Homeಮುಖಪುಟಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ನನ್ನ ಮಂಗಳೂರಿಗೆ ಏನಾಗಿದೆ?

ಕೊರೊನಾ ಕಾರಣಕ್ಕೆ ಮೃತಪಟ್ಟ ಶವದ ಅಂತ್ಯಸಂಸ್ಕಾರಕ್ಕೆ ಅವಕಾಶಕೊಡದ ಮಂಗಳೂರಿನ ಅಮಾನವೀಯ ಘಟನೆಯ ಕುರಿತು ಅಲ್ಲಿನವರೇ ಆದ ಬಾಪು ಅಮ್ಮೆಂಬಳರವರ ಲೇಖನ

- Advertisement -
- Advertisement -

ಉನ್ಮಾದವನ್ನು ಯಾವ ರೀತಿ ಹರಡಲಾಗುತ್ತದೆ ಮತ್ತು ಅದು ನಮ್ಮನ್ನು ಹೇಗೆ ಆಟವಾಡಿಸುತ್ತದೆ ಎಂಬುವುದು ಮಂಗಳೂರಿನ ಘಟನೆ ಸ್ಪಷ್ಟ ಚಿತ್ರಣ ನೀಡುತ್ತದೆ. ಎಲ್ಲೋ ದೂರದ ಸುಶಿಕ್ಷಿತರಲ್ಲದ ಉತ್ತರದ ರಾಜ್ಯಗಳ ಜನರು ಈ ರೀತಿ ನಡೆದು ಕೊಂಡಿದ್ದರೆ, ರೋಗದ ಬಗ್ಗೆ ಅವರಿಗೆ ಅರಿವಿಲ್ಲ ಹಾಗಾಗಿ ಅವರ ತಪ್ಪಿಲ್ಲ ಎಂದು ಸುಮ್ಮನಿದ್ದು ಬಿಡಬಹುದಾಗಿತ್ತು. ಆದರೆ ಇದೆಲ್ಲ ನಡೆದಿರುವುದು ಪ್ರಜ್ಞಾವಂತರೆಂದು ನಮಗೆ ನಾವೇ ಹೇಳಿಕೊಳ್ಳುವ ನನ್ನೂರು ಮಂಗಳೂರಿನಲ್ಲಿ ಎನ್ನುವುದು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಅಮಾನವೀಯ ಘಟನೆ ಇದು. ಹಿರಿಯ ಜೀವವೊಂದು ಅವರು ಮಾಡದ ತಪ್ಪಿಗೆ ಸಾವಿಗೀಡಾದ ನಂತರವೂ ಒಂದು ಘನತೆಯ ಅಂತಿಮ ಸಂಸ್ಕಾರಕ್ಕೆ ನನ್ನೂರಿನ ಜನ ಅವಕಾಶ ಕೊಟ್ಟಿಲ್ಲ ಎಂದರೆ ಯಾವ ಪ್ರಜ್ಞೆ, ಎಂತಹ ಪ್ರಜ್ಞಾವಂತರು ? ಎಂತಹ ಕ್ರೂರತೆ ಇದು??

ಜಿಲ್ಲಾಡಳಿತ ಕೊರೊನಾ ಕಾರಣಕ್ಕೆ ಮೃತಪಟ್ಟ ಆ ಹಿರಿಯರ ಶವವನ್ನು ಆಂಬುಲೆನ್ಸ್‌ನಲ್ಲಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅರ್ಧ ಜಿಲ್ಲೆ ಅಲೆದಾಡಿದೆ. ಹೋದಲ್ಲೆಲ್ಲ ಜನರ ವಿರೋಧ ಕಂಡುಬಂದಿದೆ. ಅಂದರೆ ಅರ್ಥ ಮಾಡಿಕೊಳ್ಳಿ ಒಂದು ದೊಡ್ಡ ಗುಂಪಿನ ಜನರು ಉನ್ಮಾದಕ್ಕೆ ಒಳಗಾಗಿ ತಾವೇನು ಮಾಡುತ್ತಿದ್ದೇವೆ, ಇದು ಸರಿಯಾದ ನಡೆಯೇ ಎಂಬ ಬಗ್ಗೆ ಚಿಂತಿಸುವಷ್ಟೂ ವಿವೇಚನೆ ಕಳೆದುಕೊಂಡಿದೆ. ಅವರಿಗೆ ತಿಳಿ ಹೇಳುವವರೂ ಆ ಹೊತ್ತಿನಲ್ಲಿ ಯಾರೂ ಇರಲಿಲ್ಲ. ಒಂದು ವೇಳೆ ಹೇಳಿದ್ದರೂ ಕೇಳುತ್ತಿದ್ದರೆ? ಅದೂ ಇಲ್ಲ. ಪಚ್ಚನಾಡಿ ಸ್ಮಶಾನದಲ್ಲಿ ಶಾಸಕ ಭರತ್ ಶೆಟ್ಟಿ ನಡೆದುಕೊಂಡ ರೀತಿ ನಾಗರಿಕ ಸಮಾಜ ಎಂದು ಹೇಳುವ ಯಾರಾದರೂ ತಲೆತಗ್ಗಿಸಬೇಕಾದಂತ ವಿಷಯ. ಒಬ್ಬ ಸ್ವತಃ ಡಾಕ್ಟರ್ ಆಗಿರುವ ಅವರು, ಶವ ಇಲ್ಲಿ ಸುಟ್ಟರೆ ಕೊರೊನಾ ಹರಡಲ್ಲ ಎಂದು ಹೇಳುತ್ತಲೆ, ಅಂತಿಮ ಸಂಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನನ್ನ ಜನ ಒಪ್ಪುತ್ತಿಲ್ಲ ಎಂದು ಹೇಳಿ ಕೊನೆವರೆಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶವದಿಂದ ಕೊರೊನಾ ಹರಡುವುದಿಲ್ಲ ಎಂದು ಗೊತ್ತಿದ್ದರೂ ಜನರು ಒಪ್ಪುತ್ತಿಲ್ಲ ಎಂದು ಎಲ್ಲವೂ ಹಾಗೆ ಒಪ್ಪಿ ಬಿಡುವುದೆ. ಅದನ್ನು ವಿವೇಚಿಸಿ ಅವರಿಗೆ ತಿಳಿಹೇಳುವ ಹಾಗೂ ಈ ಅಮಾನವೀಯ ನಡೆಯ ವಿರುದ್ದ ನಿಲ್ಲುವ ನೈತಿಕ ಪ್ರಜ್ಞೆಯಾದರೂ ಬೇಡವೆ.

ಸುರತ್ಕಲ್ ಶಾಸಕ ಭರತ್‌ ಶೆಟ್ಟಿ

ಶಾಸಕ ಹಾಗೂ ಸ್ವತಃ ಡಾಕ್ಟರ್ ಕೂಡಾ ಆಗಿರುವ ಭರತ್ ಶೆಟ್ಟಿಗೆ ಅಲ್ಲಿರುವ ಜನರಿಗೆ ತಿಳಿ ಹೇಳಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಸುವ ಧೈರ್ಯ ಯಾಕೆ ಬರಲಿಲ್ಲ?. ಮುಖ್ಯವಾಗಿ ಜನರು ಉದ್ರೇಕಗೊಳ್ಳಬಹುದು, ನನ್ನ ಮತದಾರರೇ ನನಗೆ ತಿರುಗಿ ಬೀಳಬಹುದು ಎಂಬ ಭಯ. ಹಾಗೆ ನೋಡಿದರೆ ಇಲ್ಲಿ ಇಂತಹ ಉನ್ಮಾದವನ್ನು ನಿಜಕ್ಕೂ ಸೃಷ್ಟಿಸಿದವರು ಯಾರು? ಇವರುಗಳು ತಾನೆ. ನಿಜ ಗೊತ್ತಿದ್ದರೂ ಅಲ್ಲಿ ಸೇರಿರುವ ಜನರು ಒಪ್ಪಿಕೊಳ್ಳುತ್ತಿಲ್ಲ ಯಾಕೆಂದರೆ ಒಪ್ಪಿಕೊಳ್ಳದೆ ಇರುವಂತಹ ಮನಸ್ಸುಗಳನ್ನು ಈಗಾಗಲೇ ಇಲ್ಲಿ ಸೃಷ್ಟಿಸಿಯಾಗಿದೆ. ಇಂತಹ ಉನ್ಮಾದವನ್ನು ಸೃಷ್ಟಿಸಿದವರಿಗೆ ಈಗ ಅದರ ವಿರುದ್ಧ ಮಾತನಾಡಲು ಭಯವಿದೆ. ಅದೇ ಕಾರಣಕ್ಕೆ ಸಾವಿಗೀಡಾದ ವ್ಯಕ್ತಿಯ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಕೂಡಾ, ಸ್ಮಶಾನ ಸಿಗದಿದ್ದರೆ ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಿ ಎಂದಿದ್ದು. ಈಗ ಅವರನ್ನು ಮಾನವೀಯತೆಯ ಹರಿಕಾರ ಎನ್ನುತ್ತಾ ಕೆಲವರು ಕೊಂಡಾಡುತ್ತಿದ್ದಾರೆ, ಬಿಡಿ. ಆದರೆ ನಿಜವಾಗಿಯೂ ಒಬ್ಬ ಶಾಸಕನ ಕರ್ತವ್ಯ ಯಾವುದು?.

ಕೊರೊನಾ ಸೋಂಕಿತರು ಸತ್ತರೆ ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲೇಬೇಕು ಎಂದು ನಿಯಮವೇನು ಇಲ್ಲ. ಸಾರ್ವಜನಿಕರಿಗಂತೂ ಇಂತಹ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ ಜಿಲ್ಲಾಡಳಿತ ‌ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿದ ಕಡೆಯಲ್ಲೆಲ್ಲ ಜನ ಸೇರಿದ್ದರೆಂದರೆ ಉನ್ಮಾದಕ್ಕೆ ಒಳಪಡಿಸುವ ನೆಟ್ವರ್ಕ್ ಎಷ್ಟೊಂದು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುವುದು ಅರ್ಥ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಅಂತಿಮ ಸಂಸ್ಕಾರಕ್ಕೆ ತೀರ್ಮಾನಿಸಿದ ಸ್ಮಶಾನವಿರುವ ಭಾಗದ ಜನರಿಗೆ ಅಷ್ಟೊಂದು ವೇಗದಲ್ಲಿ ಸಂದೇಶಗಳು ತಲುಪಿ, ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಬಿಡಬಾರದು ಎಂದು ವಿವೇಚನೆಯಿಲ್ಲದ ತೀರ್ಮಾನವನ್ನು ಒಂದು ದೊಡ್ಡ ಜನ ಸಮೂಹ ತೀರ್ಮಾನಿಸುತ್ತದೆಯಂದರೆ, ಅದಕ್ಕಿಂತಲೂ ಹೆಚ್ಚಿನ ಅಪಾಯ ಏನಿದೆ. ಕೊರೊನಾ ಬಗ್ಗೆ ಜನರಿಗೆ ಸರ್ಕಾರ ಇಷ್ಟೆಲ್ಲ ಮಾಹಿತಿಯನ್ನು ನೀಡಿದರೂ ಮಂಗಳೂರಿನಂತಹ ಸುಶಿಕ್ಷಿತ ಜನರೆ ಅದನ್ನು ಮನನ ಮಾಡಿಕೊಂಡಿಲ್ಲವೆಂದರೆ ಸಮಾಜದ ದಾರಿ ಎಲ್ಲಿಗಿದೆ ಹೇಳಿ.

ಕೊರೊನಾ ಈಗಾಗಲೆ ಎಲ್ಲಾ ಕಡೆಗೂ ಹಬ್ಬುತ್ತಿದೆ. ಈ ಸೋಂಕು ಯಾರಿಗೂ ಹರಡಬಹುದು. ಒಂದು ವೇಳೆ ಅಲ್ಲಿ ಅಂತಿಮ ಸಂಸ್ಕಾರ ಮಾಡದಂತೆ ತಡೆದ ಜನರಿಗೂ ಇದೆ ರೀತಿಯ ಪರಿಸ್ಥಿತಿ ಬಂದಿದ್ದರೆ (ಹಾಗೆ ಆಗದಿರಲಿ) ಏನಾಗುತ್ತಿತ್ತು. ಅಲ್ಲಿ ಸೇರಿದ ಯಾರೂ ಸಾವಿಗೀಡಾದ ಕುಟುಂಬದವರ ಸ್ಥಾನದಲ್ಲಿ ನಿಂತು ನೋಡಲೇ ಇಲ್ಲ. ಆ ಕುಟುಂಬದವರು ಎಷ್ಟು ನೊಂದಿರಬಹುದು, ಮನೆಯ ಹಿರಿಯರನ್ನು ಕಳೆದುಕೊಂಡ ನೋವಿನ ಜೊತೆಗೆ, ಅಂತಿಮ ಸಂಸ್ಕಾರ ಮಾಡಲಾಗುತ್ತಿಲ್ಲ ಎಂಬ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಆದರೆ ಅಲ್ಲಿ ಸೇರಿದ ಯಾರಿಗೂ ಇದರ ಬಗ್ಗೆ ಆಲೋಚಿಸುವಷ್ಟು ವ್ಯಯದಾನವಿರಲಿಲ್ಲ. ಸಾಮೂಹಿಕ ಉನ್ಮಾದವೊಂದು ಏನೆಲ್ಲ ಮಾಡಿ ಬಿಡುತ್ತದೆ ನೋಡಿ. ಶವದ ಅಂತಿಮ ಸಂಸ್ಕಾರ ನಮ್ಮ ಹತ್ತಿರದ ಸ್ಮಶಾನದಲ್ಲಿ ಮಾಡುತ್ತಿದ್ದಾರೆಂಬ ಸಂದೇಶ ಭಯ ಹುಟ್ಟಿಸುವ ರೀತಿಯಲ್ಲಿ ಬಂದಿರುತ್ತದೆ, ಅದರಿಂದಾಗಿ ಅಂತಿಮ ಸಂಸ್ಕಾರ ಮಾಡಲು ಬಿಡಲೇಬಾರದು ಎಂಬ ತಲೆಗಡರಿದ ಉನ್ಮಾದದಿಂದಾಗಿ ಬಾಕಿ ಎಲ್ಲವೂ ಮಂಕಾಗುತ್ತದೆ. ಅವರು ಆಲೋಚನೆಯ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ನಿಜಕ್ಕೂ ಮಾನವೀಯತೆ ಎಂದರೆ ಏನು, ಎಲ್ಲವನ್ನೂ ಮೀರಿ ಮನುಷ್ಯನ ಸಂಕಷ್ಟಗಳಿಗೆ ನೆರವಾಗುವುದು, ಅವರ ನೋವಿಗೆ ಸಾಂತ್ವನವಾಗುವುದು, ಅವರ ಭಾರಗಳಿಗೆ ಬೆನ್ನಾಗುವುದು. ಆದರೆ ನನ್ನ ಮಂಗಳೂರಿಗೆ ಏನಾಗಿದೆ…


ಇದನ್ನೂ ಓದಿ: ಪಾದರಾಯನಪುರ ಮತ್ತು ಚನ್ನೈ ವೈದ್ಯನ ಸಾವಿನ ಘಟನೆ: ಇದು ನಮ್ಮೊಳಗಿನ ವೈರಸ್! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲಿಯೇ ಹೀಗಾಗಿರುವುದು ದುರಂತ.
    “ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಾ” ಎಂದು ಬುದ್ದ ಹೇಳಿ, ಎರಡೂವರೆ ಸಾವಿರ ವರ್ಷಗಳು ಕಳೆದಿದ್ದರೂ ನಾವಿನ್ನೂ ಬುದ್ದಿ ಕಲಿತಿಲ್ಲ ಎಂದರೆ, ಕಲಿಯುವುದಾದರೂ ಯಾವಾಗ?
    ನಾಗರೀಕತೆಯ ಸವಲತ್ತುಗಳು ಹೆಚ್ಚಿದಂತೆಲ್ಲ ಮನುಷ್ಯ ಮಾನವನಾಗಬೇಕೇ ಹೊರತು ರಕ್ಕಸನಾಗಬಾರದು.

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...