Homeಮುಖಪುಟ'ಒಬ್ಬರೇ ಭೇಟಿಯಾಗಿದ್ದು ಯಾಕೆ?' : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು...

‘ಒಬ್ಬರೇ ಭೇಟಿಯಾಗಿದ್ದು ಯಾಕೆ?’ : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು ಪ್ರತಿಪಕ್ಷ ನಾಯಕರ ಪ್ರಶ್ನೆ, ಉತ್ತರ ನೀಡಲು ಆಗ್ರಹ

- Advertisement -
- Advertisement -

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದು, ಈ ‘ಖಾಸಗಿ ಭೇಟಿ’ ಕುರಿತು ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ತಾವು ‘ನಿಯೋಗದ ಭಾಗವಾಗಿ’ ಎಪ್‌ಸ್ಟೀನ್ ಅವರನ್ನು ಭೇಟಿಯಾಗಿದ್ದಾಗಿ ಪುರಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್, “ತಾವು ಎಪ್‌ಸ್ಟೀನ್‌ ಅನ್ನು ಎಂದಿಗೂ ‘ಏಕಾಂಗಿಯಾಗಿ’ (ಒನ್-ಆನ್-ಒನ್) ಭೇಟಿಯಾಗಿಲ್ಲ ಎಂಬ ಪುರಿ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

“ಹರ್ದೀಪ್ ಪುರಿ ಅವರು ತಾವು ಎಪ್‌ಸ್ಟೀನ್ ಅನ್ನು ಎಂದಿಗೂ ಏಕಾಂಗಿಯಾಗಿ ಭೇಟಿಯಾಗಿಲ್ಲ ಎಂದು ಹೇಳಿರಲಿಲ್ಲವೇ? ಮೋದಿ ಅವರು ಎಂತಹ ಜನರನ್ನು ಇಷ್ಟಪಡುತ್ತಾರೆ ಮತ್ತು ತಮ್ಮ ಸುತ್ತಲೂ ಇರಿಸಿಕೊಳ್ಳಲು ಆಯ್ಕೆ ಮಾಡುತ್ತಾರೆ? ಆರ್‌ಎಸ್‌ಎಸ್ ಮತ್ತು ಬಲಪಂಥೀಯರು ಮಹಿಳೆಯರನ್ನು ಎಂದಿಗೂ ಗೌರವಿಸಲು ಮತ್ತು ಸಮಾನವಾಗಿ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ನಿಮಗೇನಾದರೂ ಹೆಚ್ಚಿನ ಪುರಾವೆ ಬೇಕೇ?” ಎಂದು ಶ್ರಿನೇಟ್ ಕೇಳಿದ್ದಾರೆ.

“ಎಪ್‌ಸ್ಟೀನ್ ಪಾಜಿ ತಾವು ಎಪ್‌ಸ್ಟೀನ್ ಅವರನ್ನು ಕೇವಲ ಒಂದು ನಿಯೋಗದ ಭಾಗವಾಗಿ 3-4 ಬಾರಿ ಮಾತ್ರ ಭೇಟಿಯಾಗಿದ್ದಾಗಿ ನಮಗೆ ತಿಳಿಸಿದ್ದರು. ಈ ಎರಡು ಫೋಟೋಗಳಲ್ಲಿ ಉಳಿದ ಪ್ರತಿನಿಧಿಗಳು ಬಹುಶಃ ಮೇಜಿನ ಕೆಳಗೆ ಅಡಗಿಕೊಂಡಿರಬೇಕು ಎಂದು ಕಾಣುತ್ತದೆ, ಪಾಜಿ,” ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಈ ವರ್ಷದ ಆರಂಭದಲ್ಲಿ ಸಚಿವರು ನೀಡಿದ್ದ ವಿಡಿಯೋ ಹೇಳಿಕೆಯನ್ನು ಹಂಚಿಕೊಳ್ಳುತ್ತಾ ವ್ಯಂಗ್ಯವಾಡಿದ್ದಾರೆ.

ಈ ಫೋಟೋಗಳನ್ನು ‘ಘೋರ ಸಾಕ್ಷ್ಯ’ (ಡ್ಯಾಮ್ನಿಂಗ್) ಎಂದು ಕರೆದಿರುವ ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗಾವಂಡೆ, ಈ ವಿಷಯದ ಕುರಿತು ಸ್ಪಷ್ಟನೆಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

“ಇವು ಅತ್ಯಂತ ಘೋರ ಸಾಕ್ಷ್ಯ ನುಡಿಯುವ ಫೋಟೋಗಳಾಗಿವೆ (ಡ್ಯಾಮ್ನಿಂಗ್ ಫೋಟೋಸ್). ಮಾಜಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಯಭಾರಿಯಾಗಿದ್ದ ಸಾಮರ್ಥ್ಯದಲ್ಲಾಗಿದ್ದರೂ ಸಹ, ಜೆಫ್ರಿ ಎಪ್‌ಸ್ಟೀನ್ ಅವರನ್ನು ಏಕೆ ಭೇಟಿಯಾಗುತ್ತಿದ್ದರು ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಗಾವಂಡೆ ಬರೆದುಕೊಂಡಿದ್ದಾರೆ.

“ಭಾರತ ಸರ್ಕಾರವು ಈ ಭೇಟಿಯನ್ನು ‘ರಾಜತಾಂತ್ರಿಕ ಅನಿವಾರ್ಯತೆ’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಈ ಚರ್ಚೆಗಳ ಷರತ್ತುಗಳು ಮತ್ತು ವಿಷಯಗಳನ್ನು ಈಗ ಸಾರ್ವಜನಿಕಗೊಳಿಸಲೇಬೇಕು. ರಾಯಭಾರಿ ಪುರಿ ಅವರಿಗೆ ಎಪ್‌ಸ್ಟೀನ್ ದ್ವೀಪದ ಯಾವುದೇ ಭೀಕರತೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ನಾನು ಖಂಡಿತವಾಗಿಯೂ ಆಶಿಸುತ್ತೇನೆ. ಈ ವಿಷಯದಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಗಾವಂಡೆ ಹೇಳಿದ್ದಾರೆ.

ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಪೋಟೋ ಹಂಚಿಕೊಳ್ಳುತ್ತಾ, “ಅವರು (ಪುರಿ) ಈ ಮೀಟಿಂಗ್‌ನಲ್ಲಿ ಯಾರ ಸಂದೇಶವನ್ನು ಕೊಂಡೊಯ್ಯುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

“ಮೋದಿಜೀ, ಸಚಿವ ಹರ್ದೀಪ್ ಪುರಿ ಅವರು ಜೆಫ್ರಿ ಎಪ್‌ಸ್ಟೀನ್ ಅವರನ್ನು ಏಕಾಂಗಿಯಾಗಿ ಭೇಟಿಯಾಗುತ್ತಿರುವುದೇಕೆ? ಈ ಸಭೆಯಲ್ಲಿ ಅವರು ಯಾರ ಸಂದೇಶವನ್ನು ಕೊಂಡೊಯ್ಯುತ್ತಿದ್ದಾರೆ? ಇದು ಕೇವಲ ಆರಂಭವಷ್ಟೇ, ಮುಂದೆ ಏನಾಗಲಿದೆಯೋ ನೋಡಿ? ಆರ್‌ಎಸ್‌ಎಸ್ ಆಡಳಿತದ ಬದಲಾವಣೆ (ರೆಜೀಮ್ ಚೇಂಜ್) ಖಂಡಿತಾ ಆಗಲಿದೆ! ಜೈ ಹಿಂದ್!” ಎಂದು ಅವರು ರಾವತ್ ಬರೆದುಕೊಂಡಿದ್ದಾರೆ.


ಸಚಿವ ಪುರಿ ಹೇಳಿದ್ದೇನು?

ಐಸಿಎಂ (ಇಂಟರ್‌ನ್ಯಾಷನಲ್ ಪೀಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ಥಾಪಿಸಲಾದ ಒಂದು ಯೋಜನೆ) ಸಂಸ್ಥೆಗೆ ಸಂಬಂಧಿಸಿದ ನಿಯೋಗದ ಭಾಗವಾಗಿ, ವೃತ್ತಿಪರ ಸಾಮರ್ಥ್ಯದಲ್ಲಿ ತಾವು ಜೆಫ್ರಿ ಎಪ್‌ಸ್ಟೀನ್ ಅವರನ್ನು ‘ಮೂರು ಅಥವಾ ಗರಿಷ್ಠ ನಾಲ್ಕು’ ಬಾರಿ ಭೇಟಿಯಾಗಿದ್ದಾಗಿ ಪುರಿ ಅವರು ಫೆಬ್ರವರಿಯಲ್ಲಿ ತಿಳಿಸಿದ್ದರು.

ತಾವು ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿದ್ದ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮತ್ತು 2017ರಲ್ಲಿ ಕೇಂದ್ರ ಸಚಿವ ಸಂಪುಟವನ್ನು ಸೇರುವ ಮೊದಲು ಈ ಭೇಟಿಗಳು ನಡೆದಿದ್ದವು ಎಂದು ಪುರಿ ತಿಳಿಸಿದ್ದಾರೆ. ಎಪ್‌ಸ್ಟೀನ್ ಅವರೊಂದಿಗಿನ ತಮ್ಮ ಒಡನಾಟವು ಸಂಪೂರ್ಣವಾಗಿ ವೃತ್ತಿಪರವಾಗಿದ್ದು, ಆ ಅಪಖ್ಯಾತ ಉದ್ಯಮಿಯ ಮೇಲಿರುವ ಅಪರಾಧ ಆರೋಪಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

“ಐಪಿಐನಲ್ಲಿ ನನ್ನ ಬಾಸ್ ಆಗಿದ್ದ ಟೆರ್ಜೆ ರೋಡ್-ಲಾರ್ಸೆನ್ ಅವರು ಈ ಅಪಖ್ಯಾತ ವ್ಯಕ್ತಿ ಮಿಷ್ಟರ್ ಎಪ್‌ಸ್ಟಿನ್ ಅವರನ್ನು ಬಲ್ಲವರಾಗಿದ್ದರು. ಐಪಿಐ ಅಥವಾ ಐಸಿಎಂನ ನಿಯೋಗದ ಭಾಗವಾಗಿಯೇ ನಾನು ಕೆಲವು ಸಂದರ್ಭಗಳಲ್ಲಿ, ಅಂದರೆ ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಎಪ್‌ಸ್ಟೀನ್ ಅವರನ್ನು ಭೇಟಿಯಾಗಿದ್ದೆ” ಎಂದು ಪುರಿ ಹೇಳಿಕೊಂಡಿದ್ದಾರೆ.






































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯೂಸುಫ್ ಪಠಾಣ್‌ಗೆ ವಡೋದರಾದ ವಿವಾದಿತ ನಿವೇಶನ ಹಂಚಿಕೆ ಮಾಡಿದ ಗುಜರಾತ್ ಬಿಜೆಪಿ ಸರ್ಕಾರ : ಟಿಎಂಸಿ ತೊರೆದು ಎನ್‌ಡಿಎ ಬೆಂಬಲಿಸಿದ್ದಕ್ಕೆ ಗಿಫ್ಟ್?

ಲೋಕಸಭಾ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ವಡೋದರಾದಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ವಿವಾದಿತ ನಿವೇಶನವನ್ನು ಹಂಚಿಕೆ ಮಾಡಲು ಗುಜರಾತ್‌ನ ಬಿಜೆಪಿ ಸರ್ಕಾರವು ಅನುಮೋದನೆ ನೀಡಿದೆ. ಈ ಸಂಬಂಧ...

ಸಿಎಂಆರ್‌ಎಲ್-ಎಕ್ಸಾಲಾಜಿಕ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್: ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ

ಖಾಸಗಿ ಕಂಪನಿಯಿಂದ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಸಿಎಂಆರ್‌ಎಲ್-ಎಕ್ಸಾಲಾಜಿಕ್' ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ, ಮಾಜಿ ಸಚಿವ...

ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ – ಅಶುತೋಷ್

ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್‌ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ)...

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ...

‘ಪ್ರಜಾಪ್ರಭುತ್ವದಲ್ಲಿ ಇದು ಕಳವಳಕಾರಿ, ಸಿಜೆಪಿ ಪ್ರಶ್ನೆಗಳಿಗೆ ನನ್ನ ಬೆಂಬಲವಿದೆ’: CJP ನಾಯಕರ ಬೆನ್ನಿಗೆ ನಿಂತ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ!

ಕಾಕ್‌ರೋಚ್ ಜನತಾ ಪಾರ್ಟಿಯ ಯುವ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ಕಸ್ಟಡಿ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಪ್ರಜಾಪ್ರಭುತ್ವವಾದಿ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ...

ಯೇಸುವಿನ ದರ್ಶನದ ಹೆಸರಲ್ಲಿ 191 ಜನರ ಮಾರಣಹೋಮ : ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಸೇರಿ 29 ಮಂದಿ ತಪ್ಪಿತಸ್ಥರು ಎಂದ ನ್ಯಾಯಾಲಯ  

ಬರೋಬ್ಬರಿ 191 ಜನರ ಸಾವಿಗೆ ಕಾರಣನಾದ ಕೀನ್ಯಾದ ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಮತ್ತು ಆತನ ಸಹಚರರನ್ನು ಸೋಮವಾರ (ಅಕ್ಟೋಬರ್ 19) ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದ್ದು, ನವೆಂಬರ್ 6ರಂದು ಶಿಕ್ಷೆ ಪ್ರಮಾಣ...

ಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್ ಕೈಬಿಟ್ಟಿದೆ, ಕುಡಿಯಲು ನೀರೂ ಇಲ್ಲ ಎಂದ ಇಮಾಮ್

ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ)...

‘ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’: ಎಸ್ಐಆರ್ ವಿರೋಧಿಸಿ ಅ. 28ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆಗೆ ಪ್ರಕಾಶ್ ಅಂಬೇಡ್ಕರ್ ಕರೆ

ಮುಂಬೈ: ಮತದಾನದ ಹಕ್ಕು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ,...