Homeಚಳವಳಿಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ...

ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…

ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಇವರ ಕೆಲಸ, ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ಸಂಬಳ ಮಾತ್ರ ಬೇರೆ ಬೇರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

- Advertisement -
- Advertisement -

ಮಳೆ, ಚಳಿ, ಬಿಸಿಲು ಏನೇ ಇರಲಿ ಅಥವಾ ಕೊರೊನಾದಂತಹ ದೊಡ್ಡ ದೊಡ್ಡ ಸಾಂಕ್ರಾಮಿಕ ರೋಗಗಳೆ ಬರಲಿ ಇವರು ಮಾತ್ರ ತಮ್ಮ ಕೆಲಸ ನಿಲ್ಲಿಸುವುದಿಲ್ಲ.. ಮನೆಯೊಳಗೆ ಬೆಚ್ಚಗೆ ಮಲಗುವುದಿಲ್ಲ..ಅದೆಂತಹದ್ದೇ ಪರಿಸ್ಥಿತಿಯಿರಲಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗೆ ಇಳಿಯುತ್ತಾರೆ. ಒಂದು ದಿನ ಇವರ್‍ಯಾರೂ ಕೆಲಸ ಮಾಡದಿದ್ದರೇ, ಬೀದಿಗಿಳಿಯದಿದ್ದರೇ ನಾವ್ಯಾರೂ ರಸ್ತೆಗಳಲ್ಲಿ, ಮಾರ್ಕೆಟ್‌ಗಳಲ್ಲಿ, ಬಸ್ ನಿಲ್ದಾಣಗಳ್ಲಲಿ ಓಡಾಡಲು ಸಾಧ್ಯವೇ ಇಲ್ಲ. ಹೌದು ಇವರೇ ನಮ್ಮ ನಗರಗಳನ್ನು ಸ್ವಚ್ಛಗೊಳಿಸಿ ನಮಗಾಗಿ ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟ ಪೌರಕಾರ್ಮಿಕರು. ಅರ್ಥಾಥ್ ಸಾಮಾಜಿಕ ವೈದ್ಯರು.

ನಮ್ಮ ನಗರಗಳು, ನಮ್ಮ ಮನೆಯ ಬೀದಿಗಳು, ನಾವು ಓಡಾಡುವ ಸ್ಥಳಗಳು ಸ್ವಚ್ಛವಾಗಿರಲು ಇವರೇ ಪ್ರಮುಖ ಕಾರಣಕರ್ತರು. ಇಂದು ಇವರ ದಿನ. ಅಂದರೆ ಪೌರಕಾರ್ಮಿಕರ ದಿನ. ಈ ದಿನದ ನೆಪದಲ್ಲೊಮ್ಮೆ ಇವರನ್ನ ನೆನಪಿಸಿಕೊಳ್ಳುವ..

ನಾವು ಗಣೇಶ ಹಬ್ಬ, ದೀಪಾವಳಿ ಮಾಡಿ ರಸ್ತೆಗಳಲ್ಲಿ ಕಸ ಎಸೆದು ಮನೆಗೆ ಹೋಗುತ್ತಿವೆ. ಬೆಳಗ್ಗೆ ಆ ಕಸ ಕಾಣಿಸುವುದಿಲ್ಲ ಎಂದರೇ ಅದಕ್ಕೆ ಇವರೆ ಕಾರಣ. ನಾವು ಕೆಲಸಕ್ಕೆ ಹೋಗುತ್ತೇವೆ, ನಮಗೆ ವಾರದ ರಜೆ, ಹಬ್ಬಗಳ ರಜೆ ಎಂಬ ಸವಲತ್ತುಗಳು ಇವೆ ಅಲ್ಲವೇ? ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯಾದ್ರೂ ಇರುತ್ತೆ ಅಲ್ಲವೇ.. ಆದ್ರೆ ವಿಪರ್ಯಾಸ ನೋಡಿ ಇವರ್‍ಯಾರಿಗೂ ರಜೆ ಎಂಬುದೇ ಇಲ್ಲ..ರಜೆ ಬೇಕಿದ್ದರೇ ಸಂಬಳ ಕೇಳೋ ಹಾಗಿಲ್ಲ ಅಷ್ಟೆ..

ಇದನ್ನೂ ಓದಿ: ಪೌರಕಾರ್ಮಿಕರಿಗೂ ಕೊರೊನ ಸೋಂಕು; ಸಮುದಾಯದ ನಡುವೆ ಹರಡುವ ಆತಂಕದಲ್ಲಿ ಕುಟುಂಬಗಳು

ಪೌರಕಾರ್ಮಿಕರ ಪರಿಸ್ಥಿತಿ ಹೇಗಿರುತ್ತೇ ಗೊತ್ತಿದ್ಯಾ..? ಬೆಳಗ್ಗೆ 5-6 ಗಂಟೆಗೆ ಕೆಲಸಕ್ಕೆ ಹಾಜರಾಗುವ ಇವರಿಗೆ ಕುಡಿಯಲು ನೀರು, ಬಳಸಲು ಶೌಚಾಲಯ, ಬಟ್ಟೆ ಬದಲಿಸಲು ಒಂದು ಪುಟ್ಟ ಕೊಠಡಿ ಸಹ ಇರಲ್ಲ. ಅದರಲ್ಲೂ ಮಹಿಳಾ ಪೌರಕಾರ್ಮಿಕರ ಪರಿಸ್ಥಿತಿ ಊಹಿಸಲಸಾಧ್ಯ..

PC: eesanje

ಆಶ್ಚರ್ಯದ ವಿಷಯವೆಂದರೇ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನ ಇದೆ ಎಂಬುದೇ ಒಂದು ನಗೆಪಾಟಿಲಿನ ಸಂಗತಿ ಎಂದರೆ ನೀವು ನಂಬಲೇಬೇಕು. ನಮಗೆ ಅಂತಾ ದಿನ ಇದ್ಯಾ ಎಂದು ಕೇಳುತ್ತಾರೆ ಈ ಕಾರ್ಮಿಕರು. ಹಾಗಾದ್ರೆ ಈ ಪೌರಕಾರ್ಮಿಕ ಸಂಘಟನೆ ಮುಖಂಡರು ಏನಂತಾರೆ.. ನೀವೇ ಓದಿ

ಈ ಕುರಿತು ನಾನುಗೌರಿ.ಕಾಂ ಎಐಸಿಸಿಟಿಯು ನೇತೃತ್ವದ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾರವರನ್ನು ಮಾತನಾಡಿಸಿತು. “ಪೌರಕಾರ್ಮಿಕರ ದಿನಾಚರಣೆ ಅಂದ್ರೆ ನಮಗೆ ಆಶ್ಚರ್ಯ ಆಗ್ತದೆ. ದಿನ ಕೆಲಸ ಮಾಡಿ ಮನೆಗೆ ಹೋಗುವ ನಮ್ಮ ಕಾರ್ಮಿಕರಿಗೆ ಈ ದಿನವೆಲ್ಲಾ ಗೊತ್ತಿರುವುದಿಲ್ಲ. ಮೇ 1ರ ಕಾರ್ಮಿಕರ ದಿನಾಚರಣೆಯಷ್ಟೇ ನಮ್ಮ ಕಾರ್ಮಿಕರಿಗೆ ಗೊತ್ತಿರುವುದು. ಪೌರಕಾರ್ಮಿಕ ದಿನಾಚರಣೆಗಳು ನಮ್ಮ ಕಾರ್ಮಿಕರ ಬದುಕಿನಲ್ಲಿ ಯಾವ ಬದಲಾವಣೆಯನ್ನು ತಂದಿಲ್ಲ. ಪ್ರಧಾನಿಗಳು ಕಾರ್ಮಿಕರ ದಿನ ಅಂತಾ 4 ಜನ ಪೌರಕಾರ್ಮಿಕರ ಕಾಲು ತೊಳೆದರೆ, ನಾವು ದೇವರಾಗುವುದಿಲ್ಲ ಅಲ್ವಾ..?” ಎಂದು ಪ್ರಶ್ನಿಸುತ್ತಾರೆ.

ಕೊರೊನಾ ಸಮಯದಲ್ಲಿ ಪ್ರತಿದಿನ ಪೌರಕಾರ್ಮಿಕರಿಗೆ 100 ರೂಪಾಯಿ ಬಸ್ ಚಾರ್ಜ್‌ ಕೊಡುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಆದ್ರೆ ಅದನ್ನೂ ಕೊಟ್ಟಿಲ್ಲ. ದಿನಪ್ರತಿ ದುಡಿಯುತ್ತಿರುವ ಪೌರಕಾರ್ಮಿಕರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ನಾವು ಹಲವು ಬಾರಿ ಹೋರಾಟ ಮಾಡಿದ ಪರಿಣಾಮ ಕೇವಲ ಮಾಸ್ಕ್, ಸ್ಯಾನಿಟೈಜರ್‌ ಕೆಲವರಿಗೆ ಸಿಕ್ಕಿವೆ ಅಷ್ಟೇ. ಕೊರೊನಾ ಹಾಟ್‌ಸ್ಪಾಟ್‌ಗಳಲ್ಲೇ ಇವರಿಗೆ ಪಿಪಿಇ ಕಿಟ್ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್‌.ಟಿ.ನಗರದಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಗಂಗಮ್ಮ ಹೇಳುತ್ತಾರೆ, “ಕೊರೊನಾ ಬಂದಾಗಿನಿಂದ ಎಲ್ಲರು ಭಯಪಟ್ತಿದ್ದಾರೆ. ಆದ್ರೆ ನಮಗೆ ಮಾಸ್ಕ್, ಸ್ಯಾನಿಟೈಜರ್‌, ಪಿಪಿಇ ಕಿಟ್ ಯಾವುದು ಸರಿಯಾಗಿ ಸಿಕ್ಕಿಲ್ಲ. ಕೊಡಿ ಅಂತಾ ಎಷ್ಟೋ ಬಾರಿ ಕೇಳಿದ್ರೂ ಬರಿ ಭರವಸೆ ನೀಡ್ತಾರೆ. ನಮಗೆ ಕೆಲಸ ಮಾಡುವ ಸ್ಥಳದಲ್ಲಿ ವಾಶ್‌ ರೂಂ ಇಲ್ಲ, ಬಟ್ಟೆ ಬದಲಿಸೋಕೆ ಸ್ಥಳ ಇರಲ್ಲ. ಒಂದು ದಿನ ಕೂಡ ರಜೆ ಇಲ್ಲದೆ ಕೆಲಸ ಮಾಡುವವರಿಗೆ ಯಾವ ಸೌಲಭ್ಯ ಕೂಡ ಇಲ್ಲ. ಒಂದು ದಿನ ರಜೆ ತಗೊಂಡರು ಆ ದಿನದ ಸಂಬಳ ಕಟ್ ಮಾಡ್ತಾರೆ ಎಂದು ನೋವು ತೋಡಿಕೊಳ್ಳುತ್ತಾರೆ ಗಂಗಮ್ಮ.

ಇದನ್ನೂ ಓದಿ: ಪೌರಕಾರ್ಮಿಕರನ್ನು ಪರಿಸರದ ಡಾಕ್ಟರುಗಳನ್ನಾಗಿಸಿದ ಶಿಕ್ಷಕ ನಾಗರಾಜ ಬಂಜಾರ

ಪೌರಕಾರ್ಮಿಕರೆಂದರೆ ಹಕ್ಕು ಇಲ್ಲದೆ ಇರುವ ಮನುಷ್ಯರು ಎಂದೇ ಅರ್ಥ ಎನ್ನುತ್ತಾರೆ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕಾಮ್ರೆಡ್ ಬಾಲನ್. ಮಹಿಳೆಯರ ಹಕ್ಕು, ಮಾನವ ಹಕ್ಕುಗಳು ಯಾವುದೂ ಇಲ್ಲದೆ ಬರುಕುತ್ತಿರುವ ಕಾರ್ಮಿಕರು ಇವರು. ಖಾಯಂ ನೌಕರರು ಮಾಡುವ ಕೆಲಸವೇ ಗುತ್ತಿಗೆ ನೌಕರರು ಮಾಡುತ್ತಾರೆ ಆದ್ರೆ ಸಂಬಳದಲ್ಲಿ ಮಾತ್ರ ತಾರತಮ್ಯ ಇದೆ. ಅವರನ್ನು ಖಾಯಂ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು. ಆದ್ರೆ ಸರ್ಕಾರ ಹೈಕೋರ್ಟ್ ಆದೇಶ ಕೂಡ ಜಾರಿಗೊಳಿಸಲಿಲ್ಲ. ದಿನಾಚರಣೆಗಳ ಬದಲು ಅವರಿಗೆ ಇರಲು ಮನೆ ಕೊಡಲಿ, ಅವರ ಕೆಲಸ ಖಾಯಂ ಮಾಡಲಿ, ಹೆರಿಗೆ ರಜೆ ನೀಡಲಿ ಎನ್ನುತ್ತಾರೆ ಕಾಮ್ರೆಡ್ ಬಾಲನ್.

ಇಡೀ ಸಮಾಜವೇ ಇವರನ್ನು ದೂರ ಇಟ್ಟಿದೆ. ಸಮಾಜದ ಜನ ಇವರನ್ನು ಮನುಷ್ಯರು ಎಂದೇ ಪರಿಗಣಿಸುವುದಿಲ್ಲ. 4 ಜನ ಪೌರಕಾರ್ಮಿಕರ ಕಾಲು ತೊಳೆದು ದಿನಾಚರಣೆ ಮಾಡಿದರೇ ಪ್ರತಿ ದಿನ ಹೊಲಸು ಗುಂಡಿಯಲ್ಲಿ ಬೀಳುವುದು ತಪ್ಪುತ್ತದೇಯೇ? ಅವರಿಗೆ ಸೂಕ್ತ ಸೌಲಭ್ಯ ನೀಡಲಿ ಸಾಕು. ಎಲ್ಲಾ ಮಹಿಳೆಯರಿಗೆ ಸಿಗುವ ಕನಿಷ್ಠ ಹೆರಿಗೆ ರಜೆ ಕೂಡ ಇವರಿಗೆ ಇಲ್ಲ. ಸರ್ಕಾರ ಮಾಡುವ ಇಂತಹ ದಿನಾಚರಣೆಗಳು ಬರಿ ಬೋಗಸ್ ಎಂದು ಬಾಲನ್ ಕಿಡಿಕಾರುತ್ತಾರೆ.

PC: ThePrint

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಂದು ಪೌರಕಾರ್ಮಿಕರ ದಿನದ ಶುಭಾಷಯ ತಿಳಿಸಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಕುಮಾರಸ್ವಾಮಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದಿದ್ದಾರೆ.

 

ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಇವರ ಕೆಲಸ, ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ಸಂಬಳ ಮಾತ್ರ ಬೇರೆ ಬೇರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರೂ ಕೂಡ ಗುತ್ತಿಗೆ ಕಾರ್ಮಿಕರಿಗೆ ಸರಿಯಾದ  ಆರೋಗ್ಯ ವ್ಯವಸ್ಥೆ ಮಾಡುವುದಿಲ್ಲ. ಇನ್ನೂ ಸರ್ಕಾರ ಕೊರೊನಾ ಕಾಲದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಇವರೆಗೆ 4 ಮಂದಿ ಪೌರಕಾರ್ಮಿಕರು ಕೊರೊನಾಗೆ ಬಲಿಯಾಗಿದ್ದಾರೆ. ಒಂದು ವರದಿಯ ಪ್ರಕಾರ ಪೌರಕಾರ್ಮಿಕರ ಸರಾಸರಿ ವಯಸ್ಸು 40 ವರ್ಷ ಎಂದು ಗುರುತಿಸಲಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳುವುದೇ?


ಇದನ್ನೂ ಓದಿ: ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...