Homeಮುಖಪುಟರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

ರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

- Advertisement -
- Advertisement -

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳದ ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಬಲಪಂಥೀಯರು, ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್ ತಿಂದು, (ಮಂಗಳವಾರ ಪಿತೃಪಕ್ಷ ಮಾಸ) ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದು ಉಯಿಲಿಡುತ್ತಿವೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟ ಅಕ್ಟೋಬರ್ 6, ಮಂಗಳವಾರದಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ (INDIA) ಒಕ್ಕೂಟದ ಪ್ರಮುಖ ನಾಯಕರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ದೆಹಲಿ ಪೊಲೀಸರು ತಡೆದರೂ, ಸುಮಾರು ಎಂಟು ಗಂಟೆಗಳ ಕಾಲ ಆಕಾಶವಾಣಿ ಭವನದಲ್ಲಿ ಧರಣಿ ನಡೆಸಿದ ರಾಹುಲ್ ಅವರನ್ನು, ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲಾಯಿತು.

ಆದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಈ ಗಮನಾರ್ಹ ಪ್ರತಿಭಟನಾ ಹೆಜ್ಜೆಗಳ ಬೆನ್ನಲ್ಲೇ, ಸಂಘಪಾರಿವಾರವು ‘ಆಹಾರ ಫ್ಯಾಸಿಸಮ್’ ಎಂದರೇನು ಎಂಬುದನ್ನು ದೇಶಕ್ಕೆ ಮತ್ತೊಮ್ಮೆ ನೆನಪಿಸುತ್ತಿದೆ. ಈ ಬೃಹತ್ ಪ್ರಜಾಪ್ರಭುತ್ವ ವಿರೋಧಿ ವಿವಾದವನ್ನು ಚರ್ಚಿಸುವ ಬದಲು, ಬಲಪಂಥೀಯರ ಒಂದು ವರ್ಗಕ್ಕೆ ದೇಶದ ಅತ್ಯಂತ ತುರ್ತು ವಿಷಯವಾಗಿದ್ದುದು ‘ರಾಹುಲ್ ಗಾಂಧಿ ಏನು ತಿಂದರು?’ ಎಂಬುದು.

ಇಷ್ಟು ದೊಡ್ಡ ಪ್ರಮಾಣದ ಮತ ತಿರುಚುವಿಕೆಯ ವಿರುದ್ಧದ ಪ್ರತಿಭಟನೆ ನಡೆಯುತ್ತಿದ್ದಾಗ, ಮೋದಿ ಪರವಾದ ‘ಗೋದಿ ಮೀಡಿಯಾ’ ಮತ್ತು ಸಂಘಪಾರಿವಾರದ ಸೋಶಿಯಲ್ ಮೀಡಿಯಾಗಳು ಒಟ್ಟಾಗಿ ‘ಚರ್ಚಿಸಿದ್ದು’ ರಾಹುಲ್ ಗಾಂಧಿ ಮಧ್ಯಾಹ್ನ ಸೇವಿಸಿದ ಆಹಾರದ ಬಗ್ಗೆಯಾಗಿದೆ. ಆ ಆಹಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪ್ರಚಾರಗಳು ತುಂಬಿ ತುಳುಕುತ್ತಿವೆ. ಮಂಗಳವಾರದಂದು ರಾಹುಲ್ ಗಾಂಧಿ ಚಿಕನ್ ರೋಲ್ ತಿಂದಿರುವುದು ಹಿಂದುತ್ವದ ಭಾವನೆಗೆ ಧೆಕ್ಕೆ ತಂದಿದೆ ಎಂಬುದು ಸಂಘಪಾರಿವಾರದ ಪ್ರಲಾಪ.

ರಾಹುಲ್ ಅವರ ಜೊತೆ ಪ್ರತಿಭಟನೆಯಲ್ಲಿರುವ ಕಾರ್ಯಕರ್ತರು ಸಹ ಇದೇ ಆಹಾರವನ್ನು ಸೇವಿಸುತ್ತಿರುವುದನ್ನು ಕಾಣಬಹುದು. ದೆಹಲಿಯ ಪ್ರಸಿದ್ಧ ‘ಖಾನ್ ಚಾಚಾ’ ಅಂಗಡಿಯಿಂದ ತರಿಸಿದ ಆಹಾರವನ್ನು ಆಕಾಶವಾಣಿ ಭವನದಲ್ಲಿ ಧರಣಿ ನಿರತರಾಗಿದ್ದ ರಾಹುಲ್ ಗಾಂಧಿ ಮತ್ತು ಸಹೋದ್ಯೋಗಿಗಳು ಸೇವಿಸಿದ್ದರು. ಆದರೆ ಇದು ಚಿಕನ್ ರೊಲ್ ಆಗಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಪವಿತ್ರ ಮಾಸವಾಗಿರುವ ಪಿತೃಪಕ್ಷದಲ್ಲಿ ರಾಹುಲ್ ಮಾಂಸಹಾರ ಸೇವಿಸಿದ್ದಾರೆ ಎಂದು ಎಕ್ಸ್ (ಟ್ವಿಟರ್) ನಲ್ಲಿ ಬರೆಯಲಾಗಿದೆ.

ಪ್ರದೇಶ, ಸಮುದಾಯ, ಕುಟುಂಬದ ಪದ್ಧತಿ ಅಥವಾ ವೈಯಕ್ತಿಕ ನಂಬಿಕೆಗಳನ್ನು ಮೀರಿ, ದೇಶದ ಪ್ರತಿಯೊಬ್ಬರಿಗೂ ಒಂದೇ ರೀತಿಯ ‘ಸಾರ್ವತ್ರಿಕ ಧಾರ್ಮಿಕ ಆಹಾರ ಪದ್ಧತಿ’ ಅನ್ವಯಿಸುತ್ತದೆ ಎಂಬ ಕಲ್ಪನೆಯಲ್ಲಿ ಈ ವಾದಗಳನ್ನು ಹೆಣೆಯಲಾಗಿತ್ತು. ಪ್ಯಾಕಿಂಗ್‌ನಲ್ಲಿರುವ ಕೆಂಪು ಟೇಪ್ ಮತ್ತು ರೊಲ್ ಪ್ಯಾಕೆಟ್‌ನಲ್ಲಿರುವ ಕೆಂಪು ಗುರುತು, ಅಷ್ಟೇಕೆ ಚಿಕನ್ ತುಂಡುಗಳು ಸಹ ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ಗಾಂಧಿ ಕುಟುಂಬವು ಅತ್ಯಂತ ದೊಡ್ಡ ಹಿಂದೂ ದ್ರೋಹಿಯಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯ ಬೆಂಬಲಿಗರು ಮೈ ಪರಚಿಕೊಳ್ಳುತ್ತಿದ್ದಾರೆ.

ಅಂದರೆ, ದೇಶದ ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ‘ಮತದಾನ’ದ ಅಕ್ರಮದ ವಿರುದ್ಧ ರಸ್ತೆಗಿಳಿದಿದ್ದರೆ, ಆನ್‌ಲೈನ್ ಬಲಪಂಥೀಯ ಶಕ್ತಿಗಳು ರಾಹುಲ್ ಗಾಂಧಿಯವರ ಮಧ್ಯಾಹ್ನದ ಊಟದ ಮೇಲೆ ತನಿಖೆ ನಡೆಸಲು ನಿರ್ಧರಿಸಿದ್ದವು.

ಮತದಾರರ ಪಟ್ಟಿಯ ವಿಶೇಷ ಪರಿಶೀಲನೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಆಕಾಶವಾಣಿ ಭವನದ ಎದುರು ‘ಪ್ರಜಾಪ್ರಭುತ್ವ ಸಂರಕ್ಷಣಾ ಮಾರ್ಚ್’ ನಡೆಸುವ ಮಧ್ಯೆ ಈ ಘಟನೆ ನಡೆದಿದೆ ಎಂಬುದೂ ಮತ್ತು ರಾಷ್ಟ್ರೀಯ ಮಟ್ಟದ ಎಲ್ಲಾ ಗೋದಿ ಮಾಧ್ಯಮಗಳು ಈ ಚಿಕನ್ ರೋಲ್ ಚರ್ಚೆಯನ್ನು ಗಂಭೀರವಾಗಿ ತೆಗೆದುಕೊಂಡಿವೆ ಎಂಬುದೂ ದೇಶದ ಇಂದಿನ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತಿದೆ.

ಮನುಷ್ಯ ತಿನ್ನುವ ಆಹಾರದಲ್ಲಿ ಪಾವಿತ್ರತೆಯನ್ನು ಹುಡುಕುವುದು ಅಥವಾ ಅದನ್ನು ಕನಿಷ್ಟ, ಅಪವಿತ್ರ ಎಂದು ಭಾವಿಸುವುದು, ಆಹಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಬಲಪಂಥದ ಪ್ರಮುಖ ಅಜೆಂಡಾಗಳಲ್ಲೊಂದು.

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್ ತಿಂದು, (ಮಂಗಳವಾರ ಪಿತೃಪಕ್ಷ ಮಾಸ) ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ರಾಹುಲ್ ಹಿಂದೂ ವಿರೋಧಿ ಎಂದು ಉಯಿಲಿಡುತ್ತಿವೆ.

ಸರಕಾರದ ವೈಫಲ್ಯಗಳು, ಪ್ರಜಾಪ್ರಭುತ್ವದ ಮೇಲಿನ ದಾಳಿ ಅಥವಾ ಚುನಾವಣಾ ಅಕ್ರಮಗಳ ಬಗ್ಗೆ ಪ್ರಶ್ನೆ ಎದ್ದಾಗಲೆಲ್ಲಾ, ಜನರ ಗಮನವನ್ನು ಭಾವನಾತ್ಮಕ ಮತ್ತು ಧಾರ್ಮಿಕ ವಿಷಯಗಳತ್ತ ಹಾರಿಸಲು “ಆಹಾರ, ಉಡುಪು, ಧರ್ಮ”ಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಇಲ್ಲಿಯವರೆಗೆ ಒಂದೂ ಪತ್ರಿಕಾಗೋಷ್ಠಿ ಎದುರಿಸದ, ಸಂದರ್ಶನಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡಲು ಭಯಪಡುವ, ‘ಮಾವು’ (ಮಾವಿನಹಣ್ಣು) ಕುರಿತು ಗಂಟೆಗಟ್ಟಲೆ ಮಾತನಾಡುವ ಪ್ರಧಾನಿಯನ್ನು ಹೊಗಳುವ ಮಾಧ್ಯಮಗಳೇ ಈ ಚಿಕನ್ ರೊಲ್ ಅಜೆಂಡಾದ ವಾಹಕಗಳು ಎಂಬುದು ಅರ್ಥ ಮಾಡಿಕೊಳ್ಳದಷ್ಟು ದೇಶದ ಜನ ದಡ್ಡರಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಲೋಚನೆ, ಹಾಸ್ಯ – ಚರ್ಚೆಗೆ ಮುಕ್ತ ವೇದಿಕೆ: ‘ಕಾಕ್ರೋಚ್ ಕ್ಲಬ್’ ಆರಂಭಿಸಿದ ಸಿಜೆಪಿ

ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮತ್ತು ವಿಡಂಬನಾತ್ಮಕ ಮುಕ್ತ ಚರ್ಚೆಗಳನ್ನು ಆಯೋಜಿಸಲು "ಕಾಕ್ರೋಚ್ ಕ್ಲಬ್" ಎಂಬ ಹೊಸ ಉಪಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರಂಭಿಸಿದೆ...

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ...

560 ದಿನಗಳ ಜೈಲುವಾಸದ ಬಳಿಕ ಪತ್ರಕರ್ತನ ವಿರುದ್ಧದ ಯುಎಪಿಎ ಆರೋಪ ಕೈಬಿಟ್ಟ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ...

ಪತ್ರಕರ್ತರನ್ನು ವಶಕ್ಕೆ ಪಡೆದು ‘ಜನಸಂದಣಿ ನಿಯಂತ್ರಣ’ ಎಂದು ಸಮರ್ಥಿಸಿಕೊಳ್ಳಲಾಗದು: ದೆಹಲಿ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪತ್ರಕರ್ತರ ಸಂಘದ ಆಕ್ಷೇಪ

ನವದೆಹಲಿ: ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಲವಂತವಾಗಿ ಸ್ಥಳದಿಂದ ಹೊರಗೆಳೆದು ಪೊಲೀಸ್ ವಾಹನಗಳಿಗೆ ತಳ್ಳುವುದು, ಅವರ ಚಲನವಲನಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೇವಲ ‘ಜನಸಂದಣಿ...

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...

ಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ; ಹಿರಿಯೂರು ಉಪಚುನಾವಣೆ ಸಿದ್ಧತೆಯೂ ಜೋರು

ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು...

ಕೇರಳ: ಇ20 ಪರೀಕ್ಷೆಗೆ ಶುದ್ಧ ಪೆಟ್ರೋಲ್ ನೀಡಲು ತೈಲ ಕಂಪನಿಗಳ ಹಿಂದೇಟು

ಪೆಟ್ರೋಲ್‌ನಲ್ಲಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸುವ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇ20 ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣವನ್ನು ಹೋಲಿಕೆ ಮಾಡಿ ಪರೀಕ್ಷಿಸಲು ಅಗತ್ಯವಿರುವ ಎಥನಾಲ್ ಮಿಶ್ರಣವಿಲ್ಲದ ಶುದ್ಧ ಪೆಟ್ರೋಲ್ ಮಾದರಿಗಳನ್ನು ಒದಗಿಸಲು ತೈಲ ಕಂಪನಿಗಳು...

ಜಮ್ಮು-ಕಾಶ್ಮೀರ: ನೇಮಕಾತಿ ಅಕ್ರಮದ ವಿರುದ್ಧ  ಕೊರೆಯುವ ಚಳಿಯಲ್ಲೂ ಧರಣಿ: ವಿದ್ಯಾರ್ಥಿಗಳ ಜೊತೆ ರಾತ್ರಿ ಕಳೆದ ಮಾಜಿ ಸಂಸದ ಅಗಾ ರುಹುಲ್ಲಾ

ಶ್ರೀನಗರ: ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು, ಪರೀಕ್ಷಾ ವಂಚನೆ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ...

ತಿರುಪರಂಕುಂದ್ರಂ ವಿವಾದ : ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ 'ದೀಪತ್ತೂನ್' (ಕಲ್ಲಿನ ಸ್ತಂಭ) ಮೇಲೆ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿರುವ ಇತ್ತೀಚಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ....

ಅಗ್ನಿವೀರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಯತ್ನ: 14 ವರ್ಷದ ಬಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್‌ನಲ್ಲಿ 500 ಡಾಲರ್‌ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು...