HomeಅಂಕಣಗಳುKarnataka against SIR‘ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ಬೆಂಗಳೂರಿನಲ್ಲಿ SIR ವಿರುದ್ಧ ಅಭಿಜಿತ್ ದೀಪ್ಕೆ ವಾಗ್ದಾಳಿ

‘ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ಬೆಂಗಳೂರಿನಲ್ಲಿ SIR ವಿರುದ್ಧ ಅಭಿಜಿತ್ ದೀಪ್ಕೆ ವಾಗ್ದಾಳಿ

- Advertisement -
- Advertisement -

ಬೆಂಗಳೂರು: “ದೇಶ ಉಳಿಯುವುದು ವೋಟ್ ಉಳಿದರೆ ಮಾತ್ರ. ಮತ ಹೋದರೆ ಎಲ್ಲವನ್ನೂ ಮರೆತಂತೆ ಆಗುತ್ತದೆ. ನಮ್ಮ ಹೋರಾಟ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಷ್ಟೇ ಅಲ್ಲ, SIR ಪ್ರಕ್ರಿಯೆಯನ್ನೇ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಸಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಭಿಜಿತ್ ದೀಪ್ಕೆ ಹೇಳಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ನಡೆದ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು SIR ಅನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

“ಪ್ರಧಾನಮಂತ್ರಿ ವೋಟ್ ಚೋರ್. ವೋಟ್ ಅಳಿಸಿ ಪ್ರಧಾನಮಂತ್ರಿ ಆಗಿದ್ದಾರೆ” ಎಂದು ದೀಪ್ಕೆ ಆರೋಪಿಸಿದರು. ಜನರ ಮತಗಳನ್ನು ಅಳಿಸುವ ಮೂಲಕ ಪ್ರಜಾಪ್ರಭುತ್ವದ ಮೇಲೆಯೇ ದಾಳಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. “ಪ್ರಜಾಪ್ರಭುತ್ವದ ಹಂತಕ ನರೇಂದ್ರ ಮೋದಿ” ಎಂದು ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, “ಇದು ಭಾರತದೆಲ್ಲೆಡೆ ನಡೆಯುತ್ತಿದೆ. ಯಾಕೆ ನಡೆಯುತ್ತಿದೆ? ದೇಶದ ಮಾಲೀಕರು ತಾವೇ ಆಗಬೇಕು ಎಂಬ ಉದ್ದೇಶದಿಂದ” ಎಂದು ಆರೋಪಿಸಿದರು.

ಇದೇ ವೇಳೆ ಜನರೊಂದಿಗೆ ‘ವೋಟ್ ಚೋರ್, ಗದ್ದಿ ಚೋಡ್’ ಎಂಬ ಘೋಷಣೆಯನ್ನು ಕೂಗಿದ ದೀಪ್ಕೆ, ಬಿಜೆಪಿ ಹೇಳುವ ‘ಒನ್ ನೇಷನ್, ಒನ್ ಎಲೆಕ್ಷನ್’ ಘೋಷಣೆಯ ಹಿಂದೆ ‘ಒನ್ ನೇಷನ್, ಒನ್ ಪಾರ್ಟಿ’ ಉದ್ದೇಶವಿದೆ ಎಂದು ಆರೋಪಿಸಿದರು. “ಅದು ಹಿಟ್ಲರ್‌ನ ಘೋಷಣೆಯಾಗಿತ್ತು. ಹಿಟ್ಲರ್‌ಗೆ ಏನಾಯಿತು ಎಂಬುದನ್ನು ಒಮ್ಮೆ ನೋಡಿಕೊಳ್ಳಿ” ಎಂದು ಅವರು ಹೇಳಿದರು.

ಗಾಂಧಿ, ಅಂಬೇಡ್ಕರ್ ಮತ್ತು ನೆಹರು ಅವರ ವಿಚಾರಗಳನ್ನು ಪ್ರಸ್ತಾಪಿಸಿದ ದೀಪ್ಕೆ, “ಗಾಂಧಿ ದೇಶದ ಆತ್ಮ, ಬಾಬಾಸಾಹೇಬರು ದೇಶದ ಬೆನ್ನೆಲುಬು, ನೆಹರು ದೇಶದ ಮನಸ್ಸು. ದೇಶದ ಅಡಿಪಾಯ ಹಾಕಿದವರು ಇವರೇ” ಎಂದರು. ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ಅಂಬೇಡ್ಕರ್, ಸಂವಿಧಾನ ಮತ್ತು ಗಾಂಧಿಯವರ ಚಿಂತನೆಗಳಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದ ಅವರು, ಗೋಡ್ಸೆಯ ವಿಚಾರಧಾರೆಗೆ ಮಾತ್ರ ನಂಬಿಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ಜವಾಹರಲಾಲ್ ನೆಹರು ಅವರನ್ನು ಮೋದಿ ನಿರಂತರವಾಗಿ ವಿರೋಧಿಸುತ್ತಾರೆ ಎಂದು ಹೇಳಿದ ದೀಪ್ಕೆ, “ಜನರಿಗೆ ಮತದಾನದ ಅರ್ಥವೇ ಗೊತ್ತಿಲ್ಲದಿದ್ದಾಗಲೂ ನೆಹರು ಮತದಾನದ ಹಕ್ಕು ನೀಡಿದರು. ಆದರೆ ಇಂದು ಅದೇ ಹಕ್ಕನ್ನು ಜನರಿಂದ ಕಸಿದುಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.

2024ರ ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿದ ಅವರು, ಬಿಜೆಪಿಯ ಗೆಲುವಿನ ಅಂತರ ಕೇವಲ ಶೇ.2ರಷ್ಟಿತ್ತು ಮತ್ತು 240 ಸ್ಥಾನಗಳನ್ನು ಗೆದ್ದಿತ್ತು ಎಂದು ಹೇಳಿದರು. “ದೇಶ ತಮ್ಮ ವಿರುದ್ಧ ತಿರುಗಿದೆ ಎಂದು ಅವರಿಗೆ ಗೊತ್ತಾಯಿತು. ಹಾಗಾಗಿ ಯಾರು ನಮಗೆ ವೋಟ್ ಮಾಡುವುದಿಲ್ಲವೋ ಅವರ ವೋಟ್ ತೆಗೆದುಬಿಡುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ವಿವಿಧ ರಾಜ್ಯಗಳಲ್ಲಿ ಮತಗಳನ್ನು ತೆಗೆದುಹಾಕುವ ಮೂಲಕ ಪ್ರಾದೇಶಿಕ ಪಕ್ಷಗಳ ನಾಯಕರನ್ನು ದುರ್ಬಲಗೊಳಿಸುವುದು ಬಿಜೆಪಿಯ ಗುರಿಯಾಗಿದೆ ಎಂದರು.

“ದೇಶವನ್ನು ರಕ್ಷಿಸಬೇಕಾದರೆ ನಿಮ್ಮ ಮತದಾನದ ಹಕ್ಕನ್ನು ರಕ್ಷಿಸಬೇಕು” ಎಂದು ಹೇಳಿದ ದೀಪ್ಕೆ, ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡಿರುವ ನೈಜ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದರು. “ನಾವು ನಂಬರ್ ಹೇಳಿದರೆ ಸಾಕಾಗುವುದಿಲ್ಲ. ನಿಜವಾಗಿ ವೋಟ್ ಕಳೆದುಕೊಂಡು ಅನ್ಯಾಯಕ್ಕೊಳಗಾದ ಜನರನ್ನು ಭೇಟಿಯಾಗಬೇಕು” ಎಂದರು.

SIR ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ‘ಕ್ಲೀನ್’ ಮಾಡುವುದಲ್ಲ, ಜನರ ಹೆಸರುಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. “ಬಡವರ, ಯುವಕರ ಮತಗಳನ್ನು ತೆಗೆಯುತ್ತಿದ್ದಾರೆ. ಅವರು ವೋಟ್ ಮಾಡಬಾರದು ಎಂಬ ಉದ್ದೇಶ ಇದರಲ್ಲಿ ಇದೆ” ಎಂದು ಹೇಳಿದರು. ಇಂದಿನ ಹೋರಾಟ ಕೇವಲ ಒಂದು ಮಾದರಿ ಮಾತ್ರವಾಗಿದ್ದು, SIR ರದ್ದಾಗುವವರೆಗೆ ಶಾಂತಿಯುತ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.

ಗ್ಯಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿ, “ಮೊದಲ ವಿಕೆಟ್ ಧರ್ಮೇಂದ್ರ ಪ್ರಸಾದ್, ಮುಂದಿನ ವಿಕೆಟ್ ಇವರದ್ದು” ಎಂದು ದೀಪ್ಕೆ ಹೇಳಿದರು. ಗ್ಯಾನೇಶ್ ಕುಮಾರ್ ಅವರ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿದ ಅವರು, “ಮೊದಲು SIR ರದ್ದು ಮಾಡಿ, ಗ್ಯಾನೇಶ್ ಕುಮಾರ್ ಮೇಲೆ ಕೇಸ್ ಮಾಡಿ. ಅಲ್ಲಿಯವರೆಗೆ ಸುಮ್ಮನಿರಲ್ಲ” ಎಂದರು.

ದಕ್ಷಿಣ ಭಾರತದ ರಾಜಕೀಯ ಭವಿಷ್ಯವನ್ನೂ ಪ್ರಸ್ತಾಪಿಸಿದ ಅವರು, ಗ್ಯಾನೇಶ್ ಕುಮಾರ್ ಹುದ್ದೆಯಲ್ಲಿ ಮುಂದುವರಿದರೆ ಡಿಲಿಮಿಟೇಷನ್ ಮೂಲಕ ದಕ್ಷಿಣ ಭಾರತದ ಲೋಕಸಭಾ ಸ್ಥಾನಗಳಿಗೆ ಧಕ್ಕೆಯಾಗಬಹುದು ಎಂದು ಹೇಳಿದರು. “ದಕ್ಷಿಣ ಭಾರತವೇ ಭವಿಷ್ಯದಲ್ಲಿ ಇಡೀ ಭಾರತವನ್ನು ಮುನ್ನಡೆಸಲಿದೆ” ಎಂದು ದೀಪ್ಕೆ ಹೇಳಿದರು.

“ಈಗ ರಸ್ತೆಗಳು ನಮ್ಮವು. ಈ ರಸ್ತೆಗಳಿಂದಲೇ ನಮ್ಮ ಪ್ರಜಾಪ್ರಭುತ್ವವನ್ನು ಮರಳಿ ಪಡೆಯುತ್ತೇವೆ” ಎಂದು ಘೋಷಿಸಿದ ಅವರು, “ಗ್ಯಾನು, ನಿನ್ನ ಸರದಿ ಬಂತು” ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೋಟ್ ಚೋರಿ ಆಗುತ್ತಿದೆ ಎಂಬುದಕ್ಕೆ ಮೂರು ಸಾಕ್ಷಿಗಳಿವೆ; ಮೋದಿ-ಶಾ ಉತ್ತರಿಸಲಿ’: ಬೆಂಗಳೂರಿನಲ್ಲಿ ಧ್ರುವ್ ರಾಠೀ ಆಗ್ರಹ 

ಬೆಂಗಳೂರು: “ವೋಟ್ ಚೋರಿ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು” ಎಂದು ಜರ್ಮನಿಯಲ್ಲಿ ವಾಸವಿರುವ ಖ್ಯಾತ ಭಾರತೀಯ ಯೂಟ್ಯೂಬರ್, ವೀಡಿಯೊ...

‘ಪ್ರಜೆಗಳನ್ನು ಕೊಲ್ಲಲು ಸಾಧ್ಯವಿಲ್ಲ, ಅದಕ್ಕಾಗಿಯೇ ವೋಟುಗಳನ್ನು ತೆಗೆದಿದ್ದಾರೆ’: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ 

ಬೆಂಗಳೂರು: “ಆದಿವಾಸಿಗಳು, ಬಡವರು ಮತ್ತು ಮುಸ್ಲಿಮರ ವೋಟುಗಳನ್ನು ತೆಗೆದಿದ್ದಾರೆ. ಪ್ರಜೆಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ಅದಕ್ಕೇ ಅವರ ವೋಟುಗಳನ್ನು ತೆಗೆದಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ...

ಎಸ್ಐಆರ್ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶಕ್ಕೆ ಚಾಲನೆ 

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್ 8ರಂದು ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶ ನಡೆಯಿತು. ಚುನಾವಣಾ ಆಯೋಗದ ಮುಖ್ಯ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ಹೋರಾಟ ನಿಲ್ಲದು: ಸಿಇಸಿ ವಿರುದ್ಧ ದೀರ್ಘ ಆಂದೋಲನದ ಎಚ್ಚರಿಕೆ; ಅ.10ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಘೋಷಿಸಿವೆ. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ...

ರಾಹುಲ್ ಗಾಂಧಿ ಚಿಕನ್ ರೋಲ್ ತಿಂದರೂ ಕಷ್ಟ ಈ ಬಲಪಂಥೀಯರಿಗೆ

ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳದ ದೇವಸ್ಥಾನ ಪ್ರವೇಶ ಮಾಡಿದ್ದರು ಎಂಬುದನ್ನು ವಿವಾದವಾಗಿ ಮಾಡಿದ್ದ ಇದೇ ಬಲಪಂಥೀಯರು, ಗೋದಿ ಮೀಡಿಯಾಗಳು, ಈಗ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ  ಚಿಕನ್ ರೋಲ್...

10 ತಿಂಗಳಲ್ಲಿ 125 ‘ಮ್ಯಾನುಯಲ್ ಸ್ಕ್ಯಾವೆಂಜರ್’ಗಳ ಸಾವು; ಕಳವಳ ಹುಟ್ಟಿಸಿದ ವರದಿ

ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ 'ದಲಿತ್ ಆದಿವಾಸಿ ಶಕ್ತಿ ಅಧಿಕಾರ್ ಮಂಚ್' (ಡಿಎಎಸ್‌ಎಎಂ) ಸಂಸ್ಥೆಯ ಪ್ರಕಾರ, ಈ ವರ್ಷದ ಜನವರಿಯಿಂದ ಅಕ್ಟೋಬರ್ ನಡುವೆ ಭಾರತದಾದ್ಯಂತ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ (ಕೈಯಿಂದ ಮಲಹೊರುವ ಅಥವಾ...

ಗ್ಯಾನೇಶ್‌ ವಿರುದ್ಧ ಪ್ರತಿಭಟನೆಗೆ ಅವಕಾಶ ನಿರಾಕರಣೆ; ‘ನಮಗೆ ಅನುಮತಿ ನೀಡಲು ದೆಹಲಿ ಪೊಲೀಸ್ ಯಾರು’ ಎಂದ ಸಿಜೆಪಿ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್...

ಸುಳ್ಳು ಹೇಳಿ 1054 ಮುಸ್ಲಿಮರ ವೋಟ್ ಡಿಲೀಟ್‌ಗೆ ಯತ್ನಿಸಿದ ಶಾಸಕ ಯತ್ನಾಳ್ : ನಕಲಿ ದಾಖಲೆ ಸಲ್ಲಿಕೆ, ಅಧಿಕಾರಿಗಳೂ ಭಾಗಿಯಾಗಿರುವ ಆರೋಪ!

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಕಲಿ ದಾಖಲೆ ಸೃಷ್ಟಿಸಿ 1054 ಮಂದಿ ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು 'ಮರಣ' ಹೊಂದಿದ್ದಾರೆ ಎಂದು ಸುಳ್ಳು...

ಗುಜರಾತ್: ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ದ ಹೆಸರಿನಲ್ಲಿ ಮಹಿಳೆ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ; ಇಬ್ಬರು ಮಹಿಳೆಯರು ಸೇರಿ 9 ಜನರ ಬಂಧನ

ಅಹಮದಾಬಾದ್: ಗುಜರಾತ್‌ನಲ್ಲಿ ಮಹಿಳೆಯೊಬ್ಬರ ಮೇಲೆ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹೊರಿಸಿ ಮಹಿಳೆಯನ್ನು ಅವಮಾನಿಸಿ, ಕಟ್ಟಿಹಾಕಿ ಲೈಂಗಿಕ ದೌರ್ಜನ್ಯಕ್ಕೆ...

ಚುನಾವಣಾ ಆಯುಕ್ತರ ಆಯ್ಕೆ ವಿವಾದ: ಪರಿಶೀಲಿಸುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್

ಮುಖ್ಯ ಚುನಾವಣಾ ಆಯುಕ್ತ (CEC) ಹಾಗೂ ಚುನಾವಣಾ ಆಯುಕ್ತರ (EC) ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ 2023ರ ವಿವಾದಾತ್ಮಕ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣವನ್ನು ವಿಸ್ತೃತ...