Homeಮುಖಪುಟದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ.

- Advertisement -
- Advertisement -

ಸ್ವಾತಂತ್ರ‍್ಯಾನಂತರದಲ್ಲಿ ಅತಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ತೇಲ್ತುಂಬ್ಡೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಸ್ಪೂರ್ತಿ ಪಡೆದು ಕೇವಲ ತನ್ನ ಸ್ವಂತಶಕ್ತಿಯಿಂದ ಅತ್ಯಂತ ಪ್ರತಿಭಾವಂತನಾದ ಚಿಂತಕನಾಗಿ ಬೆಳೆದರು. ಬಹುಶಃ ನನಗೆ ತಿಳಿದಂತೆ ಅಂಬೇಡ್ಕರ್ ಬರಹಗಳನ್ನು ಅಷ್ಟು ಸಂಪೂರ್ಣವಾಗಿ ಓದಿದವರು ಬಹಳ ಕಡಿಮೆ. ಆನಂದ್ ಅಂಬೇಡ್ಕರ್‌ರನ್ನು ಆಳವಾಗಿ ಅಧ್ಯಯನ ಮಾಡಿದ್ದೇ ಅಲ್ಲದೇ ಮಾರ್ಕ್ಸಿಸಂಅನ್ನು ಕೂಡ ಆಳವಾಗಿ ಅಧ್ಯಯನ ಮಾಡಿದವರು. ಮಾರ್ಕ್ಸಿಸಂನ ಚಾರಿತ್ರಿಕ, ತಾತ್ವಿಕ, ನೈತಿಕ ದೃಷ್ಟಿಕೋನಗಳನ್ನು ಹೆಚ್ಚು ಸಮಗ್ರವಾಗಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಿದವರು. ಬಹಳ ಆಶ್ಚರ್ಯವೆಂದರೆ ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ. ಈ ಮೂರು ಚಿಂತನೆಗಳ ಧಾರೆಗಳ ಪ್ರಭಾವದಿಂದ ಅವರು ರಚಿಸಿದ 29 ಪುಸ್ತಕಗಳನ್ನು ನೋಡಬಹುದು. ಈ ಪುಸ್ತಕಗಳೆಲ್ಲಾ ಆನಂದ್ ಅವರ ಬೌದ್ಧಿಕ ಶಿಖರಕ್ಕೆ ಕನ್ನಡಿಯಾಗಿವೆ.

ಆನಂದ್ ಚಿಕ್ಕಂದಿನಿಂದಲೇ ಬಹಳ ಚುರುಕಾದ ವಿದ್ಯಾರ್ಥಿ. ಕಡು ಬಡತನದ ಕಾರಣಕ್ಕೆ ರಜೆಯಲ್ಲಿ ಮನೆಗಳಿಗೆ ಸುಣ್ಣ ಬಳಿಯಲು ಹೋಗಿ ಅದರಿಂದ ಬಂದ ಹಣದಿಂದ ವಿದ್ಯಾಭ್ಯಾಸ ಮಾಡಿದರು. ಒಮ್ಮೆ ನಾನು ಆನಂದ್ ಅವರ ತಾಯಿಯನ್ನು ಭೇಟಿಯಾದಾಗ ನಿಮ್ಮ ಮಗನಿಗೆ ಹೆಸರು ಪ್ರತಿಷ್ಟೆ ಎಲ್ಲಾ ಇದೆ, ಒಳ್ಳೆಯ ಮಗನಿಗೆ ತಾಯಿ ನೀವು ಅಂದಾಗ ನನ್ನ ಮುಖವನ್ನೆಲ್ಲಾ ತನ್ನ ಕೈಗಳಿಂದ ಅಪ್ಯಾಯಮಾನವಾಗಿ ಸವರಿದಳು. ಆ ತಾಯಿ ಮನಸ್ಸೆಲ್ಲಾ ಪ್ರೀತಿ ತುಂಬಿದ ಮನುಷ್ಯಳಂತೆ ಕಂಡರು. ಆನಂದ್ ಎಲೆಕ್ಟ್ರೀಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಆ ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಇದರ ಜೊತೆಗೆ ಪ್ರತಿಷ್ಠಿತ ಅಹ್ಮದಾಬಾದ್ ಐ.ಐ.ಎಮ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಆಧುನಿಕ ಐ.ಟಿ ರಂಗದಲ್ಲಿ ಮೆಗಾ ಅನಾಲಿಟಿಕ್ಸ್‌ನಲ್ಲಿ ಪ್ರಾವಿಣ್ಯತೆ ಗಳಿಸಿದರು. ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗಿರುವ ಅನುಭವವನ್ನು ನೋಡಿ ಭಾರತ ಸರ್ಕಾರ ಅವರಿಗೆ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಜವಾಬ್ದಾರಿಯನ್ನು ನೀಡಿತು. ಈ ಅಪಾರವಾದ ಅನುಭವದಿಂದ ಮತ್ತೊಂದು ಪ್ರತಿಷ್ಠಿತ ಐಐಟಿ ಗೋರಕ್‌ಪುರ್‌ನಲ್ಲಿ ಪ್ರಾಧ್ಯಾಪಕರಾಗಿ ಆಹ್ವಾನಿಸಿ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್ ಬೋಧನೆಯ ಜವಬ್ದಾರಿಯನ್ನು ನೀಡಿತು. ಅಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಗೋವಾ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೆಗಾ ಅನಾಲಿಟಿಕ್ಸ್ ಬೋಧಿಸುವುದಕ್ಕೆ ಆಹ್ವಾನಿಸಿತು. ಈ ವಲಯದಲ್ಲಿ ಪ್ರಾವೀಣ್ಯತೆ ಹೊಂದಿದ ಕೇವಲ ಇಪ್ಪತ್ತು ಜನ ನಿಪುಣರಲ್ಲಿ ಆನಂದ್ ಒಬ್ಬರು. ನಿಜಕ್ಕೂ ಈ ಅರ್ಹತೆಗಳಿಂದಲೇ ಕರ್ನಾಟಕದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಆನಂದ್ ಈ ವಲಯಗಳಿಗೆ ಸೀಮಿತವಾಗಿದ್ದರೆ ಬಹುಶಃ ಭಾರತ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಗಳನ್ನೇ ಕೊಡುತ್ತಿತ್ತು. ಆನಂದ್ ಅವರಿಗೆ ಇರುವ ಸಾಮಾಜಿಕ ಹಿನ್ನೆಲೆಯ ಕಾರಣ ಸಮಾಜದಲ್ಲಿ ಇರುವ ತಾರತಮ್ಯ, ಅಸಮಾನತೆ, ಬಡತನ, ಜಾತಿಪದ್ಧತಿ, ನಿರುದ್ಯೋಗ, ಭೂಮಿ ಸಮಸ್ಯೆ, ಜಾಗತೀಕರಣ, ಸಾಮ್ರಾಜ್ಯಶಾಹಿ ಲೂಟಿ, ಭೂಸ್ವಾಮ್ಯ ಸಂಬಂದಗಳು, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳ ಮೇಲೆ ಸ್ಪಂದಿಸುತ್ತಾ ಬಂದರು. ಒಂದು ಕಡೆ ತಮ್ಮ ಅನಲಿಟಿಕ್ಸ್ ಜವಾಬ್ದಾರಿಯನ್ನು ನಿರ್ವಹಿಸುತ್ತಾ ನಿರಂತರವಾಗಿ ಈ ಸಮಸ್ಯೆಗಳೆಲ್ಲವುಗಳ ಮೇಲೆ ಬರೆದರು. ಉದಾಹರಣೆಗೆ ಅವರು ರಚಿಸಿದ ಗುಣಮಟ್ಟದ ಪುಸ್ತಕ ಖೈರ್ಲಾಂಜಿ ಕೇವಲ ಹತ್ತು ದಿನಗಳಲ್ಲಿ ಬರೆದದ್ದು. ಅದು ಚೈನಾದ ಬೀಜಿಂಗ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಾ ವಿಮಾನದಲ್ಲಿ, ವಿಮಾನಾಶ್ರಯದಲ್ಲಿ ಕಳೆದ ಸಮಯದಲ್ಲಿ ಬರೆದರು. ನವಯಾನ ಎನ್ನುವ ಪ್ರಕಾಶಕ ಸಂಸ್ಥೆಯ ಮುಖ್ಯಸ್ಥ ಎಸ್.ಆನಂದ್ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಆನಂದ್ ಬಹಳ ಸೃಜನಶೀಲರೆನ್ನುತ್ತಾರೆ.

ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಸಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಗಹನ ಚಿಂತನೆಯುಳ್ಳ ಬರಹಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿಯನ್ನು ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ, ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು. ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಕುಟುಂಬದ ಸದಸ್ಯ ಬಂದರು ಎನ್ನುವುದು ದೊಡ್ಡ ಸುದ್ದಿಯಾಯಿತು. ನಾನು ಪಾತಪಲ್ಲೆಗೆ ಹೋದಾಗ ಬೋಯ ಸಮುದಾಯದವರು ಅಂಬೇಡ್ಕರ್ ಮೊಮ್ಮಗ ಬರುವಷ್ಟು ಅಪರಾಧ ನಾವು ಏನು ಮಾಡಿದ್ದೇವೆ ಎಂದರು. ಆನಂದ್ ಬಂದ ಕಾರಣದಿಂದ ಜಿಲ್ಲಾ ಆಡಳಿತ ಕೂಡ ಸ್ಪಂದಿಸಿತು. ಇದು ಕೇವಲ ಒಂದು ಉದಾಹರಣೆ. ಇಷ್ಟು ಅಪರೂಪವಾದ ವ್ಯಕ್ತಿಯನ್ನು ಯುಎಪಿಎ ಕಾಯ್ದೆಯ ಕೆಳಗೆ ಬಂಧಿಸುವುದು ಎಂದರೆ ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.

ಇಷ್ಟಕ್ಕೂ ಆನಂದ್ ಮಾಡಿದ ಅಪರಾಧವೇನು, ಅವರ ಮೇಲೆ ಹೊರೆಸಿದ ಅಪರಾಧವೇನಾಗಿತ್ತು? ಅವರ ಮೇಲೆ ಹೊರೆಸಿದ ಅಪರಾಧ ಭೀಮಾ ಕೊರೆಗಾಂವ್ ಘಟನೆಯ ಜೊತೆ ಸಂಬಂಧವಿದೆ, ಭೀಮಾ ಕೊರೆಗಾಂವ್ ಮಾವೋಯಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತೆನ್ನುವುದು ಪ್ರಧಾನವಾದ ಆರೋಪ. ಭೀಮಾ ಕೋರೆಗಾಂವ್ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ರಾಜಕೀಯ ಹೋರಾಟದ ಶ್ರಮದ ಭಾಗ. ಅಂದಾಜು ಎರಡು ಶತಮಾನಗಳ ಕೆಳಗೆ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಬ್ರಿಟಿಷ್ ಸೈನ್ಯದಲ್ಲಿ ದಲಿತರು ಮುಖ್ಯವಾದ ಪಾತ್ರ ನಿರ್ವಹಿಸಿದರು. ಈ ಘಟನೆಯ ಮೂಲಕ ದಲಿತರಲ್ಲಿ ಚೈತನ್ಯವನ್ನು, ಆತ್ಮವಿಶ್ವಾಸವನ್ನು ಬೆಳೆಸಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯಾವ ವರ್ಷವೂ ಇಲ್ಲದೇ 2018ರಲ್ಲಿಯೇ ಇದು ವಿವಾದಾಸ್ಪದವಾಗಿ ಬದಲಾಯಿತು. ಕೇಂದ್ರ, ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಇದನ್ನು ಬಳಸಿಕೊಂಡು ದೇಶದಲ್ಲಿನ ಹನ್ನೆರಡು ಅತ್ಯಂತ ಪ್ರತಿಭಾವಂತರನ್ನು ಅರೆಸ್ಟ್ ಮಾಡಿತು.

OBSERVE 16TH MAY AS JUSTICE DAY STAND WITH DR. ANAND TELTUMBDE AND OTHER ACTIVISTS

ಮೌಲ್ಯಗಳುಳ್ಳ, ಮೌಲಿಕ ಬದುಕು ನಡೆಸುತ್ತಿರುವ, ವ್ಯವಸ್ಥೆಯ ಜೊತೆ ರಾಜಿಯಾದರೇ ಅದೆಷ್ಟೋ ಬಿರುದು, ಪದವಿಗಳನ್ನಾದರೂ ಪಡೆದು ಜೀವನದಲ್ಲಿ ಸುಖವಾಗಿ ಬದುಕಬಲ್ಲವರಾಗಿದ್ದ ಆ 12 ಜನರು ಇಂದು ಈ ರೀತಿಯಲ್ಲಿ ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಮೊದಲಿಗೆ ಒಂಬತ್ತು ಮಂದಿಯನ್ನು ಪೂನಾ ಪೋಲಿಸರು ಬಂಧಿಸಿದರು. ಇದರಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಹೊರಗಡೆ ಇದ್ದುಬಿಟ್ಟಿದ್ದರು. ಆನಂದ್ ವಿಷಯದಲ್ಲಿ ಬಾಂಬೆ ಹೈಕೋರ್ಟ್, ಹಾಗೆಯೇ ನೌಲಾಖ ವಿಷಯದಲ್ಲಿ ದೆಹಲಿ ಹೈಕೋರ್ಟ್ ಕೆಲವು ತಾಂತ್ರಿಕ ಲೋಪಗಳಿಂದ ಸ್ಟೇ ಕೊಟ್ಟಿದ್ದರು. ಈ ಸ್ಟೇ ಮುಂದುವರೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಹೋಯಿತು. ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಪಾಲುದಾರರನ್ನು ನಾವು ಭೇಟಿಯಾಗಿದ್ದೆವು. ಭೀಮಾ ಕೊರೇಗಾಂವ್ ಘಟನೆ ಹಾಗೂ ಪ್ರಧಾನಮಂತ್ರಿ ಮೇಲೆ ಹತ್ಯೆಗೆ ಪಿತೂರಿ ಎನ್ನುವುದು ಕೇವಲ ಕಾಲ್ಪನಿಕ, ಇವು ಅಮಾಯಕರ ಮೇಲೆ ಹಾಕಿದ ಕೇಸುಗಳೆಂದು ಎನ್.ಸಿ.ಪಿ ಹಿರಿಯ ನಾಯಕ ಶರದ್ ಪವಾರ್ ನಮ್ಮೊಡನೆ ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಪ್ರಕರಣ ದಾಖಲಾದ 18ತಿಂಗಳ ನಂತರ ಕೇಂದ್ರ ಸರ್ಕಾರವು ಈ ಒಟ್ಟು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಿಂದ ತೆಗೆದು ತಾವೇ ಇದನ್ನು ಎನ್.ಐ.ಎ ಮುಖಾಂತರ ನಿಭಾಯಿಸುತ್ತೇವೆಂದು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿತು. ಈ ನಿರ್ಣಯದ ನಂತರ ಆನಂದ್ ತೇಲ್ತುಂಬ್ಡೆ, ಗೌತಮ್ ನೌಲಾಖ ಅವರ ಬಂಧನಕ್ಕಿದ್ದ ತಡೆಯಾಜ್ಞೆ ತೆರವಾಗಿ ಈಗ ಬಂಧವಾಗಿದ್ದಾರೆ.
ಆನಂದ್ ಅವರ ಬಂಧನವನ್ನು ದೇಶದೆಲ್ಲೆಡೆ ಅಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಚಿಂತಕರು ಜನಸಾಮಾನ್ಯರು ಖಂಡಿಸಿದ್ದಾರೆ. ನೋಮ್ ಚಾಮ್ಸ್ಕಿ ಸೇರಿದಂತೆ ಹಲವು ವಿದ್ವಾಂಸರು ಈ ಬಂಧನದ ವಿರುದ್ಧ ಪ್ರತಿಭಟಿಸಿದರು. ಕಾಕತಾಳೀಯವೇ ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ 129ರ ಜಯಂತಿಯ ದಿನವೇ ಡಾ.ಅಂಬೇಡ್ಕರ್ ಕುಟುಂಬ ಸದಸ್ಯ ಮತ್ತು ಅವರ ಬೌದ್ಧಿಕ ವಾರಸುದಾರ ಹಾಗೂ ಚಿಂತಕ ಆನಂದ್ ತೇಲ್ತುಂಬ್ಡೆ ಜೈಲಿಗೆ ಹೋಗಬೇಕಾಗಿ ಬಂದಿದ್ದು ಒಂದು ಐತಿಹಾಸಿಕ ದುರಂತ. ಒಂದು ಕಡೆ ಅಂಬೇಡ್ಕರ್‌ವರಿಗೆ ಗೌರವ ಸೂಚಿಸುತ್ತಲೇ ಆತನ ಕುಟುಂಬ ಸದಸ್ಯನನ್ನು ಜೈಲು ಪಾಲು ಮಾಡುತ್ತಿರುವುದರಲ್ಲಿ ಸರ್ಕಾರದ ದ್ವಂದ್ವ ನೀತಿ ಕಾಣಿಸುತ್ತದೆ ಎಂದು ಆನಂದ್ ಹೇಳಿರುವುದು ಎಲ್ಲರನ್ನು ಆಲೋಚಿಸುವಂತೆ ಮಾಡುತ್ತಿದೆ. ದೇಶವು ತನ್ನ ಸ್ವಭಾವವನ್ನ ತನಗೆ ತಿಳಿಯದ ಹಾಗೆಯೇ ಬಹಿರಂಗಪಡಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನದ ಅವಶ್ಯಕತೆ ಇಲ್ಲ.

ಪ್ರೊ. ಜಿ. ಹರಗೋಪಾಲ್,
ಹಿರಿಯ ಚಿಂತಕ ಮತ್ತು ರಾಜಕೀಯ ಶಾಸ್ತ್ರಜ್ಞ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಲ್ಲದೆ, ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಸೇರಿದಂತೆ ದೇಶ ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಹಲವು ಚಳವಳಿಗಳನ್ನು ಮುನ್ನಡೆಸಿದ್ದಾರೆ.

ಅನುವಾದ: ಅನಿಲ್‌ಕುಮಾರ್ ಚಿಕ್ಕದಾಳವಟ್ಟ


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...