Homeನಿಜವೋ ಸುಳ್ಳೋಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ಸಾವರ್ಕರ್‌ ಅವರ ವಿಚಾರ ಕರ್ನಾಟಕದಲ್ಲಿ ಚರ್ಚೆಗೆ ಬರುತ್ತಿದ್ದಂತೆ, ಈಗಾಗಲೇ ಹಲವಾರು ಸಾರಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಆರೋಪಕ್ಕೊಳಗಾಗಿರುವ ಪೋಸ್ಟ್‌ ಕಾರ್ಡ್‌ ನವರಿಂದ ಸಾವರ್ಕರ್‌ ಅವರು ದಲಿತರ ಪರ ಕೆಲಸ ಮಾಡಿದ್ದರು ಎಂದು ಪ್ರಕಟವಾಗಿದೆ. ಆ ಕುರಿತು ಫ್ಯಾಕ್ಟ್‌ ಚೆಕ್‌

- Advertisement -
- Advertisement -

ಮೇ 28 ವಿ.ಡಿ.ಸಾವರ್ಕರ್‌ ಜನ್ಮದಿನ. ಅದಕ್ಕೂ ಮೊದಲು ಮೇ 27ರಂದು ಕರ್ನಾಟಕ ಸರ್ಕಾರವು ಬೆಂಗಳೂರಿನ ಯಲಹಂಕದ ಮೇಲ್ಸೇತುವೆ ಸಾವರ್ಕರ್‌ ಹೆಸರಿಡಲು ತೀರ್ಮಾನಿಸಿತು. ಈ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನೇ ಮುಂದೂಡಿತು.

ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳು ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಡುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ಪಕ್ಷ, ಸಚಿವ ಸಿ.ಟಿ.ರವಿ, ಸುರೇಶ್‌ ಕುಮಾರ್‌ ಸೇರಿದಂತೆ ಮುಂತಾದವರು ಸಾವರ್ಕರ್‌ ಹೆಸರಿಡುವುದನ್ನು ಸ್ವಾಗತಿಸಿ ವಾದ ಮಂಡಿಸಿದ್ದರು.

ಇಂತಹ ಸಂದರ್ಭದಲ್ಲಿ ಪೋಸ್ಟ್‌ ಕಾರ್ಡ್‌ ಕನ್ನಡ ಎನ್ನುವ ಬಲಪಂಥೀಯ ವಿಚಾರವುಳ್ಳ ಫೇಸ್‌ಬುಕ್‌ ಪುಟದಲ್ಲಿ ಸಾವರ್ಕರ್‌ ದಲಿತಪ್ರೇಮಿ ಎನ್ನುವ ಪೋಸ್ಟ್‌ ಒಂದನ್ನು ಹಾಕಲಾಯಿತು.

Posted by Postcard ಕನ್ನಡ on Wednesday, May 27, 2020

 

“ಅದರಲ್ಲಿ ವೀರ ಸಾವರ್ಕರ್‌ ದಲಿತರನ್ನೂ ಒಳಗೊಂಡಂತೆ ಸಮಾಜದ ಎಲ್ಲ ವರ್ಗ, ಪಂಥ, ಜಾತಿಯವರಿಗೂ ಮುಕ್ತವಾಗಿರುವ ಪತಿತಪಾವನ ದೇವಸ್ಥಾನ ಕಟ್ಟಿದರು. ಅಸ್ಪೃಶ್ಯರನ್ನು ಒಳಗೊಂಡು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಸಂಪೂರ್ಣವಾಗಿ ದಲಿತರಿಂದಲೇ ನಡೆಯುವ ಹೊಟೇಲನ್ನು ಮೊಟ್ಟಮೊದಲ ಬಾರಿಗೆ ತೆರೆದರು. ಆದರು ಕಾಂಗ್ರೆಸ್‌ ಸಾವರ್ಕರ್‌ರನ್ನು ವಿರೋಧಿಸುತ್ತದೆ ಎಂದರೆ, ಕಾಂಗ್ರೆಸ್‌ ದಲಿತರ ಪರವೋ ವಿರುದ್ಧವೋ ನೀವೇ ನಿರ್ಧರಿಸಿ” ಎಂದು ಬರೆಯಲಾಗಿತ್ತು.

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಫ್ಯಾಕ್ಟ್‌ಚೆಕ್‌ ನಡೆಸಲಾಯಿತು.

ಸಾರ್ವಜನಿಕ ಗಣೇಶೋತ್ಸವ

1905ರಲ್ಲಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ್ದು ಬಾಲ ಗಂಗಾಧರ ತಿಲಕರು. ಅದರಲ್ಲಿ ದಲಿತರು ಭಾಗವಹಿಸಬಹುದಾಗಿತ್ತೇ? ಅದೇ ಮಹಾರಾಷ್ಟ್ರದ ನಾಸಿಕ್‌ನ ಕಾಳಾರಾಮ್ ದೇವಸ್ಥಾನದ ಪ್ರವೇಶಕ್ಕಾಗಿ 1930ರಲ್ಲಿ ಅಂಬೇಡ್ಕರ್ ಸತ್ಯಾಗ್ರಹ ನಡೆಸಿದಾಗ ಏನಾಯಿತೆಂಬುದು ಗೊತ್ತಿರುವ ವಿಷಯವೇ ಅಲ್ಲವೇ? ಅಂಬೇಡ್ಕರ್‌ ಸೇರಿದಂತೆ ಬಹಳಷ್ಟು ದಲಿತರ ಮೇಲೆ ಸವರ್ಣಿಯರು ದಾಳಿ ಮಾಡಿದ್ದರು. ಹೀಗಿರುವಾಗ ಗಣೇಶೋತ್ಸವಗಳಲ್ಲಿ ದಲಿತರು ಭಾಗವಹಿಸುತ್ತಿದ್ದರೆಂಬುದು ಹಸಿಸುಳ್ಳು….

ಪತಿತಪಾವನ ದೇವಾಲಯ

ಪೋಸ್ಟ್‌ ಕಾರ್ಡ್‌ ಈ ದೇವಾಲಯವನ್ನು ಯಾವ ಊರಿನಲ್ಲಿ, ಯಾವಾಗ ಕಟ್ಟಿಸಿದರು ಎಂಬುದನ್ನು ಉಲ್ಲೇಖಸಿಲ್ಲ.  ಈ ಹಿಂದೂ ದೇವಾಲಯವನ್ನು ಶ್ರೀಮನ್ ಭಗೋಜಿಶೆತ್ ಕೀರ್ ಎಂಬುವವರು 1931ರಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಟ್ಟಿಸಿದರೆಂದು ವಿಕಿಪಿಡೀಯ ಸೇರಿದಂತೆ ಎಲ್ಲಾ ಕಡೆ ಹೇಳಲಾಗುತ್ತದೆ.

ಈ ಕುರಿತು www.patitpavanmandir.org ನಲ್ಲಿ ಒಂದು ಲೇಖನ ಮಾತ್ರ ಲಭ್ಯವಿದೆ. ಅದರಲ್ಲಿ ಅಂಬೇಡ್ಕರ್‌ರವರ ದೇವಸ್ಥಾನ ಪ್ರವೇಶ ಹೋರಾಟಗಳಿಗೆ ಸಾವರ್ಕರ್‌ ಬೆಂಬಲ ನೀಡಿದ್ದರು ಎಂದೆಲ್ಲಾ ಸುಳ್ಳುಗಳನ್ನು ಬರೆಯಲಾಗಿದೆ. ಈ ಮೊದಲೇ ಹೇಳುವಂತೆ ದಲಿತರಿಗಾಗಿಯೇ ದೇವಸ್ಥಾನ ಕಟ್ಟಿಸುವ ಕಾಲವಿದ್ದರೆ ಕಾಳಾರಾಮ್ ದೇವಸ್ಥಾನದ ಪ್ರವೇಶಕ್ಕಾಗಿ ಅಂಬೇಡ್ಕರ್‌ ಮತ್ತು ದಲಿತರ ಮೇಲೆ ಹಲ್ಲೆ ನಡೆಸಿದ್ದು ಏಕೆ?

ದಲಿತರಿಂದಲೇ ನಡೆಯುವ ಹೋಟೆಲ್‌

‌ಅಂಬೇಡ್ಕರ್, ತಿಲಕ್ ಮತ್ತು ಸಾವರ್ಕರ್ – ಈ ಮೂರೂ ಜನರ ಜೀವನ ಚರಿತ್ರೆ ಯನ್ನು ಬರೆದದ್ದು ಧನಂಜಯ್ ಕೀರ್. ಆ ಮೂವರ ಬದುಕಿನ ಮಾಹಿತಿಗಳ ಬಗ್ಗೆ ಕೀರ್ ಬರಹವನ್ನೇ ಮೂಲ ಆಕರವನ್ನಾಗಿ ಎಲ್ಲೆಡೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲೆಲ್ಲೂ ಸಾವರ್ಕರರು ’ಸಂಪೂರ್ಣವಾಗಿ ದಲಿತರೇ ನಡೆಸುವ ಹೋಟೆಲ್ ಇರಲಿ, ಬ್ರಾಹ್ಮಣರ ಹೋಟೆಲ್ ಪ್ರಾರಂಭಿಸಿದ” ಪ್ರಸಂಗವಿಲ್ಲ… ವಾಸ್ತವವಾಗಿ ಇಂಥಾ ರಚನಾತ್ಮಕ ಕೆಲಸಗಳನ್ನು ಸಂಘಟನಾತ್ಮಕವಾಗಿಯೋ, ವೈಯಕ್ತಿಕವಾಗಿಯೋ ಹಿಂದೂ ಮಹಾ ಸಭಾ ಕೈಗೆತ್ತಿಕೊಂಡು ಸಮಯ ಹಾಳುಮಾಡುವುದನ್ನು ಅವರು ವಿರೋಧಿಸುತ್ತಿದ್ದರು..

ಈ ಕುರಿತು ಸಾವರ್ಕರ್‌‌ರವರ ಬದುಕು ಬರಹಗಳ ಬಗ್ಗೆ ಅಧ್ಯಯನ ಮಾಡಿರುವ ಕನ್ನಡದ ಚಿಂತಕರಾದ ಶಿವಸುಂದರ್‌ರವರು “ಒಂದೂ ಬಲವಾದ ಹಿಂದೂ ಸಮಾಜ ಕಟ್ಟಲೋಸುಗ ದಲಿತರನ್ನು ಒಳಗೊಳ್ಳಬೇಕೆಂದು ಸಾವರ್ಕರ್‌ ಪ್ರತಿಪಾದಿಸುತ್ತಿದ್ದರು…. ಅದಕ್ಕಾಗಿ ಜಾತಿ ವ್ಯವಸ್ಥೆಯನ್ನೂ ಆಗಾಗ ಟೀಕಿಸುತ್ತಿದ್ದರು… ಆದರೆ ಹಿಂದೂ ಮಹಾ ಸಭಾದ ಒಳಗಡೆ ಎಂದಿಗೂ ಒಬ್ಬ ದಲಿತನನ್ನು ಒಳಗೊಳ್ಳಲಿಲ್ಲ. ಒಂದು ಅಂತರ್ಜಾತಿ ಮದುವೆಗೂ ಪ್ರೋತ್ಸಾಹ ಕೊಡಲಿಲ್ಲ” ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಕಾಂಗ್ರೆಸ್‌ ಅನ್ನು ಟೀಕಿಸುವ ಭರದಲ್ಲಿ ಪೋಸ್ಟ್‌ ಕಾರ್ಡ್‌ ದಲಿತರ ಕುರಿತಾಗಿ ಮೂರು ಸುಳ್ಳುಗಳನ್ನು ಹರಡಿದೆ. ಅವು ಯಾವುವು ವಾಸ್ತವವಲ್ಲ ಎಂಬುದು ಈ ಮೇಲಿನ ನಿದರ್ಶನಗಳಿಂದ ಸಾಬೀತಾಗುತ್ತದೆ.


ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ


Also Read :  Karnataka government drops naming of flyover after “Veer” Savarkar

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...