಗಳಲ್ಲಿ ಬೆಳಕಿಗೆ ಬರುತ್ತಿವೆ....

ಗಾಂಧಿ ಜಯಂತಿ ಕಾರ್ಯಕ್ರಮದ ಮೇಲೆ ಬಿಜೆಪಿ ದಾಳಿ ಆರೋಪ: ಗಾಂಧಿ ಭಾವಚಿತ್ರ ಹರಿದುಹಾಕಿ ಬೆದರಿಕೆ; ಎಸ್‌ಎಫ್‌ಐ ನಾಯಕ ಸೇರಿ ಮೂವರ ಬಂಧನ

ಕೋಲ್ಕತ್ತಾ: ಮಹಾತ್ಮ ಗಾಂಧಿಯವರ ಜನ್ಮದಿನದ ಅಂಗವಾಗಿ ಎಡಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಿರಾಟಿಯಲ್ಲಿ ಕೇಳಿಬಂದಿದೆ. ಕಾರ್ಯಕ್ರಮದ ವೇದಿಕೆ ಮತ್ತು...