HomeಅಂಕಣಗಳುKarnataka against SIRಕಡೂರಿನಲ್ಲಿ 30 ಅರ್ಹ ಮತದಾರರ ಹೆಸರು ಅಳಿಸಲು ಫಾರಂ-7 ಸಲ್ಲಿಕೆ: ಮಾಜಿ ಕೌನ್ಸಿಲರ್ ಮತ್ತು ಬಿಜೆಪಿಯ...

ಕಡೂರಿನಲ್ಲಿ 30 ಅರ್ಹ ಮತದಾರರ ಹೆಸರು ಅಳಿಸಲು ಫಾರಂ-7 ಸಲ್ಲಿಕೆ: ಮಾಜಿ ಕೌನ್ಸಿಲರ್ ಮತ್ತು ಬಿಜೆಪಿಯ ಸದಸ್ಯ ಮೋಹನ್ ಕುಮಾರ್ ವಿರುದ್ಧ ಆರೋಪ

- Advertisement -
- Advertisement -

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವಾರ್ಡ್ ಸಂಖ್ಯೆ 23, ಭಾಗ ಸಂಖ್ಯೆ 128ರ (ಮುದಿಯಪ್ಪ ಬಡಾವಣೆ) 30ಕ್ಕೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರಂ-7 ಸಲ್ಲಿಸಿರುವುದು ಖಾತ್ರಿಯಾಗಿದೆ. ಈ ವಂಚನೆ ವಿರುದ್ಧ ಕಡೂರಿನ ಸಂತ್ರಸ್ತ ಮತದಾರರು ತಮ್ಮ ಮೂಲ ದಾಖಲೆಗಳೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಇಳಿದಿದ್ದಾರೆ.

ಈ ಪ್ರಕರಣದ ಕುರಿತು ನಾನು ಗೌರಿಯೊಂದಿಗೆ ಮಾತನಾಡಿದ, ‘ನಾಗರಿಕ ಮತಕಾವಲು ಸಮಿತಿ’ಯ ಪ್ರಮುಖರಾದ ಮುನ್ನಾ (ತನೂರು, ಗೌಸ್ ಫೀರ್) ಅವರು, “ಮೂಲತಃ ಅಕ್ಟೋಬರ್ 3 ರಂದು ಈ ಅಕ್ರಮದ ವಿಚಾರ ನಮ್ಮ ಗಮನಕ್ಕೆ ಬಂತು. ತಕ್ಷಣವೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆವು. ಅಲ್ಲಿನ ಜನರನ್ನು ಮಾತಾಡಿಸಿದಾಗ, ಅವರು ಕಳೆದ 30 ರಿಂದ 35 ವರ್ಷಗಳಿಂದ ಅದೇ ಪ್ರದೇಶದಲ್ಲೇ ನಿರಂತರವಾಗಿ ವಾಸವಾಗಿದ್ದಾರೆ ಮತ್ತು ಎಲ್ಲಿಗೂ ಸ್ಥಳಾಂತರಗೊಂಡಿಲ್ಲ ಎಂಬುದು ಸ್ಪಷ್ಟವಾಯಿತು. ಬಿಎಲ್ಓ ನೋಟಿಸ್ ನೀಡಿದ ಮೇಲೆಯೇ ತಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲು ಯತ್ನಿಸಿರುವುದು ಅವರಿಗೆ ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ಒಂದೇ ಸಮುದಾಯದವರನ್ನು ಟಾರ್ಗೆಟ್ ಮಾಡಿ ಹೆಸರು ಡೆಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಲಾಗಿದೆ ಎಂಬ ಸತ್ಯ ಅರಿವಾಯಿತು.

ಒಮ್ಮೆ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ಮುಗಿದು ಹೆಸರು ಡೆಲೀಟ್ ಆದರೆ, ಅದನ್ನು ಸರಿಪಡಿಸುವುದು ಅತ್ಯಂತ ಕಷ್ಟಕರ. ಆದ್ದರಿಂದ ನಾವು ತಕ್ಷಣವೇ ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತಂದು ಮನವಿ ಸಲ್ಲಿಸಿದೆವು. ಜಿಲ್ಲಾಧಿಕಾರಿಗಳು ನಮ್ಮ ಎದುರಲ್ಲೇ ತಾಲೂಕಿನ ತಹಶೀಲ್ದಾರರಿಗೆ ಫೋನ್ ಮಾಡಿ, ತಕ್ಷಣವೇ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಸರ್ವೇ ನಡೆಸುವಂತೆ ಸೂಚಿಸಿದರು” ಎಂದು ತಿಳಿಸಿದರು.

“ಇದರ ಬೆನ್ನಲ್ಲೇ ಸಂತ್ರಸ್ತ ಮತದಾರರೊಂದಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆವು. ಸಂಜೆ 7:30 ದಾಟಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಸ್ಥಳಕ್ಕೆ ಬಂದರು. ‘ಯಾರೇ ಫಾರಂ-7 ಸಲ್ಲಿಸಿದರೂ ಅದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ. ಸ್ಥಳ ಪರಿಶೀಲನೆ ನಡೆಸಿ ಅವರು ಇಲ್ಲೇ ವಾಸವಿದ್ದರೆ ಯಾವುದೇ ಕಾರಣಕ್ಕೂ ಹೆಸರು ಡೆಲೀಟ್ ಮಾಡುವುದಿಲ್ಲ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ” ಎಂದು ಮುನ್ನಾ ವಿವರಿಸಿದ್ದಾರೆ.

ಈ ಅಕ್ರಮದ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದನ್ನು ವಿವರಿಸಿದ ಅವರು, “ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನಾವು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಎಸ್ಪಿಯವರನ್ನು ಭೇಟಿ ಮಾಡಿ ಒತ್ತಾಯಿಸಿದೆವು. ಈ ನಡುವೆ ಸಬ್ ಇನ್ಸ್‌ಪೆಕ್ಟರ್ ಅವರು ಆರೋಪ ಎದುರಿಸುತ್ತಿರುವ ಮಾಜಿ ಬಿಜೆಪಿ ಕೌನ್ಸಿಲರ್ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ, ‘ನನಗೆ ಪಕ್ಷದಿಂದ ಫಾರಂಗಳನ್ನು ತಂದುಕೊಟ್ಟಿದ್ದರು. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲದೆ ನಾನು ಕೇವಲ ಸಹಿ ಮಾಡಿಕೊಟ್ಟಿದ್ದೆ’ ಎಂದು ಸಬೂಬು ನೀಡಿದ್ದಾರೆ. ಮೋಹನ್ ಕುಮಾರ್ ಜೊತೆಗೆ ರಾಜೇಶ್ವರಿ ಎಂಬುವವರ ಹೆಸರಿನಲ್ಲೂ ಫಾರಂ-7 ಸಲ್ಲಿಕೆಯಾಗಿದ್ದು, ಇಬ್ಬರೂ ಬಿಜೆಪಿ ಹಿನ್ನೆಲೆಯವರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಣ್ಣಾನಾಯಕ್ ಹಾಗೂ ಸಂತ್ರಸ್ತರ ಆಕ್ರೋಶ

ಕಡೂರು 23ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಅಣ್ಣಾನಾಯಕ್ ಮಾತನಾಡಿ, “ನಮ್ಮ ವಾರ್ಡ್‌ನ 30 ಜನರಿಗೆ ಹೆಸರು ತೆಗೆಯುವ ಸಂಬಂಧ ನೋಟಿಸ್ ನೀಡಲಾಗಿದೆ. ಅಳಿಸಲು ಯತ್ನಿಸಿರುವ 30 ಮತದಾರರ ಪೈಕಿ 29 ಜನರು ಮುಸ್ಲಿಂ ಸಮುದಾಯದವರಾಗಿದ್ದರೆ, ಒಬ್ಬರು ಹಿಂದೂ ಸಮುದಾಯದವರಾಗಿದ್ದಾರೆ. ಕೇವಲ ಚುನಾವಣೆಯಲ್ಲಿ ಗೆಲ್ಲಲು ಇಂತಹ ಅಕ್ರಮಕ್ಕೆ ಮುಂದಾಗಿರುವ ಮಾಜಿ ಕೌನ್ಸಿಲರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಈ ಕುರಿತು ನಾನು ಗೌರಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ಹೆಸರು ಹೇಳಲು ಇಚ್ಛಿಸದ ಸಂತ್ರಸ್ತ ಮತದಾರರೊಬ್ಬರು, “ನಾವು ಕೂಲಿ ಮಾಡಿ ಬದುಕುವ ಸಣ್ಣ ಜನ, ಕಳೆದ 25-30 ವರ್ಷಗಳಿಂದ ಇಲ್ಲೇ ಇದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸ್ವಾರ್ಥಕ್ಕಾಗಿ ಬಿಜೆಪಿಯವರು ನಮ್ಮ ಹೆಸರುಗಳನ್ನು ತೆಗೆಯಲು ಹುನ್ನಾರ ನಡೆಸಿದ್ದಾರೆ. ನಮ್ಮ ಬಳಿ ಎಲ್ಲಾ ಅಧಿಕೃತ ದಾಖಲೆಗಳಿದ್ದು, ಕಾನೂನು ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಎದ್ದೇಳು ಕರ್ನಾಟಕ’ ಸಂಘಟನೆಯೂ ಜಿಲ್ಲಾಡಳಿತಕ್ಕೆ ಅಧಿಕೃತ ದೂರು ನೀಡಿದೆ. ಕಡೂರು ಮಾತ್ರವಲ್ಲದೆ ಬೆಳಗಾವಿ (198 ಹೆಸರು), ಬೀದರ್‌ನ ಭಾಲ್ಕಿ (3,244 ಹೆಸರು), ಮೈಸೂರು ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲೂ (778 ಹೆಸರು) ಇದೇ ರೀತಿ ಫಾರಂ-7 ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಈಗಾಗಲೇ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿವೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸುಳ್ಳು ಮಾಹಿತಿ ನೀಡಿ ಫಾರಂ-7 ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಅರ್ಹ ಮತದಾರರ ಹಕ್ಕನ್ನು ಕಸಿಯುವ ಇಂತಹ ಕೃತ್ಯಗಳ ವಿರುದ್ಧ ಪಾರದರ್ಶಕ ತನಿಖೆಯಾಗಬೇಕೆಂಬ ಒತ್ತಾಯ ತೀವ್ರಗೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫಾರ್ಮ್-7 ಆಕ್ಷೇಪಣೆ; ಈವರೆಗೆ ಯಾವ ಮತದಾರರ ಹೆಸರನ್ನೂ ಕೈಬಿಟ್ಟಿಲ್ಲ ಎಂದ ಅನ್ಬುಕುಮಾರ್

ಫಾರ್ಮ್-7 ಮೂಲಕ ಅರ್ಹ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ತಕ್ಷಣ ಮತದಾರರ ಹೆಸರು ಸ್ವಯಂಚಾಲಿತವಾಗಿ ಡಿಲೀಟ್ ಆಗುವುದಿಲ್ಲ. ಇಆರ್‌ಒಗಳ ಕಡ್ಡಾಯ ಪರಿಶೀಲನೆ, ಅರ್ಜಿ ಕೊಟ್ಟವರಿಗೆ ನೋಟೀಸ್ ಮತ್ತು ವಿಚಾರಣೆ ನಡೆಸಿದ...

‘ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದಲೇ ಆಗಬೇಕು’: ಗ್ಯಾನೇಶ್ ಕುಮಾರ್ ಪ್ರಕರಣದಲ್ಲಿ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗದ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು...

ಎಸ್‌ಐಆರ್; ಮತದಾರರ ಪಟ್ಟಿ ಅಕ್ರಮದಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ನಾರಿಮನ್ ಕಳವಳ

ದೇಶದಲ್ಲಿ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಲಕ್ಷಾಂತರ ನಾಗರಿಕರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದರಿಂದ "ಪ್ರಜಾಪ್ರಭುತ್ವ ಹಾಗೂ ನಾಗರಿಕರ ಮತದಾನದ ಹಕ್ಕು ತೀವ್ರ ಅಪಾಯದಲ್ಲಿದೆ" ಎಂದು...

ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಆದಿವಾಸಿ ವಿದ್ಯಾರ್ಥಿಗಳ ಸರಣಿ ಸಾವು ಖಂಡಿಸಿ ಬೃಹತ್ ಪ್ರತಿಭಟನೆ: ಎನ್‌ಎಸ್‌ಯುಐ ಅಧ್ಯಕ್ಷ ಸೇರಿ ಹಲವರ ಬಂಧನ, ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ!

ಮಹಾರಾಷ್ಟ್ರದ ಸರ್ಕಾರಿ ಹಾಗೂ ಅನುದಾನಿತ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಭದ್ರತಾ ಲೋಪ ಖಂಡಿಸಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬುಡಕಟ್ಟು ಕ್ಷೇಮಾಭಿವೃದ್ಧಿ...

ಬಿಜೆಪಿ ನಾಯಕರ ದ್ವೇಷ ಭಾಷಣ, ಹಿಂಸಾಚಾರ, ಜಾಮಿಯಾ ಪೊಲೀಸ್ ದೌರ್ಜನ್ಯ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: 2020ರ ಈಶಾನ್ಯ ದೆಹಲಿ ಹಿಂಸಾಚಾರ, 2019ರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಹಿಂಸಾಚಾರಕ್ಕೂ ಮುನ್ನ ನಡೆದಿದ್ದ ಎನ್ನಲಾದ ದ್ವೇಷ ಭಾಷಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು...

ದೆಹಲಿ ಎಸಿಪಿ ಮೇಲಿನ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿ ಸೇರಿದಂತೆ 18 ಮಂದಿ ಪೊಲೀಸ್ ವಶಕ್ಕೆ

ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿರುವ ಯುವತಿ ಸೇರಿದಂತೆ 18 ಜನರನ್ನು ದೆಹಲಿ ಪೊಲೀಸರು ಸೋಮವಾರ (ಅ.5) ವಶಕ್ಕೆ ಪಡೆದಿದ್ದಾರೆ. ಆರೋಪಿತ ಅಧಿಕಾರಿಯ ವಿರುದ್ಧ...

ಬಾಗಲಕೋಟೆಯಲ್ಲಿ ಅಸ್ಪೃಶ್ಯತೆ ಆಚರಣೆ; ದೇವಸ್ಥಾನದಲ್ಲಿ ದಲಿತರಿಗೆ ಪ್ರತ್ಯೇಕ ಊಟ

ಬಾಗಲಕೋಟೆ ಜಿಲ್ಲೆಯಲ್ಲಿ ದೇವಸ್ಥಾನದ ಜಾತ್ರೆಯೊಂದರಲ್ಲಿ ದಲಿತ ಸಮುದಾಯದ ಭಕ್ತರಿಗೆ ಪ್ರತ್ಯೇಕ ಊಟ ಬಡಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದು ಅಸ್ಪೃಶ್ಯತೆಗೆ ಸಂಬಂಧಿಸಿದ ವಿವಾದಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಈ ಘಟನೆ...

ಕ್ಯಾಂಪಸ್ ಹಿಂಸಾಚಾರದ ಬೆನ್ನಲ್ಲೇ SRFTI ಬಳಿ ರ್ಯಾಲಿ: ವಿದ್ಯಾರ್ಥಿಗಳಿಂದ ಕೇಂದ್ರ ಸಚಿವರಿಗೆ ತುರ್ತು ರಕ್ಷಣೆಯ ಮನವಿ

ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (SRFTI)ಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಬೆನ್ನಲ್ಲೇ, ಸಂಸ್ಥೆಯ ಸಮೀಪ ಹಿಂದೂ ಜಾಗರಣ್ ಮಂಚ್ ರ್ಯಾಲಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು...

ಮಲ್ಲೇಶ್ವರಂ ಕ್ಷೇತ್ರದಲ್ಲಿ ಫಾರಂ-7 ಅಕ್ರಮ: ಬಿಜೆಪಿಯ ಬೂತ್ ಏಜೆಂಟ್ ವಿರುದ್ಧ FIR

ರಾಜ್ಯಾದ್ಯಂತ ತೀವ್ರ ರಾಜಕೀಯ ವಿವಾದ ಹಾಗೂ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯ (SIR) ಅಕ್ರಮಗಳ ಸರಣಿಗೆ ಇದೀಗ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರವೂ ಸೇರ್ಪಡೆಯಾಗಿದೆ. ಫಾರಂ-7 ಅನ್ನು ಅಸ್ತ್ರವಾಗಿಸಿಕೊಂಡು ಜೀವಂತವಾಗಿರುವ ಹಾಗೂ...

ಹೆರಿಗೆಗೆ 15000 ರೂ. ಲಂಚದ ಬೇಡಿಕೆ ಆರೋಪ: ಗರ್ಭಿಣಿಯನ್ನು ಆಚೆಗೆ ತಳ್ಳಿದ ಸಿಬ್ಬಂದಿ, ಆಸ್ಪತ್ರೆ ಗೇಟ್‌ ಬಳಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಉತ್ತರ ಪ್ರದೇಶದ ರಾಯ್‌ಬರೇಲಿಯ ಜಿಲ್ಲಾ ಮಹಿಳಾ ಆಸ್ಪತ್ರೆಯ ಗೇಟ್ ಬಳಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಅತ್ಯಂತ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ (ಅಕ್ಟೋಬರ್ 3) ತಡರಾತ್ರಿ ಈ ಘಟನೆ...