Homeಮುಖಪುಟದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ಬಂಗಾಲಿ ಕ್ಯಾಲೆಂಡರ್‌ ಪ್ರಕಾರ ಆಗಸ್ಟ್ 5 ರಂದು ಈ ಕವಿತೆಗೆ ಸರಿಯಾಗಿ 120 ವರ್ಷ ಆಗುತ್ತದೆ ಎಂದು ಜೆಎನ್‌ಯು ಹಳೆವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರರ 120 ವರ್ಷಗಳಷ್ಟು ಹಳೆಯ ಕವನವೊಂದು ವೈರಲ್ ಆಗಿದೆ.

ರವೀಂದ್ರನಾಥ ಟ್ಯಾಗೋರ್‌ರ ‘ದೀನೋ ದಾನ್’ (ನಿರ್ಗತಿಕರಿಗೆ ದಾನ ಮಾಡುವುದು) ಶಿರ್ಷಿಕೆಯಿರುವ “ದೇಗುಲದಲ್ಲಿ ದೇವರಿಲ್ಲ” ಎಂಬ ಕವಿತೆಯು ಆಗಸ್ಟ್ 5 ರಿಂದ ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿದೆ. ಹಲವಾರು ಜನರು ಇದನ್ನು ತಮ್ಮ ಜಾಲತಾಣದ ಖಾತೆಗಳಲ್ಲಿ ಹಂಚುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಈ ಸಮಾರಂಭದ ಮಧ್ಯೆ ಭಾರತದಲ್ಲಿ ಕೊರೊನಾದಿಂದಾದ ಸಾವುಗಳು  40,000 ಗಡಿ ದಾಟಿದ್ದವು. ಬುಧವಾರ ಒಂದೇ ದಿನ 918 ಜನರು ಸಾವಿಗೀಡಾಗುವುದರೊಂದಿಗೆ ದೇಶವು ತನ್ನ ಅತಿದೊಡ್ಡ ಏಕದಿನ ಸಾವಿನ ಪ್ರಮಾಣವನ್ನು ದಾಖಲಿಸಿತು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಠಾಗೋರ್ ಕವಿತೆ ಮತ್ತು ರಾಮ ಮಂದಿರ ಸಮಾರಂಭದ ನಡುವೆ ಸಾಮ್ಯತೆಯನ್ನು ಕಂಡುಕೊಂಡಿದ್ದಾರೆ.

ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಡಾ. ನಾಗೇಶ ಹೆಗ್ಡೆ ಈ ಕವಿತೆಯ ಕನ್ನಡ ಅನುವಾದವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಈ ದೇಗುಲದಲ್ಲಿ ದೇವರಿಲ್ಲ …. [ನಿನ್ನೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲಿ ಕವಿ ರವೀಂದ್ರನಾಥ ಠಾಕೂರರ ಕವನವೊಂದು…

Posted by Nagesh Hegde on Thursday, August 6, 2020

ನಾಗೆಶ್ ಹಗ್ಡೆ ಅವರ ಫೇಸ್‌ಬುಕ್‌ ವಾಲಲ್ಲಿ ಇರುವ ಕವನದವ ಪೂರ್ಣ ಪಠ್ಯ ಕೆಳಗಿನಂತಿದೆ:

“ಈ ದೇಗುಲದಲ್ಲಿ ದೇವರಿಲ್ಲʼʼ ಎಂದುಸುರಿದ ಆ ಸಂತ
ರಾಜನಿಗೆ ಕೋಪ ಉಕ್ಕಿ ಬಂತು
“ಏನೆಂದೆ ದೇವನಿಲ್ಲವೆ? ನೀನೇನು ಸಂತನೋ ನಾಸ್ತಿಕನೊ?
ಕಾಣುವುದಿಲ್ಲವೆ ನಿನಗೆ ವಜ್ರಖಚಿತ ಪೀಠ
ದೇವಮೂರ್ತಿಯ ಮಿನುಗುವ ಮುಕುಟ?”

“ಕಾಣುತ್ತಿವೆ ನನಗೆ. ರಾಜನ ಡೌಲತ್ತಿನ ಚಿಹ್ನೆಗಳಷ್ಟೇ ಕಾಣುತ್ತಿವೆ.
ಹೇ ರಾಜಾ, ನೀನು ನಿನ್ನ ಪ್ರತಿಷ್ಠೆಯನ್ನೇ ಅಲ್ಲಿ ಪ್ರತಿಷ್ಠಾಪಿಸಿಕೊಂಡಿರುವೆ,
ದೇವರನ್ನಲ್ಲ” ಸಂತ ಉಸುರಿದ

ಕೆಂಗಣ್ಣು ಬೀರಿ ರಾಜ ಗುಡುಗಿದ: ಗಗನಚುಂಬಿ ಈ
ದೇಗುಲದ ಮೇಲೆ ಇಪ್ಪತ್ತು ಲಕ್ಷ
ಚಿನ್ನದ ವರಹಗಳನ್ನು ಸುರಿದಿದ್ದೇನೆ, ಶಾಸ್ತ್ರೋಕ್ತ
ಪೂಜೆ ಮಾಡಿದ್ದೇನೆ, ದೇವರಿಲ್ಲವೆನ್ನಲು ನಿನಗೆಷ್ಟು ಧೈರ್ಯ?

ಸಂತ ಶಾಂತವಾಣಿಯಲ್ಲಿ ಹೇಳಿದ: ಇದೇ ವರ್ಷ ನಿನ್ನ ಇಪ್ಪತ್ತು ಲಕ್ಷ
ಪ್ರಜೆಗಳು ಬರಗಾಲಕ್ಕೆ ತುತ್ತಾಗಿದ್ದಾರೆ
ಕೂಳಿಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ
ನಿನ್ನ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ
ನಿನ್ನರಮನೆಯಿಂದ ನೂಕಿಸಿಕೊಂಡಿದ್ದಾರೆ.
ಅವರೆಲ್ಲ ಗುಡ್ಡಬೆಟ್ಟಗಳಲ್ಲಿ, ರಸ್ತೆಬದಿಗಳಲ್ಲಿ,
ಪಾಳುಗುಡಿಗಳಲ್ಲಿ ಆಸರೆ ಪಡೆದು ಒರಗಿದ್ದಾರೆ

ಇದೇ ವರ್ಷ ನೀನು ಇಪ್ಪತ್ತು ಲಕ್ಷ ಚಿನ್ನದ ವರಹಗಳನ್ನು
ಸುರಿದು ದೇಗುಲ ಕಟ್ಟಿದ್ದೀಯೆ. ಅದನ್ನು ನೋಡಿ
ದೇವರು ಹೇಳಿದ್ದೇನು ಗೊತ್ತೆ?

ʼʼನೀಲಾಕಾಶದ ಮಿನುಗುವ ತಾರೆಗಳಲ್ಲಿ ನಾನಿದ್ದೇನೆ
ಸತ್ಯ, ಶಾಂತಿ, ದಯೆ ಮತ್ತು ಪ್ರೀತಿಯೇ
ನನ್ನ ಮನೆಯ ಅಡಿಪಾಯಗಳಾಗಿವೆ
ತನ್ನದೇ ಪ್ರಜೆಗಳಿಗೆ ಆಸರೆ ಕೊಡಲಾಗದ ಈ ಜಿಪುಣ ರಾಜ
ನನಗೇನು ದೇಗುಲ ಕಟ್ಟಿಸಿಯಾನು” ಎನ್ನುತ್ತ ದೇವರು ನಿನ್ನ ಆ
ದೇಗುಲವನ್ನು ಬಿಟ್ಟು ದೂರ ನಡೆದಿದ್ದಾನೆ ರಾಜನ್

ಸಾಲುಮರಗಳ ನೆರಳಿನಲ್ಲಿ ಬಿದ್ದಿರುವ ಆ ಗರೀಬರ
ಮನದಲ್ಲಿ ನೆಲೆಸಿದ್ದಾನೆ ಅವನೀಗ
ವಿಶಾಲ ಸಾಗರದ ಮೇಲಿನ ನೀರ್ಗುಳ್ಳೆಗಳಂತೆ
ಈ ನಿನ್ನ ದೇಗುಲ ಟೊಳ್ಳುಪೊಳ್ಳಾಗಿ ಮಿನುಗುತ್ತಿದೆ
ನಿನ್ನ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿ ….

ಇಷ್ಟೇ ಅಲ್ಲದೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮತ್ತು ಜೆಎನ್‌ಯುನ ಹಳೆಯ ವಿದ್ಯಾರ್ಥಿ ಬನೋಜ್ಯೋತ್ಸ್‌ನಾ ಲಾಹಿರಿ ಅವರು ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದಾರೆ. ಬಂಗಾಳಿ ಕ್ಯಾಲೆಂಡರ್ ಪ್ರಕಾರ ನಿಖರವಾಗಿ 120 ವರ್ಷಗಳ ಹಿಂದೆ ಈ ಕವಿತೆಯನ್ನು ಬರೆಯಲಾಗಿದೆ ಎಂದು ಅವರು ಪೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ.

Is this a coincidence that exactly 120 years ago, on this very day, Rabindranath Tagore wrote a poem "Deeno Daan". It…

Posted by Banojyotsna Lahiri on Wednesday, August 5, 2020

ಇವರನ್ನು ಅನುಸರಿಸಿ, ಈ ಕವಿತೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೊಣಾ ವೈರಸ್ ಕಾಲದ ನಡುವೆ ಕವಿತೆಯು ಅನೇಕ ಸಾಮ್ಯತೆಗಳನ್ನು ಕಂಡುಕೊಂಡಿದೆ. ಅನೇಕರು ಟ್ಯಾಗೋರ್‌ರನ್ನು ಶ್ಲಾಘಿಸಿದ್ದಾರೆ.

1900 ರಲ್ಲಿ (ಬಂಗಾಳಿ ವರ್ಷ 1307) ಬರೆದ ಟ್ಯಾಗೋರ್ ಅವರ ಕವನ ಸಂಕಲನವಾದ ಕಹಿನಿಯ ಭಾಗವೇ ‘ಡೀನೋ ಡಾನ್’.  ಶತಮಾನದ ನಂತರ ವೈರಲ್ ಆದ ಕವನ ನಮ್ಮನ್ನು ಎಚ್ಚರಿಸುವುದೇನೆಂದರೆ ”ಠಾಗೋರ್‌ಗೆ ಎಂದಿಗೂ ವಯಸ್ಸಾಗುವುದಿಲ್ಲ” ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.


ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಚುನಾವಣೆ: ನೆತನ್ಯಾಹು, ಐಸೆನ್‌ಕೋಟ್ ಬಣಗಳಿಗೆ ಬಹುಮತದ ಕೊರತೆ; ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೇ ನಿರ್ಣಾಯಕ!

ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಆಡಳಿತಾರೂಢ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣಗಳೆರಡಕ್ಕೂ ಭಾರಿ ಸವಾಲು ತಂದೊಡ್ಡಿದೆ. 120 ಸದಸ್ಯ ಬಲದ...

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....