Homeಮುಖಪುಟಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್...

ಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್ ದಾಖಲು

- Advertisement -
- Advertisement -

ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪಿಸಿ ತಮಿಳುನಾಡಿನ ಆಡಳಿತರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ವಿರುದ್ಧ ಕಳ್ಳಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ.

ಘಟನೆ ನಡೆದ ಸುಮಾರು ಮೂರು ತಿಂಗಳ ಬಳಿಕ ಹಾಗೂ ಈ ಕುರಿತು ಮದ್ರಾಸ್ ಹೈಕೋರ್ಟ್ ಸ್ಪಷ್ಟನೆ ಕೇಳಿದ ಮರುದಿನವೇ ಜಿಲ್ಲಾಧಿಕಾರಿ ದೂರು ದಾಖಲಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಸುಮಾರು ಮೂರು ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಅರುಳ್ ವಿಘ್ನೇಶ್ ತಮ್ಮ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದು, ಅನುಚಿತವಾಗಿ ವರ್ತಿಸಿ ವೈಯಕ್ತಿಕ ಅಂತರವನ್ನು ಉಲ್ಲಂಘಿಸಲು ಯತ್ನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪದ್ಮಜಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಶಾಸಕರು ತಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ದೂರಿನಲ್ಲಿ ಏನನ್ನೂ ಪ್ರಸ್ತಾಪಿಸಿಲ್ಲ ಎನ್ನಲಾಗಿದೆ ಎಂದು ವರದಿ ಹೇಳಿದೆ.

ಹೈಕೋರ್ಟ್ ಮಧ್ಯಪ್ರವೇಶದ ಬೆನ್ನಲ್ಲೇ ದೂರು :

ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಆರ್. ತ್ರಿಶೂಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 23ರಂದು ಮದ್ರಾಸ್ ಹೈಕೋರ್ಟ್ ನಡೆಸಿತ್ತು. ವಿಚಾರಣೆ ವೇಳೆ, ಜಿಲ್ಲಾಧಿಕಾರಿಯಿಂದ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರಿಗಾಗಲಿ ಅಥವಾ ಪೊಲೀಸರಿಗಾಗಲಿ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಸರ್ಕಾರಿ ಅಭಿಯೋಜಕ ಆರ್. ಜಾನ್ ಸತ್ಯನ್ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, ಜಿಲ್ಲಾಧಿಕಾರಿಯನ್ನು ನೇರವಾಗಿ ಸಂಪರ್ಕಿಸಿ ನ. 24ರಂದು ವರದಿ ನೀಡುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹಿಂದಿನ ಬೆಳವಣಿಗೆಗಳು ಮತ್ತು ಆಯೋಗದ ನೋಟಿಸ್ :

ಈ ಹಿಂದೆ ಪದ್ಮಜಾ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಮೌಖಿಕವಾಗಿ ಈ ವಿಷಯ ತಿಳಿಸಿದ್ದರು. ಬಳಿಕ ಮುಖ್ಯ ಕಾರ್ಯದರ್ಶಿಗಳು ಟಿವಿಕೆ ನಾಯಕತ್ವದ ಗಮನಕ್ಕೆ ತಂದಾಗ ಶಾಸಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅಧಿಕೃತ ದೂರು ಇಲ್ಲದ ಕಾರಣ ಕ್ರಿಮಿನಲ್ ಕ್ರಮ ಕೈಗೊಂಡಿರಲಿಲ್ಲ. ಮತ್ತೊಂದೆಡೆ, ನ.11ರಂದು ‘ದಿ ನ್ಯೂಸ್ ಮಿನಿಟ್’ (The News Minute) ಪ್ರಕಟಿಸಿದ್ದ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ನಿಷ್ಪಕ್ಷಪಾತ ತನಿಖೆ ನಡೆಸಿ ಏಳು ದಿನಗಳಲ್ಲಿ ವರದಿ ನೀಡುವಂತೆ ನ. 15ರಂದು ತಮಿಳುನಾಡು ಡಿಜಿಪಿಗೆ ಆಯೋಗ ಸೂಚಿಸಿತ್ತು.

ತನ್ನ ಪತ್ರದಲ್ಲಿ (ಸಂವಹನದಲ್ಲಿ), ಜಿಲ್ಲಾಧಿಕಾರಿಯವರು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎನ್ನಲಾದ ಮನವಿಗಳು ಮತ್ತು ಅವುಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸುವಂತೆ ಮಹಿಳಾ ಆಯೋಗ ಸೂಚಿಸಿತ್ತು. ಅಲ್ಲದೆ, ಸಂಬಂಧಪಟ್ಟ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿ ಪರಿಶೀಲಿಸುವಂತೆ ಕೋರಿರುವ ಆಯೋಗವು, ಈ ತನಿಖೆಯು ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವದಿಂದ ಮುಕ್ತವಾಗಿರಬೇಕು ಎಂದು ಹೇಳಿತ್ತು.

ಆರೋಪ ನಿರಾಕರಿಸಿದ ಶಾಸಕ :

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಶಾಸಕ ಅರುಳ್ ವಿಘ್ನೇಶ್ ನಿರಾಕರಿಸಿದ್ದಾರೆ. ನ.10ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ನಾನು ಜಿಲ್ಲಾಧಿಕಾರಿಗೆ ಯಾವುದೇ ಅನುಚಿತ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿಲ್ಲ. ನನಗೆ ಮತ್ತು ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ತರಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಬಿಗಿ ಭದ್ರತೆ ಇರುವ ಜಿಲ್ಲಾಧಿಕಾರಿಗಳ ನಿವಾಸಕ್ಕೆ ನಾನು ಮದ್ಯಪಾನ ಮಾಡಿ ಹೋಗಲು ಹೇಗೆ ಸಾಧ್ಯ? ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ರಕ್ತ ಪರೀಕ್ಷೆಗೂ ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದ್ದರು.

ಜಿಲ್ಲಾಧಿಕಾರಿಯ ಆರೋಪಗಳು ಈ ಹಿಂದೆ ‘ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013’ (ಪೋಶ್ ಕಾಯ್ದೆ) ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಈ ವಿಷಯವನ್ನು ಆಂತರಿಕ ಸಮಿತಿಯು (Internal Committee) ಕೈಗೆತ್ತಿಕೊಳ್ಳಬೇಕಾದರೆ, ಜಿಲ್ಲಾಧಿಕಾರಿಯವರಿಂದ ಅಥವಾ ಅವರ ಪರವಾಗಿ ಬೇರೊಬ್ಬರಿಂದ ಅಧಿಕೃತ ದೂರು ಸಲ್ಲಿಕೆಯಾಗುವುದು ಅಗತ್ಯವಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದಿ ನ್ಯೂಸ್‌ ಮಿನಿಟ್‌ಗೆ ತಿಳಿಸಿದ್ದರು. ಆದಾಗ್ಯೂ, ಜಿಲ್ಲಾಧಿಕಾರಿ ಕಚೇರಿಯ ಪೋಶ್ ಸಮಿತಿಯ ನೇತೃತ್ವವನ್ನು ಸ್ವತಃ ಜಿಲ್ಲಾಧಿಕಾರಿಯವರೇ ವಹಿಸಿರುವುದರಿಂದ, ಈ ಪ್ರಕರಣದಲ್ಲಿ ಕಾರ್ಯವಿಧಾನದ ತೊಡಕು ಉಂಟಾಗಿದೆ ಎಂದೂ ಆ ಅಧಿಕಾರಿ ಬೆಟ್ಟು ಮಾಡಿ ತೋರಿಸಿದ್ದಾರೆ.

ಎಫ್‌ಐಆರ್ ದಾಖಲಿಸಿದ ಪೊಲೀಸರು :

ಜಿಲ್ಲಾಧಿಕಾರಿಯ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶಕ್ಕೆ ಮರಳಲು ‘ವಿಜಯ ದಿನ’ವನ್ನೇ ಆಯ್ದುಕೊಂಡ ಶೇಖ್ ಹಸೀನಾ; ಡಿ.16ರಂದು ಭಾರತದಿಂದ ವಾಪಸಾಗುವ ಯೋಜನೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದರಿಂದ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ...

ನ.25ರಂದು ಶರ್ಜೀಲ್ ಇಮಾಮ್ -ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಹಿಂದಿನ 'ದೊಡ್ಡ ಸಂಚು' ಆರೋಪಕ್ಕೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ...

ಲಂಡನ್‌ಗೆ ತೆರಳುತ್ತಿದ್ದ ಸಿಜೆಪಿಯ ಸೌರವ್ ದಾಸ್‌ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಸೋಮವಾರ (ನ.23) ರಾತ್ರಿ ಲಂಡನ್‌ಗೆ ತೆರಳುವ ವಿಮಾನವನ್ನು ಏರಲು ಸಿದ್ಧರಾಗಿದ್ದಾಗ...

ಸೆಂಟ್ರಲ್ ವಿಸ್ತಾ ಯೋಜನೆಗಾಗಿ ವಕ್ಫ್ ಸ್ಥಾನಮಾನ ಪರಿಗಣಿಸದೆ ಕದೀಮಿ ಮಸೀದಿ ಕೆಡವಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್‌ಗೆ ವಕ್ಫ್ ಮಂಡಳಿ ಉತ್ತರ

ನವದೆಹಲಿ: ದೆಹಲಿಯ ಕೃಷಿ ಭವನ ಆವರಣದಲ್ಲಿರುವ ಕದೀಮಿ ಮಸೀದಿಯು (Qadeemi Masjid) ಅಧಿಕೃತವಾಗಿ ಅಧಿಸೂಚಿತ ವಕ್ಫ್ ಆಸ್ತಿಯಾಗಿದ್ದು, ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಗೆ ಅನುಕೂಲ ಮಾಡಿಕೊಡುವ ಏಕೈಕ ಕಾರಣಕ್ಕೆ ಅದರ ಧಾರ್ಮಿಕ ಸ್ವರೂಪ...

ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 22 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಕೇರಳದ ಕಾಲಡಿಯಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16 ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಕೇರಳ ಹೈಕೋರ್ಟ್ ಸೋಮವಾರ (ನ.23) ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನ ಬೆನ್ನಲ್ಲೇ, ಕಳೆದ 22 ದಿನಗಳಿಂದ ಉಪವಾಸ ಸತ್ಯಾಗ್ರಹ...

ಜಪಾನ್‌ನ ಮೊತೊಮಚಿ ಟೊಯೊಟೊ ಘಟಕಕ್ಕೆ ಸಿಎಂ ಭೇಟಿ; ಬೆಂಗಳೂರಿನಿಂದ ಹೊರಗೆ ಆರ್ಥಿಕ ಅವಕಾಶ ವಿಸ್ತರಿಸುವ ಗುರಿ

"ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಆಕರ್ಷಸಿ, ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧವಾಗಿದ್ದೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯ ಸರ್ಕಾರದ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳ SIR: ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋದವರ ಮೇಲ್ಮನವಿಗಳಿಗೆ ಮೊದಲ ಆದ್ಯತೆ; ಸೇರ್ಪಡೆ ವಿರುದ್ಧದ ಅರ್ಜಿ ಮುಂದೂಡಲು ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR — Special Intensive Revision) ಪ್ರಕ್ರಿಯೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿರುವ (deleted) ನಾಗರಿಕರು ಸಲ್ಲಿಸಿರುವ ಮೇಲ್ಮನವಿಗಳಿಗೆ ಮೊದಲ...

ಗೋಧ್ರಾ ರೈಲು ದಹನ ಪ್ರಕರಣ : ಅಪರಾಧಿಯ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್

2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಇರ್ಫಾನ್ ಸಿರಾಜ್ ಪಾಡಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ನ.23) ಅಮಾನತುಗೊಳಿಸಿದ್ದು, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರು...

ನೇಪಾಳದ ಪುನರ್‌ನಿರ್ಮಾಣಕ್ಕೆ ಭಾರತದಿಂದ ₹15,000 ಕೋಟಿ ನೆರವು; ‘ಉಭಯ ದೇಶಗಳ ಸಂಬಂಧ ಹಿಮಾಲಯದಷ್ಟೇ ದೃಢವಾಗಿವೆ’ ಎಂದ ಪ್ರಧಾನಿ ಬಲೇಂದ್ರ ಶಾ

ನೇಪಾಳ: ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳದ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸುಮಾರು 15,000 ಕೋಟಿ ರೂಪಾಯಿಗಳ ನೆರವು ಪ್ಯಾಕೇಜ್ ಘೋಷಿಸಿದೆ. ಸೋಮವಾರ ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗಿನ ಜಂಟಿ...

ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿ

2018ರ ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯವೊಂದು ಸೋಮವಾರ (ನ.23) ಜಾಮೀನು ರಹಿತ ವಾರಂಟ್ ಹೊರಡಿಸಿದೆ. ರಾಠೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ, ವಿಕಾಸ್...