Homeಮುಖಪುಟಬಂಗಾಳ ಟ್ರಿಬ್ಯೂನಲ್ ನ್ಯಾಯಾಧೀಶರಿಂದ ಚುನಾವಣಾ ಆಯೋಗದ ಪೋರ್ಟಲ್ ವೈಫಲ್ಯದ ಬಗ್ಗೆ ಗಂಭೀರ ಆರೋಪ: 'ನೋಡೀಸ್ ಜಾರಿ,...

ಬಂಗಾಳ ಟ್ರಿಬ್ಯೂನಲ್ ನ್ಯಾಯಾಧೀಶರಿಂದ ಚುನಾವಣಾ ಆಯೋಗದ ಪೋರ್ಟಲ್ ವೈಫಲ್ಯದ ಬಗ್ಗೆ ಗಂಭೀರ ಆರೋಪ: ‘ನೋಡೀಸ್ ಜಾರಿ, ವಿಚಾರಣೆ ಅಥವಾ ಮತದಾರರ ಹಕ್ಕು ಮರುಸ್ಥಾಪನೆ ಅಸಾಧ್ಯ!

- Advertisement -
- Advertisement -

ಪ್ರಮುಖ ರಾಷ್ಟ್ರೀಯ ದಿನಪತ್ರಿಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿರುವಂತೆ, ಪಶ್ಚಿಮ ಬಂಗಾಳದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅಳಿಸಲ್ಪಟ್ಟ ಲಕ್ಷಾಂತರ ಮತದಾರರ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೇಮಕಗೊಂಡಿರುವ ಟ್ರಿಬ್ಯೂನಲ್ ನ್ಯಾಯಾಧೀಶರು, ಚುನಾವಣಾ ಆಯೋಗದ ಡಿಜಿಟಲ್ ಪೋರ್ಟಲ್‌ನಲ್ಲಿರುವ ಗಂಭೀರ ತಾಂತ್ರಿಕ ಲೋಪಗಳನ್ನು ಬಹಿರಂಗಪಡಿಸಿದ್ದಾರೆ. ಚುನಾವಣೆ ಮುಗಿದ ಮೂರು ತಿಂಗಳ ಬಳಿಕ, ಅಂದರೆ ಕಳೆದ ಆಗಸ್ಟ್ 11 ರಂದು ನಡೆದ 12ಕ್ಕೂ ಹೆಚ್ಚು ಟ್ರಿಬ್ಯೂನಲ್ ನ್ಯಾಯಾಧೀಶರ ಸಭೆಯಲ್ಲಿ ಈ ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಈ ಪ್ರಮುಖ ವರದಿಯನ್ನು ಭಾರತ ಚುನಾವಣಾ ಆಯೋಗ ಹಾಗೂ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.

ಚುನಾವಣಾ ಆಯೋಗದ ಐಟಿ ವಿಭಾಗವು ರೂಪಿಸಿರುವ ಪೋರ್ಟಲ್‌ನಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದರಿಂದ ಮೇಲ್ಮನವಿ ವಿಲೇವಾರಿ ಪ್ರಕ್ರಿಯೆ ತೀವ್ರವಾಗಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ನ್ಯಾಯಾಧೀಶರು ಅಳಲು ತೋಡಿಕೊಂಡಿದ್ದಾರೆ. ಪಕ್ಷಕಾರರಿಗೆ ನೇರವಾಗಿ ಅಥವಾ ಸರಿಯಾದ ಮಾರ್ಗದ ಮೂಲಕ ನೋಟೀಸ್ ಕಳುಹಿಸಲು ಪೋರ್ಟಲ್‌ನಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಮೇ ತಿಂಗಳಿನಲ್ಲಿಯೇ ನೋಟೀಸ್ ಮಾದರಿಯನ್ನು ಅನುಮೋದಿಸಿದ್ದರೂ ಅದು ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಅಷ್ಟೇ ಅಲ್ಲದೆ, ಮೇಲ್ಮನವಿದಾರರು ಅಥವಾ ಟ್ರಿಬ್ಯೂನಲ್ ಬಯಸುವ ಹೆಚ್ಚುವರಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಅಥವಾ ಸುರಕ್ಷಿತವಾಗಿಡಲು ಪೋರ್ಟಲ್ ಅವಕಾಶ ನೀಡುವುದಿಲ್ಲ. ಜಿಲ್ಲಾಧಿಕಾರಿಗಳ ಇಮೇಲ್ ಮೂಲಕ ದಾಖಲೆ ತರಿಸಿಕೊಳ್ಳಲು ಯತ್ನಿಸಿದರೂ ಪ್ರತಿಕ್ರಿಯೆ ತುಂಬಾ ಕಳಪೆಯಾಗಿದೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ. ಅಗತ್ಯವಿದ್ದಾಗ ಪಕ್ಷಕಾರರ ವರ್ಚುವಲ್ ವಿಚಾರಣೆ ನಡೆಸಲು ಯಾವುದೇ ತಂತ್ರಾಂಶ ವ್ಯವಸ್ಥೆ ಇಲ್ಲದಿರುವುದು ಹಾಗೂ ವಿಶೇಷವಾಗಿ, ಒಮ್ಮೆ ಮತದಾರರ ಹೆಸರು ಅಳಿಸಲ್ಪಟ್ಟ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಅದನ್ನು ಮರುಸ್ಥಾಪಿಸಬೇಕಾದರೆ ಪೋರ್ಟಲ್‌ನಲ್ಲಿ ಅದಕ್ಕೆ ಅವಕಾಶವೇ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತದಾರರ ಹೆಸರು ಯಾಕೆ ಅಳಿಸಲಾಗಿದೆ ಅಥವಾ ಸೇರಿಸಲಾಗಿದೆ ಎಂಬ ಕಾರಣಗಳನ್ನು ತಿಳಿದುಕೊಳ್ಳಲು ಮೇಲ್ಮನವಿದಾರರಿಗೆ ತೀರ್ಪಿನ ಪ್ರತಿಯನ್ನು ಪೋರ್ಟಲ್‌ನಿಂದ ಡೌನ್‌‌ಲೋಡ್ ಮಾಡಿಕೊಳ್ಳಲು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂದು ನ್ಯಾಯಾಧೀಶರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರಣಗಳನ್ನು ಸ್ಪಷ್ಟಪಡಿಸುವುದು ಕಡ್ಡಾಯವಾಗಿದ್ದರೂ ಇದು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೌತಿಕವಾಗಿ ಸಲ್ಲಿಕೆಯಾದ ಮೇಲ್ಮನವಿಗಳ ದಾಖಲೆಗಳನ್ನು ಡಿಜಿಟಲ್ ಆಗಿ ನಿರ್ವಹಿಸಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದು ನಾಗರಿಕರಿಗೆ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗುವಂತೆ ಮಾಡಿದೆ ಎಂದು ಅವರು ಎಚ್ಚರಿಸಿದ್ದಾರೆ. ಮೇ 22 ರಂದೇ ಒಬ್ಬ ನ್ಯಾಯಾಧೀಶರು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಈ ತಾಂತ್ರಿಕ ಅಡೆತಡೆಗಳ ಬಗ್ಗೆ ಎಚ್ಚರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯಡಿ ‘ತಾರ್ಕಿಕ ಅಸಂಗತತೆಗಳ’ ಹೆಸರಿನಲ್ಲಿ ಚುನಾವಣಾ ಆಯೋಗವು ಸುಮಾರು 60 ಲಕ್ಷಕ್ಕೂ ಹೆಚ್ಚು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅಂತಿಮವಾಗಿ ವಿಧಾನಸಭೆ ಚುನಾವಣೆಗೂ ಕೆಲವೇ ವಾರಗಳ ಮೊದಲು 27.16 ಲಕ್ಷ ಮತದಾರರ ಹೆಸರುಗಳನ್ನು ರದ್ದುಗೊಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ, ಸುಪ್ರೀಂ ಕೋರ್ಟ್ ತನ್ನ ಅಸಾಧಾರಣ ಅಧಿಕಾರ ಬಳಸಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 19 ಮೇಲ್ಮನವಿ ಟ್ರಿಬ್ಯೂನಲ್‌ಗಳನ್ನು ರಚಿಸಲು ಆದೇಶಿಸಿತ್ತು. ಸೆಪ್ಟೆಂಬರ್ 18 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯ ಪ್ರಕಾರ, ಒಟ್ಟು 38.31 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ 10 ರವರೆಗೆ ಕೇವಲ 1.26 ಲಕ್ಷ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಈ ಎಲ್ಲಾ ತಾಂತ್ರಿಕ ಹಾಗೂ ಆಡಳಿತಾತ್ಮಕ ವೈಫಲ್ಯಗಳು ನ್ಯಾಯಾಂಗ ಮೇಲ್ಮನವಿ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವೇಗದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ತನ್ನ ವರದಿಯಲ್ಲಿ ಎತ್ತಿ ತೋರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಫಾರಂ 6 ಬದಲಾವಣೆ ಅನುಮೋದಿಸಿಲ್ಲ’: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಬಲ ತುಂಬಿದ ಸುಪ್ರೀಂ ಹೇಳಿಕೆ

ನವದೆಹಲಿ: ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಬಳಸುವ ನಮೂನೆ 6ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಹೇಳಿಕೆ ಇದೀಗ ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮತದಾರರ ಪಟ್ಟಿಯ...

‘ನಕಲಿ ಫಾರ್ಮ್ 7 ಸಲ್ಲಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಿ..’; ಅಧಿಕಾರಿಗಳಿಗೆ ತೆಲಂಗಾಣ ಸಿಇಒ ಸೂಚನೆ

ತೆಲಂಗಾಣದಲ್ಲಿ ಫಾರ್ಮ್ 7 ರ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ)...

ಕರ್ನಾಟಕ ಎಸ್ಐಆರ್: ಮುಸ್ಲೀಮರನ್ನು ಗುರಿಯಾಗಿಸಿ ತೀರ್ಥಹಳ್ಳಿಯಲ್ಲಿ 81 ಮತದಾರರ ಹೆಸರು ಅಳಿಸಲು ಬಿಜೆಪಿ ಮುಖಂಡರ ಮನವಿ

ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ನಡುವೆಯೇ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುರುಳಿ ಬಾಳೆಬೈಲು ಗ್ರಾಮದಲ್ಲಿ 81 ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸುವಂತೆ ಬಿಜೆಪಿ...

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಪ್ರಕರಣ: ಬಿಜೆಪಿ ನಾಯಕ ರವಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಮೋಸದಿಂದ ಡಿಲೀಟ್ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್ ಅವರಿಗೆ ಕರ್ನಾಟಕದ ಬೆಳಗಾವಿಯ...

ಫಾರ್ಮ್-7 ಆಕ್ಷೇಪಣೆ; ಈವರೆಗೆ ಯಾವ ಮತದಾರರ ಹೆಸರನ್ನೂ ಕೈಬಿಟ್ಟಿಲ್ಲ ಎಂದ ಅನ್ಬುಕುಮಾರ್

ಫಾರ್ಮ್-7 ಮೂಲಕ ಅರ್ಹ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ತಕ್ಷಣ ಮತದಾರರ ಹೆಸರು ಸ್ವಯಂಚಾಲಿತವಾಗಿ ಡಿಲೀಟ್ ಆಗುವುದಿಲ್ಲ. ಇಆರ್‌ಒಗಳ ಕಡ್ಡಾಯ ಪರಿಶೀಲನೆ, ಅರ್ಜಿ ಕೊಟ್ಟವರಿಗೆ ನೋಟೀಸ್ ಮತ್ತು ವಿಚಾರಣೆ ನಡೆಸಿದ...

‘ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದಲೇ ಆಗಬೇಕು’: ಗ್ಯಾನೇಶ್ ಕುಮಾರ್ ಪ್ರಕರಣದಲ್ಲಿ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗದ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು...

ಎಸ್‌ಐಆರ್; ಮತದಾರರ ಪಟ್ಟಿ ಅಕ್ರಮದಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ನಾರಿಮನ್ ಕಳವಳ

ದೇಶದಲ್ಲಿ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಲಕ್ಷಾಂತರ ನಾಗರಿಕರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದರಿಂದ "ಪ್ರಜಾಪ್ರಭುತ್ವ ಹಾಗೂ ನಾಗರಿಕರ ಮತದಾನದ ಹಕ್ಕು ತೀವ್ರ ಅಪಾಯದಲ್ಲಿದೆ" ಎಂದು...

ಕಡೂರಿನಲ್ಲಿ 30 ಅರ್ಹ ಮತದಾರರ ಹೆಸರು ಅಳಿಸಲು ಫಾರಂ-7 ಸಲ್ಲಿಕೆ: ಮಾಜಿ ಕೌನ್ಸಿಲರ್ ಮತ್ತು ಬಿಜೆಪಿಯ ಸದಸ್ಯ ಮೋಹನ್ ಕುಮಾರ್ ವಿರುದ್ಧ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ...

ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಆದಿವಾಸಿ ವಿದ್ಯಾರ್ಥಿಗಳ ಸರಣಿ ಸಾವು ಖಂಡಿಸಿ ಬೃಹತ್ ಪ್ರತಿಭಟನೆ: ಎನ್‌ಎಸ್‌ಯುಐ ಅಧ್ಯಕ್ಷ ಸೇರಿ ಹಲವರ ಬಂಧನ, ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ!

ಮಹಾರಾಷ್ಟ್ರದ ಸರ್ಕಾರಿ ಹಾಗೂ ಅನುದಾನಿತ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಭದ್ರತಾ ಲೋಪ ಖಂಡಿಸಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬುಡಕಟ್ಟು ಕ್ಷೇಮಾಭಿವೃದ್ಧಿ...

ಬಿಜೆಪಿ ನಾಯಕರ ದ್ವೇಷ ಭಾಷಣ, ಹಿಂಸಾಚಾರ, ಜಾಮಿಯಾ ಪೊಲೀಸ್ ದೌರ್ಜನ್ಯ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

ನವದೆಹಲಿ: 2020ರ ಈಶಾನ್ಯ ದೆಹಲಿ ಹಿಂಸಾಚಾರ, 2019ರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಹಿಂಸಾಚಾರ ಹಾಗೂ ಹಿಂಸಾಚಾರಕ್ಕೂ ಮುನ್ನ ನಡೆದಿದ್ದ ಎನ್ನಲಾದ ದ್ವೇಷ ಭಾಷಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು...