Homeಕರ್ನಾಟಕದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ...

ದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ…

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

- Advertisement -
- Advertisement -

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಒಟ್ಟು ಚಳವಳಿಗಳ ಕುರಿತಾಗಿ ‘ಆಯಾ ಕಾಲದ ಪ್ರತಿರೋಧವನ್ನು ಸಂದರ್ಭವೇ ಸೃಷ್ಟಿಸುತ್ತದೆ. ಹೊಸ ತಲೆಮಾರಿನ ಚಳವಳಿಯ ಸ್ವರೂಪವೇ ಬೇರೆಯಾಗಿರುತ್ತದೆ’ ಎಂಬರ್ಥದಲ್ಲಿ ಹಿಂದೊಮ್ಮೆ ಹೇಳಿದ್ದರು.

ಹಿರಿಯ ಕವಿ ಡಾ.ವಿ.ಮುನಿವೆಂಕಟಪ್ಪ ‘ದಸಂಸದ ಸ್ಥಾಪಕರೆಲ್ಲ ಗತಿಸದೇ ಹೊರತು ಬಣಗಳ ಐಕ್ಯ ಸಾಧ್ಯವಿಲ್ಲ. ವಿಘಟಿತ ಬಣಗಳು ಯಾವ ಉದ್ದೇಶವನ್ನು ಈಡೇರಿಸುವುದಿಲ್ಲ’ ಎಂದಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರಮುಖ ಹೋರಾಟಗಾರರಾದ ಇಬ್ಬರ ಮಾತಿನಲ್ಲಿ ಸಾಮ್ಯತೆ ಇದೆ. ಆದರೆ ಕರ್ನಾಟಕದ ನೋವಿನ ನೆಲಗಳು ದಸಂಸ ಬಣಗಳು ಒಂದಾಗಬೇಕೆಂದು ಬಯಸುತ್ತಿವೆ.

ಎರಡು ದಶಕಗಳಿಂದ ಕೇಳುತ್ತಿರುವ ಒಂದೇ ಮಾತು. ದಸಂಸ ಬಣಗಳು ಒಂದಾಗಬೇಕು. ಯಾವಾಗ? ಹೇಗೆ? ಬಣಗಳ ಒಗ್ಗೂಡಿಸುವವರು ಯಾರು? ಹೀಗೆ ನಾನಾ ಪ್ರಶ್ನೆಗಳು. ಕವಿ ಸಿದ್ದಲಿಂಗಯ್ಯ ಅವರು ‘ನನ್ನ ಅಣ್ಣನಂತಿರುವ ದೇವನೂರ ಮಹಾದೇವ ಅವರು ದಸಂಸ ನೇತೃತ್ವ ವಹಿಸಿದರೆ ಅವರೊಂದಿಗೆ ಮುನ್ನಡೆಯುವುದಾಗಿ’ ಹೇಳಿದ್ದರು. ಅದು ಈಡೇರಲಿಲ್ಲ.

ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಒಂದೇ ಉದ್ದೇಶದ ಹತ್ತಾರು ಸಂಘಟನೆಗಳಿವೆ. ಇವುಗಳಲ್ಲಿಯೇ ಬೇಕಾದಷ್ಟು ಬಣಗಳಿವೆ. ಆದರೆ ದಸಂಸದ ನಾಲ್ಕು ಬಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಈ ಬಣಗಳು ಮುಖ್ಯಸ್ಥರು ತಮ್ಮ ಮುನಿಸು ಬದಿಗೆ ಸರಿಸಿ ಒಂದಾಗಬೇಕೆಂದು ನಾಡಿನುದ್ದಗಲಕ್ಕೂ ಬಯಸಿದವರಿದ್ದಾರೆ.

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

ನೆರೆಯ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಪ್ರಭಾವದಿಂದ ಪ್ರೊ.ಬಿ.ಕೃಷ್ಣಪ್ಪ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣರಾದರು. ಅದು 1975ರ ಸಂದರ್ಭ. ತುರ್ತು ಪರಿಸ್ಥಿತಿ ಎದುರಿಸಿದ ಕರಾಳ ದಿನಗಳು ಹಸಿರಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾದರೂ ಸಾಮಾಜಿಕ, ಆರ್ಥಿಕ ತರತಮಗಳು ಬಡ ಜನರನ್ನು ಇನ್ನಿಲ್ಲದಂತೆ ನೋಯಿಸುತ್ತಿದ್ದವು. ಹೋರಾಟಕ್ಕೆ ಜನ ತುಡಿಯುತ್ತಿದ್ದರು. ದಸಂಸ ಅವರಿಗೆ ದಿಕ್ಕಾಯಿತು.

ಪ್ರೊ.ಬಿ.ಕೃಷ್ಣಪ್ಪ

ಶೂದ್ರರಷ್ಟೇ ಅಲ್ಲದೇ ಬಡವರ ಅಭ್ಯುದಯದ ಧ್ಯೇಯದೊಂದಿಗೆ ದಸಂಸ ಪ್ರಭುತ್ವದ ಬಂಡವಾಳಶಾಹಿಗಳ ಜಮೀನುದಾರರ ಪುರೋಹಿತಶಾಹಿ ವಿರುದ್ಧ ಕಹಳೆ ಸಾರಿತು. ಹಳ್ಳಿಯ-ದಿಲ್ಲಿಯ ಅನ್ಯಾಯದ ವಿರುದ್ಧ ಗುಡುಗಿ ದಲಿತರಲ್ಲಿ ನೈತಿಕ ಶಕ್ತಿ ತುಂಬಿತು. ಮಹಾನಾಯಕ ಅಂಬೇಡ್ಕರರು ತೋರಿದ ಬೆಳಕಲ್ಲಿ ನಡೆದ ದಸಂಸ ಚಾರಿತ್ರಿಕ ಬದಲಾವಣೆಗಳಿಗೆ ಕಾರಣವಾಯಿತು.

‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂದು ಬೀದಿಯಲ್ಲಿ ಹಾಡುತ್ತ ಅಧಿಕಾರದ ಗದ್ದುಗೆ ಕಡೆ ನಡೆಯುವಾಗಲೇ ದಸಂಸ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಬಣಗಳಾದವು. ಸಂಚಾಲಕರೆಲ್ಲ ರಾಜ್ಯಾಧ್ಯಕ್ಷರಾದರು. ಕೆಲವರು ರಾಜಕಾರಣಿಗಳ ಹಿಂಬಾಲಕರಾದರು. ಬಡವರ ಹಿತಾಶಕ್ತಿ ಬಲಿಕೊಟ್ಟರು.

ಇಷ್ಟಾದರೂ ಇವತ್ತಿನ ತನಕ ಬಣಗಳು ನಿಷ್ಕ್ರೀಯವಾಗದೇ ಚಾಲನೆಯಲ್ಲಿದ್ದವು ಎಂಬುದೇ ಸಮಾಧಾನದ ಸಂಗತಿ. ಒಂದೇ ಸಮಸ್ಯೆ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಕರೆ ಕೊಡುತ್ತಿದ್ದವು. ಜಾಗೃತಿ ಮೂಡಿಸುತ್ತಿದ್ದವು. ನಿರೀಕ್ಷಿತ ಫಲ ಸಿಗದೇ ಹತಾಶೆಗೊಂಡಿದ್ದವು. ಈಗ ಬಣಗಳು ಒಂದುಗೂಡುವುದೊಂದೇ ಅವುಗಳಿಗಿರುವ ದಾರಿ ಎಂಬ ಅರಿವುಂಟಾಗಿದೆ. ಹಲವು ಬಾರಿ ಒಂದಾಗಿವೆ, ಮತ್ತೆ ಬೇರೆಯಾಗಿವೆ.

ಈ ದಿಸೆಯಲ್ಲಿ ಆಶಾವಾದವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಳಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಲ್ಕು ಬಣಗಳ ಮೈಸೂರು ಜಿಲ್ಲಾ ಸಂಚಾಲಕರು ‘ಒಂದೇ ದನಿ, ಒಂದೇ ಗುರಿ, ಒಂದೇ ಹಾದಿ’ ತತ್ವದಡಿ ಒಂದಾಗುವ ಸುದ್ದಿ ನೀಡಿದ್ದಾರೆ. ರಾಜ್ಯ ಸಂಚಾಲಕರು ಇವರ ಹಾದಿ ಹಿಡಿಯಬೇಕು. ಈ ಸಂಕಟದ ವರ್ತಮಾನಕ್ಕೆ ಮುಖಾಮುಖಿಯಾಗಬೇಕು.

ದಸಂಸ ಯಶಸ್ವಿ ಹೋರಾಟ ನೆನೆಯುವ ಸಂದರ್ಭವಿದು. ಅದು ನಾಗಸಂದ್ರದ ಭೂ ಹೋರಾಟ. ಪ್ರಭುತ್ವ ಮತ್ತು ಜಮೀನುದಾರರ ಸೊಕ್ಕಡಗಿಸಿದ ಹೋರಾಟವದು. ‘ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ. ಅಂದದ್ದೇ ಹೋರಾಟ ಕಟ್ಟುವ ಕಾಲವಿದು.

ನಾಗಸಂದ್ರ ಭೂ ಹೋರಾಟದ ಕುರಿತ ಪುಸ್ತಕ

ಹಿಂದಿನ ಸರ್ಕಾರಗಳು ಭೂ ರಹಿತರ ಪರವಾಗಿ ಕಾಯಿದೆ ಜಾರಿಗೆ ತಂದು ಬಡವರನ್ನು ರೈತರನ್ನಾಗಿಸಿತು. ಇಂದಿನ ಸರ್ಕಾರ ರೈತರಿಂದ ಭೂಮಿ ಕಸಿಯುವ ಅಘಾತಕಾರಿ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಭೂ ಕಬಳಿಕರಿಗೆ ಕೆಂಪುಹಾಸು ಹಾಸಿದೆ.

ಕಾಲದ ಒತ್ತಡಗಳೂ ನೂರೆಂಟು. ಈಗ ದಸಂಸದ ಗುರಿ ಒಂದೇ. ಅದು ಕರ್ನಾಟಕದ ರೈತಕುಲವನ್ನು ಉಳಿಸುವುದು. ಭೂಮಿ ಉಳಿಸಲು ಹೋರಾಡುವುದು. ಆ ಮೂಲಕ ತನ್ನ ಹಿಂದಿನ ಘನತೆಯನ್ನು ಎತ್ತಿಹಿಡಿಯುವುದು.

ವಿನೋದ್ ಮಹದೇವಪುರ, ಪತ್ರಕರ್ತರು, ಯುವ ಬರಹಗಾರರು.


ಇದನ್ನೂ ಓದಿ: ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...