Homeಮುಖಪುಟಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು - ಪ್ರಶಾಂತ್ ಭೂಷಣ್

ಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು – ಪ್ರಶಾಂತ್ ಭೂಷಣ್

ಕೊನೆಯ ನಾಲ್ವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿರುವ ಪ್ರಶಾಂತ್ ಭೂಷಣ್

- Advertisement -
- Advertisement -

ನ್ಯಾಯಾಂಗದ ಸಮಗ್ರತೆಯ ಕುರಿತು ಪ್ರಶ್ನಿಸುವ ಎರಡು ಟ್ವೀಟ್‌ಗಳಿಗಾಗಿ ತನಗೆ ನೀಡಲಾದ ನ್ಯಾಯಾಂಗ ನಿಂದನೆಯ ಸುಪ್ರೀಂಕೋರ್ಟ್ ನೋಟೀಸಿಗೆ ಸ್ಫೋಟಕ ಉತ್ತರ ನೀಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅಲ್ಲಿಗೇ ವಿಷಯ ಕೊನೆಗೊಳಿಸಿಲ್ಲ. ಅವರು ಅದೇ ಉತ್ತರದಲ್ಲಿ ಸುಪ್ರೀಂಕೋರ್ಟಿನ ಕೊನೆಯ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ನ್ಯಾಯಾಂಗದ ಸಮಗ್ರತೆ ಮತ್ತು ಪಾವಿತ್ರ್ಯ ಉಳಿಯಬೇಕೆಂದಿದ್ದರೆ ಪ್ರಜೆಗಳು ಈ ಕುರಿತು ತಿಳಿದುಕೊಂಡು ಚಿಂತಿಸುವುದು ಅಗತ್ಯ.
…..

ನ್ಯಾಯಾಂಗ ನಿಂದನೆಯ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಜೆ.ಎಸ್. ಖೆಹರ್‌ರಿಂದ ಹಿಡಿದು, ಕೊನೆಯ ನಾಲ್ವರು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಕರಿ ನೆರಳು ಚೆಲ್ಲಿದ ಪ್ರಮುಖ ಪ್ರಕರಣಗಳನ್ನು ತನಗೆ ನೀಡಲಾದ ನೋಟೀಸಿಗೆ ತಾನು ನೀಡಿರುವ ಉತ್ತರದಲ್ಲಿ ಪಟ್ಟಿ ಮಾಡಿದ್ದಾರೆ. ನ್ಯಾ. ಖೆಹರ್ ಅವರ ಅವಧಿಯಲ್ಲಿನ ಸಹಾರ ಬಿರ್ಲಾ ಪ್ರಕರಣ, ಕಾಲಿಖೋ ಪೌಲ್ ಆತ್ಮಹತ್ಯಾ ಚೀಟಿ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಈ ಕುರಿತು ಸರಿಯಾದ ತನಿಖೆ ನಡೆಯದೆ ಸಾರ್ವಜನಿಕರ ಸಂಶಯ ದೂರವಾಗುವುದಿಲ್ಲ ಎಂದು ವಿವರಿಸಿದ್ದಾರೆ.

ಮಾಜಿ ಮುಖ್ಯ ನ್ಯಾಯಮೂರ್ತಿ ಖೆಹರ್

ನ್ಯಾ. ದೀಪಕ್ ಮಿಶ್ರಾ ಅವಧಿ

ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ ಅವರ ಅವಧಿಯು “ಅನೇಕ ವಿಷಯಗಳಲ್ಲಿ ವಿವಾದಾಸ್ಪದವಾಗಿತ್ತು” ಎಂದು ಹೇಳಿರುವ ಭೂಷಣ್, ಸುಪ್ರೀಂಕೋರ್ಟಿನ ಘನತೆಯು ಇಳಿಮುಖವಾಗುವುದರಲ್ಲಿ ಅವರು ಪಾಲು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೆಡಿಕಲ್ ಕಾಲೇಜು ಲಂಚ ಪ್ರಕರಣ ಮತ್ತು ಪಿಐಎಂಎಸ್ ಹಗರಣದಲ್ಲಿ ಆರೋಪಿಯಾಗಿದ್ದು, ಇತ್ತೀಚೆಗೆ ನಿವೃತ್ತರಾದ ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶ ನಾರಾಯಣ್ ಶುಕ್ಲಾ ವಿರುದ್ಧ ಸಿಬಿಐಗೆ ಎಫ್‌ಐಆರ್ ದಾಖಲಿಸಲು ಅನುಮತಿ ನಿರಾಕರಣೆ ಪ್ರಕರಣಗಳನ್ನು ಭೂಷಣ್ ವಿವರವಾಗಿ ತನ್ನ ಉತ್ತರದಲ್ಲಿ ನೆನಪಿಸಿದ್ದಾರೆ.

ನಂತರ ಭೂಷಣ್ ಅವರು, ಮುಖ್ಯ ನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ಪ್ರಕರಣಗಳನ್ನು “ಮನಬಂದಂತೆ” ಹಂಚುವುದನ್ನು ವಿರೋಧಿಸಿ ಸುಪ್ರೀಂಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಮೊತ್ತಮೊದಲ ಬಾರಿಗೆ ಜನವರಿ 2018ರಲ್ಲಿ ನಡೆಸಿದ ಪ್ರಖ್ಯಾತ ಜಂಟಿ ಪತ್ರಿಕಾಗೋಷ್ಟಿಯನ್ನೂ ನೆನಪಿಸಿದ್ದಾರೆ. ಮುಖ್ಯ ನ್ಯಾಯಾಧೀಶರು ಪ್ರಕರಣಗಳನ್ನು ಇತರ ನ್ಯಾಯಾಧೀಶರಿಗೆ ವಹಿಸುವ ಅಧಿಕಾರ ಉಳ್ಳವರಾಗಿ ಅಸಮರ್ಪಕವಾಗಿ ಪ್ರಕರಣಗಳನ್ನು ಹಂಚಿದ ಹಲವಾರು ಉದಾಹರಣೆಗಳನ್ನು ಭೂಷಣ್ ನೀಡಿದ್ದಾರೆ. ಭೂಷಣ್ ಅವರ ಪ್ರಕಾರ, ರಾಜಕೀಯವಾಗಿ ಸೂಕ್ಷ್ಮವಾದ ಮತ್ತು ಆಳುವ ಪಕ್ಷದ ನಾಯಕರು ಮತ್ತು/ ಅಥವಾ ವಿರೋಧ ಪಕ್ಷಗಳ ನಾಯಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕೆಲವು ನಿರ್ದಿಷ್ಟ ಪೀಠಗಳಿಗೆ ಮಾತ್ರ ಕೊಡಲಾಗಿತ್ತು.

ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

ಮುಖ್ಯ ನ್ಯಾಯಾಧೀಶರಾಗಿದ್ದ ಮಿಶ್ರಾ, ನ್ಯಾಯಾಂಗದ ಆಡಳಿತಾತ್ಮಕ ವಿಷಯಗಳಲ್ಲಿ ಕಾರ್ಯಾಂಗವು ಹಾಕುತ್ತಿದ್ದ ಅನುಚಿತ ಒತ್ತಡಗಳನ್ನು ಸಮರ್ಥವಾಗಿ ಎದುರಿಸುತ್ತಿರಲಿಲ್ಲ ಎಂದು ಭೂಷಣ್ ಆರೋಪಿಸಿದ್ದಾರೆ. ಅವರ ಅವಧಿಯಲ್ಲಿ ಸುಪ್ರೀಂಕೋರ್ಟಿನ ಕೊಲೇಜಿಯಂನ ಶಿಫಾರಸುಗಳನ್ನು ಕೇಂದ್ರ ಸರಕಾರವು ಮತ್ತೆಮತ್ತೆ ಬುಡಮೇಲು ಮಾಡುವುದು ಸಾಮಾನ್ಯ ವಿಷಯವಾಗಿತ್ತು ಮತ್ತು ಇಂತಹ ಲಜ್ಜೆಗೇಡಿತನದ ಎದುರು ಕೂಡಾ ಅವರು ಮಣಿಯುತ್ತಿದ್ದರು ಎಂದು ಭೂಷಣ್ ಅವರು ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ.

ನ್ಯಾ. ಲೋಯಾ ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳನ್ನು ಎತ್ತಿರುವ ಭೂಷಣ್, ಸುಪ್ರೀಂಕೋರ್ಟ್ ಇಂದಿನ ದಿನಗಳಲ್ಲಿ ನಾಗರಿಕರ ಸ್ವಾತಂತ್ರ್ಯವು ಆದ್ಯತೆಯ ವಿಷಯವೆಂದಾಗಲೀ, ತೀರಾ ಆತಂಕಕಾರಿ ವಿಷಯವೆಂದಾಗಲೀ ಪರಿಗಣಿಸುತ್ತಲೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ದುರದೃಷ್ಟವಶಾತ್ ಇದು ಸುಪ್ರೀಂಕೋರ್ಟ್ ಹೆಚ್ಚುಹೆಚ್ಚಾಗಿ ಕಾರ್ಯಾಂಗಕ್ಕಿಂತಲೂ ಹೆಚ್ಚು ಕಾರ್ಯಾಂಗ ಮನೋಭಾವದ್ದಾಗುತ್ತಿದೆ ಎಂಬ ನಂಬಿಕೆ ಭಾರತೀಯ ನ್ಯಾಯಾಂಗದ ಹಿತಚಿಂತಕರ ನಡುವೆ ಬೆಳೆಯುತ್ತಾ ಹೋಗುವುದಕ್ಕೆ ಕಾರಣವಾಗಿದೆ” ಎಂದು ಅವರು ಬರೆದಿದ್ದಾರೆ.

ನ್ಯಾ. ರಂಜನ್ ಗೊಗೊಯ್ ಅವಧಿ

ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಅವರ ಅವಧಿಯು ಭೂಷಣ್ ಅವರ ತೀವ್ರತರ ಟೀಕೆಗೆ ಗುರಿಯಾಗಿದೆ. ಕಾರ್ಯಾಂಗದ ಜೊತೆ “ಕಸಿವಿಸಿ ಉಂಟುಮಾಡುವಷ್ಟು” ನಿಕಟತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಅವಗಣನೆ ಅದರ ಗುಣಲಕ್ಷಣಗಳಾಗಿದ್ದವು ಎಂದು ಅವರು ಬರೆದಿದ್ದಾರೆ. ಕಾರ್ಯಕ್ರಮ ಪಟ್ಟಿ ರೂಪಿಸುವ ಅಧಿಕಾರ ಹೊಂದಿದವರಾಗಿ ಅವರ ಆದ್ಯತೆಗಳನ್ನು ಪ್ರಶ್ನಿಸಿರುವ ಭೂಷಣ್,  ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿರುವ ಚುನಾವಣಾ ಬಾಂಡ್, ಸಂವಿಧಾನದ ವಿಧಿ 370ರ ರದ್ದತಿ, ಆಗಸ್ಟ್ 5, 2019ರ ದಿಗ್ಬಂಧನದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂಕುಶ ಬಂಧನ ಸರಣಿ, ಸಿಬಿಐ ನಿರ್ದೇಶಕ ಆಲೋಕ್ ವರ್ಮಾರ ಸೇವಾವಧಿಯ ಕಡಿತ ಇತ್ಯಾದಿಗಳನ್ನು ಪ್ರಶ್ನಿಸುವ ಪ್ರಕರಣಗಳ ವಿಚಾರಣೆಯನ್ನೇ ನಡೆಸದಿರುವುದು ಮುಂತಾದ ಪ್ರಶ್ನೆಗಳನ್ನು ಭೂಷಣ್ ಎತ್ತಿತೋರಿಸಿದ್ದಾರೆ. ಅದೇ ಹೊತ್ತಿಗೆ, ಗೊಗೋಯ್ ಅವಧಿಯಲ್ಲಿ ಅಯೋಧ್ಯಾ ಪ್ರಕರಣದ ತ್ವರಿತಗತಿಯ ವಿಚಾರಣೆಯ ವಿಷಯವನ್ನು ಎತ್ತಿರುವ ಅವರು, ಆ ಪ್ರಕರಣದ ಅಂತಿಮ ಪರಿಣಾಮವು ಆಳುವ ಪಕ್ಷದ ಚುನಾವಣಾ ಭವಿಷ್ಯವನ್ನು ಬಲಪಡಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಅವರನ್ನು ಅಯೋಧ್ಯೆಗೆ ಆಹ್ವಾನಿಸದಿರುವುದು ಅನ್ಯಾಯ: ಯಶ್ವಂತ್ ಸಿನ್ಹಾ
ಮಾಜಿ ಸಿಜೆಐ ರಂಜನ್ ಗೊಗೊಯ್

ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಆರೋಪವನ್ನು ಮಾಡಿರುವ ಭೂಷಣ್, ದೂರುದಾರರನ್ನೇ ಬಲಿಪಶು ಮಾಡಲು ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರಕಾರ ಸಮನ್ವಯದಿಂದ ಕೆಲಸ ಮಾಡಿರುವ ಸಾಧ್ಯತೆಯ ಪ್ರಶ್ನೆಯನ್ನು ಎತ್ತಿದ್ದಾರೆ. ಪ್ರಮುಖವಾದ ಪ್ರಕರಣಗಳನ್ನು ನಿರ್ಧರಿಸುವಾಗ ಕಾರ್ಯಾಂಗದಿಂದ ಗೊಗೋಯ್ ಅವರಿಗಿದ್ದ ಸ್ವಾತಂತ್ರ್ಯವನ್ನು ಅವರು ಪ್ರಶ್ನಿಸಿದ್ದಾರೆ. ಆ ಮಹಿಳೆಯು ತಾನು ಲೈಂಗಿಕ ಕಿರುಕುಳದ ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಿದ ನಂತರ ಆಕೆಯನ್ನು ಮರಳಿ ಸುಪ್ರೀಂಕೋರ್ಟಿನ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಭರವಸೆಯನ್ನು “ಸರಕಾರದ ಉನ್ನತ ಸ್ಥಾನದಲ್ಲಿರುವ” ವ್ಯಕ್ತಿಯ ಒತ್ತಡದ ಬಳಿಕ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವುದು, ಅವರು ಮತ್ತು ಕೇಂದ್ರ ಸರಕಾರದ ನಡುವೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಕೊಡುಕೊಳ್ಳುವಿಕೆಯ ಕುರಿತು ಗಂಭೀರವಾದ ಆತಂಕವನ್ನೆಬ್ಬಿಸುತ್ತದೆ ಎಂದು ಭೂಷಣ್ ಆರೋಪಿಸಿದ್ದಾರೆ.


ಇದನ್ನೂ ಓದಿ: ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ: ಇದರ ಅರ್ಥವೇನು? 


ನ್ಯಾ. ಎ.ಎಸ್. ಬೋಬ್ಡೆ ಅವಧಿ

ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ)ಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಅವುಗಳನ್ನು ಸಲ್ಲಿಸಿ ತಿಂಗಳುಗಳಾದರೂ ನಡೆಸದೇ ಇರುವುದು, ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ದ್ವೇಷ ಕಾರುವ ಭಾಷಣದ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ತಕ್ಷಣ ನ್ಯಾ. ಎಸ್. ಮುರಳೀಧರ್ ಅವರನ್ನು ದಿಲ್ಲಿ ಹೈಕೋರ್ಟಿನಿಂದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿರುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ನಿರ್ಬಂಧವನ್ನು ಮುಂದುವರಿಸಿರುವುದು “ಪ್ರಜಾಪ್ರಭುತ್ವದ ಅವಗಣನೆ”ಯಲ್ಲಿ ನ್ಯಾಯಾಲಯದ ಪಾತ್ರದ ಬಗ್ಗೆ ತನ್ನ ಅಭಿಪ್ರಾಯವನ್ನು ರೂಪಿಸಲು ಸಾಕು ಎಂದು ಭೂಷಣ್ ತನ್ನ ಉತ್ತರದಲ್ಲಿ ಬರೆದಿದ್ದಾರೆ.

 

 

ಸಂವಿಧಾನದ ವಿಧಿ 19 (1)(ಎ) ಅನ್ವಯ ಅಂತಹ ನಿಷ್ಕಪಟ ಅಭಿಪ್ರಾಯವನ್ನು ರೂಪಿಸಿಕೊಳ್ಳಲು, ಹೊಂದಿರಲು ಮತ್ತು ಅಭಿವ್ಯಕ್ತಿಪಡಿಸಲು ತಾನು ಸ್ವತಂತ್ರನಿದ್ದೇನೆ ಎಂದು ಭೂಷಣ್ ವಾದಿಸಿದ್ದಾರೆ.

ಹಾಲಿ ಮುಖ್ಯನ್ಯಾಯಮೂರ್ತಿ ಎ.ಎಸ್‌ ಬಾಬ್ಡೆ

ಅದಕ್ಕಿಂತಲೂ ಮುಖ್ಯವಾಗಿ, ಕೊನೆಯ ನಾಲ್ಕು ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿಯ ಕುರಿತು ತನಗಿರುವ ಆತಂಕವು ತನ್ನ ವಿರುದ್ಧ ವಿಚಾರಣೆ ಆರಂಭಿಸಲು ನೆಲೆಗಟ್ಟು ಒದಗಿಸುವುದಿಲ್ಲ; ಏಕೆಂದರೆ, ಸುಪ್ರೀಂಕೋರ್ಟ್ ಎಂಬುದನ್ನು ಒಂದು ಸಂಸ್ಥೆಯಾಗಿ- ಮುಖ್ಯ ನ್ಯಾಯಾಧೀಶರ ಅವಧಿ ಬಿಡಿ, ಸ್ವತಃ ಮುಖ್ಯ ನ್ಯಾಯಾಧೀಶರ ಜೊತೆಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ತನ್ನ ಉತ್ತರದಲ್ಲಿ ಬರೆದಿರುವ ಪ್ರಶಾಂತ್ ಭೂಷಣ್, ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು ಎಂಬ ಬಡಿದೆಬ್ಬಿಸುವ ವಾದವನ್ನು ಮುಂದಿಟ್ಟಿದ್ದಾರೆ.

ಸುಪ್ರೀಂಕೋರ್ಟ್ ತನಗೆ ನೀಡಿದ ನ್ಯಾಯಾಂಗ ನಿಂದನೆ ನೋಟೀಸಿಗೆ ಪ್ರಶಾಂತ್ ಭೂಷಣ್ ಅವರು ನೀಡಿರುವ ಅಂಶ ಅಂಶಗಳ ಖಚಿತ ಉತ್ತರದಿಂದಾಗಿ, ಎರಡು ನಿರುಪದ್ರವಿ ಟ್ವೀಟ್‌ಗಳಿಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಅಧಿಕಾರದ ಅಸ್ತ್ರವನ್ನು ಬಳಸುವುದರ ಮೂಲಕ ಸುಪ್ರೀಂಕೋರ್ಟ್- ಇತ್ತೀಚಿನ ವರ್ಷಗಳಲ್ಲಿ ತಾನು ಮಾಡಿದ ತಪ್ಪುಗಳು ಮತ್ತು ಲೋಪಗಳ ಕುರಿತು ಹೊಸದಾಗಿ ಜನರ ಪರಿಶೀಲನೆಗೆ ಒಳಗಾಗುವ ಇರಿಸುಮುರುಸನ್ನು ತಾನೇ ಮೈಮೇಲೆ ಎಳೆದುಕೊಂಡಿದೆಯೇ ಎಂದು ಎಲ್ಲರೂ ಯೋಚಿಸುವಂತಾಗಿದೆ.

ವಿ. ವೆಂಕಟೇಸನ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...