Homeಮುಖಪುಟಮನುಷ್ಯ ಧರ್ಮವನ್ನು ಪಾಲಿಸೋಣ : ಧರ್ಮದ್ವೇಷ ಬೇಡವೆಂದು ಒಗ್ಗಟ್ಟು ಸಾರಿದ ಪ್ರಜ್ಞಾವಂತರು.

ಮನುಷ್ಯ ಧರ್ಮವನ್ನು ಪಾಲಿಸೋಣ : ಧರ್ಮದ್ವೇಷ ಬೇಡವೆಂದು ಒಗ್ಗಟ್ಟು ಸಾರಿದ ಪ್ರಜ್ಞಾವಂತರು.

ಈ ದೇಶದ ಭವಿಷ್ಯವೇ ಆಗಿರುವ ಯುವ ಮಿತ್ರರ ಮೇಲೆ ಈ ಸಮಯದಲ್ಲಿ ದೊಡ್ಡ ಹೊಣೆಗಾರಿಕೆ ಇದೆ. ಪ್ರೀತಿಯಲ್ಲಿ ವಿಶ್ವಾಸವಿಟ್ಟಿರುವ ಯುವ ಪೀಳಿಗೆ ದ್ವೇಷವನ್ನು ಹುಟ್ಟುಹಾಕುವ, ಸಮಾಜವನ್ನು ಒಡೆಯುವ ರಾಜಕೀಯವನ್ನು ಒಪ್ಪಬಾರದೆಂದು ಅಭಿಮಾನದೊಂದಿಗೆ ಒತ್ತಾಯಿಸುತ್ತಿದ್ದೇವೆ.

- Advertisement -
- Advertisement -

ಕೊರೊನಾ ಕಾಲದಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಪಪ್ರಚಾರ, ಸುಳ್ಳು ಸುದ್ದಿಗಳ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಆಶಯದಿಂದ ನೂರಾರು ಪ್ರಜ್ಞಾವಂತರು ಜಂಟೀ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ಪಾಠ ಕೆಳಗಿನಂತಿದೆ.

ಒಗ್ಗಟ್ಟಿನ ಪತ್ರಿಕಾ ಹೇಳಿಕೆ

ನಾಡಿನ ಜನತೆಯಲ್ಲಿ ನಮ್ಮೆಲ್ಲರ ಒಕ್ಕೊರಲ ಮನವಿ:

ಇದು, ನಾವು ಹೆಚ್ಚು ಮನುಷ್ಯರಾಗುವ ಕಾಲ

ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ!

ಒಂದು ಕೋಮನ್ನು ಗುರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿಗಳ ಘೋಷಣೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ.

ಎಚ್ಚರಿಕೆ ಮಾತ್ರ ಸಾಲದು. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.

ಮಾನ್ಯರೇ,
ಕೋವಿಡ್-19 ಮಹಾಮಾರಿ ತಂದಿಟ್ಟಿರುವ ಬಿಕ್ಕಟ್ಟು, ಸಂಕಟಮಯ ಪರಿಸ್ಥಿತಿ: ಸಾವು ಬದುಕುಗಳ ಹೋರಾಟಗಳ ಕಾಲದಲ್ಲಿಯೂ ಹಳ್ಳಿ ಹಳ್ಳಿಯ ಮೂಲೆ ಮೂಲೆಯ ಮನೆಗಳಿಗೂ ಕರೋನಾಗಿಂತ ವೇಗವಾಗಿ ಹಬ್ಬುತ್ತಿರುವ ಮುಸ್ಲಿಂ ದ್ವೇಷವನ್ನು ನೋಡಿ ಅತ್ಯಂತ ನೋವಾಗುತ್ತಿದೆ. ಇಂಥ ಸಂಕಟದ ಪರಿಸ್ಥಿತಿಯಲ್ಲೂ ಕೋಮು ದ್ವೇಷವೇ? ‘ವಸುದೈವಕುಟುಂಬಕಂ’ ಎಂದು ಸಾರಿದ ಮಹೋಪನಿಷತ್, ಭ್ರಾತೃತ್ವವನ್ನು ತನ್ನೆದೆಯಲ್ಲಿ ಸೃವಿಸಿದ ನಮ್ಮ ಸಂವಿಧಾನ ಇವುಗಳು ಈ ನೆಲದ ಹಿರಿಮೆಯೆಂದು ಇನ್ನು ಮುಂದೆಯೂ ಹೇಳಬಲ್ಲೆವೇ?

ದೇಶಕ್ಕೆ ಆಪತ್ತು ಎದುರಾಗಿದೆ, ದೇಹಕ್ಕೆ ಬಾಣ ಬಂದು ನೆಟ್ಟಿದೆ. ಬಾಣವನ್ನು ತೆಗೆದು ಗಾಯವನ್ನು ಗುಣಮಾಡುವುದು ಮುಖ್ಯವೇ ಹೊರತು, ಇದು ಯಾವ ಬಣ್ಣದ ಬಾಣ, ಯಾವ ಬಣದ ಬಾಣ, ಯಾವ ಪ್ರದೇಶದ ಬಾಣ ಎಂದು ಪರಸ್ಪರ ದೂಷಿಸುತ್ತ ಕೂಡುವುದಲ್ಲ. ರೋಗ-ರೋಗಾಣುವಿನ ಕಾರಣವಾಗಿ ಯಾರನ್ನೇ ಆದರೂ ಅವಮಾನಿಸುವುದು, ಅನುಮಾನಿಸುವುದು, ದ್ವೇಷಿಸುವುದು ಮಾನವೀಯತೆಯಲ್ಲ. ವೈರಸ್ ಅಳಿದ ಮೇಲೂ ನಾವು ಉಳಿದಿರುತ್ತೇವೆ, ಅಲ್ಲವೇ. ಎಂದೇ, ನಮ್ಮ ನೆಲದ ಸುಂದರ ಬಾಳುವೆಯ ನೇಯ್ಗೆ ಹಾಳುಗೆಡವದಂತೆ ನಮ್ಮೆಲ್ಲರ ನಡೆನುಡಿಗಳು ಪ್ರೇಮಮಯವಾಗಿರಬೇಕಲ್ಲವೆ?

ಕೊರೋನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಎಲ್ಲಾ ಧರ್ಮೀಯರೂ ಸಹಕರಿಸುತ್ತಿದ್ದಾರೆ. ಎಲ್ಲಾ ಕೋಮಿನ ಸ್ವಯಂ ಸೇವಕರು ತಮ್ಮ ಹಿತವನ್ನು ಬದಿಗಿಟ್ಟು ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಪರದಾಡುತ್ತಿದ್ದಾರೆ. ಹಲವರು ಶಕ್ತಿ ಮೀರಿ ದಾನ-ಧರ್ಮ ಮಾಡುತ್ತಿದ್ದಾರೆ. ಇದರಲ್ಲಿ ಮುಸ್ಲಿಮರೂ ಇದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಅಜೀಂ ಪ್ರೇಮ್‌ಜಿ ಪರಿಹಾರ ನಿಧಿಗೆ 1125 ಕೋಟಿ ನೀಡಿದ್ದನ್ನು, ಸಿಪ್ಲಾ ಕಂಪನಿಯ ಯೂಸುಫ್ ಹಮೀದ್‌ ಅತಿಕಡಿಮೆ ಬೆಲೆಯಲ್ಲಿ ಅತ್ಯನ್ನತ ಉಪಕರಣಗಳನ್ನು ತಯಾರಿಸಿ ಕೊಟ್ಟಿರುವುದನ್ನು ನಾವು ಸ್ಮರಿಸದಿರೋಣವೆ. ಕೋಲಾರದ ತಜ್ಮುಲ್ ಪಾಷ ಮತ್ತು ಸೋದರ ಮುಜಾಮಿಲ್ ಪಾಷ ತಮ್ಮ ನಿವೇಶನವನ್ನೇ ಮಾರಿ, ಆ ಹಣದಲ್ಲಿ ಹಸಿದವರಿಗೆಲ್ಲಾ ನಿತ್ಯ ಆಹಾರ ಸೇವೆ ಮಾಡುತ್ತಿರುವುದನ್ನು, ಕರೆ ಮಾಡಿದವರ ಬಾಗಿಲಿಗೆ ಕಾಳುಕಡ್ಡಿ ತಲುಪಿಸುತ್ತಿರುವುದನ್ನು ಮರೆಯಲಾದರೂ ಸಾಧ್ಯವೆ?


ಇದನ್ನೂ ಓದಿ: ಲಾಕ್‌ಡೌನ್ ಎಫೆಕ್ಟ್: ಬಡವರ ಹೊಟ್ಟೆ ತುಂಬಿಸುತ್ತಿರುವ Mercy Mission ಕಾರ್ಯಕ್ಕೊಂದು ಸೆಲ್ಯೂಟ್! 


ಅದೇ ಹೊತ್ತಲ್ಲಿ ಕೊರೋನಾವನ್ನು ಉಪೇಕ್ಷಿಸುವ, ಅದನ್ನು ದುರುದ್ದೇಶಕ್ಕೆ ಬಳಸುವ ವ್ಯಕ್ತಿಗಳು, ಶಕ್ತಿಗಳು ಎಲ್ಲಾ ಕೋಮಿನಲ್ಲೂ ಇದ್ದಾರೆ. ‘ಉಗುಳಿ, ಸೀನಿ’ ಎಂದು ಅಸಂಬದ್ಧವಾಗಿ ಕರೆಕೊಟ್ಟ ಒಬ್ಬ ತಲೆಕೆಟ್ಟ ಸಾಫ್ಟ್‌ವೇರ್ ಉದ್ಯೋಗಿ ಮುಸ್ಲಿಮನಾಗಿರಬಹುದು. ಲಾಕ್‌ಡೌನ್‌ ಇದ್ದಾಗಲೂ 12 ಜನರು ಮಸೀದಿಗೆ ಹೋಗಿದ್ದು ತಪ್ಪು. ತಬ್ಲೀಘ್ ಸಭೆಗೆ ಹೋಗಿದ್ದೂ ಕೆಲವರು ತಿಳಿಸದೇ ಇದ್ದದ್ದು ಖಂಡಿತವಾಗಿ ದೊಡ್ಡ ತಪ್ಪು. ಇಂಥ ತಪ್ಪನ್ನು ಇತರೆ ಧರ್ಮದ ವ್ಯಕ್ತಿಗಳೂ ಮಾಡಿದ್ದಾರೆ. ಕೆಲವರು ಮಾಡಿದ ಮೂರ್ಖತನ, ಅವಿವೇಕತನಗಳು ಮನುಷ್ಯ ಸಹಜವಾದರೂ ಕೆಲವು ಘಟನೆಗಳನ್ನು ಮುಂದೆಮಾಡಿಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ದ್ವೇಷದಿಂದ ನೋಡುವಂತೆ ಸಮಾಜವನ್ನು ಪ್ರಚೋದಿಸಲಾಗುತ್ತಿದೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ಸರಕಾರದೊಂದಿಗೆ ಸಹಕರಿಸಬೇಕು, ಕೋವಿಡ್ ಕಾಯಿಲೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸಲಹೆಗಳನ್ನು ಪಾಲಸಬೇಕು. ಹಾಗೂ ನೆರೆಹೊರೆಯಲ್ಲಿ ಯಾರಾದರೂ ಅದನ್ನು ಉಲ್ಲಂಘಿಸಿದಲ್ಲಿ ಸಾಧ್ಯವಾದರೆ ತಿಳಿಹೇಳಬೇಕು, ಇಲ್ಲವಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆ ಜಾತಿ/ಧರ್ಮ/ಪಂಗಡದ ಹೆಸರಿನಲ್ಲಿ ದ್ವೇಷ ಬಿತ್ತುವ ಪ್ರಚಾರಕ್ಕೆ ಕೈ ಜೋಡಿಸಬಾರದೆಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ದೇಶದ ಭವಿಷ್ಯವೇ ಆಗಿರುವ ಯುವ ಮಿತ್ರರ ಮೇಲೆ ಈ ಸಮಯದಲ್ಲಿ ದೊಡ್ಡ ಹೊಣೆಗಾರಿಕೆ ಇದೆ. ಪ್ರೀತಿಯಲ್ಲಿ ವಿಶ್ವಾಸವಿಟ್ಟಿರುವ ಯುವ ಪೀಳಿಗೆ ದ್ವೇಷವನ್ನು ಹುಟ್ಟುಹಾಕುವ, ಸಮಾಜವನ್ನು ಒಡೆಯುವ ರಾಜಕೀಯವನ್ನು ಒಪ್ಪಬಾರದೆಂದು ಅಭಿಮಾನದೊಂದಿಗೆ ಒತ್ತಾಯಿಸುತ್ತಿದ್ದೇವೆ.

ಕರೋನಾ ಪಿಡುಗು, ವಲಸೆ ಕಾರ್ಮಿಕರ ಸಂಕಷ್ಟಗಳು, ನಾಳಿನ ಅನಿಶ್ಚಿತತೆಗಿಂತ ಕೋಮು ದ್ವೇಷವೇ ಹೆಚ್ಚು ನೋವು ಬರಿಸುವ ಸಂಗತಿಯಾಗಿದೆ. ಕೊರೋನಾ ಸೋಂಕಿನ ಈ ಬಿಕ್ಕಟ್ಟಿನ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಮಾಡಿ ನಡೆಸುತ್ತಿರುವ ಸುಳ್ಳು ಪ್ರಚಾರ ನಿಲ್ಲಬೇಕು. ಆ ರೀತಿ ನಡೆಸುತ್ತಿರುವವರ ವಿರುದ್ಧಕಠಿಣ ಕ್ರಮ ಕೈಗೊಳ್ಳುತ್ತೇವೆಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯ ಸರಕಾರವು ಅದನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಆಗ್ರಹಿಸುವುದರ ಜೊತೆಗೆ ನಮ್ಮೀ ಸಮಾಜದಲ್ಲಿ ಎಲ್ಲರೂ ಮನುಷ್ಯ ಧರ್ಮವನ್ನು ಪಾಲಿಸೋಣ ಎಂದು ಸಮಾಜದ ಎಲ್ಲರನ್ನೂ ಆಗ್ರಹಿಸುತ್ತೇವೆ. ಪ್ರೀತಿ, ಶಾಂತಿ, ಸರ್ವರಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ!

ಒಮ್ಮತದ ಸಹಿ:

– ದೇವನೂರು ಮಹಾದೇವ, ಗಣೇಶದೇವಿ, ಹೆಚ್. ಎಸ್. ದೊರೆಸ್ವಾಮಿ, ಜಿ. ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ಎಸ್. ಆರ್. ಹಿರೇಮಠ, ಪ್ರಸನ್ನ, ಇಂದಿರಾ ಕೃಷ್ಣಪ್ಪ, ತೋಂಟದ ಸಿದ್ದರಾಮ ಸ್ವಾಮೀಜಿ ಗದಗ, ನಾಗೇಶ ಹೆಗಡೆ, ದಿನೇಶ್‌ಅಮಿನಮಟ್ಟು, ಶಿವಸುಂದರ್, ಮುಜಫರ್‌ಅಸ್ಸಾದಿ, ಮಾಲತಿ ಪಟ್ಟಣಶೆಟ್ಟಿ, ಡಾ. ಸಬೀಹಾ ಭೂಮಿಗೌಡ, ನಟರಾಜ್ ಬೂದಾಳ, ಜಿ.ರಾಜಶೇಖರ, ಫಣಿರಾಜ, ವಿಜಯಮ್ಮ, ರವಿ ಕೋಟಿ, ಇಂದೂಧರ ಹೊನ್ನಾಪುರ, ಡಾ. ವಿ.ಎನ್.ಲಕ್ಷ್ಮಿನಾರಾಯಣ, ಪಿಚ್ಚಳ್ಳಿ ಶ್ರೀನಿವಾಸ್, ಮುಜೀಬ್, ಡಾ.ಎಚ್.ಎಸ್.ಅನುಪಮ, ತಾಹೀರ್ ಹುಸೇನ್, ಅಬ್ದುಲ್ ಸಲಾಂ ಪುತ್ತಿಗೆ, ಬಿ. ಸುರೇಶ್, ನಗರಗೆರೆರಮೇಶ್, ರೂಪ ಹಾಸನ, ವಿ.ಎಸ್.ಶ್ರೀಧರ್, ನಗರಿ ಬಾಬಯ್ಯ, ರಾಘವೇಂದ್ರ ಕುಷ್ಟಗಿ, ಡಾ.ಎಚ್.ವಿ.ವಾಸು, ಡಾ. ಗೋಪಾಲ ದಾಬಡೆ, ಶಿವಾಜಿ ಕಾಗಣೀಕರ, ಬಸವರಾಜ ಸೂಳಿಬಾವಿ, ಶ್ರೀಪಾದ ಭಟ್, ಕ್ಲಿಫ್ಟನ್‌ರೊಝಾರಿಯೋ, ವಿನಯ್, ಇರ್ಷದ್‌ಅಹ್ಮದ್‌ದೇಸಾಯಿ, ಸಂತೋಷ ಕೌಲಗಿ ಮೇಲುಕೋಟೆ, ಯೂಸುಫ್‌ಕುನ್ನಿ, ಹರ್ಷ ಕುಮಾರ್ ಕುಗ್ವೆ, ದೇವಾನಂದ ಜಗಾಪುರ, ಕೆ.ಎಲ್.ಅಸೋಕ್, ತಾಜುದ್ದೀನ್, ರಾಘವೇಂದ್ರ (ಸಾಗರ), ಎ.ಎಸ್. ಪ್ರಭಾಕರ್, ಮೊಹಮ್ಮದ್‌ಕಿಕ್ಕಿಂಜೆ, ಮೀನಾಕ್ಷಿ ಬಾಳಿ, ಡಾ. ಭೂಮಿಗೌಡ, ಡಾ.ಷಕೀರಾಖಾನುಮ್, ಕೆ.ನೀಲಾ, ಜಿ.ಎನ್.ನಾಗರಾಜ್, ಬಿ.ಎ.ಕೆಂಜರೆಡ್ದಿ, ಬಿ.ಶ್ರೀನಿವಾಸ್, ಪ್ರಹ್ಲಾದ ಕಟ್ಟಿಮನಿ, ಕೇಸರಿ ಹರವೂ, ಡಾ. ಹೇಮಾ ಪಟ್ಟಣಶೆಟ್ಟಿ, ಡಾ. ಸಬಿತಾ ಬನ್ನಾಡಿ, ವಾಣಿ ಪೆರಿಯೋಡಿ, ಡಾ. ಶಿವಾನಂದ ಶೆಟ್ಟರ, ಜ.ನಾ. ತೇಜಶ್ರೀ, ಸಿ.ಎಚ್.ಭಾಗ್ಯ, ಡಾ.ಡಿ.ಬಿ.ಗವಾನಿ, ಸ್ವರ್ಣ ಭಟ್, ಮುತ್ತು ಬಿಳಿಯಲಿ, ರೇಣುಕಾ ನಿಡಗುಂದಿ ದೆಹಲಿ, ಯೋಗೇಶ್ ಮಾಸ್ಟರ್, ಶರೀಫ್ ಬಿಳಿಯಲಿ, ಕೆ.ಪಿ.ಸುರೇಶ, ಮೂಡ್ನಾಕೂಡು ಚಿನ್ನಸ್ವಾಮಿ, ಫಾದರ್ ವಿನೋದ ಪಾಲ, ಹಸನ್ ನಯೀಂ ಸುರಕೋಡ, ಸುನಂದಾ ಕಡಮೆ, ಶಾರದಾ ಗೋಪಾಲ, ಲಿನೆಟ್ ಡಿಸೋಜ, ವಸುಂಧರಾ ಭೂಪತಿ, ಚಂದ್ರಕಾಂತ ವಡ್ಡು, ಕೆ.ವೆಂಕಟರಾಜು, ಡಾ. ಬಸವರಾಜ ಸಾದರ, ಡಾ.ಧರಣೇಂದ್ರ ಕುರಕುರಿ, ನಾ. ದಿವಾಕರ ಮೈಸೂರು, ರವೀಂದ್ರ ಹಳಿಂಗಳಿ, ಸಿ.ಎಂ.ಅಂಗಡಿ ದೆಹಲಿ, ರಮಜಾನ್‌ದರ್ಗಾ, ಡಾ.ಪುರುಷೋತ್ತಮ ಬಿಳಿಮಲೆ, ಬಿ.ಸುಜ್ಞಾನ ಮೂರ್ತಿ ಹಂಪಿ, ಡಾ.ಶಶಿಕಾಂತ ಲಿಂಗಸುಗೂರ,ಡಾ.ವಾಸವಿ ಚಾಮರಾಜನಗರ, ದೇವು ಪತ್ತಾರ, ಬಿ.ಟಿ.ಜಾಹ್ನವಿ, ಕಲೀಂ ಪಾಷಾ ಹರಿಹರ, ಡಾ. ಸಂಜೀವಕುಲಕರ್ಣಿ, ಸರೋಜಾ ಪ್ರಕಾಶ, ವಿಶಾಲಾಕ್ಷಿ ಶರ್ಮ,ಎಚ್.ಪಟ್ಟಾಭಿರಾಮ ಸೋಮಯಾಜಿ, ರಘುನಂದನ, ಚಂದ್ರಕಲಾ ಬಾಗಲಕೋಟೆ, ಟಿ.ಎನ್.ಚಂದ್ರಕಾಂತ, ಎಚ್.ಎನ್.ಆರತಿ, ಎಸ್. ತುಕಾರಾಂ, ಡಾ. ಸಿದ್ದನಗೌಡ ಪಾಟೀಲ, ಎನ್.ವೆಂಕಟೇಶ್, ದೊರೈರಾಜ್, ಕಾಳೇಗೌಡ ನಾಗವಾರ, ಮೋಹನ ಕುಮಾರ್, ನೂರ್ ಮನ್ಸೂರ್, ಮಾವಳ್ಳಿ ಶಂಕರ್, ಶೇಖಣ್ಣ ಕವಳಿಕಾಯಿ, ಮಲ್ಲಿಕಾರ್ಜುನ ಕಲಮರ ಹಳ್ಳಿ, ಸತ್ಯಾ, ಎಂ.ಎಸ್.ಮುರಳಿಕೃಷ್ಣ, ಕೋರ್ಣೇಶ್ವರ ಸ್ವಾಮೀಜಿ, ಶಂಕರಗೌಡ ಸಾತ್ಮಾರ, ಕೆ.ನಾಗಭೂಷಣರಾವ್ ಬಳ್ಳಾರಿ, ಗಂಗಾಧರ ಹಿರೇಗುತ್ತಿ ಕಾರವಾರ, ಶಂಕರಡಿ. ಸುರಳ್, ಡಾ.ಮಹಾದೇವಿ ಕಣವಿ ಹಾವೇರಿ, ವರದರಾಜು, ತಾಜುದ್ದೀನ್ ಶರೀಫ್, ಆರ್.ಮಾನಸಯ್ಯ, ಯು.ಎಚ್. ಉಮರ್, ಎಚ್.ಬಿ.ರಾಘವೇಂದ್ರ, ಇಲಿಯಾಸ್ ತುಂಬೆ, ಟಿ.ಅಝಗರ್, ಅಶ್ರಫ್ ಅಲಿ ಹುಬ್ಬಳ್ಳಿ, ಎಸ್.ಎ. ಲಂಡೂರ್, ಡಾ, ಇಷ್ಟಿಜ್ ಅರಸ್, ಎಂ.ವಿ. ಮಾಗನೂರ, ಡಿ. ಉಮಾಪತಿ, ನೂರ್ ಶ್ರೀಧರ್, ಇನ್ನೂ ಅನೇಕ ಸಹ ಮನಸ್ಕರು.


ಇದನ್ನೂ ಓದಿ: ಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಲ-ವಂಚನೆ-ಹಣ ವರ್ಗಾವಣೆ ಪ್ರಕರಣ: ಅಂಬಾನಿ ಗ್ರೂಪ್ ಮಾಜಿ ಕಾರ್ಯನಿರ್ವಾಹಕ ಅಮಿತಾಬ್ ಜುಂಜುನ್‌ವಾಲಾ ಅವರನ್ನು ಬಂಧಿಸಿದ ಇಡಿ

ನವದೆಹಲಿ: ಬ್ಯಾಂಕ್ ಸಾಲ ವಂಚನೆ-ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ನ ಮಾಜಿ ಹಿರಿಯ ಕಾರ್ಯನಿರ್ವಾಹಕ ಅಮಿತಾಭ್ ಜುನ್ಜುನ್ವಾಲಾ ಅವರನ್ನು ಜಾರಿ ನಿರ್ದೇಶನಾಲಯ (ED) ಬುಧವಾರ ಬಂಧಿಸಿದೆ...

ಲೈಂಗಿಕ ದೌರ್ಜನ್ಯ ವಿವಾದದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಾಸಿಕ್ ಟಿಸಿಎಸ್; ಮನೆಯಿಂದಲೇ ಕೆಲಸ ಮಾಡುತ್ತಿರುವ ಸಿಬ್ಬಂದಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ವ್ಯವಹಾರ ಪ್ರಕ್ರಿಯೆಯ ಹೊರಗುತ್ತಿಗೆ (ಬಿಪಿಒ) ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರ ಪ್ರಕರಣಗಳ ವಿವಾದದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉದ್ಯೋಗಿಗಳಿಗೆ...

ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ : ಕಪ್ಪು ಬಾವುಟ ಹಾರಿಸಿ, ಮಸೂದೆ ಪ್ರತಿಸುಟ್ಟು ಪ್ರತಿಭಟನೆಗೆ ಚಾಲನೆ ಕೊಟ್ಟ ಎಂ.ಕೆ ಸ್ಟಾಲಿನ್

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಮರ ಸಾರಿದ್ದು, ಗುರುವಾರ (ಏ.16) ಅಧಿಕೃತವಾಗಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ, ನಾಮಕ್ಕಲ್‌ನಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ...

ತೆಲಂಗಾಣ ಜಾತಿ ಜನಗಣತಿ: ಸಾಮಾನ್ಯ ಜಾತಿಗಳಿಗಿಂತ ಮೂರು ಪಟ್ಟು ಹೆಚ್ಚು ಹಿಂದುಳಿದಿರುವ ಎಸ್‌ಸಿ- ಎಸ್‌ಟಿ ಸಮುದಾಯ

ತೆಲಂಗಾಣದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳು ಸಾಮಾನ್ಯ ಜಾತಿಗಳಿಗಿಂತ ಮೂರು ಪಟ್ಟು ಹೆಚ್ಚು ಹಿಂದುಳಿದಿವೆ, ಹಿಂದುಳಿದ ವರ್ಗಗಳು (ಬಿಸಿ) 2.7 ಪಟ್ಟು ಹೆಚ್ಚು ಹಿಂದುಳಿದಿವೆ; ರಾಜ್ಯದ ಕಲ್ಯಾಣ...

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...